Homeಮುಖಪುಟಹೆದ್ದಾರಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ: ಸೂರ್ಯನ ಕೆಳಗೂ ಕತ್ತಲೆ ಎಂದ ಅಖಿಲೇಶ್...

ಹೆದ್ದಾರಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ: ಸೂರ್ಯನ ಕೆಳಗೂ ಕತ್ತಲೆ ಎಂದ ಅಖಿಲೇಶ್ ಯಾದವ್

- Advertisement -
- Advertisement -

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಉತ್ತರ ಪ್ರದೇಶದ ಆಗ್ರಾ-ಲಖನೌ ಹೆದ್ದಾರಿಯನ್ನು ಯೋಗಿ ಆದಿತ್ಯನಾಥ್ ನಿರ್ಮಿಸಿದ್ದಾರೆ ಎನ್ನುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ’ಸೂರ್ಯನ ಕೆಳಗೂ ಕತ್ತಲೆಯಿದೆ’ ಎಂದು ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಂಸದ ತೇಜಸ್ವಿ ಸೂರ್ಯ, ಆಗ್ರಾ-ಲಖನೌ ಹೆದ್ದಾರಿಯಲ್ಲಿ ಪ್ರಯಾಣಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಅದನ್ನು “ಲಕ್ನೋ ಟು ಕನ್ನೌಜ್ ಇನ್ ಯೋಗಿ ಜಿ ಎಕ್ಸ್‌ಪ್ರೆಸ್‌ವೇ” ಎಂದು ಬರೆದುಕೊಂಡಿದ್ದರು. ಜೊತೆಗೆ #UPYogiHaiYogi ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ, “ದೀಪದ ಕೆಳಗೆ ಕತ್ತಲೆ ಎಂಬುದಾಗಿ ಒಬ್ಬರು ಕೇಳಿದ್ದರು. ಬಿಜೆಪಿ ನಾಯಕರ ಅಜ್ಞಾನವನ್ನು ನೋಡಿದರೆ ‘ಸೂರ್ಯ’ ಎಂದರೆ ಸೂರ್ಯನ ಕೆಳಗೂ ಕತ್ತಲೆ ಎಂದು ಹೇಳಬಹುದು. ಅವರು ಹೊಗಳುತ್ತಿರುವ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇ ನಿರ್ಮಿಸಿದ್ದು ನಾವು, ಅನುಪಯುಕ್ತ ಯೋಗಿಜಿಯಲ್ಲ. ನೋಡಿ ಒಮ್ಮೆ ಇವರು ಅದನ್ನು ಮತ್ತೆ ಉದ್ಘಾಟನೆ ಮಾಡಿಯಾರು” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!

302 ಕಿಮೀ ಉದ್ದದ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಅನ್ನು 2016 ರಲ್ಲಿ ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉದ್ಘಾಟಿಸಿದರು. ಇದನ್ನು ಫೆಬ್ರವರಿ 2017 ರಲ್ಲಿ ಸಾರ್ವಜನಿಕ ಬಳಕೆಗೆ ಬಿಡಲಾಯಿತು.

2017 ರಲ್ಲಿ ಬಿಜೆಪಿಯಿಂದ ಅಧಿಕಾರ ಕಳೆದುಕೊಂಡ ಅಖಿಲೇಶ್ ಯಾದವ್, ಆಡಳಿತ ಪಕ್ಷವು ತನ್ನ ಯೋಜನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ತನ್ನ ಸರ್ಕಾರ ಮಾಡಿದ ಕೆಲಸಗಳ ಕ್ರೆಡಿಟ್ ಅನ್ನು ಬಿಜೆಪಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಆಗಾಗ್ಗೆ ಆರೋಪಿಸಿದ್ದಾರೆ.

ಇಷ್ಟಾದರೂ ಟ್ವೀಟ್ ಡಿಲೀಟ್ ಮಾಡದ ಸಂಸದ ತೇಜಸ್ವಿ ಸೂರ್ಯ, ತಮ್ಮ ಸುಳ್ಳುಗಳಿಗೆ ಸಮರ್ಥನೆ ನೀಡುತ್ತಿದ್ದಾರೆ.

ತೇಜಸ್ವಿ ಸೂರ್ಯ ಟ್ವೀಟ್‌ಗೆ ರಾಜ್ಯದ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದು, ಮೊದಲು ಬೆಂಗಳೂರಿನ ರಸ್ತೆಗಳ ಬಗ್ಗೆ ಮಾತನಾಡುವಂತೆ ತಿಳಿಸಿದ್ದಾರೆ.

ಸಿಲ್ಕ್ ಬೋರ್ಡ್ ರಸ್ತೆಯ ಸಮಸ್ಯೆಗಳ ಬ್ಗೆಗ ಯಾವಾಗ ಮಾತನಾಡುತ್ತಿರಿ…ಅದನ್ನು ಯಾವಾಗ ಸರಿ ಪಡಿಸುತ್ತಿರಿ. ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ಜನ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಮಾತಾಡಿ ಇಲ್ಲ ಅಲ್ಲಿಯೇ ಹೋಗಿಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: ಯುಪಿ ಚುನಾವಣೆ: 2 ಹಂತಗಳ ಮತದಾನದಲ್ಲಿ ಎಸ್‌ಪಿ ಶತಕ ಬಾರಿಸಿದೆ ಎಂದ ಅಖಿಲೇಶ್ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read