Homeಕರ್ನಾಟಕಬಳ್ಳಾರಿ| ಸಾಮಾಜಿಕ ಮಾಧ್ಯಮದಲ್ಲಿ ಬಂದ ಸುಳ್ಳು ನಂಬಿ ಬಾಲಕನ ಮೃತದೇಹ ಉಪ್ಪಿನಲ್ಲಿ ಮುಚ್ಚಿಟ್ಟ ಗ್ರಾಮಸ್ಥರು

ಬಳ್ಳಾರಿ| ಸಾಮಾಜಿಕ ಮಾಧ್ಯಮದಲ್ಲಿ ಬಂದ ಸುಳ್ಳು ನಂಬಿ ಬಾಲಕನ ಮೃತದೇಹ ಉಪ್ಪಿನಲ್ಲಿ ಮುಚ್ಚಿಟ್ಟ ಗ್ರಾಮಸ್ಥರು

‘ಜನರು ದಿಕ್ಕು ತಪ್ಪಲು ಕಾರಣವಾಯ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಈ ಸುಳ್ಳು ಸಂದೇಶ’

- Advertisement -
- Advertisement -

ಮತ್ತೆ ಜೀವಬರುವುದೆಂದು ಬಾಲಕನೊಬ್ಬನ ಮೃತದೇಹವನ್ನು ಉಪ್ಪಿನಲ್ಲಿ ಮುಚ್ಚಿಟ್ಟಿದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕನಿಗೆ ಜೀವ ಬರಲಿದೆ ಕುಟುಂಬ ನಂಬಿತ್ತು. ಗ್ರಾಮಸ್ಥರೂ ಇದೇ ಅಭಿಪ್ರಾಯ ಹೊಂದಿದ್ದರು. ಮುಗ್ದ ಜನರು ನಂಬುವಂತೆ ಈ ಮೌಢ್ಯವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹರಡಲಾಗಿದೆ.

ಬಳ್ಳಾರಿ ತಾಲೂಕಿನ ಸಿರವರ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದೆ. ಸುರೇಶ ಸಿರವರ ಎಂಬ 10 ವರ್ಷದ ಬಾಲಕ ಇತ್ತೀಚೆಗೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದನು. ಉಪ್ಪಿನ ರಾಶಿಯಲ್ಲಿಟ್ಟರೆ ಮತ್ತೆ ಬದುಕಬಹುದು ಎಂದು ಭಾವಿಸಿದ್ದ ಗ್ರಾಮಸ್ಥರು, ಆತನ ಮೃತ ದೇಹವನ್ನು ಉಪ್ಪಿನಲ್ಲಿ ಮುಚ್ಚಿಟ್ಟಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉಪ್ಪಿನಲ್ಲಿ ಮೃತದೇಹವನ್ನು ಮುಚ್ಚಿಟ್ಟರೆ, ಜೀವ ಮರಳಿ ಬರುತ್ತದೆಂಬ ಮೌಢ್ಯದ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಆ ಸಂದೇಶವನ್ನು ನಂಬಿದ ಬಾಲಕನ ತಂದೆ ಶೇಖರ್ ಮತ್ತು ತಾಯಿ ಗಂಗಮ್ಮ ಹಾಗೂ ಗ್ರಾಮಸ್ಥರು ಮೃತನ ದೇಹವನ್ನು ಎರಡು ಗಂಟೆಗಳ ಕಾಲ ಉಪ್ಪಿನಲ್ಲಿ ಹುದುಗಿಸಿಡಲು ನಿರ್ಧರಿಸಿದ್ದಾರೆ. ಬಳಿಕ, ದೇಹವನ್ನು ನಾಲ್ಕು ಗಂಟೆಗಳ ಕಾಲ ಉಪ್ಪಿನ ಅಡಿಯಲ್ಲಿ ದೇಹವನ್ನು ಇರಿಸಿದ್ದಾರೆ. ಆದರೆ, ಏನೂ ಆಗಲಿಲ್ಲ. ಬಳಿಕ, ಮೃತದೇಹವನ್ನು ಸುಟ್ಟುಹಾಕಿದ್ದಾರೆ.

ಉಪ್ಪಿನಲ್ಲಿ ಇರಿಸಲಾಗಿದ್ದ ಮೃತದೇಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಗ್ರಾಮಸ್ಥರು ಈ ವಿಷಯವನ್ನು ಚರ್ಚಿಸಿದ್ದಾರೆ.

“ಸಾವಿನ ಎರಡು ಗಂಟೆಗಳೊಳಗೆ ಅವರ ದೇಹವನ್ನು ಉಪ್ಪಿನ ಅಡಿಯಲ್ಲಿ ಇರಿಸಿದರೆ, ನಾವು ವ್ಯಕ್ತಿಯನ್ನು ಮತ್ತೆ ಬದುಕಿಸಬಹುದು ಎಂಬ ಪೋಸ್ಟ್ ಅನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೆವು. ಇದರ ನಂತರ, ನಾವು ಬಾಲಕ ಸುರೇಶನ ದೇಹದ ಮೇಲೆ 100 ಕೆಜಿಗಿಂತ ಹೆಚ್ಚು ಉಪ್ಪನ್ನು ಹಾಕಿದ್ದೆವು. ಅವನ ಮುಖವನ್ನು ಮಾತ್ರ ಮುಚ್ಚದೆ ಬಿಡಲಾಗಿತ್ತು. ಅದನ್ನು ನಾವು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಇರಿಸಿದ್ದೆವು. ನಾವು ಅವನನ್ನು ಮತ್ತೆ ಬದುಕಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಆತನ ದೇಹವನ್ನು ಸುಟ್ಟು ಹಾಕಿದೆವು” ಎಂದು ಸಿರವರ ಗ್ರಾಮದಲ್ಲಿ ವಾಸಿಸುವ ತಿಪ್ಪೇಸ್ವಾಮಿ ಮತ್ತು ಗಣೇಶ್ ಹೇಳಿದ್ದಾರೆ.

ಮೌಢ್ಯ ಬಿತ್ತಿದ ಸಂದೇಶದಲ್ಲಿ ಏನಿದೆ?

ಮೌಢ್ಯವನ್ನು ಬಿತ್ತುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ಪೋಸ್ಟ್ ಹೀಗಿದೆ:

ಅತಿ ಮುಖ್ಯ ಮಾಹಿತಿ: ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾವು ಅವನ ಜೀವವನ್ನು ಮರಳಿ ತರಲು ಸಾಧ್ಯವಿದೆ. ಯಾರಾದರೂ ಅಂತಹ ಅಪಘಾತವನ್ನು ನೋಡಿದ್ದರೆ ಅಥವಾ ಕೇಳಿದರೆ, ತಕ್ಷಣ ನಮಗೆ ತಿಳಿಸಿ… ಯಾರದ್ದೋ ಜೀವ ಉಳಿಸಬಹುದು. ನಮ್ಮ ಮೊಬೈಲ್‌ ಸಂಖ್ಯೆ ಪ್ರಶಾಂತ್ ತ್ರಿಪಾಠಿ: 919454311111, 919335673001 ಆಗಿದೆ.

ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಮ್ರ ವಿನಂತಿ. ನಾವು ಯಾರೊಬ್ಬರ ಜೀವವನ್ನು ಉಳಿಸಲು ಸಾಧ್ಯವಾದರೆ, ನಮ್ಮ ಜೀವನದಲ್ಲಿ ನಾವು ಯಶಸ್ವಿಯಾಗುತ್ತೇವೆ. ಧನ್ಯವಾದಗಳು.

ಮುಳುಗುವಿಕೆಯಿಂದ ಪ್ರಾಣ ಕಳೆದುಕೊಂಡವರಿಗೆ ಚಿಕಿತ್ಸೆ:

ಒಂದೂವರೆ ಕ್ವಿಂಟಾಲ್ ಉಪ್ಪನ್ನು ಹಾಸಿಗೆಯಂತೆ ಹಾಕಿ, ರೋಗಿಯನ್ನು ಅದರ ಮೇಲೆ ಬಟ್ಟೆಯೊಂದಿಗೆ ಮಲಗಿಸಿ. ಉಪ್ಪು ನಿಧಾನವಾಗಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ. ವ್ಯಕ್ತಿಗೆ ನಿಧಾನವಾಗಿ ಪ್ರಜ್ಞೆ ಬರುತ್ತದೆ. ವ್ಯಕ್ತಿಯು ಪ್ರಜ್ಞೆಯನ್ನು ಮರಳಿ ಪಡೆದಾಗ, ಅವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ. ಇದಕ್ಕೂ ಮುನ್ನ ಆಸ್ಪತ್ರೆಗೆ ಕರೆದೊಯ್ದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯನ್ನು ಉಪ್ಪಿನ ಚಿಕಿತ್ಸೆ ಮಾಡಿ ಬದುಕಿಸಿದ್ದೇವೆ. ದೇವರ ದಯೆ ಇದ್ದರೆ ಸತ್ತವನೂ ಕೂಡ ಬದುಕುತ್ತಾನೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ.

ವೈದ್ಯರು ಸತ್ತರು ಎಂದು ಘೋಷಿಸಿದ ನಂತರ ಸಂಸ್ಕಾರ ಮಾಡಲು ಆತುರಪಡಬೇಡಿ. ಸಾಧ್ಯವಾದಷ್ಟು ಬೇಗ ಉಪ್ಪಿನ ಚಿಕಿತ್ಸೆ ಮಾಡಿ. ರಾತ್ರಿಯಾದರೂ ಪರವಾಗಿಲ್ಲ. ನಗರಗಳಲ್ಲಿ ಅಂಗಡಿಗಳ ಮುಂದೆ ಉಪ್ಪಿನ ಚೀಲ ಗಳನ್ನು ಇಟ್ಟಿರುತ್ತಾರೆ. ವ್ಯಕ್ತಿಯನ್ನು ಕೂಡಲೇ ಕಾರ್ ಅಥವಾ ಜೀಪಿನಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿ, ಉಪ್ಪಿನ ಮೂಟೆಗಳನ್ನು ಬೇಗಬೇಗನೆ ಸುರಿದು ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯನ್ನು ಬೇಗನೆ ಉಪ್ಪಿನ ರಾಶಿಯ ಮೇಲೆ ಮಲಗಿಸಿ. ಅಂಗಡಿಯವನ ಗುರುತನ್ನು ಬೆಳಿಗ್ಗೆ ಪತ್ತೆ ಹಚ್ಚಿ ಆತನಿಗೆ ಹಣ ನೀಡಬಹುದು. ಆದರೆ ಪ್ರಾಣ ಉಳಿಸಲು ಸಿಗುವ ಒಂದು ಅವಕಾಶವನ್ನು ಸಹ ಬಿಡಬೇಡಿ.

ಸೂಚನೆ: ಮುಳುಗಿದ ಸಮಯ ಕಡಿಮೆಯಾದಷ್ಟೂ ಬೇಗ ಆ ವ್ಯಕ್ತಿಗೆ ಪ್ರಜ್ಞೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ಪ್ರತಿ ಕೆಲಸವನ್ನು ಯುದ್ಧ ಮಟ್ಟದಲ್ಲಿ ಮಾಡಿ. ಕೆಲವರು ಉಪ್ಪು ತರಲು ಮುಂದಾದರೆ, ಫಲಿತಾಂಶವು ಶೀಘ್ರದಲ್ಲೇ ಲಭ್ಯವಾಗುತ್ತದೆ. ದಯವಿಟ್ಟು ಸಂದೇಶವನ್ನು ಫಾರ್ವರ್ಡ್ ಮಾಡಿ, ಯಾರೊಬ್ಬರ ಜೀವವನ್ನು ಉಳಿಸಲು ಇದು ಉಪಯುಕ್ತವಾಗಬಹುದು.

ಇದನ್ನೂ ಓದಿರಿ: ಬೆಂಗಳೂರು ಮಳೆ: ವಿದ್ಯುತ್‌ ಸ್ಪರ್ಶದಿಂದ ಯುವತಿ ಸಾವು; ಕಾಂಗ್ರೆಸ್ ಕಾರಣ ಎಂದ ಬೊಮ್ಮಯಿ

-ಹೀಗೆ ಮೌಢ್ಯವನ್ನು ಬಿತ್ತಲಾಗಿದೆ. ಇದನ್ನು ಅನೇಕರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದು. (‘ನಾನುಗೌರಿ.ಕಾಂ’ ಇಲ್ಲಿನ ನಂಬರ್‌ಗಳಿಗೆ ಕರೆ ಮಾಡಿದಾಗ ಬ್ಯುಸಿ ಬಂದಿದೆ ಹಾಗೂ ಒಂದು ನಂಬರ್‌ ಸ್ವಿಚ್ ಆಫ್ ಆಗಿದೆ. ಯಾರೂ ಕೂಡ ಈ ನಂಬರ್‌ಗಳಿಗೆ ಕರೆ ಮಾಡಬಾರದೆಂದು ವಿನಂತಿಸುತ್ತೇವೆ. ಇದು ಸುಳ್ಳು ಸಂದೇಶವೆಂದು ಕನ್ನಡದ ಫ್ಯಾಕ್ಟ್‌ಚೆಕ್ ಜಾಲತಾಣ ‘ಏನ್‌ಸುದ್ದಿ.ಕಾಂ’ ವರದಿ ಮಾಡಿತ್ತು. ವರದಿಯನ್ನು ‘ಇಲ್ಲಿ’ ಓದಬಹುದು.)

No photo description available.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....