Homeಕರ್ನಾಟಕಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣ | ತೇಜಸ್ವಿ ಸೂರ್ಯ ಸವಾಲಿಗೆ ಪ್ರಿಯಾಂಕ್ ಖರ್ಗೆ ಪ್ರತಿಸವಾಲು :...

ಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣ | ತೇಜಸ್ವಿ ಸೂರ್ಯ ಸವಾಲಿಗೆ ಪ್ರಿಯಾಂಕ್ ಖರ್ಗೆ ಪ್ರತಿಸವಾಲು : ‘RSS ನೋಂದಾಯಿಸಿ ಫೀಸ್ ನಾನೇ ಕೊಡ್ತೇನೆ’ ಎಂದ ಗೃಹ ಸಚಿವರು

- Advertisement -
- Advertisement -

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಅಪರಾಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದರು. ಕೇರಳದ ಕೊಚ್ಚಿಯ ಮರೈನ್ ಡ್ರೈವ್‌ನಲ್ಲಿ ಮುಸ್ಲಿಂ ಯೂತ್ ಲೀಗ್ (ಎಂವೈಎಲ್‌) ಕೇರಳ ರಾಜ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭರವಸೆ ನೀಡಿದ್ದರು.

ಗೃಹ ಸಚಿವರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ..ಕೇರಳದಲ್ಲಿ ನಡೆದ ಮುಸ್ಲಿಂ ಯೂತ್ ಲೀಗ್ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣಗಳನ್ನು ಮಾಡುವುದಕ್ಕಿಂತ ಗೌರಿ ಲಂಕೇಶ್ ಮತ್ತು ಪ್ರೊ. ಕಲ್ಬುರ್ಗಿ ಅವರ ನ್ಯಾಯದ ಹೋರಾಟಕ್ಕೆ ಇನ್ನೂ ಹೆಚ್ಚಿನ ಘನತೆ ಸಿಗಬೇಕಿದೆ. ನೀವು ಕರ್ನಾಟಕದ ಗೃಹ ಸಚಿವರು. ಕಾನೂನಿನ ಚೌಕಟ್ಟಿಗೆ ಅನುಗುಣವಾಗಿ ನ್ಯಾಯ ಸಿಗುವಂತೆ ನೋಡುವುದು ನಿಮ್ಮ ಜವಾಬ್ದಾರಿಯೇ ಹೊರತು, ರಾಜಕೀಯ ವೇದಿಕೆಗಳಿಂದ ಪೂರ್ವಾಗ್ರಹ ಪೀಡಿತ ತೀರ್ಪುಗಳನ್ನು ನೀಡುವುದಲ್ಲ” ಎಂದಿದ್ದಾರೆ.

“ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಪಟ್ಟಿಯನ್ನು 2018ರಲ್ಲಿ ಸಲ್ಲಿಸಲಾಗಿದೆ ಮತ್ತು 2022ರಲ್ಲಿ ವಿಚಾರಣೆ ಪ್ರಾರಂಭಗೊಂಡಿದೆ. ಪ್ರಸ್ತುತ ಪ್ರಕರಣವು ಏಳನೇ ನ್ಯಾಯಾಧೀಶರ ಮುಂದೆ ಬಂದಿದ್ದು, ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನು ಪ್ರೊ. ಕಲ್ಬುರ್ಗಿ ಅವರ ಪ್ರಕರಣದಲ್ಲಿ, ಸೆ. 2026ರ ಹೊತ್ತಿಗೆ 139 ಸಾಕ್ಷಿಗಳಲ್ಲಿ ಕೇವಲ 33 ಸಾಕ್ಷಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ವಿಳಂಬಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಮತ್ತು ಇದಕ್ಕೆ ಉತ್ತರಗಳ ಅಗತ್ಯವಿದೆ. ಈ ಹತ್ಯೆಗಳು ನಡೆದಾಗಿನಿಂದ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವೇ ಕರ್ನಾಟಕವನ್ನು ಆಳಿದೆ, ಹಾಗೂ ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಾಜ್ಯ ಸರ್ಕಾರವೇ ರಚಿಸಿದೆ” ಎಂದು ಹೇಳಿದ್ದಾರೆ.

ಮುಂದುವರಿದು, “ಆದ್ದರಿಂದ ಪರಿಣಾಮಕಾರಿ ಕಾನೂನು ಪ್ರಾಸಿಕ್ಯೂಷನ್ ಅನ್ನು ಖಚಿತಪಡಿಸಿಕೊಳ್ಳುವಲ್ಲಿ ಗೃಹ ಇಲಾಖೆಯು ತನ್ನ ಪಾತ್ರಕ್ಕೆ ಉತ್ತರಿಸಲೇಬೇಕು! ಇಂತಹ ಪರಿಸ್ಥಿತಿಯಲ್ಲಿ, ಕರ್ನಾಟಕದ ಗೃಹ ಸಚಿವರಾಗಿ ನೀವು ನೀಡಿರುವ “ಕೇಸ್ ನಡೆಯುತ್ತಿದೆ, ಇನ್ನಾರು ತಿಂಗಳಲ್ಲಿ ನಾನು ಇದನ್ನು ಮುಗಿಸುತ್ತೇನೆ ಮತ್ತು ಈ ಎಲ್ಲ ಜನರನ್ನು ಜೈಲಿಗೆ ಹಾಕುತ್ತೇನೆ” ಎಂಬ ಹೇಳಿಕೆಯು, ನ್ಯಾಯಾಂಗವು ಯಾವ ರೀತಿಯ ತೀರ್ಪು ನೀಡಬೇಕು ಎಂಬುದನ್ನು ನೀವೇ ಪರೋಕ್ಷವಾಗಿ ಸೂಚಿಸುತ್ತಿರುವಂತೆ ತೋರುತ್ತದೆ” ಎಂದಿದ್ದಾರೆ.

“ಇದು ನಿಮ್ಮ ಉಸ್ತುವಾರಿಯಲ್ಲಿ ನಡೆಯುತ್ತಿರುವ ವಿಚಾರಣೆಗಳ ನಿಷ್ಪಕ್ಷಪಾತ ಮತ್ತು ಸ್ವತಂತ್ರತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ. ನೀವು “ಸಂಘ” ಎಂಬ ಹೆಸರನ್ನು ಪ್ರಸ್ತಾಪಿಸುವಾಗ, ಈ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ. ಮೂರು ದಿನಗಳ ಒಳಗೆ ನಿಮ್ಮ ಆರೋಪಗಳಿಗೆ ಪೂರಕವಾದ ಪುರಾವೆಗಳನ್ನು ಒದಗಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ! ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಇಂತಹದೇ ರೀತಿಯ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನಿಮ್ಮ ಪರಮೋಚ್ಚ ನಾಯಕ ರಾಹುಲ್ ಗಾಂಧಿ ಅವರು ಇಂದಿಗೂ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ” ಎಂದು ತೇಜಸ್ವಿ ಸೂರ್ಯ ಸವಾಲು ಹಾಕಿದ್ದಾರೆ.

ತೇಜಸ್ವಿ ಸೂರ್ಯ ಸವಾಲಿಗೆ ಪ್ರತಿಸವಾಲು ಹಾಕಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಆರ್‌ಎಸ್‌ಎಸ್‌ ಅನ್ನು ನೀವು ಹತಾಶೆಯಿಂದ ಸಮರ್ಥಿಸಿಕೊಳ್ಳುತ್ತಿರುವುದು ಅದರ ದೊಡ್ಡ ಕಪಟತನವನ್ನು ಬಹಿರಂಗಪಡಿಸಿದೆ. ಎಲ್ಲದಕ್ಕೂ ತಾನೇ ಕಾರಣ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತದೆ ಆದರೆ ಯಾವುದಕ್ಕೂ ಜವಾಬ್ದಾರಿ ಹೊರಲು ಸಿದ್ಧವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

“ಗೌರಿ ಲಂಕೇಶ್, ಕಲ್ಬುರ್ಗಿ, ದಾಬೋಲ್ಕರ್ ಮತ್ತು ಪನ್ಸಾರೆ ಅವರ ಕೊಲೆಗಳ ಕುರಿತು ಎಸ್‌ಐಟಿ ಮತ್ತು ಸಿಬಿಐ ನಡೆಸಿದ ತನಿಖೆಗಳು ಆರೋಪಿಗಳನ್ನು ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿದ ಗುಪ್ತ ಜಾಲಗಳತ್ತ ಪತ್ತೆಹಚ್ಚಿವೆ. ಆದರೆ ನಿಮ್ಮ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ನ ರಚನೆಯು ಸನ್ನಿವೇಶಗಳಿಗೆ ಅನುಗುಣವಾಗಿ ಜನರನ್ನು ತನ್ನವರೆಂದು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ಅದಕ್ಕೆ ತೀರಾ ಅನುಕೂಲಕರವಾಗಿ ಮಾಡಿಕೊಟ್ಟಿದೆ. ಆರ್‌ಎಸ್‌ಎಸ್ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ನಿರಾಕರಿಸುತ್ತದೆ, ಯಾವುದೇ ಔಪಚಾರಿಕ ಸದಸ್ಯತ್ವ ದಾಖಲಾತಿ ಅಥವಾ ಸಾರ್ವಜನಿಕ ಸದಸ್ಯತ್ವ ನೋಂದಣಿಯನ್ನು ನಿರ್ವಹಿಸುವುದಿಲ್ಲ. ನೀವು ಭಗವಾ ಧ್ವಜದ ಮುಂದೆ ಗುರುದಕ್ಷಿಣೆ ಸಂಗ್ರಹಿಸುತ್ತೀರಿ, ಆದರೂ ಯಾವುದೇ ಕ್ರೋಢೀಕೃತ ಖಾತೆಗಳನ್ನು ಪ್ರಕಟಿಸುವುದಿಲ್ಲ. ಆರ್‌ಎಸ್‌ಎಸ್‌ಗೆ ಯಾವುದೇ ಔಪಚಾರಿಕ ಸದಸ್ಯತ್ವ ನೋಂದಣಿ ಇಲ್ಲದಿರುವಾಗ, ಯಾವುದೇ ನೋಂದಾಯಿತ ಕಾನೂನು ಗುರುತು ಇಲ್ಲದಿರುವಾಗ ಮತ್ತು ಅದನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದಕ್ಕೆ ಯಾವುದೇ ಪರಿಶೀಲಿಸಬಹುದಾದ ದಾಖಲೆ ಇಲ್ಲದಿರುವಾಗ ಆರ್‌ಎಸ್‌ಎಸ್‌ಗೆ ಲಿಂಕ್ ಆಗಿರುವ ಪ್ರಕರಣಗಳನ್ನು ಹೇಗೆ ತನಿಖೆ ಮಾಡಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

“ನಿಮಗೆ ಸತ್ಯದ ಬಗ್ಗೆ ಕಾಳಜಿ ಇದ್ದರೆ, ನಿಮ್ಮ ಆರ್‌ಎಸ್‌ಎಸ್ ಒಡೆಯರಿಗೆ ನೋಂದಾಯಿಸಿಕೊಳ್ಳಲು, ಅವರ ಪದಾಧಿಕಾರಿಗಳನ್ನು ಗುರುತಿಸಲು ಮತ್ತು ಅವರ ಖಾತೆಗಳನ್ನು ಬಹಿರಂಗಪಡಿಸಲು ತಿಳಿಸಿ. ನಿಮಗೆ ಅನುಕೂಲಕರವಾದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಹಾಯ ಮಾಡುವ ಅನಾಮಧೇಯತೆಯ ಅನುಕೂಲಕರ ಪರದೆಯ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಆರ್‌ಎಸ್‌ಎಸ್ ಅನ್ನು ನೋಂದಾಯಿಸಿ, ಅದರ ನೋಂದಣಿ ಶುಲ್ಕವನ್ನು ನಾನೇ ಭರಿಸುತ್ತೇನೆ. ಈ ಸವಾಲನ್ನು ಸ್ವೀಕರಿಸುವ ಧೈರ್ಯ ನಿಮಗಿದೆಯೇ ಎಂದು ನೋಡೋಣ” ಎಂದು ಪ್ರಿಯಾಂಕ್ ಖರ್ಗೆ ಪ್ರತಿಸವಾಲು ಹಾಕಿದ್ದಾರೆ.




 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಮಾಜಿಕ ಜಾಲತಾಣದಲ್ಲಿ ದಲಿತ ವಿರೋಧಿ ಪೋಸ್ಟ್: ಐಐಟಿ ಪಾಟ್ನಾ ರಿಜಿಸ್ಟ್ರಾರ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್

ದಲಿತ ಸಮುದಾಯದ ಕುರಿತು ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐಐಟಿ ಪಟ್ನಾದ ರಿಜಿಸ್ಟ್ರಾರ್ ಅವಲೇಂದರ್ ಕುಮಾರ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಕೆಲವು ವಾರಗಳ...

ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಕೇಸ್: ಅಜಿತ್ ದೋವಲ್, ಸಾಮಂತ್ ಗೋಯೆಲ್‌ಗೆ ಸಮನ್ಸ್ ನೀಡಲು ಅಮೆರಿಕ ಕೋರ್ಟ್ ಅನುಮತಿ

ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹೂಡಿರುವ ಖಾಸಗಿ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ನ್ಯಾಯಾಲಯವು ಪ್ರಮುಖ ಆದೇಶ ನೀಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು...

ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಅವರ ಪ್ರಶ್ನಾತೀತ ಪ್ರಾಮಾಣಿಕತೆಯೇ ಕಾರಣ: ಸೋನಿಯಾ ಗಾಂಧಿ

2004ರಲ್ಲಿ ದೇಶದ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲು ಅವರ ‘ಪ್ರಶ್ನಾತೀತ ಪ್ರಾಮಾಣಿಕತೆ’ ಮತ್ತು ಆಡಳಿತದ ಕುರಿತಾದ ಆಳವಾದ ತಿಳುವಳಿಕೆಯೇ ಪ್ರಮುಖ ಕಾರಣವಾಗಿತ್ತು ಎಂದು ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ...

ಕರ್ನಾಟಕದ ಎಥನಾಲ್ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇರಳ: 4 ಜಿಲ್ಲೆಗಳ 9 ಬಂಕ್‌ಗಳಿಂದ ಸ್ಯಾಂಪಲ್ ಸಂಗ್ರಹ, ಲ್ಯಾಬ್‌ಗೆ ರವಾನೆ!

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಶೇ. 20ರ ಮಿತಿಗಿಂತಲೂ ಅಧಿಕ (ಶೇ. 31.2 ರಷ್ಟು) ಎಥನಾಲ್ ಬೆರೆಸಲಾಗುತ್ತಿದೆ ಎನ್ನುವ ಸಚಿವ ರಿಜ್ವಾನ್ ಆರ್ಷದ್ ಅವರ ಆರೋಪಗಳ ಬೆನ್ನಲ್ಲೇ, ನೆರೆಯ ಕೇರಳ ಸರ್ಕಾರವೂ ಪೆಟ್ರೋಲ್...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ವಿವಾದ: ಸಿಸಿಬಿ ವಿಚಾರಣೆಗೆ ಹಾಜರಾದ ಉಚ್ಚಾಟಿತ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾದ ಸ್ಟಿಂಗ್ ವಿಡಿಯೋ ವಿವಾದದ ತನಿಖೆ ಚುರುಕುಗೊಂಡಿದ್ದು, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ನಾಯಕಿ ಕೃಪಾ ಆಳ್ವ ಅವರನ್ನು ಸೋಮವಾರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಅಪರಾಧ...

ಮೂರನೇ ಪತ್ನಿಗೂ ವಿಚ್ಛೇದನ: ರಷ್ಯಾದ ಅನ್ನಾ ಲೆಜ್ನೆವಾ ಜೊತೆಗಿನ 12 ವರ್ಷಗಳ ದಾಂಪತ್ಯ ಅಂತ್ಯಗೊಳಿಸಿದ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಚಿತ್ರರಂಗದ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯವೂ ಮುರಿದುಬಿದ್ದಿದೆ. ರಷ್ಯಾದ ಮಾಡೆಲ್ ಮತ್ತು ನಟಿ ಅನ್ನಾ ಲೆಜ್ನೆವಾ ಅವರೊಂದಿಗಿನ 12...

ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್‌ಗೆ 2026ರ ಬೂಕರ್ ಪ್ರಶಸ್ತಿ : ‘ದಿ ಎಂಡ್ ಆಫ್ ಎವೆರಿಥಿಂಗ್’ ವೈಜ್ಞಾನಿಕ ಕಾದಂಬರಿಗೆ ಜಾಗತಿಕ ಮನ್ನಣೆ

ಬ್ರಿಟಿಷ್ ಮೂಲದ ಪ್ರಸಿದ್ಧ ಲೇಖಕ ಎಂ. ಜಾನ್ ಹ್ಯಾರಿಸನ್ ಅವರು ತಮ್ಮ ವೈಜ್ಞಾನಿಕ ಹಾಗೂ ಡಿಸ್ಟೋಪಿಯನ್ ವಿಡಂಬನಾತ್ಮಕ ಕಾದಂಬರಿ 'ದಿ ಎಂಡ್ ಆಫ್ ಎವೆರಿಥಿಂಗ್' ಕೃತಿಗೆ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಲಂಡನ್‌ನ...

ಅತ್ಯಾಚಾರದ ಬೆದರಿಕೆ, ಆಹಾರ ನಿರಾಕರಣೆ: ಇಸ್ರೇಲ್ ಬಂಧನದಲ್ಲಿರುವ 380 ಮಕ್ಕಳು ಸೇರಿದಂತೆ 9,200 ಪ್ಯಾಲೆಸ್ಟೀನಿಯನ್ನರ ಜೀವಕ್ಕೆ ಅಪಾಯ: ವರದಿ

ಗಾಜಾ ಮೇಲಿನ ಇಸ್ರೇಲ್‌ನ ನರಮೇಧದ ದಾಳಿ ಮುಂದುವರಿದಿರುವ ಬೆನ್ನಲ್ಲೇ, ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯಗಳು ಜೈಲುಗಳ ಒಳಗೂ ಭೀಕರ ಸ್ವರೂಪ ಪಡೆದುಕೊಂಡಿವೆ. ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದ ಬೆದರಿಕೆ, ಆಹಾರದ ಕೊರತೆ, ವೈದ್ಯಕೀಯ ಚಿಕಿತ್ಸೆಯ ನಿರಾಕರಣೆ,...

ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಸಂಸತ್ತಿನ ಮುಂಗಾರು ಅಧಿವೇಶನವು ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ 'ಸೈನ್ ಡೈ' (ನಿರ್ದಿಷ್ಟ ದಿನಾಂಕ ನಿಗದಿಪಡಿಸದೆ ಮುಂದೂಡುವುದು) ಮುಂದೂಡಿಕೆಯನ್ನು ದಾಖಲಿಸಿದೆ. ಬರೋಬ್ಬರಿ 89 ದಿನಗಳು ಕಳೆದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸುವ 'ಪ್ರೊರೋಗ್' (ಅಧಿವೇಶನದ ಮುಕ್ತಾಯ...

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ...