ಬಿಸಿ ನೀರಿನ ಆವಿ (ಸ್ಟೀಮ್ ಇನ್ಹಲೇಷನ್) ತೆಗೆದುಕೊಳ್ಳುವುದನ್ನು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿ, ಕೊರೊನಾ ತಡೆಗಟ್ಟುವ ಕ್ರಮವಾಗಿ ಪ್ರಚಾರ ಮಾಡಲಾಗುತ್ತಿದೆ. ಇದರ ವಿರುದ್ದ ತಮಿಳುನಾಡಿನ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ. ಸುಬ್ರಮಣಿಯನ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ‘ವೈದ್ಯರ ಸಲಹೆಯಿಲ್ಲದೆ ಜನರು ಬಿಸಿ ನೀರಿನ ಆವಿಯನ್ನು ಪಡೆಯಬಾರದು. ಇದು ವೈರಸ್ ವೇಗವಾಗಿ ಹರಡಲು ಕಾರಣವಾಗಬಹುದು’ ಎಂದು ಅವರು ಹೇಳಿದ್ದಾರೆ.
ವೈದ್ಯರ ಸಲಹೆಯಿಲ್ಲದೆ ಜನರು ಬಿಸಿ ನೀರಿನ ಆವಿ ಪಡೆಯಬಾರದು. ಇದರಿಂದ ವೈರಸ್ ವೇಗವಾಗಿ ಹರಡಲು ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಕೊರೊನಾ ಚಿಕಿತ್ಸೆಯ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ನಾರದ’: ಸುವೆಂಧು ಅಧಿಕಾರಿ ಬಂಧನ ಯಾಕಿಲ್ಲ?- ಪ್ರಕರಣದ ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್ ಪ್ರಶ್ನೆ
ಜನರು ಸ್ವಯಂ- ಔಷಧಿಗಳನ್ನು ಪಡೆಯಬಾರದು ಯಾಕೆಂದರೆ ಅದು ಮಾರಕವಾಗಿ ಪರಿಣಮಿಸಬಹುದು. ಈಗ, ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ಹೆಚ್ಚು ಚಾಲ್ತಿಗೆ ಬರುತ್ತಿದೆ, ಇದು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜೊತೆಗೆ ಹತ್ತಿರದಲ್ಲಿರುವವರಿಗೆ ಸೋಂಕು ಹರಡಲು ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಬಿಸಿ ನೀರಿನ ಆವಿ ತೆಗೆದುಕೊಳ್ಳುವುದನ್ನು ಚಿಕಿತ್ಸೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಚಿವರು ಸೂಚಿಸಿದ್ದಾರೆ. ಕೊರೊನಾ ಪಾಸಿಟಿವ್ ಆಗಿರುವ ವ್ಯಕ್ತಿಗಳು, ತಕ್ಷಣವೇ ಮನೆಮದ್ದುಗಳನ್ನು ಪಡೆಯಬಾರದು. ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಕೊರೊನಾ ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ವೈದ್ಯರ ಸಲಹೆಯಿಲ್ಲದೆ ಬಿಸಿ ನೀರಿನ ಆವಿ ತೆಗೆದುಕೊಳ್ಳಬಾರದು. ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳನ್ನು ಅನುಸರಿಸಿ ಬಿಸಿ ನೀರಿನ ಅವಿಯನ್ನು ಆಶ್ರಯಿಸಬೇಡಿ ಎಂದು ಹೇಳಿದ್ದಾರೆ.
ಸರ್ಕಾರವು ಸಿದ್ದೌಷಧ ಕೊರೊನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ಹೇಳಿದ ಅವರು, ಈ ಕೇಂದ್ರಗಳಲ್ಲಿ ನೀಡಲಾಗುವ ಚಿಕಿತ್ಸೆಯು ಇತರ ವೈದ್ಯಕೀಯ ಮಾದರಿಯ ಹಾಗೂ ಸರ್ಕಾರಿ ವೈದ್ಯಕೀಯ ತಂಡವು ರೂಪಿಸಿರುವ ಮಾರ್ಗಸೂಚಿಗಳ ಪ್ರಕಾರ ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಭಾರತದಲ್ಲಿ ಕೊರೊನಾ ಇಳಿಮುಖ’- ಅಂಕಿ ಅಂಶ ವಿಶ್ವಾಸಾರ್ಹವಲ್ಲವೆಂದ WHO ವಿಜ್ಞಾನಿ


