Homeಅಂಕಣಗಳುನೊಂದವರ ದನಿಯಾಗಿ, ಶೋಷಿತರ ಹೋರಾಟದ ಶಕ್ತಿಯಾಗಿ ಬೆಳೆದ ಶಿವರಾಮ ಮೋಘ: ಡಾ. ಪಿ. ನಂದಕುಮಾರ್

ನೊಂದವರ ದನಿಯಾಗಿ, ಶೋಷಿತರ ಹೋರಾಟದ ಶಕ್ತಿಯಾಗಿ ಬೆಳೆದ ಶಿವರಾಮ ಮೋಘ: ಡಾ. ಪಿ. ನಂದಕುಮಾರ್

- Advertisement -
- Advertisement -

ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೈದರಾಬಾದ್ ಕರ್ನಾಟಕ’ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ವಿಶೇಷವಾದ ಸ್ಥಾನವಿದೆ. ಹಲವು ಸಾಂಸ್ಕೃತಿಕ ವಿಶೇಷತೆಯನ್ನು ಒಳಗೊಂಡಿರುವ ಈ ಪ್ರದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಶ್ರೀವಿಜಯ ವಿರಚಿತ ಕನ್ನಡದ ಮೊದಲ ಲಾಕ್ಷಣಿಕ ಗ್ರಂಥವಾದ ಕವಿರಾಜ ಮಾರ್ಗ’ ಕೃತಿಯನ್ನು ನೀಡುವ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ನೆಲವಾಗಿದೆ. ಪ್ರಾಚೀನ ನಾಗಾವಿ ವಿಶ್ವವಿದ್ಯಾಲಯ, ಕನಗನಹಳ್ಳಿಯ ಬೌದ್ಧ ಸ್ತೂಪ, ಅಶೋಕನ ಮಸ್ಕಿ ಶಾಸನದಂಥ ಈ ಭಾಗದ ಐತಿಹಾಸಿಕ ಸಂಗತಿಗಳು ಚರಿತ್ರೆಯಲ್ಲಿ ದಾಖಲಾಗಿವೆ. ನಾಥ, ಶಾಕ್ತ, ಶೈವ, ಶರಣ, ಸೂಫಿ, ತತ್ವಪದಕಾರರಂತಹ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುವ ವಿವೇಕದ ಮಾರ್ಗವನ್ನು ಹಾಕಿಕೊಟ್ಟಿದ್ದಾವೆ. ಇಂತಹ ವೈಚಾರಿಕ ಪರಂಪರೆಯನ್ನು ಒಳಗೊಂಡಿರುವ ಈ ನೆಲದಲ್ಲಿ ಶೋಷಣೆ, ದೌರ್ಜನ್ಯ, ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧದ ಸಾಮಾಜಿಕ ಹೋರಾಟಗಳು ಕಾಲಕಾಲಕ್ಕೆ ಘಟಿಸುತ್ತಾ ಬಂದಿವೆ.

ಕಲಬುರಗಿಯ ಸೌಹಾರ್ದ ನೆಲದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆಯ ವಿರುದ್ಧದ ಪ್ರತಿರೋಧ ಕಾಲಾತೀತವಾಗಿ ನಡೆದುಕೊಂಡು ಬಂದಿದೆ. ಪ್ರಜ್ಞಾವಂತ ಸಮುದಾಯಗಳಲ್ಲಿ ಜೀವಪರ ಚಿಂತನೆಗಳು ಮತ್ತು ಅನ್ಯಾಯವನ್ನು ಖಂಡಿಸುವ ಚಿಲುಮೆ ಇಂದಿಗೂ ಜೀವಂತವಾಗಿವೆ. 

ಜಾತಿ, ಅಸ್ಪೃಶ್ಯತೆ, ದೇವರು, ಧರ್ಮ ಇವುಗಳೆಲ್ಲವೂ ವೈದಿಕಶಾಹಿ ವರ್ಗದವರು ಹುಟ್ಟುಹಾಕಿದ ಶೋಷಣೆಯ ಅಸ್ತ್ರಗಳೆಂಬ ಮನೋಭಾವ ಶೋಷಿತ ಸಮುದಾಯಗಳಲ್ಲಿ ನಿರ್ಮಾಣವಾಗಿದೆ. ಇಂತಹ ಶೋಷಿತ ಸಮುದಾಯವನ್ನು ಜಾಗೃತಗೊಳಿಸಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅನಿಷ್ಟ ಪದ್ಧತಿಗಳ ಸಂಕೋಲೆಯಿಂದ ಶೋಷಿತರನ್ನು ಬಿಡುಗಡೆಗೊಳಿಸಲು ಸಾಮುದಾಯಿಕವಾದ ಸಂಘಟನಾತ್ಮಕ ವೈಚಾರಿಕ ಚಳವಳಿ ವಿವೇಕದ ಮಾರ್ಗ ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬದಲಾವಣೆಗೆ ತುಡಿಯುತ್ತ ಹೊಸ ಕಾಲಮಾನಕ್ಕೆ ತೆರೆದುಕೊಳ್ಳಬೇಕೆಂಬ ವಿಚಾರಗಳು ಹಾಗೆಯೇ ಸ್ವ-ಸಮುದಾಯದ ಏಳಿಗೆಗೆ ಸೇವೆಗೈಯಬೇಕೆನ್ನುವ ಅನೇಕ ಮನಸ್ಸುಗಳು ರೂಪಗೊಂಡು ನಿಸ್ವಾರ್ಥದಿಂದ ದುಡಿಯುತ್ತಿದ್ದಾವೆ.

ಹೀಗೆ ಸಮುದಾಯಪರವಾದ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡಿದ ಪ್ರಮುಖರಲ್ಲಿ ಶಿವರಾಮ್ ಮೋಘ ಕೂಡ ಒಬ್ಬರು. ಇವರಿಗೆ ದಲಿತ ಪ್ಯಾಂಥರ್ಸ್ ನಡೆಸುತ್ತಿದ್ದ ಹೋರಾಟಗಳ ಬಗ್ಗೆ ಮತ್ತು ಅಂಬೇಡ್ಕರವರು ಹುಟ್ಟುಹಾಕಿದ ಭಾರತೀಯ ರಿಪಬ್ಲಿಕ್ ಪಕ್ಷದ ರಾಜಕೀಯ ಚಿಂತನೆಯ ಬಗ್ಗೆ ಸ್ಪಷ್ಟವಾದ ಅರಿವಿತ್ತು, ಖಚಿತವಾದ ನಿಲುವಿತ್ತು. ಇದೆಲ್ಲದರ ಜೊತೆಗೆ ಮಹಾರಾಷ್ಟ್ರದಿಂದ ಗುಲ್ಬರ್ಗಾಕ್ಕೆ ಬಂದಂತಹ ಎಂ.ಎಸ್.ಕೆ. ಮಿಲ್ ಕಾರ್ಮಿಕರ ಒಡನಾಟದಿಂದ ಸಂಘಟನೆಯ ಮಹತ್ವ ತಿಳಿದುಕೊಳ್ಳುವುದಕ್ಕೆ ಇವರಿಗೆ ಸಾಧ್ಯವಾಯಿತು. ಆ ಮೂಲಕ ದಲಿತರ ಪರವಾದ ಹೋರಾಟಕ್ಕೆ ಬೇಕಾದ ಪ್ರಮುಖ ದಾರಿಯನ್ನು ಕಂಡುಕೊಂಡರು.

1965ರಲ್ಲಿ ವಾಡಿಯಲ್ಲಿ ಧಾರಾಕಾರ ಮಳೆಯ ಮಧ್ಯೆ ಮೋಘರವರು ಮಾರವಾಡಿ ದೇವಾಲಯಕ್ಕೆ ಅಸ್ಪೃಶ್ಯರಿಗೆ ಪ್ರವೇಶ ಕೊಡಿಸಿ, ಪೂಜಾರಿಯನ್ನು ಹೊರಹಾಕಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಈ ಹೋರಾಟದ ಮುಖೇನ ಅಸ್ಪೃಶ್ಯರು ಕೀಳಲ್ಲವೆಂದು ಹೇಳುತ್ತಲೇ ಮಾನವರೆಲ್ಲ ಸಮಾನರು ಎಂಬ ಅರಿವು ಮೂಡಿಸಿದರು.

ಅಂಬೇಡ್ಕರ್ ಜಯಂತಿಯನ್ನು ಗುಲ್ಬರ್ಗಾ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿಯೂ ಏರ್ಪಡಿಸುವ ಮೂಲಕ ದಲಿತ ಸಮುದಾಯಗಳಲ್ಲಿ ಅಂಬೇಡ್ಕರ್ ಅವರ ವೈಚಾರಿಕ ವಿಚಾರಗಳನ್ನು ಬಿತ್ತಿದರು. ಶೋಷಿತ ಸಮುದಾಯಗಳಲ್ಲಿ ಹೋರಾಟದ ಮನೋಭಾವ ಬೆಳೆಯಲು ಬುನಾದಿಯನ್ನು ಹಾಕಿಕೊಟ್ಟರು. ಮೋಘಾ’ರವರ ಒಡನಾಡಿಗಳಾದ ಕೋರವಾರ ಗುಂಡಪ್ಪ, ಎಸ್. ಮಾಣಿಕರಾವ್, ಟೋಪಣ್ಣ’ ಮುಂತಾದವರು ಶೋಷಿತ ಸಮುದಾಯದ ಪರವಾದ ಹೋರಾಟಕ್ಕೆ ಜೊತೆಯಾದರು.

ಗುಲ್ಬರ್ಗಾದ ಯಾವುದೇ ಗ್ರಾಮದಲ್ಲಿ ದಲಿತರಿಗೆ ಅನ್ಯಾಯವಾದರೆ ಈ ಎಲ್ಲರೂ ಒಟ್ಟಾಗಿ ಸೇರಿ ಸಭೆ ನಡೆಸುತ್ತಿದ್ದರು. ಆ ಸಭೆಯಲ್ಲಿ ಪ್ರತಿಯೊಬ್ಬರ ವಿಚಾರಗಳಿಗೂ ಮಾನ್ಯತೆ ಕೊಡುತ್ತಿದ್ದರು. ಹೀಗೆ ಮುಕ್ತವಾಗಿ ಅಭಿಪ್ರಾಯಗಳನ್ನು ಸ್ವೀಕರಿಸಿ ಇಡೀ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ವಿರೋಧಿಸಲು ಹೊಸ ನುಡಿಗಟ್ಟುಗಳ ಮೂಲಕ ಪ್ರಖರವಾದ ಹೋರಾಟವನ್ನು ಕಟ್ಟುತ್ತಿದ್ದರು.

ಗುಲ್ಬರ್ಗಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತಾ ಆಚರಣೆಗಳನ್ನು ತೊಡೆದು ಹಾಕುವ ಸಲುವಾಗಿ ಮೋಘಾರವರು ತಮ್ಮ ಸಂಗಡಿಗರೊಂದಿಗೆ 1964ರಲ್ಲಿ ಗುಲ್ಬರ್ಗಾ ನಗರದಲ್ಲಿ `ಅಸ್ಪೃಶ್ಯತಾ ನಿರ್ಮೂಲನಾ ಹೋರಾಟ’ವನ್ನು ರೂಪಿಸಿದರು. ದಲಿತರ ಮೇಲೆ ನಡೆಯುತ್ತಿದ್ದಂಥ ದೌರ್ಜನ್ಯ, ಕೊಲೆ, ಸುಲಿಗೆ, ಅತ್ಯಾಚಾರಗಳಂಥ ಹೀನ ಕೃತ್ಯಗಳು ನಿಲ್ಲಿಸಬೇಕು ಮತ್ತು ಭೂಮಿ ಇಲ್ಲದವರಿಗೆ ಭೂಮಿ ಕೊಡಿಸಬೇಕೆಂಬ ಕೆಲ ಮಹತ್ತರ ಬೇಡಿಕೆಗಳನ್ನು ಮಂಡಿಸಿದರು.

ಈ ಹೋರಾಟದಲ್ಲಿ ಭಾಗವಹಿಸಿದ್ದ ಬಸವನಗರ, ಅಶೋಕನಗರ, ಸಿದ್ಧಾರ್ಥ ನಗರ, ತಾರಪೈಲ್, ಹೀರಾಪೂರಿನ ಎಲ್ಲಾ ವಯಸ್ಸಿನ ಸುಮಾರು ಮೂರು ಸಾವಿರ ದಲಿತ ಹೆಣ್ಣು ಮಕ್ಕಳು ಒಂದೇ ತಿಂಗಳಲ್ಲಿ ಜೈಲಿಗೆ ಹೋದರೂ ಮೋಘಾ ಮತ್ತು ಅವರ ಸಂಗಡಿಗರು ಧೃತಿಗೆಡದೆ, ಹೋರಾಟದಿಂದ ಹಿಂದೆ ಸರಿಯದೆ ನಿರಂತರವಾಗಿ ತಮ್ಮೊಳಗಿನ ಆತ್ಮವಿಶ್ವಾಸವನ್ನು ಗಟ್ಟಿತನದಿಂದ ಪ್ರದರ್ಶಿಸಿದ್ದು ಗಮನಾರ್ಹವಾದ ಐತಿಹಾಸಿಕ ಸಂಗತಿಯಾಗಿದೆ.

ಇದೇ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಯ ನಿರಂತರ ಓದು ಮತ್ತು ಚರ್ಚೆಯ ಮೂಲಕ ಜಾಗೃತಗೊಂಡ ದಲಿತ ಸಮುದಾಯದ ಪ್ರಜ್ಞಾವಂತ ನಾಯಕರು ಹಳ್ಳಿಯ ಅಸ್ಪೃಶ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದ ಗುಲ್ಬರ್ಗಾದ ಸುತ್ತಮುತ್ತಲಿನ ಜಿಲ್ಲೆಗಳಾದ ರಾಯಚೂರು, ಬಿಜಾಪುರ, ಬೀದರನ ಪ್ರಮುಖ ತಾಲ್ಲೂಕು ಮತ್ತು ನೂರಾರು ಹಳ್ಳಿಗಳಿಂದ ದಲಿತ ಸಮುದಾಯದ ಮಕ್ಕಳು ಶಿಕ್ಷಣವನ್ನು ಹರಸಿ ಗುಲ್ಬರ್ಗಾಕ್ಕೆ ಬರುವಂತಾಯಿತು.

ಹೀಗೆ ಹಳ್ಳಿಗಳಿಂದ ಬಂದಂತಹ ಬಡ ದಲಿತ ಮಕ್ಕಳಿಗಾಗಿ ‘ಅಂಬೇಡ್ಕರ್ ಬಾಯ್ಸ್’ ವಸತಿ ನಿಲಯವನ್ನು ಪ್ರಾರಂಭಿಸಿದ ಮೋಘಾರವರು ಅಸ್ಪೃಶ್ಯ ಸಮಾಜದ ಮಕ್ಕಳಿಗೆ ದಾರಿದೀಪವಾದವರು. ಈ ರೀತಿಯ ಕಾರ್ಯಗಳ ಮೂಲಕ ಸಾಮಾಜಿಕ ಅನಿಷ್ಟ ಪದ್ಧತಿಗಳು ಮತ್ತು ದಲಿತರ ಶೋಷಣೆಯ ವಿರುದ್ಧದ ಹೋರಾಟಕ್ಕೆ ಯುವ ಸಮುದಾಯವನ್ನು ಅಣಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ದಲಿತರು ಗುಲ್ಬರ್ಗಾ ಜಿಲ್ಲೆಯಲ್ಲಿ ಶೋಷಣೆ, ಸಾಮಾಜಿಕ ಅಸಮಾನತೆಯ ವಿರುದ್ಧ, ದೌರ್ಜನ್ಯ, ಅನಿಷ್ಟ ಪದ್ಧತಿಗಳ ವಿರುದ್ಧ ವಿಭಿನ್ನ ಸ್ವರೂಪಗಳಲ್ಲಿ ತಮ್ಮ ಪ್ರತಿಭಟನೆಯ ನಿಲುವನ್ನು ದಾಖಲಿಸಿದ್ದಾರೆ. ಆ ಸಮಯಕ್ಕೆ ಹೊಸ ಚಿಂತನಾ ಕ್ರಮದಲ್ಲಿ ದಲಿತ ಸಮುದಾಯ ತನ್ನ ಸಾಹಿತ್ಯಕ ಅಭಿವ್ಯಕ್ತಿಯನ್ನು ದಾಖಲಿಸುವುದಕ್ಕೆ ಅಣಿಯಾಯಿತು.

ದಲಿತತ್ವದ ಪ್ರಜ್ಞೆಯುಳ್ಳ ಸಮಾನ ಮನಸ್ಕರ ಒತ್ತಾಸೆಯಾಗಿ ವ್ಯವಸ್ಥೆಯ ವಿರುದ್ಧ ಮಂಗ್ಳೂರು ವಿಜಯ್ ಅವರ ಮಾರ್ಗದರ್ಶನದಲ್ಲಿ ಡಿ. ಜಿ. ಸಾಗರ ಅವರ ನಾಯಕತ್ವದಲ್ಲಿ ‘ದಲಿತ ಸಂಘರ್ಷ ಸಮಿತಿ’ ರೂಪಗೊಂಡು ದಲಿತ ಚಳವಳಿಗೆ ತೀವ್ರತೆಯನ್ನು ನೀಡಿತು. ಜಾತಿಯನ್ನು ಹೇಳಿಕೊಳ್ಳುವುದಕ್ಕೆ ಸಂಕೋಚ ಪಡುತ್ತಿದ್ದ ಶೋಷಿತ ಸಮುದಾಯದಲ್ಲಿ ಸ್ವಾಭಿಮಾನದ ಆತ್ಮಸ್ಥೈರ್ಯವನ್ನು ಹಾಗೂ ಶೋಷಿತ ಬಡ ದಲಿತ ಸಮುದಾಯಗಳನ್ನು ಶೋಷಣೆಯ ಸಂಕೋಲೆಯಿಂದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಹಿರಿಯರ ತ್ಯಾಗಮಯಿ ಹೋರಾಟವನ್ನು ಇಂದಿನ ಯುವ ತಲೆಮಾರು ಅರಿಯುವ ತುರ್ತು ಈ ಕಾಲದ ಅನಿವಾರ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅರ್ಜೆಂಟೀನಾದ ನೌಕಾಪಡೆ -ವಾಯುಪಡೆಯನ್ನು ‘ಭಯೋತ್ಪಾದಕ ಸಂಸ್ಥೆಗಳು’ ಎಂದು ಘೋಷಿಸಿದ ಇರಾನ್‌

ಅರ್ಜೆಂಟೀನಾದ ನೌಕಾಪಡೆ ಮತ್ತು ವಾಯುಪಡೆಯನ್ನು ಇರಾನ್ ಸರ್ಕಾರವು ಭಯೋತ್ಪಾದಕ ಸಂಸ್ಥೆಗಳು ಎಂದು ಘೋಷಿಸಿದ್ದು, ಈ ವರ್ಷದ ಆರಂಭದಲ್ಲಿ ಟೆಹ್ರಾನ್‌ನ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್ ಜಿಸಿ) ಅನ್ನು ಕಪ್ಪುಪಟ್ಟಿಗೆ ಸೇರಿಸುವ ಬ್ಯೂನಸ್...

ಎಸ್‌ಐಆರ್ ಅವಧಿಯಲ್ಲಿ ಕೈಬಿಡಲಾದ ವ್ಯಕ್ತಿಗಳ ಗುರುತಿನ ಚೀಟಿ ಸಂಖ್ಯೆ ಮರುಸ್ಥಾಪನೆ ಕೋರಿ ಅರ್ಜಿ

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿರುವ ಇಬ್ಬರು ಅರ್ಜಿದಾರರು, ತಮ್ಮ ಪರಿಷ್ಕೃತ ಪರಿಹಾರ ಪ್ರಕ್ರಿಯೆಯನ್ನು ಕೇವಲ ಏಳು ರಾಜ್ಯಗಳಿಗೆ ಸೀಮಿತಗೊಳಿಸುವ ಬದಲು, ಕರಡು ಪಟ್ಟಿಯಿಂದ ಕೈಬಿಡಲಾದ...

ಜಮ್ಮು ಕಾಶ್ಮೀರ : CRPF ತುಕಡಿ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ ; ಮೂವರು ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ (ನ.11) ನಡೆದ ಭಯೋತ್ಪಾದಕ ದಾಳಿಯಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (ಸಿಆರ್‌ಪಿಎಫ್‌)ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯ ಚೆಕ್‌ಪಾಯಿಂಟ್ ಒಂದರಲ್ಲಿ ನಿಯೋಜನೆಗೊಂಡಿದ್ದ ಭದ್ರತಾ...

‘ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ, ಚಿಂತೆ ಏಕೆ?’: ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ: ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಜನರ ಜೀವಕ್ಕೆ ಕಂಟಕವಾಗುತ್ತಿರುವ ಬೆನ್ನಲ್ಲೇ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ತೀವ್ರ ಚರ್ಚೆಗೆ...

‘ಗ್ಯಾನೇಶ್ ಕುಮಾರ್ 2 ಕೋಟಿ ರೂ. ಲಂಚ ಕೇಳಿದ್ದರು’: ಹೇಳಿಕೆ ದಾಖಲಿಸಿಕೊಂಡ ಕೇರಳ ವಿಜಿಲೆನ್ಸ್-ವರದಿ

ಕೇರಳದ ಭ್ರಷ್ಟಾಚಾರ ನಿಗ್ರಹ ಮತ್ತು ವಿಜಿಲೆನ್ಸ್ ಬ್ಯೂರೋ (ವಿಎಸಿಬಿ) ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಗಳ ಕುರಿತು ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ. 2006ರಲ್ಲಿ ಗ್ಯಾನೇಶ್ ಕುಮಾರ್...

ತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಹೆಚ್ಚು ಮತದಾರರು ನಾಪತ್ತೆ : ನ.26ರಂದು ಬೃಹತ್ ಪ್ರತಿಭಟನೆ

ತಮಿಳುನಾಡಿನ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಒಟ್ಟು 74.07 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಯಂಗ್ ಸಿಟಿಝನ್ಸ್ ಕಲೆಕ್ಟಿವ್ (ಐವೈಸಿಸಿ) ಗಂಭೀರ ಆರೋಪ ಮಾಡಿದ್ದು, ಈ ಹೆಸರುಗಳ...

ವಾಯುಮಾಲಿನ್ಯದಿಂದ ಜನರ ಜೀವಕ್ಕೆ ಕುತ್ತು: ‘ಭಾರತೀಯರು ಅನಾಥರಾಗಿ ಗ್ಯಾಸ್ ಚೇಂಬರ್‌ನಲ್ಲಿ ಸಿಲುಕಿದ್ದಾರೆ’; ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಎನ್‌ಜಿಟಿಗೆ ಮನವಿ

ನವದೆಹಲಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಜನರು ಉಸಿರಾಡುವುದೇ ಜೀವಕ್ಕೆ ಅಪಾಯಕಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಕಾರಿ ಗಾಳಿಯ ನಡುವೆ ಬದುಕುತ್ತಿರುವ ಜನರ ಆರೋಗ್ಯ ಮತ್ತು...

2024ರ ಚುನಾವಣೆಗಳು : 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಹೊಂದಾಣಿಕೆಯಾಗದ ಎಣಿಕೆ ಮತಗಳ ಸಂಖ್ಯೆ- ವರದಿ

2024ರ ಚುನಾವಣೆಗಳ ಸಂದರ್ಭದಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ಎಣಿಕೆಯಾದ ಮತಗಳ ಸಂಖ್ಯೆಯ ನಡುವೆ ವ್ಯತ್ಯಾಸಗಳಿರುವುದನ್ನು ಚುನಾವಣಾ...

“ರೈತರು 3 ತಿಂಗಳು ದುಡಿದು, 9 ತಿಂಗಳು ಮದ್ಯ ಕುಡಿದು-ಜೂಜಾಟದಲ್ಲಿ ಮುಳುಗಿರುತ್ತಾರೆ”: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ವಿವಾದಿತ ಹೇಳಿಕೆ!

ತಮ್ಮ ಅಸಂಸದೀಯ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಪದೇಪದೇ ಸುದ್ದಿಯಾಗುವ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ, ದೇಶದ ಅನ್ನದಾತರ ವಿರುದ್ಧ ನಾಲಿಗೆ ಹರಿಬಿಟ್ಟು ಮತ್ತೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ....

ತಪ್ಪದ ದೋಷಾರೋಪ ಭೀತಿ : ಎರಡು ಯುದ್ಧಗಳ ದಾಳ ಉರುಳಿಸಿದರೂ ಹೆಗ್ಸೆತ್‌ ರಕ್ಷಿಸಲು ಟ್ರಂಪ್‌ ವಿಫಲ

'ಎರಡು ಯುದ್ಧಗಳನ್ನು ಗೆದ್ದಿದ್ದಾರೆ' ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾದವು, ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿರುದ್ಧ ತೀವ್ರಗೊಳ್ಳುತ್ತಿರುವ ದೋಷಾರೋಪ ಪ್ರಕ್ರಿಯೆಯ ಒತ್ತಡವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ....