Homeದಲಿತ್ ಫೈಲ್ಸ್ಸಾಮಾಜಿಕ ಜಾಲತಾಣದಲ್ಲಿ ದಲಿತ ವಿರೋಧಿ ಪೋಸ್ಟ್: ಐಐಟಿ ಪಾಟ್ನಾ ರಿಜಿಸ್ಟ್ರಾರ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್

ಸಾಮಾಜಿಕ ಜಾಲತಾಣದಲ್ಲಿ ದಲಿತ ವಿರೋಧಿ ಪೋಸ್ಟ್: ಐಐಟಿ ಪಾಟ್ನಾ ರಿಜಿಸ್ಟ್ರಾರ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್

- Advertisement -
- Advertisement -

ದಲಿತ ಸಮುದಾಯದ ಕುರಿತು ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐಐಟಿ ಪಟ್ನಾದ ರಿಜಿಸ್ಟ್ರಾರ್ ಅವಲೇಂದರ್ ಕುಮಾರ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಕೆಲವು ವಾರಗಳ ಹಿಂದೆಯೇ ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರು ದೂರುಗಳನ್ನು ಸಲ್ಲಿಸಿದ್ದರು.

ಮಾಜಿ ಕಾಂಗ್ರೆಸ್ ನಾಯಕ ಆದಿತ್ಯ ಪಾಸ್ವಾನ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ನವೆಂಬರ್ 5ರಂದು ಪಾಟ್ನಾದ ಎಸ್‌ಸಿ/ಎಸ್‌ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಠಾಕೂರ್ ಅವರು ಸಾಮಾಜಿಕ ಜಾಲತಾಣದಲ್ಲಿ, “ಸಮರ್ಥರಾಗುವ ಬದಲು ದಲಿತರಾಗಿ, ಯಶಸ್ಸು ತಾನಾಗಿಯೇ ಬೆನ್ನಟ್ಟಿ ಬರುತ್ತದೆ” (Kabil mat bano, Dalit bano, kamyabi jhagg marke pichey ayegi) ಎಂಬರ್ಥದ ಹೇಳಿಕೆಯನ್ನು ಹಂಚಿಕೊಂಡಿದ್ದರು ಎಂದು ಪಾಸ್ವಾನ್ ಆರೋಪಿಸಿದ್ದಾರೆ.

ಆರೋಪಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಪೋಸ್ಟ್ ಅನ್ನು ಠಾಕೂರ್ ಅವರು ಅಳಿಸಿದ್ದಾರೆ ಎನ್ನಲಾಗಿದೆ.

ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು, ಸಂವಿಧಾನವನ್ನು ಅಗೌರವಿಸುವುದು ಮತ್ತು ಜಾತಿ ಆಧಾರಿತ ದ್ವೇಷವನ್ನು ಉತ್ತೇಜಿಸುವುದು ಸೇರಿದಂತೆ ಹಲವು ಆರೋಪಗಳನ್ನು ದೂರಿನಲ್ಲಿ ಮಾಡಲಾಗಿದೆ. ಮೀಸಲಾತಿಯು ರಾಜಕೀಯ ಪಕ್ಷಗಳು ನೀಡುವ ಕೊಡುಗೆಯಲ್ಲ; ಶತಮಾನಗಳಿಂದ ಮುಂದುವರಿದ ಸಾಮಾಜಿಕ ಅಸಮಾನತೆಯನ್ನು ಎದುರಿಸಲು ಸಂವಿಧಾನ ಒದಗಿಸಿರುವ ರಕ್ಷಣಾತ್ಮಕ ವ್ಯವಸ್ಥೆ ಎಂದು ಪಾಸ್ವಾನ್ ತಮ್ಮ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.

ಸೆಪ್ಟೆಂಬರ್‌ನಿಂದಲೇ ವಿವಾದದ ಆರಂಭ

ಠಾಕೂರ್ ಅವರಿಗೆ ಸಂಬಂಧಿಸಿದವು ಎನ್ನಲಾದ ಫೇಸ್‌ಬುಕ್ ಮತ್ತು ಲಿಂಕ್ಡ್‌ಇನ್ ಪೋಸ್ಟ್‌ಗಳು ಸೆಪ್ಟೆಂಬರ್ ಅಂತ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದವು. ಲಿಂಕ್ಡ್‌ಇನ್‌ನಲ್ಲಿ ಪ್ರಕಟವಾಗಿದ್ದ ಒಂದು ಪೋಸ್ಟ್‌ನಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿತ್ತು. ಅಲ್ಲದೆ, ಮೀಸಲಾತಿಯನ್ನು ರಾಜಕೀಯ ಪಕ್ಷಗಳ ಮತಬ್ಯಾಂಕ್ ಸಾಧನವೆಂದು ಬಣ್ಣಿಸಲಾಗಿತ್ತು.

ಈ ಹೇಳಿಕೆಗಳ ಕುರಿತು ಬೋಧಕ ಸಿಬ್ಬಂದಿ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಐಐಟಿ ಪಾಟ್ನಾ ಆಡಳಿತಕ್ಕೆ ದೂರು ಸಲ್ಲಿಸಿರುವುದಾಗಿ ಅಕ್ಟೋಬರ್ 27ರಂದು ದಿ ಟೆಲಿಗ್ರಾಫ್ ವರದಿ ಮಾಡಿತ್ತು. ಆದರೆ, ಈ ಪೋಸ್ಟ್‌ಗಳನ್ನು ತಾವು ಪ್ರಕಟಿಸಿಲ್ಲ ಎಂದು ಠಾಕೂರ್ ನಿರಾಕರಿಸಿದ್ದರು. ಅವು ನಕಲಿ, ತಿರುಚಿದ ಮತ್ತು ಕಟ್ಟುಕಥೆಯ ಪೋಸ್ಟ್‌ಗಳೆಂದು ಅವರು ಪ್ರತಿಕ್ರಿಯಿಸಿದ್ದರು.

ಆಕ್ಷೇಪ ವ್ಯಕ್ತಪಡಿಸಿದವರಲ್ಲಿ ಬಹುಜನ ಹಕ್ಕುಗಳ ಹೋರಾಟಗಾರ ಹಾಗೂ ಐಐಎಂ ಅಲ್ಯುಮ್ನಿ ಗ್ಲೋಬಲ್ ನೆಟ್‌ವರ್ಕ್‌ನ ಸಂಸ್ಥಾಪಕ ಸದಸ್ಯ ಅನಿಲ್ ವಾಗ್ಡೆ ಕೂಡ ಸೇರಿದ್ದರು. ಅವರು ಐಐಟಿ ಪಾಟ್ನಾ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ವಿ. ನರೇಂದ್ರನ್ ಮತ್ತು ನಿರ್ದೇಶಕ ಅಮಿತ್ ಪಾತ್ರ ಅವರಿಗೆ ಪತ್ರ ಬರೆದು, ಈ ಕುರಿತು ತನಿಖೆ ನಡೆಸಬೇಕು ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವುದು ಸೇರಿದಂತೆ ಠಾಕೂರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು ಎಂದು ವರದಿ ತಿಳಿಸಿತ್ತು.

ಐಐಟಿ ಪಾಟ್ನಾದ ಮತ್ತೊಬ್ಬ ಬೋಧಕ ಸಿಬ್ಬಂದಿಯೂ ಸಂಸ್ಥೆಯ ನಿರ್ದೇಶಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ, ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದರು ಎಂದು ದಿ ಮೂಕನಾಯಕ ವರದಿ ಮಾಡಿತ್ತು.

ಅಕ್ಟೋಬರ್ 28ರಂದು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಗ್ಲೋಬಲ್ ಐಐಟಿ ಅಲ್ಯುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಕುಮಾರ್ ಸಿಂಗ್ ಅವರು ನಿರ್ದೇಶಕ ಅಮಿತ್ ಪಾತ್ರ ಅವರಿಗೆ ಪತ್ರ ಬರೆದಿದ್ದರು. ಪ್ರಕರಣದ ತನಿಖೆಯ ಪ್ರಗತಿಯ ಕುರಿತು ಮಾಹಿತಿ ನೀಡಬೇಕು ಮತ್ತು ಸ್ವತಂತ್ರ ತನಿಖೆ ನಡೆಯುವುದನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ಇದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದ ಅಮಿತ್ ಪಾತ್ರ, ಪ್ರಕರಣವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದರು.

ಅಕ್ಟೋಬರ್ 30ರಂದು ಮಾಜಿ ಕಾಂಗ್ರೆಸ್ ನಾಯಕ ಆದಿತ್ಯ ಪಾಸ್ವಾನ್ ಅವರು ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಅದೇ ದಿನ ರಿಜಿಸ್ಟ್ರಾರ್ ಆಗಿರುವ ಠಾಕೂರ್ ಅವರು ಸಂಸ್ಥೆಯ ಎಸ್‌ಸಿ/ಎಸ್‌ಟಿ/ಒಬಿಸಿ ಘಟಕಕ್ಕೆ ಮೂವರು ಬೋಧಕ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಪೈಕಿ ಎಸ್‌ಸಿ ಮತ್ತು ಒಬಿಸಿ ಸಮುದಾಯಗಳ ಪ್ರತಿನಿಧಿಗಳೂ ಸೇರಿದ್ದರು. ರಿಜಿಸ್ಟ್ರಾರ್ ವಿರುದ್ಧವೇ ದೂರುಗಳು ಬಾಕಿ ಇರುವಾಗ ಈ ಆದೇಶ ಹೊರಡಿಸಿರುವುದು, ಸಂಸ್ಥೆಯಲ್ಲಿನ ಈ ಘಟಕದ ಕಾರ್ಯನಿರ್ವಹಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಪೊಲೀಸರಿಂದ ತನಿಖೆ ಆರಂಭ

ವರದಿಗಳ ಪ್ರಕಾರ, ನವೆಂಬರ್ 5ರಂದು ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ಸಂಖ್ಯೆ 62/26 ದಾಖಲಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಫ್‌ಐಆರ್ ದಾಖಲಾಗಿರುವುದರಿಂದ ಆರೋಪಿತ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ನಿಜವಾಗಿಯೂ ಠಾಕೂರ್ ಅವರೇ ಪ್ರಕಟಿಸಿದವು ಎಂಬುದು ಅಥವಾ ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದರ್ಥವಲ್ಲ. ಈ ಹಿಂದೆ ಪೋಸ್ಟ್‌ಗಳನ್ನು ಪ್ರಕಟಿಸಿರುವುದನ್ನು ಠಾಕೂರ್ ನಿರಾಕರಿಸಿರುವುದೂ ಪ್ರಕರಣದ ಪ್ರಮುಖ ಅಂಶವಾಗಿದೆ. ತನಿಖೆಯ ಬಳಿಕವಷ್ಟೇ ಆರೋಪಗಳ ಸತ್ಯಾಸತ್ಯತೆ ತಿಳಿಯಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಕೇಸ್: ಅಜಿತ್ ದೋವಲ್, ಸಾಮಂತ್ ಗೋಯೆಲ್‌ಗೆ ಸಮನ್ಸ್ ನೀಡಲು ಅಮೆರಿಕ ಕೋರ್ಟ್ ಅನುಮತಿ

ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹೂಡಿರುವ ಖಾಸಗಿ ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ನ್ಯಾಯಾಲಯವು ಪ್ರಮುಖ ಆದೇಶ ನೀಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು...

ಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣ | ತೇಜಸ್ವಿ ಸೂರ್ಯ ಸವಾಲಿಗೆ ಪ್ರಿಯಾಂಕ್ ಖರ್ಗೆ ಪ್ರತಿಸವಾಲು : ‘RSS ನೋಂದಾಯಿಸಿ ಫೀಸ್ ನಾನೇ ಕೊಡ್ತೇನೆ’ ಎಂದ ಗೃಹ ಸಚಿವರು

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಅಪರಾಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದರು. ಕೇರಳದ ಕೊಚ್ಚಿಯ...

ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಅವರ ಪ್ರಶ್ನಾತೀತ ಪ್ರಾಮಾಣಿಕತೆಯೇ ಕಾರಣ: ಸೋನಿಯಾ ಗಾಂಧಿ

2004ರಲ್ಲಿ ದೇಶದ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲು ಅವರ ‘ಪ್ರಶ್ನಾತೀತ ಪ್ರಾಮಾಣಿಕತೆ’ ಮತ್ತು ಆಡಳಿತದ ಕುರಿತಾದ ಆಳವಾದ ತಿಳುವಳಿಕೆಯೇ ಪ್ರಮುಖ ಕಾರಣವಾಗಿತ್ತು ಎಂದು ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ...

ಕರ್ನಾಟಕದ ಎಥನಾಲ್ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇರಳ: 4 ಜಿಲ್ಲೆಗಳ 9 ಬಂಕ್‌ಗಳಿಂದ ಸ್ಯಾಂಪಲ್ ಸಂಗ್ರಹ, ಲ್ಯಾಬ್‌ಗೆ ರವಾನೆ!

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಶೇ. 20ರ ಮಿತಿಗಿಂತಲೂ ಅಧಿಕ (ಶೇ. 31.2 ರಷ್ಟು) ಎಥನಾಲ್ ಬೆರೆಸಲಾಗುತ್ತಿದೆ ಎನ್ನುವ ಸಚಿವ ರಿಜ್ವಾನ್ ಆರ್ಷದ್ ಅವರ ಆರೋಪಗಳ ಬೆನ್ನಲ್ಲೇ, ನೆರೆಯ ಕೇರಳ ಸರ್ಕಾರವೂ ಪೆಟ್ರೋಲ್...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ವಿವಾದ: ಸಿಸಿಬಿ ವಿಚಾರಣೆಗೆ ಹಾಜರಾದ ಉಚ್ಚಾಟಿತ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾದ ಸ್ಟಿಂಗ್ ವಿಡಿಯೋ ವಿವಾದದ ತನಿಖೆ ಚುರುಕುಗೊಂಡಿದ್ದು, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ನಾಯಕಿ ಕೃಪಾ ಆಳ್ವ ಅವರನ್ನು ಸೋಮವಾರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಅಪರಾಧ...

ಮೂರನೇ ಪತ್ನಿಗೂ ವಿಚ್ಛೇದನ: ರಷ್ಯಾದ ಅನ್ನಾ ಲೆಜ್ನೆವಾ ಜೊತೆಗಿನ 12 ವರ್ಷಗಳ ದಾಂಪತ್ಯ ಅಂತ್ಯಗೊಳಿಸಿದ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಚಿತ್ರರಂಗದ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯವೂ ಮುರಿದುಬಿದ್ದಿದೆ. ರಷ್ಯಾದ ಮಾಡೆಲ್ ಮತ್ತು ನಟಿ ಅನ್ನಾ ಲೆಜ್ನೆವಾ ಅವರೊಂದಿಗಿನ 12...

ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್‌ಗೆ 2026ರ ಬೂಕರ್ ಪ್ರಶಸ್ತಿ : ‘ದಿ ಎಂಡ್ ಆಫ್ ಎವೆರಿಥಿಂಗ್’ ವೈಜ್ಞಾನಿಕ ಕಾದಂಬರಿಗೆ ಜಾಗತಿಕ ಮನ್ನಣೆ

ಬ್ರಿಟಿಷ್ ಮೂಲದ ಪ್ರಸಿದ್ಧ ಲೇಖಕ ಎಂ. ಜಾನ್ ಹ್ಯಾರಿಸನ್ ಅವರು ತಮ್ಮ ವೈಜ್ಞಾನಿಕ ಹಾಗೂ ಡಿಸ್ಟೋಪಿಯನ್ ವಿಡಂಬನಾತ್ಮಕ ಕಾದಂಬರಿ 'ದಿ ಎಂಡ್ ಆಫ್ ಎವೆರಿಥಿಂಗ್' ಕೃತಿಗೆ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಲಂಡನ್‌ನ...

ಅತ್ಯಾಚಾರದ ಬೆದರಿಕೆ, ಆಹಾರ ನಿರಾಕರಣೆ: ಇಸ್ರೇಲ್ ಬಂಧನದಲ್ಲಿರುವ 380 ಮಕ್ಕಳು ಸೇರಿದಂತೆ 9,200 ಪ್ಯಾಲೆಸ್ಟೀನಿಯನ್ನರ ಜೀವಕ್ಕೆ ಅಪಾಯ: ವರದಿ

ಗಾಜಾ ಮೇಲಿನ ಇಸ್ರೇಲ್‌ನ ನರಮೇಧದ ದಾಳಿ ಮುಂದುವರಿದಿರುವ ಬೆನ್ನಲ್ಲೇ, ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯಗಳು ಜೈಲುಗಳ ಒಳಗೂ ಭೀಕರ ಸ್ವರೂಪ ಪಡೆದುಕೊಂಡಿವೆ. ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದ ಬೆದರಿಕೆ, ಆಹಾರದ ಕೊರತೆ, ವೈದ್ಯಕೀಯ ಚಿಕಿತ್ಸೆಯ ನಿರಾಕರಣೆ,...

ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಸಂಸತ್ತಿನ ಮುಂಗಾರು ಅಧಿವೇಶನವು ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ 'ಸೈನ್ ಡೈ' (ನಿರ್ದಿಷ್ಟ ದಿನಾಂಕ ನಿಗದಿಪಡಿಸದೆ ಮುಂದೂಡುವುದು) ಮುಂದೂಡಿಕೆಯನ್ನು ದಾಖಲಿಸಿದೆ. ಬರೋಬ್ಬರಿ 89 ದಿನಗಳು ಕಳೆದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸುವ 'ಪ್ರೊರೋಗ್' (ಅಧಿವೇಶನದ ಮುಕ್ತಾಯ...

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ...