HomeಅಂಕಣಗಳುSIRತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಹೆಚ್ಚು ಮತದಾರರು ನಾಪತ್ತೆ : ನ.26ರಂದು ಬೃಹತ್ ಪ್ರತಿಭಟನೆ

ತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಹೆಚ್ಚು ಮತದಾರರು ನಾಪತ್ತೆ : ನ.26ರಂದು ಬೃಹತ್ ಪ್ರತಿಭಟನೆ

- Advertisement -
- Advertisement -

ತಮಿಳುನಾಡಿನ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಒಟ್ಟು 74.07 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಯಂಗ್ ಸಿಟಿಝನ್ಸ್ ಕಲೆಕ್ಟಿವ್ (ಐವೈಸಿಸಿ) ಗಂಭೀರ ಆರೋಪ ಮಾಡಿದ್ದು, ಈ ಹೆಸರುಗಳ ತೆಗೆದುಹಾಕುವಿಕೆಯ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಮತದಾರರ ಹೆಸರುಗಳನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕಿರುವುದು ಈ ಇಡೀ ಪ್ರಕ್ರಿಯೆಯ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಈ ಕಲೆಕ್ಟಿವ್ ಹೇಳಿದೆ. ಅಲ್ಲದೆ, ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ದಿನದ ಅಂಗವಾಗಿ, ನವೆಂಬರ್ 26ರಂದು ಚೆನ್ನೈನ ಅಣ್ಣಾ ಸಲೈನಲ್ಲಿ ಬೃಹತ್ ರ್‍ಯಾಲಿಯನ್ನು ನಡೆಸುವುದಾಗಿ ಅದು ಘೋಷಿಸಿದೆ.

ಐವೈಸಿಸಿ ಯಾವುದೇ ರಾಜಕೀಯ ಪಕ್ಷಗಳ ಹಂಗಿಲ್ಲದ, ವಿವಿಧ ಜನಪರ ಸಂಘಟನೆಗಳು, ಸಾಮಾಜಿಕ ಚಳವಳಿಗಳು ಮತ್ತು ವೈಯಕ್ತಿಕ ಕಾರ್ಯಕರ್ತರನ್ನು ಒಳಗೊಂಡ ರಾಷ್ಟ್ರೀಯ ವೇದಿಕೆಯಾದ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ (People Against SIR) ನ ಒಂದು ಭಾಗವಾಗಿದೆ.

ಕಲೆಕ್ಟಿವ್ ಮಂಗಳವಾರ (ನ.10) ಚೆನ್ನೈ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಕಾರ್ನಟಿಕ್ ಶೈಲಿಯ ಗಾಯಕ, ಲೇಖಕ ಮತ್ತು ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ. ಕೃಷ್ಣ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೋ ಮತ್ತು ಸಾಂಸ್ಕೃತಿಕ-ರಾಜಕೀಯ ಕಾರ್ಯಕರ್ತೆ ಹಾಗೂ ಐವೈಸಿಸಿ ಸಹ-ಸಂಚಾಲಕಿ ರಾಧಿಕಾ ಗಣೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯು ಯಾವುದೇ ಸಾಂವಿಧಾನಿಕ ಆಧಾರವಿಲ್ಲದ ಬಿಜೆಪಿ-ಆರ್‌ಎಸ್‌ಎಸ್‌ನ ಒಂದು ಯೋಜನೆಯಾಗಿದೆ ಎಂದು ರಾಧಿಕಾ ಗಣೇಶ್ ಆರೋಪಿಸಿದ್ದಾರೆ. ಇದರಿಂದಾಗಿ ರಾಜ್ಯದ ಒಟ್ಟು ಮತದಾರರ ಸುಮಾರು ಶೇ 11.5 ರಷ್ಟಿರುವ 74.07 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಈ ತೆಗೆದುಹಾಕುವಿಕೆ ಪ್ರಜಾಪ್ರಭುತ್ವದ ಬಿಕ್ಕಟ್ಟಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಭಾರತೀಯ ಚುನಾವಣಾ ಆಯೋಗದಿಂದ ಉತ್ತರ, ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆ ಹಾಗೂ ತಮಿಳುನಾಡಿನ ರಾಜಕೀಯ ಪಕ್ಷಗಳಿಂದ ಸ್ಪಷ್ಟ ಪ್ರತಿಕ್ರಿಯೆಯನ್ನು ಅವರು ಆಗ್ರಹಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಹೆಸರು ಕೈಬಿಡಲಾಗಿರುವ ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ಪಟ್ಟಿಯಲ್ಲಿ ಮರುಸ್ಥಾಪಿಸಬೇಕು ಎಂದು ಪರಕಾಲ ಪ್ರಭಾಕರ್ ಕರೆ ನೀಡಿದ್ದಾರೆ. ಎಸ್‌ಐಆರ್ ಮೂಲಕ ಸಿದ್ಧಪಡಿಸಲಾದ ಮತದಾರರ ಪಟ್ಟಿಗಳ ಆಧಾರದ ಮೇಲೆ ನಡೆದ ಚುನಾವಣೆಗಳನ್ನು ರದ್ದುಗೊಳಿಸಬೇಕು ಮತ್ತು ಮುಂಬರುವ ಚುನಾವಣೆಗಳನ್ನು ಎಸ್‌ಐಆರ್ ಪಟ್ಟಿಗಳ ಬದಲಿಗೆ 2024ರ ಮತದಾರರ ಪಟ್ಟಿಗಳನ್ನು ಬಳಸಿ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಚುನಾವಣಾ ಆಯುಕ್ತರಿಗೆ ವಿನಾಯಿತಿ ನೀಡುವ 2023ರ ಕಾನೂನನ್ನು ರದ್ದುಗೊಳಿಸಬೇಕು ಮತ್ತು ಅವರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ತರಬೇಕು. ನೇಮಕಾತಿ ಸಮಿತಿಯಲ್ಲಿ ಕಾರ್ಯಾಂಗಕ್ಕೆ ಇರುವ 2:1 ಬಹುಮತದ ಪ್ರಭಾವವನ್ನು ಕೊನೆಗೊಳಿಸಬೇಕು ಎಂದು ಪ್ರಭಾಕರ್ ಆಗ್ರಹಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯು ಗೊಂದಲವನ್ನು ಸೃಷ್ಟಿಸಲು ಮತ್ತು ಮತದಾರರನ್ನು ಹೊರಗಿಡಲು ರೂಪಿಸಲಾದ ಒಂದು ವ್ಯವಸ್ಥಿತ ಸಂಚು ಎಂದು ಟಿ.ಎಂ. ಕೃಷ್ಣ ಆರೋಪಿಸಿದ್ದಾರೆ. ಅಲ್ಲದೆ, ಈ ಪ್ರಕ್ರಿಯೆಯ ಕುರಿತು ಚುನಾವಣಾ ಆಯೋಗದ ಧೋರಣೆಯನ್ನು ಮತ್ತು ಈ ಇಡೀ ಕಸರತ್ತಿನ ವಿರುದ್ಧ ರಾಜಕೀಯ ಪಕ್ಷಗಳಿಂದ ಬಲವಾದ ಪ್ರತಿಕ್ರಿಯೆ ವ್ಯಕ್ತವಾಗದಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಮತದಾರರ ಗಣತಿ ನಮೂನೆಯನ್ನು ತೀವ್ರವಾಗಿ ಟೀಕಿಸಿದ ಅವರು, ಮತದಾರರು 2002ರ ಮತದಾರರ ಪಟ್ಟಿಯ ವಿವರಗಳನ್ನು ಒದಗಿಸಬೇಕು ಎಂಬ ನಿಯಮವು ಸಾಮಾನ್ಯ ನಾಗರಿಕರ ಮೇಲೆ ಅನಗತ್ಯ ಹೊರೆಯನ್ನು ಹೇರುತ್ತದೆ ಎಂದು ಹೇಳಿದ್ದಾರೆ. ಎರಡು ದಶಕಗಳಿಗಿಂತಲೂ ಹಳೆಯದಾದ ತಮ್ಮ ಮತಗಟ್ಟೆ ಅಥವಾ ಇತರ ವಿವರಗಳು ಹೆಚ್ಚಿನ ಜನರಿಗೆ ನೆನಪಿರಲು ಸಾಧ್ಯವಿಲ್ಲ ಎಂದ ಅವರು, ಇವರಲ್ಲಿ ಬಹುತೇಕ ಮತದಾರರು 2002 ರ ನಂತರ ನಡೆದ ಹಲವಾರು ಚುನಾವಣೆಗಳಲ್ಲಿ ಭಾಗವಹಿಸಿ ಮತ ಚಲಾಯಿಸಿರುವಾಗ, ಈ ಪ್ರಕ್ರಿಯೆಗಾಗಿ 2002ರ ಮತದಾರರ ಪಟ್ಟಿಯನ್ನೇ ಏಕೆ ನೆಚ್ಚಿಕೊಳ್ಳಲಾಗಿದೆ ಎಂದು ಕೇಳಿದ್ದಾರೆ.

ಪ್ರತಿಯೊಬ್ಬ ಅರ್ಹ ನಾಗರಿಕನನ್ನು ಮತದಾರರ ಪಟ್ಟಿಗೆ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಪಟ್ಟಿಯಿಂದ ಕೈಬಿಡಬೇಕಾದ ಮತದಾರರನ್ನು ಹುಡುಕುವುದರ ಮೇಲೆಯೇ ಈ ಇಡೀ ಪ್ರಕ್ರಿಯೆಯು ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿದೆ ಎಂದು ಕೃಷ್ಣ ಹೇಳಿದ್ದಾರೆ.

ಮತದಾರರ ಹೆಸರುಗಳ ತೆಗೆದುಹಾಕುವಿಕೆಯು ತನಗೆ ಸಿಗಬೇಕಾಗಿದ್ದ ರಾಜಕೀಯ ಅಥವಾ ಸಾರ್ವಜನಿಕ ಗಮನವನ್ನು ಪಡೆದುಕೊಂಡಿಲ್ಲ ಎಂದ ಕೃಷ್ಣ, ಇದನ್ನು ರಾಜ್ಯಕ್ಕೆ ಅಂಟಿದ ಕಪ್ಪು ಚುಕ್ಕೆ ಎಂದು ಕರೆದಿದ್ದಾರೆ.ರಾಜಕೀಯ ಪಕ್ಷಗಳು ಈ ಪ್ರಮುಖ ವಿಷಯವನ್ನು ಪ್ರಜಾಪ್ರಭುತ್ವದ ಬಿಕ್ಕಟ್ಟಾಗಿ ಪರಿಗಣಿಸಿ ಧ್ವನಿ ಎತ್ತಲು ಏಕೆ ವಿಫಲವಾಗಿವೆ ಎಂದು ಪ್ರಶ್ನಿಸಿದ್ದಾರೆ.




























ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಯುಮಾಲಿನ್ಯದಿಂದ ಜನರ ಜೀವಕ್ಕೆ ಕುತ್ತು: ‘ಭಾರತೀಯರು ಅನಾಥರಾಗಿ ಗ್ಯಾಸ್ ಚೇಂಬರ್‌ನಲ್ಲಿ ಸಿಲುಕಿದ್ದಾರೆ’; ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಎನ್‌ಜಿಟಿಗೆ ಮನವಿ

ನವದೆಹಲಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಜನರು ಉಸಿರಾಡುವುದೇ ಜೀವಕ್ಕೆ ಅಪಾಯಕಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಕಾರಿ ಗಾಳಿಯ ನಡುವೆ ಬದುಕುತ್ತಿರುವ ಜನರ ಆರೋಗ್ಯ ಮತ್ತು...

2024ರ ಚುನಾವಣೆಗಳು : 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ಹೊಂದಾಣಿಕೆಯಾಗದ ಎಣಿಕೆ ಮತಗಳ ಸಂಖ್ಯೆ- ವರದಿ

2024ರ ಚುನಾವಣೆಗಳ ಸಂದರ್ಭದಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ಎಣಿಕೆಯಾದ ಮತಗಳ ಸಂಖ್ಯೆಯ ನಡುವೆ ವ್ಯತ್ಯಾಸಗಳಿರುವುದನ್ನು ಚುನಾವಣಾ...

“ರೈತರು 3 ತಿಂಗಳು ದುಡಿದು, 9 ತಿಂಗಳು ಮದ್ಯ ಕುಡಿದು-ಜೂಜಾಟದಲ್ಲಿ ಮುಳುಗಿರುತ್ತಾರೆ”: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ವಿವಾದಿತ ಹೇಳಿಕೆ!

ತಮ್ಮ ಅಸಂಸದೀಯ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಪದೇಪದೇ ಸುದ್ದಿಯಾಗುವ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ, ದೇಶದ ಅನ್ನದಾತರ ವಿರುದ್ಧ ನಾಲಿಗೆ ಹರಿಬಿಟ್ಟು ಮತ್ತೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ....

ತಪ್ಪದ ದೋಷಾರೋಪ ಭೀತಿ : ಎರಡು ಯುದ್ಧಗಳ ದಾಳ ಉರುಳಿಸಿದರೂ ಹೆಗ್ಸೆತ್‌ ರಕ್ಷಿಸಲು ಟ್ರಂಪ್‌ ವಿಫಲ

'ಎರಡು ಯುದ್ಧಗಳನ್ನು ಗೆದ್ದಿದ್ದಾರೆ' ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾದವು, ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿರುದ್ಧ ತೀವ್ರಗೊಳ್ಳುತ್ತಿರುವ ದೋಷಾರೋಪ ಪ್ರಕ್ರಿಯೆಯ ಒತ್ತಡವನ್ನು ಕಡಿಮೆ ಮಾಡುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ....

ಶಿವಮೊಗ್ಗ: ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಡಿದ್ದ ಕುಟುಂಬ, ಇಬ್ಬರು ಸ್ಟೇಷನ್ ಮಾಸ್ಟರ್‌ಗಳಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ!

ರೈಲಿನ ಶೌಚಾಲಯಗಳಲ್ಲಿ ನೀರಿನ ಸೌಲಭ್ಯವಿಲ್ಲದೆ ಪ್ರಯಾಣಿಕರು ಅರ್ಧದಲ್ಲೇ ಪ್ರಯಾಣ ಮೊಟಕುಗೊಳಿಸಿದ ಘಟನೆಯನ್ನು 'ಸೇವೆಯಲ್ಲಾದ ನ್ಯೂನತೆ' ಎಂದು ಪರಿಗಣಿಸಿರುವ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗವು ರೈಲ್ವೆ ಇಲಾಖೆಗೆ ದಂಡ ವಿಧಿಸಿದೆ. ಯಶವಂತಪುರ ಮತ್ತು ತುಮಕೂರು...

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ಮರಳಿದರೆ ಗಲ್ಲಿಗೇರಿಸುವುದು ಖಚಿತ: ಪ್ರಾಸಿಕ್ಯೂಟರ್ ಎಚ್ಚರಿಕೆ; ಮೇಲ್ಮನವಿಗೂ ಅವಕಾಶ ಮುಕ್ತಾಯ

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳಿದರೆ ಮರಣದಂಡನೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಸ್ವಯಂ ದೇಶಭ್ರಷ್ಟರಾಗಿ ನೆಲೆಸಿರುವ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ...

ವಯನಾಡ್‌: ಹಿಂದೂ ವೃದ್ದೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಸಹೋದರರು

ಧಾರ್ಮಿಕ ಗಡಿಗಳನ್ನು ಮೀರಿ, ಕೇರಳದ ಬೆಟ್ಟ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಸಹೋದರರು, ತಾವು ಸುಮಾರು ಐದು ದಶಕಗಳ ಕಾಲ ತಾಯಿಯಂತೆ ಪ್ರೀತಿಸಿ ಆರೈಕೆ ಮಾಡಿದ್ದ 85 ವರ್ಷದ ಹಿಂದೂ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಮುಪ್ಪೈನಾದ್...

ಆರು ವರ್ಷಗಳ ಜೈಲು ವಾಸದ ಬಳಿಕ ಇಬ್ಬರು ಮುಸ್ಲಿಂ ಯುವಕರು ಖುಲಾಸೆ: ಯುಎಪಿಎ ಪ್ರಕರಣದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ ಕೋರ್ಟ್

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿ ಆರು ವರ್ಷಗಳಿಂದ ಜೈಲಿನಲ್ಲಿ ನರಳುತ್ತಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಇಬ್ಬರು ಯುವಕರನ್ನು ವಿಶೇಷ ನ್ಯಾಯಾಲಯ 2026ರ ನವೆಂಬರ್ 5ರಂದು ದೋಷಮುಕ್ತಗೊಳಿಸಿದೆ ಎಂದು...

ಉತ್ತರ ಪ್ರದೇಶದ ಜೈಲುಗಳಲ್ಲಿ ಮಿತಿಮೀರಿದ ಜನಸಂದಣಿ: ಡಿಜಿ ಪ್ರಿಸನ್ಸ್‌ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ಅಲಹಾಬಾದ್ ಹೈಕೋರ್ಟ್‌ ಆದೇಶ!

ಉತ್ತರ ಪ್ರದೇಶದಾದ್ಯಂತ ಇರುವ ಜೈಲುಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಮಿತಿಮೀರಿ ಕೈದಿಗಳನ್ನು ಬಂದೀಖಾನೆಯಲ್ಲಿಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯದ ಜೈಲುಗಳ ಅತಿಯಾದ ಜನಸಂದಣಿ ಮತ್ತು ನೈಜ ಸ್ಥಿತಿಗತಿ...

ಕರ್ನಾಟಕ ಸರ್ಕಾರದ ಇ30 ಆರೋಪಕ್ಕೆ ಅಂಕಿ-ಅಂಶಗಳ ಮೂಲಕ ಭಾರತ್ ಪೆಟ್ರೋಲಿಯಂ ತಿರುಗೇಟು; ಬಳಿಕ ಟ್ವೀಟ್ ಅಳಿಸಿದ ಕಂಪನಿ!

ಕರ್ನಾಟಕ ಸರ್ಕಾರದ ಇ20 ಪೆಟ್ರೋಲ್ ಕುರಿತ ಗಂಭೀರ ಆರೋಪಗಳಿಗೆ ತಿರುಗೇಟು ನೀಡಲು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್‌) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘MythVsFact’ (ಮಿಥ್ಯೆ ಮತ್ತು ವಾಸ್ತವ) ಅಭಿಯಾನ ನಡೆಸುತ್ತಿದೆ. ಆದರೆ, ಈ ಅಭಿಯಾನದ...