Homeಕರ್ನಾಟಕಬೆಂಗಳೂರು ಮುಳುಗುತ್ತಿರುವಾಗ ‘ಬೆಣ್ಣೆ ದೋಸೆ ಮಾರಿದ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ!

ಬೆಂಗಳೂರು ಮುಳುಗುತ್ತಿರುವಾಗ ‘ಬೆಣ್ಣೆ ದೋಸೆ ಮಾರಿದ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ!

- Advertisement -
- Advertisement -

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಹೋಟೆಲ್‌ಗೆ ಭೇಟಿ ನೀಡಿ ಅಲ್ಲಿನ ತಿಂಡಿಗಳನ್ನು ಪ್ರಚಾರ ಮಾಡಿರುವ ವಿಡಿಯೊ ವೈರಲ್ ಆಗಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಬೆಂಗಳೂರಿನಲ್ಲಿ 51 ವರ್ಷಗಳ ಇತಿಹಾಸದಲ್ಲೆ ದಾಖಲೆಯ ಮಳೆ ಸುರಿದಿದೆ ಎಂದು ವರದಿಯಾಗಿದೆ. ಮಳೆಯ ಪರಿಣಾಮ ಬೆಂಗಳೂರಿನ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದು ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ. ನೆರೆಯಿಂದಾಗಿ ಒಬ್ಬ ಯುವತಿ ವಿದ್ಯುತ್‌ ತಗುಲಿ ಸಾವಿಗೀಡಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರು ನೆರೆಯು ರಾಜ್ಯ ಸರ್ಕಾರದ ಕೆಟ್ಟ ನಿರ್ವಹಣೆಯ ಫಲ ಎಂದು ದೇಶದಾದ್ಯಂತ ಆಕ್ರೋಶವೂ ಭುಗಿಲೆದ್ದಿದೆ. ಈ ನಡುವೆ ಕ್ಷೇತ್ರವೊಂದನ್ನು ಪ್ರತಿನಿಧಿಸುವ ಸಂಸದರೊಬ್ಬರು ಜನರು ಸಂಕಷ್ಟದಲ್ಲಿ ಇರುವಾಗ ಅದರ ಬಗ್ಗೆ ಮಾತನಾಡದೆ ಯಾವುದೊ ಹೋಟೆಲ್ ಒಂದಕ್ಕೆ ತೆರಳಿ ಅದನ್ನು ಪ್ರಚಾರ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ಕೂಡಾ ಎದ್ದಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದು: ಸಂಸದ ತೇಜಸ್ವಿ ಸೂರ್ಯ ಆಡಿಯೋ ವೈರಲ್

ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಅವರು ಇನ್ಸ್‌ಟಾಗ್ರಾಂನಲ್ಲಿ ದೋಸೆಯ ಚಿತ್ರವೊಂದನ್ನು ನೋಡಿ ‘ಟೆಂಪ್ಟ್‌’ ಆಗಿ ಪದ್ಮನಾಗ ನಗರದ ಬಳಿಯ ಹೊಟೆಲ್‌ಗೆ ಬಂದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

“ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ ದೋಸೆ. ನೀವು ಬನ್ನಿ. ಅದನ್ನು ನೀವು ತಿಂದಾಗಲೆ ಅದರ ಆಸ್ವಾದನೆ ಗೊತ್ತಾಗೋದು. ಬಹಳ ಚೆನ್ನಾಗಿದೆ, ದಯವಿಟ್ಟು ಬನ್ನಿ. ಅದಲ್ಲದೆ ಇವರ ಉಪ್ಪಿಟ್ಟ ಬಹಳ ಚೆನ್ನಾಗಿದೆ. ಮನೆಯಲ್ಲಿ ಮಾಡಿದ್ರೆ ಮುಖ ಸಿಂಡರಿಸಿಕೊಂಡು ತಿಂತಾ ಇರಲಿಲ್ಲ. ಆದರೆ ಇಲ್ಲಿ ಉಪ್ಪಿಟ್ಟು ಬಹಳ ಚೆನ್ನಾಗಿದೆ. ಅದನ್ನೂ ಕೂಡಾ ಟ್ರೈ ಮಾಡಿ. ಧನ್ಯವಾದ” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಲಾವಣ್ಯ ಬಳ್ಳಾಲ್ ಅವರು, “ಈ ವಿಡಿಯೊ ಸೆಪ್ಟೆಂಬರ್‌ 5 ರಂದು ಮಾಡಿದ್ದು. ಬೆಂಗಳೂರು ಮುಳುಗುತ್ತಿರುವಾಗ ತೇಜಸ್ವಿ ಸೂರ್ಯ ಒಳ್ಳೆಯ ಬೆಳಗ್ಗಿನ ತಿಂಡಿಯನ್ನು ತಿಂದು ಎಂಜಾಯ್ ಮಾಡುತ್ತಿದ್ದರು. ನೆರೆ ಬಂದಿರುವ ಪ್ರದೇಶದಕ್ಕೆ ಅವರು ಒಂದು ಬಾರಿಯಾದರೂ ಭೇಟಿ ನೀಡಿದ್ದಾರೆಯೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ತೇಜಸ್ವಿ ಸೂರ್ಯ ಭಾಷಣಕ್ಕೆ ತೀವ್ರ ವಿರೋಧ; ಪ್ರತಿಭಟನೆ ಬಳಿಕ ಕಾರ್ಯಕ್ರಮ ರದ್ದು

ಸಾಮಾಜಿಕ ಕಾರ್ಯಕರ್ತ ಚೇತನ್ ಕೃಷ್ಣ ಅವರು, “ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ನಾವು ಹೆಚ್ಚು ಜಾಗರೂಕರಾಗಿರಬೇಕು. ಬೆಂಗಳೂರಿನ ಅರ್ಧ ಭಾಗ ಜಲಾವೃತವಾದಾಗ ಈ ಚೈಲ್ಡ್‌‌ ಚಪಾತಿ ಏನೂ ಆಗಿಲ್ಲ ಎಂಬಂತೆ ದೋಸೆ ಸವಿಯುತ್ತಿದ್ದಾರೆ. ಎಂತಹ ಅಸೂಕ್ಷ್ಮಯುಳ್ಳ ಕಪಟಿ” ಎಂದು ಕಿಡಿ ಕಾರಿದ್ದಾರೆ.

ಗಣೇಶ್ ನಚಿಕೇತು ಅವರು, “ಇಡೀ ಬೆಂಗಳೂರು ನಗರ ಜಲಾವೃತವಾಗಿದೆ. ಜನರು ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಬೇಜವಾಬ್ದಾರಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಯಾವುದೋ ಹೋಟೆಲ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ವೀಡಿಯೊ ಸೆಪ್ಟೆಂಬರ್ 5 ರದ್ದಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ

ಭೂಷಣ್‌ ನಾಗ್‌ ಅವರು, “ಸಭೆಯೊಂದರಲ್ಲಿ ಬಿಜೆಪಿಯ ಪದ್ಮನಾಭನಗರ ಶಾಸಕ ಅಶೋಕ ಮಲಗಿದ್ದರೆ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೋಟೆಲ್‌ನಲ್ಲಿ ಮಸಾಲೆ ದೋಸೆ ಮಾರುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರವಾಹ ಉಂಟಾಗಿದೆ ಆದರೆ ಈ ವ್ಯಕ್ತಿಗಳು ವಿಶ್ರಾಂತಿಯಲ್ಲಿದ್ದು, ಚಿಲ್ ಆಗಿದ್ದಾರೆ” ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಕೂಡಾ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ನಗರದಲ್ಲಿ ಗುಡುಗು ಸಹಿತ ಭಾರೀ ಮಳೆ ಅಥವಾ ವ್ಯಾಪಕ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಹೆದ್ದಾರಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ: ಸೂರ್ಯನ ಕೆಳಗೂ ಕತ್ತಲೆ ಎಂದ ಅಖಿಲೇಶ್ ಯಾದವ್

ವೈಟ್‌ಫೀಲ್ಡ್, ಬೆಳ್ಳಂದೂರು, ಮಾರತ್ತಹಳ್ಳಿ ಜಲಾವೃತಗೊಂಡಿದ್ದು ಸಂಚಾರ ಸಮಸ್ಯೆ ಎದುರಿಸುತ್ತಿದೆ. ಅಲ್ಲದೆ ಇಂದಿರಾನಗರ, ಕೆಂಗೇರಿ, ಆರ್‌.ಆರ್‌. ನಗರ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಜ ಹೇಳ್ಲಾ ……ಎಂಎಲ್ಎ ….ಎಂಪಿ ಆಗೋವರೆಲ್ಲ ಸಂಸಾರಿಗಳಾಗಿರಬೇಕು…..ಯುವಕರಿಗೆ ಕೊಟ್ಟು ದೇಶ ಉದ್ದಾರ ಆಗುತ್ತೆ ಅನ್ನೋದು ಕೇವಲ ಕಲ್ಪನೆ……. ಅವರು ದೊಡ್ಡ ಭ್ರಮೆಯಲ್ಲಿಟ್ಟುಕೊಂಡು ಭಾಷಣ ಬಿಗಿದ್ದಾರೆ ಅಷ್ಟೇ…..ಸಾಮಾಜಿಕ ಜ್ಞಾನ ಇರುವುದಿಲ್ಲ… ಇನ್ನು ಮುಂದೆ ಚುನಾವಣೆಯಲ್ಲಿ ಮತ ಹಾಕುವರೇ ಯೋಚನೆ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...