Homeಕರೋನಾ ತಲ್ಲಣ‘ಭಾರತದಲ್ಲಿ ಕೊರೊನಾ ಇಳಿಮುಖ’- ಅಂಕಿ ಅಂಶ ವಿಶ್ವಾಸಾರ್ಹವಲ್ಲವೆಂದ WHO ವಿಜ್ಞಾನಿ

‘ಭಾರತದಲ್ಲಿ ಕೊರೊನಾ ಇಳಿಮುಖ’- ಅಂಕಿ ಅಂಶ ವಿಶ್ವಾಸಾರ್ಹವಲ್ಲವೆಂದ WHO ವಿಜ್ಞಾನಿ

- Advertisement -
- Advertisement -

ಭಾರತದಲ್ಲಿ ಸೋಮವಾರದಂದು ಹೊಸ ಕೊರೊನಾ ವೈರಸ್ ಪ್ರಕರಣಗಳು ಕುಸಿತವಾಗಿದೆ ಎಂದು ವರದಿಯಾಗಿದೆ. ಆದರೆ ವೈರಸ್ ವೇಗವಾಗಿ ಹರಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಯ ಕೊರತೆಯಿಂದಾಗಿ ಈ ಅಂಕಿ-ಅಂಶ ವಿಶ್ವಾಸಾರ್ಹವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳಿದ್ದಾರೆ.

ವೈರಸ್‌ನ ಹೊಸ ರೂಪಾಂತರವು ಸೋಂಕಿನ ಉಲ್ಬಣಕ್ಕೆ ಕಾರಣವಾಗಿದ್ದರಿಂದ, ಕಳೆದ ತಿಂಗಳಿನಿಂದ ಪ್ರತಿದಿನ 4 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಸೋಂಕು ಕುಸಿತ ಕಂಡರೂ ಸಹ, ಸೋಂಕುಗಳು ಉತ್ತುಂಗಕ್ಕೇರಿವೆ ಎಂಬ ಬಗ್ಗೆ ಖಚಿತತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಭಾರತದಲ್ಲಿ ಪತ್ತೆಯಾಗಿರುವ ಬಿ.1.617 ವೈರಸ್ ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹೆಚ್ಚು ಮಾತನಾಡಿದರೇ ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಬಹುದು: ಬಿಜೆಪಿ ಶಾಸಕ

“ದೇಶದ ಅನೇಕ ಭಾಗಗಳಲ್ಲಿ ಸೋಂಕು ಇನ್ನೂ ಉತ್ತುಂಗಕ್ಕೇರಿಲ್ಲ, ಅವು ಇನ್ನೂ ಏರುತ್ತಿವೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.

“ಅತಿ ಹೆಚ್ಚು ರಾಷ್ಟ್ರೀಯ ಪಾಸಿಟಿವ್‌ ದರ 20% ಆಗಿದ್ದರೂ, ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಹೆಚ್ಚಿನ ರಾಜ್ಯಗಳಲ್ಲಿ ಪರೀಕ್ಷೆ ಇನ್ನೂ ಅಸಮರ್ಪಕವಾಗಿದೆ. ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್‌ ದರವನ್ನು ನೋಡಿದಾಗ ನಾವು ಸಾಕಷ್ಟು ಪರೀಕ್ಷಿಸುತ್ತಿಲ್ಲ ಎಂದು ತಿಳಿಯುತ್ತದೆ” ಎಂದು ಸ್ವಾಮಿನಾಥನ್‌ ಹೇಳಿದ್ದಾರೆ.

ಕಳೆದ ತಿಂಗಳಿನಿಂದ ತೀವ್ರವಾಗಿ ಏರುತ್ತಲೆ ಇದ್ದ ಕೊರೊನಾ ಸೋಂಕು ಕಳೆದ 24 ಗಂಟೆಗಳಲ್ಲಿ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ. ಕಳೆದ ಒಂದು ದಿನದಲ್ಲಿ ಹೊಸ ಕೊರೊನಾ ಪಾಸಿಟಿವ್‌ ಪ್ರಕರಣ 281,386 ಇಳಿದೆ. ಏಪ್ರಿಲ್ 21 ರ ನಂತರ ಇದೇ ಮೊದಲ ಬಾರಿಗೆ 3 ಲಕ್ಷಕ್ಕಿಂಲೂ ಕಡಿಮೆ ಪ್ರಕರಣ ವರದಿಯಾಗಿದೆ. ದೇಶದಲ್ಲಿ ದೈನಂದಿನ ಸಾವುಗಳು 4,000 ಕ್ಕಿಂತ ಹೆಚ್ಚಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ‘ಹೊಸ ಶಿಕ್ಷಣ ನೀತಿ’ಯ ಅನುಷ್ಠಾನ ಕುರಿತ ಕೇಂದ್ರದ ಸಭೆಯನ್ನು ಬಹಿಷ್ಕರಿಸಿದ ‘ಸ್ಟಾಲಿನ್’ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...