Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!

ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬಗ್ಗೆ!

- Advertisement -
- Advertisement -

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರಿಗೆ, ರಾಜ್ಯದ ವಯೋವೃದ್ದನೋರ್ವ ‘ಛೀಮಾರಿ’ ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 14 ಸೆಕೆಂಡಿನ ಈ ವಿಡಿಯೊದಲ್ಲಿ ಅಖಿಲೇಶ್‌ ಯಾದವ್‌ ಅವರು ಕಾಣಿಸಿಕೊಂಡಿದ್ದು, ವಯಸ್ಸಾದ ವ್ಯಕ್ತಿಯೊಬ್ಬರು ಅವರ ಜೊತೆಗೆ ಮಾತನಾಡುವುದು ಕೇಳಿಸುತ್ತದೆ.

ಹಿಂದಿ ಹಾಗೂ ಕನ್ನಡ ಸಂದೇಶದೊಂದಿಗೆ ಈ ವಿಡಿಯೊ ವೈರಲ್‌ ಆಗಿದೆ. “ನೀನು ಹೋಗು, ಮಸೀದಿ ಕಟ್ಟಿಸು, ಇಡೀ ಪ್ರದೇಶದಿಂದ ನಿನಗೆ ಒಂದು ಮತವನ್ನೂ ನಾವು ಕೊಡುವುದಿಲ್ಲ” ಎಂದು ವೃದ್ದ ವ್ಯಕ್ತಿ ಅಖಿಲೇಶ್ ಯಾದವ್‌ ಅವರಿಗೆ ಹೇಳಿದ್ದಾರೆ ಎಂದು ಕನ್ನಡದಲ್ಲಿ ವೈರಲ್ ಆಗಿದೆ. ಈ ವೈರಲ್ ಪೋಸ್ಟ್‌ “ಅಖಿಲೇಶ್‌ ಯಾದವ್‌ಗೆ ಮಂಗಳಾರತಿ” ಮಾಡಲಾಗಿದೆ ಎಂದು ಪ್ರತಿಪಾದಿಸುತ್ತದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ಈ ವಿಡಿಯೊವನ್ನು ಬಿಜೆಪಿ ಬೆಂಬಲಿಗ ಸಂತೋಷ್‌ ಕೆಂಚಾಂಬ ಎಂಬ ವ್ಯಕ್ತಿ ಸೇರಿದಂತೆ, ಇನ್ನೂ ಹಲವಾರು ಜನರು ಹಂಚಿಕೊಂಡಿದ್ದಾರೆ. ಈ ಮೂಲಕ ಈ ವಿಡಿಯೊವನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲೂ ಈ ವಿಡಿಯೊ ಅದೇ ಪ್ರತಿಪಾದನೆಯೊಂದಿಗೆ ಕನ್ನಡ ಸಂದೇಶದೊಂದಿಗೆ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು.

ಇಷ್ಟೇ ಅಲ್ಲದೆ ಹಿಂದಿ ಭಾಷೆಯಲ್ಲೂ ಈ ವಿಡಿಯೊ ವೈರಲ್ ಆಗಿದೆ. ದೆಹಲಿ ಬಿಜೆಪಿಯ ಉಪಾಧ್ಯಕ್ಷ ಸುನಿಲ್ ಯಾದವ್‌ ಅವರು, “ವಯೋವೃದ್ಧ ವ್ಯಕ್ತಿ ಅಖಿಲೇಶ್ ಯಾದವ್ ಅವರಿಗೆ ವೋಟ್ ಇಲ್ಲ, ವೋಟ್ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ” ಎಂಬ ಪ್ರತಿಪಾದನೆಯೊಂದಿಗೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡದಲ್ಲಿ ವೈರಲ್ ಆಗಿರುವಂತೆಯೇ ಹಿಂದಿಯಲ್ಲಿ ಕೂಡಾ, “ನೀವು ಮಸೀದಿ ಮಾಡಲು ಹೋಗುತ್ತೀರಿ, ಇಡೀ ಪ್ರದೇಶದ ಯಾರೂ ನಿಮಗೆ ಮತ ನೀಡುವುದಿಲ್ಲ” ಎಂದು ವಯೋವೃದ್ದ ವ್ಯಕ್ತಿ ಅಖಿಲೇಶ್‌ಗೆ ಛೀಮಾರಿ ಹಾಕಿದ್ದಾರೆ ಎಂದು ವೈರಲ್ ಆಗಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಟ್ವಿಟರ್‌ನಲ್ಲಿ ಹಲವು ಜನರು ಹಂಚಿಕೊಂಡಿದ್ದಾರೆ. ಜೊತೆಗೆ ಫೇಸ್‌ಬುಕ್‌ ಅಲ್ಲೂ ಈ ವಿಡಿಯೊ ವೈರಲ್ ಆಗಿದೆ. ಅದಲ್ಲಿ ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಜಿಲ್ಲಾಧಿಕಾರಿ ಏಕೆ ಮೇಕಪ್‌ ಮಾಡಿಲ್ಲ?’- ಮನಕಲಕುವ ಕತೆ ಹಿಂದಿನ ವಾಸ್ತವವೇನು?

ಫ್ಯಾಕ್ಟ್‌ಚೆಕ್

ಒಟ್ಟಿನಲ್ಲಿ ನೋಡುವುದಾದರೆ, ‘ಅಖಿಲೇಶ್ ಯಾದವ್‌ ಅವರಿಗೆ ಯುಪಿಯಲ್ಲಿ ವೃದ್ದರೊಬ್ಬರು ಛೀಮಾರಿ ಹಾಕಿದ್ದಾರೆ’ ಎಂಬ ಪ್ರತಿಪಾದನೆಯೊಂದಿಗೆ 14 ಸೆಕೆಂಡಿನ ಈ ವಿಡಿಯೊವನ್ನು ವೈರಲ್ ಮಾಡಿರುವವರಲ್ಲಿ ಹೆಚ್ಚಿನ ಜನರು ಬಿಜೆಪಿ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ.

ನಾನುಗೌರಿ.ಕಾಂ ಈ ವಿಡಿಯೊದ ಸ್ಕ್ರೀನ್‌ ಶಾರ್ಟ್ ಬಳಿಸಿ ರಿವರ್ಸ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೊದ ಧೀರ್ಘ ವಿಡಿಯೊ ಲಭ್ಯವಾಗಿದೆ. ಈ ವಿಡಿಯೊ 1:04 ಸೆಕೆಂಡ್‌ ಇದೆ.

ಈ ವಿಡಿಯೊ, ಉತ್ತರ ಪ್ರದೇಶದ ಚುನಾವಣೆ ಪ್ರಯುಕ್ತ ಅಖಿಲೇಶ್‌ ಯಾದವ್ ಮನೆ ಮನೆ ಪ್ರಚಾರದ ಸಮಯದಲ್ಲಿ ಮಾಡಿರುವ ವಿಡಿಯೊ ಎಂದು ತೋರುತ್ತಿದೆ. ಆದರೆ ಈ ವಿಡಿಯೊ ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ಅವರು ಮಾತನಾಡುತ್ತಾ ಇರುವ ಸಂಧರ್ಭದಲ್ಲಿ ಹಲವಾರು ಜನರು ಅವರ ಸುತ್ತುವರೆದು ಮಾತನಾಡುತ್ತಿದ್ದಾರೆ.

ಅಖಿಲೇಶ್ ಯಾದವ್ ಅವರು ಅಲ್ಲಿ ನೆರೆದಿರುವ ಜನರೊಂದಿಗೆ ಮಾತನಾಡುತ್ತಾ, “ಜನರು ಏನು ಯೋಚಿಸುತ್ತಿದ್ದಾರೆ” ಎಂದು ಪ್ರಶ್ನಿಸುತ್ತಾರೆ. ಜೊತೆಗೆ, ಜನರು ಚೆನ್ನಾಗಿದ್ದಾರೆಯೆ? ರಸ್ತೆ ಮತ್ತು ಹೆದ್ದಾರಿ ಚೆನ್ನಾಗಿದೆಯೆ ಎಂದು ಕೇಳುತ್ತಾರೆ.

ಈ ವೇಳೆ ವಯೋವೃದ್ದಎಂದು ತೋರುವ ವ್ಯಕ್ತಿಯೊಬ್ಬರು, “ಮಗನೇ, ಮೊದಲು ಮಿಷಿನ್(EVM) ಅನ್ನು ಸುಟ್ಟು ಹಾಕು” ಎಂದು ಹೇಳುತ್ತಾರೆ. ವಿಡಿಯೊದಲ್ಲಿ ವ್ಯಕ್ತಿ ಕಾಣಿಸುವುದಿಲ್ಲ. ಕೇವಲ ಕೈಗಳಷ್ಟೇ ಕಾಣುತ್ತದೆ.

ಈ ಸಮಯದಲ್ಲಿ ಅಖಿಲೇಶ್ ಯಾದವ್ ಅವರು, “ಈ ಹಿಂದೆ ಅವರು ಚುನಾವಣಾ ಬೂತ್‌ಗಳನ್ನು ಗಲಾಟೆ ಮಾಡಿ ವಶಕ್ಕೆ ಪಡೆಯುತ್ತಿದ್ದರು. ಈಗ ಬಿಜೆಪಿಯವರು ಅದನ್ನು ಬೇರೆಯೆ ರೀತಿಯಲ್ಲಿ ತಂತ್ರಪೂರ್ವಕವಾಗಿ ಮಾಡುತ್ತಿದ್ದಾರೆ” ಎಂದು ಹೇಳುತ್ತಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್‌ ಕಾರ್ಡ್’!

ಇದರ ನಂತರ ಅಖಿಲೇಶ್‌ ಅವರನ್ನು ಉದ್ದೇಶಿಸಿ ಮತ್ತೇ ಮಾತನಾಡುವ ವಯೋವೃದ್ಧ, “ನಾನು ನಿಮಗೆ ಹೇಳುತ್ತಿದ್ದೇನೆ. ಇಲ್ಲಿ ಒಂದು ಓಟು ಕೂಡಾ ಇಲ್ಲ, ಎಲ್ಲಾ ಓಟು ಕೂಡಾ ಮಿಷಿನ್‌(EVM)ಗೆ ಹೋಗುತ್ತಿದೆ. ನೀವು ಮಿಷಿನ್‌(EVM) ಬದಲಾಯಿಸದೆ, ಜನರ ಸರ್ಕಾರ ಬರುವುದಿಲ್ಲ, ಬರುವುದಿಲ್ಲ, ಬರುವುದಿಲ್ಲ” ಎಂದು ಹೇಳುತ್ತಾರೆ.

ಈ ವೇಳೆ ಅಖಿಲೇಶ್‌ ಯಾದವ್‌, “ಇದು ನಿಜವೇ” ಎಂದು ಕೇಳುತ್ತಾರೆ. ಅದಕ್ಕೆ ವಯೋವೃದ್ದ , “ಮಿಷಿನ್(EVM) ಬದಲಾಯಿಸಿ, ಒಂದೇ ಬಾರಿಗೆ ಎಲ್ಲಾ ಓಟುಗಳೂ ಬರುತ್ತದೆ” ಎಂದು ಹೇಳುತ್ತಾರೆ. ಇದರ ನಂತರ ವೃದ್ದ, ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ ಅಶ್ಲೀಲ ಪದ ಉಲ್ಲೇಖಿಸುವಾಗ ಅಖಿಲೇಶ್‌ ಯಾದವ್‌ ಅವರು ಬಾಯಿಗೆ ಬೆರಳಿಟ್ಟು, ಹಾಗೆ ಹೇಳಬೇಡಿ ಎಂದು ಸೂಚಿಸುತ್ತಾರೆ.

ಪೂರ್ಣ ವಿಡಿಯೊ ನೋಡಿ

ವಾಸ್ತವದಲ್ಲಿ ಬಿಜೆಪಿ ಬೆಂಬಲಿಗರು ವೈರಲ್ ಮಾಡಿರುವ ವಿಡಿಯೊ 14 ಸೆಕೆಂಡ್‌ ಇದೆ. ಅದು ಅಸ್ಪಷ್ಟವಾಗಿದೆ. ಅದರಲ್ಲಿ ವಯೋವೃದ್ದ ಮಾತನಾಡುವುದು, “ಎಲ್ಲಾ ಓಟು ಕೂಡಾ ಮಿಷಿನ್‌(EVM)ಗೆ ಹೋಗುತ್ತಿದೆ. ನೀವು ಮಿಷಿನ್‌(EVM) ಬದಲಾಯಿಸದೆ, ಜನರ ಸರ್ಕಾರ ಬರುವುದಿಲ್ಲ, ಬರುವುದಿಲ್ಲ, ಬರುವುದಿಲ್ಲ” ಎಂದಾಗಿದೆ.

ಬಿಜೆಪಿ ಬೆಂಬಲಿಗರು ಪ್ರತಿಪಾದಿಸಿದಂತೆ, ವಯೋವೃದ್ದ ವ್ಯಕ್ತಿಯು ಈ ಇಡೀ ಸಂಭಾಷಣೆಯಲ್ಲಿ, ಮಸೀದಿಯ ಬಗ್ಗೆಯಾಗಲಿ, ನಿಮಗೆ ಓಟು ನೀಡುವುದಿಲ್ಲ ಎಂದಾಗಲಿ ಅಥವಾ ನಿಮ್ಮ ಸರ್ಕಾರ ಬರುವುದಿಲ್ಲ ಎಂದಾಗಲಿ ಹೇಳುವುದಿಲ್ಲ.

ಒಟ್ಟಿನಲ್ಲಿ ಹೇಳಬಹುದಾದರೆ, ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಮಯದಲ್ಲಿ ಅಖಿಲೇಶ್ ಯಾದವ್‌ ಅವರಿಗೆ ವಿಡಿಯೊದಲ್ಲಿನ ವಯೋವೃದ್ದ ಛೀಮಾರಿ ಹಾಕಿಲ್ಲ. ಅವರು ಮಾತನಾಡಿದ್ದು ‘EVM’ ಮಿಷಿನ್ ಬಗ್ಗೆಯಾಗಿದ್ದು, ಅದನ್ನು ಬದಲಾಯಿಸಿ ಎಂದು ಅಖಿಲೇಶ್ ಜೊತೆಗೆ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....