Homeಮುಖಪುಟಕ್ರಿಕೆಟಿಗ ಅರ್ಷದೀಪ್‌‌ರನ್ನು ಖಾಲಿಸ್ತಾನಿ ಎಂದವರ ಟ್ವೀಟ್‌ ಪತ್ತೆ ಹಚ್ಚಿದ್ದಕ್ಕೆ ಜುಬೇರ್‌ ವಿರುದ್ಧ ದೂರು ದಾಖಲು!

ಕ್ರಿಕೆಟಿಗ ಅರ್ಷದೀಪ್‌‌ರನ್ನು ಖಾಲಿಸ್ತಾನಿ ಎಂದವರ ಟ್ವೀಟ್‌ ಪತ್ತೆ ಹಚ್ಚಿದ್ದಕ್ಕೆ ಜುಬೇರ್‌ ವಿರುದ್ಧ ದೂರು ದಾಖಲು!

- Advertisement -
- Advertisement -

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಚ್‌ ಬಿಟ್ಟ ಕಾರಣಕ್ಕೆ ಭಾರತೀಯ ಬೌಲರ್‌ ಅರ್ಷದೀಪ್‌ ಸಿಂಗ್‌ ಅವರನ್ನು ‘ಖಾಲಿಸ್ತಾನಿ’ ಎಂದು ಜರಿದು ಬಲಪಂಥೀಯ ಟ್ರೋಲ್ ಪಡೆ ಹೀಯಾಳಿಸುತ್ತಿದೆ. ಆದರೆ ದ್ವೇಷ ಹಬ್ಬಿಸುತ್ತಿದ್ದವರ ಟ್ವೀಟ್‌ಗಳನ್ನು ಸಂಗ್ರಹಿಸಿ ಪೋಸ್ಟ್ ಮಾಡಿದ್ದಕ್ಕೆ ಆಲ್ಟ್‌ನ್ಯೂಸ್ ಸಹ ಸಂಸ್ಥಾಪಕ, ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್‌ ವಿರುದ್ಧ ದೂರು ದಾಖಲಿಸಲಾಗಿದೆ.

“ಕ್ರಿಕೆಟಿಗ ಅರ್ಷದೀಪ್‌ ಸಿಂಗ್‌ ಮತ್ತು ಸಿಖ್‌ ಸಮುದಾಯದ ವಿರುದ್ಧ ಟ್ವೀಟ್‌ ಮಾಡಿ ದ್ವೇಷ ಹರಡುತ್ತಿದ್ದಾರೆ” ಎಂದು ಆರೋಪಿಸಿ ಬಿಜೆಪಿ ನಾಯಕ ಮಂಜಿಂದರ್‌ ಸಿಂಗ್‌ ಸಿರ್ಸಾ ದೂರು ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೆಹಲಿಯ ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಸಿರ್ಸಾ ಅವರು ದಾಖಲಿಸಿರುವ ದೂರಿನಲ್ಲಿ, ಜುಬೇರ್‌ ಮಾಡಿದ್ದ ಟ್ವೀಟ್‌ಗಳನ್ನು ಉಲ್ಲೇಖಿಸಿದ್ದಾರೆ. ಅರ್ಷದೀಪ್‌ ಸಿಂಗ್‌ ವಿರುದ್ಧ ಇತರರು ಮಾಡಿರುವ ಹಲವು ಟ್ವೀಟ್‌ಗಳನ್ನೂ ಉಲ್ಲೇಖಿಸಿದ್ದಾರೆ.

“ಈ ಟ್ವೀಟ್‌ಗಳಲ್ಲಿ ಹೆಚ್ಚಿನವು ಪಾಕಿಸ್ತಾನಿ ಖಾತೆಗಳಲ್ಲಿ ಪೋಸ್ಟ್‌ ಆಗಿವೆ. ಜುಬೇರ್ ಅವರು ದೇಶ ವಿರೋಧಿಗಳ ಆಣತಿಯಂತೆ ನಡೆಯುತ್ತಿದ್ದಾರೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು. ಷಡ್ಯಂತ್ರವನ್ನು ಬಯಲಿಗೆಳೆಯಬೇಕು” ಎಂದು ಸಿರ್ಸಾ ಒತ್ತಾಯಿಸಿದ್ದಾರೆ.

“ಜುಬೇರ್‌ ಅವರು ಗಡಿಯಾಚೆಗಿನ ದೇಶವಿರೋಧಿಗಳೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಖಾಲಿಸ್ತಾನಿʼ ಎಂಬ ಪದವನ್ನು ʼಸರ್ಚ್ʼ ಕೊಟ್ಟು ಅರ್ಷದೀಪ್‌ ಸಿಂಗ್‌ ವಿರುದ್ಧ ಪೋಸ್ಟ್‌ ಆಗಿದ್ದ ಎಲ್ಲ ಟ್ವೀಟ್‌ಗಳನ್ನು ಸ್ಕ್ರೀನ್‌ ಶಾಟ್‌ ತೆಗೆದುಕೊಂಡಿದ್ದಾರೆ. ಸೆಪ್ಟೆಂಬರ್‌ 5ರ ಸಂಜೆ 5ಗಂಟೆಗೆ ಟ್ವೀಟ್‌ ಮಾಡಿದ್ದಾರೆ. ಈ ಸ್ಕ್ರೀನ್‌ ಶಾಟ್‌ಗಳ ಮೂಲಕ ಭಾರತೀಯ ಟ್ವಿಟರ್‌ ಖಾತೆಗಳಿಂದ ಇಂಥ ನಿಂದನೀಯ, ದುರುದ್ದೇಶಪೂರಿತ ಟ್ವೀಟ್‌ಗಳನ್ನು ಪೋಸ್ಟ್‌ ಮಾಡಲಾಗಿದೆ ಎಂದು ಬಿಂಬಿಸಲು ಜುಬೇರ್‌ ಯತ್ನಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಈ ಟ್ವೀಟ್‌ ಮಾಡಿರುವ ಖಾತೆಗಳಲ್ಲಿ ಹೆಚ್ಚಿನವು ಪಾಕಿಸ್ತಾನದ ಖಾತೆಗಳಾಗಿವೆ” ಎಂದು ಸಿರ್ಸಾ ಆರೋಪಿಸಿದ್ದಾರೆ.

“ಅರ್ಷದೀಪ್‌ ವಿರುದ್ಧ ಟ್ವೀಟ್‌ ಮಾಡುವುದಕ್ಕಾಗಿಯೇ ಕೆಲ ಟ್ವಿಟರ್ ಖಾತೆಗಳನ್ನು ಸೃಷ್ಟಿಸಲಾಗಿದೆ. ದೇಶಕ್ಕಾಗಿ ಕ್ರಿಕೆಟ್‌ ಆಡುವ ಅರ್ಷದೀಪ್‌ ವಿರುದ್ಧ ದ್ವೇಷ ಹರಡುವುದು ಈ ಟ್ವೀಟ್‌ಗಳ ಹಿಂದಿನ ಏಕೈಕ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.

ಭಾನುವಾರ ದುಬೈನಲ್ಲಿ ನಡೆದ ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ಕ್ಯಾಚ್‌ ಕೈ ಚೆಲ್ಲಿದ್ದಕ್ಕೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ ಆಗಿದ್ದರು.

ಜುಬೇರ್‌ ಮತ್ತೆ ಟ್ವೀಟ್ ಮಾಡಿದ್ದು, ಟ್ವಿಟರ್‌ನಲ್ಲಿ ಪ್ರಭಾವಶಾಲಿಯಾಗಿರುವ ಎರಡು ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಈ ಖಾತೆಗಳಲ್ಲಿ ಡಿಲೀಟ್ ಮಾಡಲಾದ ಟ್ವಿಟ್‌ಗಳ ಅರ್ಕೈವ್‌ ಲಿಂಕ್‌ ಕೂಡ ಪೋಸ್ಟ್‌ ಮಾಡಿದ್ದಾರೆ.

“ಇವರು ಯಾವ ದೇಶಕ್ಕೆ ಸೇರಿದವರು ಎಂಬುದನ್ನು ತಿಳಿಯಲು ಇವರ ಹಳೆಯ ಟ್ವೀಟ್‌ಗಳನ್ನು ಪರಿಶೀಲಿಸಿ. ಹುಡುಕಾಟ ನಡೆಸಿದರೆ ನಿಮಗೆ ಹೆಚ್ಚಿನ ಫಲಿತಾಂಶ ದೊರಕುತ್ತದೆ. ಹಲವರು ತಮ್ಮ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಆರ್ಕೈವ್ ಮಾಡಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ಬಳ್ಳಾರಿ| ಸಾಮಾಜಿಕ ಮಾಧ್ಯಮದಲ್ಲಿ ಬಂದ ಸುಳ್ಳು ನಂಬಿ ಬಾಲಕನ ಮೃತದೇಹ ಉಪ್ಪಿನಲ್ಲಿ ಮುಚ್ಚಿಟ್ಟ ಗ್ರಾಮಸ್ಥರು

ಬಲಪಂಥೀಯರ ಟ್ವೀಟ್‌ಗಳನ್ನು ಹಂಚಿಕೊಂಡ ಕಾರಣಕ್ಕೇ ಜುಬೇರ್‌ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆಯೇ ಎಂಬ ಗುಮಾನಿ ಹುಟ್ಟಿಕೊಂಡಿದೆ. ದೂರು ದಾಖಲಾದ ಬಳಿಕ ಕೆಲವು ಬಲಪಂಥೀಯರು ಟ್ವೀಟ್‌ಗಳನ್ನು ಡಿಲೀಟ್ ಮಾಡಿರುವುದು ಏತಕ್ಕೆ ಎಂಬ ಪ್ರಶ್ನೆ ಎದ್ದಿದೆ.

2018ರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ 2022ರ ಜೂನ್‌ 27ರಂದು ಜುಬೇರ್‌ ಅವರನ್ನು ಬಂಧಿಸಲಾಗಿತ್ತು. 24 ದಿನಗಳ ಕಾಲ ಜೈಲಿನಲ್ಲಿದ್ದ ಅವರಿಗೆ ಸುಪ್ರೀಂ ಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...