Homeಕರ್ನಾಟಕಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

ಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

- Advertisement -
- Advertisement -

ಸಾವರ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸ್ವಾತಂತ್ರ್ಯದ 75ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹೊರಡಿಸಿದ ಒಂದು ಜಾಹೀರಾತಿನಲ್ಲಿ ಭಾರತದ ಮೊದಲನೆಯ ಪ್ರಧಾನಿ ಜವಾಹರಲಾಲ ನೆಹರೂ ಅವರ ಚಿತ್ರವನ್ನು ಕೈಬಿಟ್ಟು ಸಾವರ್ಕರ್ ಅವರ ಚಿತ್ರವನ್ನು ಸೇರಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಚಿತ್ರವನ್ನು ಕಿತ್ತುಹಾಕಿದ ಸುದ್ದಿಬಂದಿತ್ತು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನನ ಚಿತ್ರವನ್ನು ಇಡಲು ಹೋದವರನ್ನು ಬಂಧಿಸಲಾಗಿರುವ ವರದಿಯಾಗಿತ್ತು. ಮಂಗಳೂರಿನಲ್ಲಿ ರಾಷ್ಟ್ರೀಯ ಹಿಂದೂ ಸೇನೆಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಅವರಂತೂ ಸಾವರ್ಕರ್ ಅವರ ಚಿತ್ರವನ್ನು ಕಿತ್ತು ಹಾಕುವವರ ಕೈಗಳನ್ನು ಕತ್ತರಿಸುತ್ತೇವೆ ಎಂಬ ಬೆದರಿಕೆಯನ್ನು ಹಾಕಿದ್ದಾರೆಂಬ ಸುದ್ದಿಯೂ ಬಂದಿದೆ.

ಈ ಹಿಂದುತ್ವವಾದಿಗಳಿಗೆ ಸಾವರ್ಕರ್ ಅವರ ಮೇಲೆ ಯಾಕೆ ಇಷ್ಟೊಂದು ಪ್ರೀತಿ? ಈ ಹಿಂದುತ್ವವಾದಿಗಳು ಬ್ರಿಟಿಷರ ವಿರುದ್ಧ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರಿಗೆ ಸಹಾಯ ಮಾಡಿದ್ದು ಈಗ ಇವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿರುವವರಲ್ಲಿ ಇವರಲ್ಲಿ ಇರಬಹುದಾದ ಒಂದೇಒಂದು ಹೆಸರು ವಿನಾಯಕ ದಾಮೋದರ ಸಾವರ್ಕರ್ ಅವರದ್ದು. 23.12.1910ರಂದು ಅವರನ್ನು ರಾಜ್ಯವ್ಯವಸ್ಥೆಯ ವಿರುದ್ಧ ಯುದ್ಧವನ್ನು ಸಾರಿದ್ದಕ್ಕಾಗಿ 25 ವರ್ಷಗಳ ಕಾರಾವಾಸವನ್ನೂ, 30.01.1911ರಂದು ಒಬ್ಬ ಬ್ರಿಟಿಷ್ ಅಧಿಕಾರಿಯ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತೊಂದು 25 ವರ್ಷಗಳ ಕಾರಾವಾಸವನ್ನೂ ಬ್ರಿಟಿಷರು ವಿಧಿಸಿದ್ದರು. ಆದುದರಿಂದ ಸಾವರ್ಕರ್ ಅವರು ಮಹಾನ್ ದೇಶಭಕ್ತರಾಗಿದ್ದರೆಂದೂ, ಬ್ರಿಟಿಷರ ವಿರುದ್ಧ ಹೋರಾಡಿದ್ದರೆಂದೂ ಹಿಂದುತ್ವವಾದಿಗಳು ಬೀಗುತ್ತಾರೆ.

ಸಾವರ್ಕರ್ ಅವರು ತಾವು ಇನ್ನು ಬ್ರಿಟಿಷರ ವಿರುದ್ಧ ಯಾವ ಹೋರಾಟವನ್ನೂ ಮಾಡುವುದಿಲ್ಲವೆಂದೂ, ಬ್ರಿಟಿಷರಿಗೆ ವಿಧೇಯನಾಗಿರುತ್ತೇನೆಂದೂ ಬ್ರಿಟಿಷರಲ್ಲಿ ಒಂದಲ್ಲ ಎಂಟು ಬಾರಿ ಕ್ಷಮೆ ಯಾಚಿಸಿ ಪತ್ರ ಬರೆದು ಕೇಳಿಕೊಂಡು ಬಿಡುಗಡೆ ಹೊಂದಿದ್ದರೂ ಅವರ ಕ್ಷಮಾ ಯಾಚನಾ ಪತ್ರಗಳು ಅವರ ಬದುಕಿನ ಅವಧಿಯಲ್ಲಿ ಹೊರಬಂದಿರಲಿಲ್ಲ. ಆದರೆ ಅವರ ದುರಾದೃಷ್ಟಕ್ಕೆ ಅವರ ಮರಣದ ನಂತರ ಅವರ ಕ್ಷಮಾ ಯಾಚನಾ ಪತ್ರಗಳು ಬಹಿರಂಗವಾಗಿದ್ದು ಹಿಂದುತ್ವವಾದಿಗಳಿಗೆ ಮುಜುಗರವನ್ನುಂಟು ಮಾಡುತ್ತಿವೆ.

ಹಿಂದುತ್ವವಾದಿಗಳಿಂದ ’ವೀರ ಸಾವರ್ಕರ್’ ಎಂದು ಬಿರುದು ಪಡೆದಿರುವ ಅವರು ಅಂತಹ ಮಹಾನ್ ದೇಶಭಕ್ತರಾಗಿದ್ದರೆ ಬ್ರಿಟಿಷರಿಂದ ಪ್ರತಿ ತಿಂಗಳು ರೂ. 60/- ಮಾಸಾಶನವನ್ನು ಏಕೆ ಪಡೆಯುತ್ತಿದ್ದರು? ಸಾವರ್ಕರ್ ಅವರು ಅಷ್ಟೊಂದು ಬಡವರಾಗಿದ್ದರೆ? ಆದರೆ ಅವರು ಮಹಾತ್ಮಾ ಗಾಂಧಿಯನ್ನು ಗುಂಡು ಹಾರಿಸಿ ಸಾಯಿಸಿದ ನಾಥುರಾಮ ಗೋಡ್ಸೆಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ’ಅಗ್ರಣಿ’ ಎಂಬ ತಮ್ಮ ಪತ್ರಿಕೆಯನ್ನು ಹೊರಡಿಸಲು ರೂ. 15000/- ಗಳನ್ನು ಸಾಲವಾಗಿ ನೀಡಿದ್ದರು. ಅಂದು ಸಾವರ್ಕರ್ ಅವರು ಗೋಡ್ಸೆಗೆ ನೀಡಿದ ಹಣದ ಬೆಲೆ ಇಂದಿನ ರೂ. 3,42,000/- ಗಳಿಗೆ ಸಮ ಎಂದು ಅಂದಾಜಿಸಬಹುದು. ಸಾವರ್ಕರ್ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿತ್ತು? ಈ ಆದಾಯದ ಮೂಲ ಯಾವುದು?

ಇತಿಹಾಸಕಾರ ಶ್ರೀ ಅಶೋಕ್ ಕುಮಾರ್ ಪಾಂಡೆ ಹಿಂದಿಯಲ್ಲಿ – “ಸಾವರ್ಕರ್ – ಕಾಲಾ ಪಾನಿ ಔರ್ ಉಸ್ಕೆ ಬಾದ್”- (ಸಾವರ್ಕರ್- ಕಾಲಾ ಪಾನಿ ಮತ್ತು ಅದರ ನಂತರ) ಎಂಬ ಒಂದು ಪುಸ್ತಕವನ್ನು ಬರೆದಿದ್ದಾರೆ. ಇತ್ತೀಚೆಗೆ ರಾಜಕಮಲ ಪ್ರಕಾಶನ ಅದನ್ನು ಪ್ರಕಟಿಸಿದೆ. ಅದರ ಪುಟ 200ರಲ್ಲಿ ಅವರು ಸಾವರ್ಕರ್ ಅವರ ಬದುಕಿನ ಒಂದು ಹೊಸ ಆಯಾಮವನ್ನು ಹೊರಹಾಕಿದ್ದಾರೆ. “ಇತ್ತೀಚೆಗೆ ಬಹಿರಂಗಪಡಿಸಲಾದ ವರ್ಗೀಕೃತ ಕೆಲವು ಸಿಐಎ (ಅಮೆರಿಕದ ಗುಪ್ತಚರ ವಿಭಾಗ) ಫೈಲ್‌ಗಳಲ್ಲಿ ಸಾವರ್ಕರ್ ಹೆಸರನ್ನು ಕಂಡು ನನಗೆ ಆಶ್ಚರ್ಯವಾಯಿತು. ಜೂನ್ 27, 1961ರ ಫೈಲ್ ಸಂಖ್ಯೆ ಎಸ್‌ಆರ್/2-ಬಿ -61-292, ಸಿಐಎ ಏಜೆಂಟರಾದ ರಾಬರ್ಟ್ ಟಿ. ಗೋಫೋರ್ತ್ (ಅವರ ಗುಪ್ತ ಹೆಸರು) ಸಿಐಎ ಅಧಿಕಾರಿಯೊಂದಿಗಿನ ಸಭೆಯ ವರದಿಯಾಗಿದೆ. ವರದಿಯಲ್ಲಿ, ಗೋಫೋರ್ತ್ ಅವರು ತನ್ನ ಸಂಪರ್ಕದಲ್ಲಿರುವ ಬೇರೆಬೇರೆ ವ್ಯಕ್ತಿಗಳ ವಿವರಗಳನ್ನು ನೀಡುತ್ತಾರೆ”. ಈ ವರದಿಯಲ್ಲಿ ಅವರು ಸಾವರ್ಕರ್ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಪಾಂಡೆ ಅವರು ತಮ್ಮ ಪುಸ್ತಕದ ಕೊನೆಯಲ್ಲಿ ಸಾವರ್ಕರ್ ಹೆಸರನ್ನು ಪ್ರಸ್ತಾಪಿಸುವ ವರದಿಯ ಸಂಬಂಧಿತ ಪ್ಯಾರಾಗಳ ಛಾಯಾಪ್ರತಿಗಳನ್ನೂ ಪ್ರಕಟಿಸಿದ್ದಾರೆ.

ಅಶೋಕ್ ಕುಮಾರ್ ಪಾಂಡೆ ಅವರು ಪ್ರಕಟಿಸಿರುವ ಸಂಬಂಧಿತ ಮೂರು ಪುಟಗಳಲ್ಲಿ ಪ್ರಮುಖವಾದ ಅಂಶಗಳ ಕನ್ನಡ ಅನುವಾದ ಹೀಗಿದೆ: ಸಾವರ್ಕರ್ ಬಾಂಬೆ ಪ್ರಾಂತ್ಯದ ಪೂನಾದಲ್ಲಿರುವ ಕೆಸ್ಟ್ರೆ ಹೆಸರಿನ ಪತ್ರಿಕೆಯ ವರದಿಗಾರರಾಗಿದ್ದಾರೆ. ಇದಲ್ಲದೆ, ಅವರು ಬಾಲ್ಟಿಕ್ ಇನ್ಸ್ಟಿಟ್ಯೂಟ್‌ಗಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರು ಸಾಮಾನ್ಯವಾಗಿ ಪ್ರತಿ ವಾರ ಕಮ್ಯುನಿಸಂನ ಕೆಲವು ಅಂಶಗಳನ್ನು ಸ್ಪರ್ಶಿಸುವ ಒಂದು ಲೇಖನವನ್ನು ಸಿದ್ಧಪಡಿಸುತ್ತಾರೆ. ಈ ಲೇಖನವನ್ನು ನಂತರ ಆಫ್ರಿಕಾ ಮತ್ತು ಏಷ್ಯಾದ ಸುಮಾರು 168 ವಿವಿಧ ಪತ್ರಿಕೆಗಳಿಗೆ ಕಳುಹಿಸಲಾಗುತ್ತದೆ. ಈ ಪ್ರಕಟಣೆಗಳಿಂದ ಸಾಮಾನ್ಯವಾಗಿ ತಿಂಗಳಿಗೆ ಅವರ ಲೇಖನಗಳನ್ನು ಬಳಸಿದ್ದಕ್ಕೆ ರುಜುವಾತಾಗಿ ಮೂರರಿಂದ ಐದು ಪತ್ರಿಕಾ ತುಣುಕುಗಳು ಬರುತ್ತವೆ. ಆದರೆ ಇದು ಈ ಲೇಖನಗಳನ್ನು ಸಂಪಾದಕೀಯಕ್ಕಾಗಿ ಅಥವಾ ಇತರ ವಿಶೇಷ ಲೇಖನಗಳಿಗಾಗಿ ಆಧಾರವಾಗಿ ಬಳಸಿರುವುದನ್ನು ಒಳಗೊಂಡಿರುವುದಿಲ್ಲ. ಆದುದರಿಂದ ಅಂತಹುವುಗಳ ಶ್ರೇಯವನ್ನು ಸಾವರ್ಕರ್ ಅವರಿಗೆ ಕೊಡುತ್ತಿಲ್ಲ. ಬಾಲ್ಟಿಕ್ ಇನ್ಸ್ಟಿಟ್ಯೂಟ್ ಇದು ಯುರೋಪನ್ನು ಸ್ವತಂತ್ರಗೊಳಿಸುವ ಯೋಜನೆಯ ಒಂದು ಭಾಗವಾಗಿದ್ದು (Free Europe Project) ಶೀಘ್ರದಲ್ಲೇ ಅದನ್ನು ನಿಲ್ಲಿಸಲಾಗುವುದು. ಪ್ರಸ್ತುತ ಇದಕ್ಕೆ ಪ್ರಮುಖ ವೆಚ್ಚಗಳೆಂದರೆ ಸಾವರ್ಕರ್‌ಗೆ ಲೇಖನಗಳಿಗಾಗಿ ಪ್ರತಿವಾರ 75 ಡಾಲರಗಳನ್ನು ಪಾವತಿಸುವುದನ್ನು ಒಳಗೊಂಡಿದೆ. ಅವರಿಗೆ ಈ ಲೇಖನಗಳನ್ನು ಪ್ರತಿವಾರ ಮುದ್ರಿಸುವ ಮತ್ತು ಮೇಲ್ ಮಾಡುವ ವೆಚ್ಚವನ್ನು ಸೇರಿಸಿ ಸುಮಾರು 120 ಡಾಲರ್‌ಗಳನ್ನು ಕೊಡಲಾಗುತ್ತಿದೆ. ಸಾವರ್ಕರ್ ಅವರ ಲೇಖನಗಳನ್ನು ಕಳುಹಿಸಲಾಗುತ್ತಿರುವ ಪ್ರಮುಖ ಪತ್ರಿಕೆಗಳ ಪಟ್ಟಿಯನ್ನು, ಅವರು ಸಿದ್ಧಪಡಿಸಿದ ಲೇಖನಗಳನ್ನು ಹಾಗೂ ಅವರ ಲೇಖನಗಳನ್ನು ಬಳಸಿದ ಲೇಖನಗಳ ತುಣುಕುಗಳನ್ನು ತಾವು ಶೀಘ್ರದಲ್ಲಿಯೇ ಒದಗಿಸುವುದಾಗಿ ಅವರು ಭರವಸೆ ನೀಡಿದರು”.

1961ರಲ್ಲಿ ಅಮೇರಿಕೆಯ 1 ಡಾಲರ್ ಭಾರತದ 4.76 ರೂಪಾಯಿಗಳಿಗೆ ಸಮನಾಗಿತ್ತು. ಸಾವರ್ಕರ್ ಅವರಿಗೆ ಪ್ರತಿವಾರ 75 ಡಾಲರ್ ಕೊಡಲಾಗುತ್ತಿತ್ತು ಅಂದರೆ ಪ್ರತಿವಾರ ಸುಮಾರು ರೂ. 357 ಕೊಡಲಾಗುತ್ತಿತ್ತು. ಈ ಮೊತ್ತದ ಇಂದಿನ ಮೌಲ್ಯ ಸುಮಾರು ರೂ. 30,000 ಆಗುತ್ತದೆ. ಅಂದರೆ ಸಾವರ್ಕರ್ ಅವರಿಗೆ ಪ್ರತಿ ತಿಂಗಳು ಇಂದಿನ ಮೌಲ್ಯದಲ್ಲಿ ರೂ. 1,20,000ಗಳನ್ನು ಅಮೆರಿಕದ ಗುಪ್ತಚರ ವಿಭಾಗದಿಂದ ನೀಡಲಾಗುತ್ತಿತ್ತು ಎಂದಾಗುತ್ತದೆ. ಇನ್ನು ಮುದ್ರಣದ ಖರ್ಚು ಮುಂತಾದವನ್ನು ಸೇರಿಸಿದರೆ ಅಮೆರಿಕದ ಗುಪ್ತಚರ ವಿಭಾಗ ಸಾವರ್ಕರ್ ಅವರಿಗೆ ಪ್ರತಿ ತಿಂಗಳು ಇಂದಿನ ಮೌಲ್ಯದಲ್ಲಿ ಸುಮಾರು ರೂ. 1,77,000ಗಳನ್ನು ನೀಡುತ್ತಿತ್ತು ಎಂದು ಅಂದಾಜಿಸಬಹುದು.

ಹಾಗಾದರೆ ಸಾವರ್ಕರ್ ಅವರು ಅಮೆರಿಕದ ಗುಪ್ತಚರ ವಿಭಾಗಕ್ಕಾಗಿ ಕೆಲಸ ಮಾಡಿ ಅದರಿಂದ ಹಣ ಪಡೆಯುತ್ತಿದ್ದರೆ? ಇದು ಎಷ್ಟು ವರ್ಷಗಳಿಂದ ನಡೆಯುತ್ತಿತ್ತು? ಈ ಬಗ್ಗೆ ವಿವರವಾದ ತನಿಖೆ ಅಗತ್ಯವಿದೆ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...