Homeಮುಖಪುಟಆಸ್ಟ್ರೇಲಿಯಾದಲ್ಲಿ ತೇಜಸ್ವಿ ಸೂರ್ಯ ಭಾಷಣಕ್ಕೆ ತೀವ್ರ ವಿರೋಧ; ಪ್ರತಿಭಟನೆ ಬಳಿಕ ಕಾರ್ಯಕ್ರಮ ರದ್ದು

ಆಸ್ಟ್ರೇಲಿಯಾದಲ್ಲಿ ತೇಜಸ್ವಿ ಸೂರ್ಯ ಭಾಷಣಕ್ಕೆ ತೀವ್ರ ವಿರೋಧ; ಪ್ರತಿಭಟನೆ ಬಳಿಕ ಕಾರ್ಯಕ್ರಮ ರದ್ದು

ಸ್ತ್ರೀವಿರೋಧಿ ಧೋರಣೆಯ ಫ್ಯಾಸಿಸ್ಟ್‌ ಸಂಸದನನ್ನು ಆಸ್ಟ್ರೇಲಿಯಾಕ್ಕೆ ಆಹ್ವಾನಿಸಬಾರದು ಎಂಬ ಆಕ್ರೋಶ ವ್ಯಕ್ತವಾಗಿದೆ.

- Advertisement -
- Advertisement -

ವಿವಾದಗಳ ಮೂಲಕ ಹೆಸರಾಗಿರುವ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಆಸ್ಟ್ರೇಲಿಯಾದಲ್ಲಿ ಕಹಿ ಅನುಭವವಾಗಿದೆ. ಅಲ್ಲಿ ಆಯೋಜಿಸಲಾಗಿದ್ದ ಭಾಷಣವನ್ನು ರದ್ದುಗೊಳಿಸಲಾಗಿದೆ.

ತೇಜಸ್ವಿ ಸೂರ್ಯ ಅವರು ಸೋಮವಾರ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಪ್ರತಿಭಟನೆಯ ಸೂಚನೆಗಳ ನಂತರ ಸಂಘಟಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಆಸ್ಟ್ರೇಲಿಯಾ-ಭಾರತ ಯುವ ಸಂವಾದ (ಎಐವೈಡಿ) ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ತೇಜಸ್ವಿ ಸೂರ್ಯ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇದು ಭಾರತ ಮತ್ತು ಆಸ್ಟ್ರೇಲಿಯಾದ ಯುವಕರ ನಡುವಿನ ಸಂವಾದದ ವೇದಿಕೆಯಾಗಿದೆ. ಪ್ರತಿ ವರ್ಷ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಎರಡೂ ದೇಶಗಳಿಂದ ಆಯ್ದ 15 ಯುವಕರು ಪಾಲ್ಗೊಳ್ಳುತ್ತಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಯುವಕರು ಪರಸ್ಪರ ಸಂವಾದ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ” ಎಂದು ಎಐವೈಡಿ ವೆಬ್‌ಸೈಟ್ ಹೇಳುತ್ತದೆ.

ಇದನ್ನೂ ಓದಿರಿ: ಚಕ್ರತೀರ್ಥ ಸಮಿತಿ ಎಡವಟ್ಟು: ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಸೇರಿದಂತೆ ಮಹಿಳಾ ಸಮಾಜ ಸುಧಾರಕಿಯರ ಪಠ್ಯ ತೆರವು

ಈ ವರ್ಷ ಮೇ 31ರಿಂದ ಜೂನ್ 3 ರವರೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಭಾರತದಿಂದ ಆಯ್ಕೆಯಾದ 15 ಜನರಲ್ಲಿ ತೇಜಸ್ವಿ ಸೂರ್ಯ ಕೂಡ ಇದ್ದರು. ಅವರು ಸೋಮವಾರ ಸಿಡ್ನಿಯ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದರು ಎಂದು ‘The Newz India’ ವೆಬ್‌ಸೈಟ್‌ ವರದಿ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ತೇಜಸ್ವಿ ಸೂರ್ಯರ ಕಾರ್ಯಕ್ರಮ ರದ್ದು

ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮಕ್ಕೆ ಬರಬಾರದೆಂದು ಆಗ್ರಹಿಸಿ ಹಲವು ಸಂಘಟನೆಗಳು ಮತ್ತು ಶೈಕ್ಷಣಿಕ ಕ್ಷೇತ್ರದ ತಜ್ಞರು  ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಪ್ರತಿಭಟನೆ ನಡೆಸಿದ್ದರು. ಕೆಲವು ಸಂಘಟನೆಗಳು ವಿಶ್ವವಿದ್ಯಾನಿಲಯಕ್ಕೆ ಪ್ರತಿಭಟನೆಯ ನೋಟಿಸ್ ಸಹ ಕಳುಹಿಸಿದ್ದವು. ಈ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಪ್ರತಿಭಟನಾಕಾರರಿಗೆ ಇಮೇಲ್ ಮೂಲಕ ತಿಳಿಸಿದೆ.

ತನ್ನ ಪ್ರತಿಕ್ರಿಯೆಯಲ್ಲಿ ವಿವಿಯು, “ಈ ಕಾರ್ಯಕ್ರಮವನ್ನು ಸ್ವಿನ್‌ಬರ್ನ್ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿಲ್ಲ. ಆದರೆ ವಿಶ್ವವಿದ್ಯಾಲಯದ ಕ್ಯಾಂಪಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಖಾಸಗಿ ಸಂಸ್ಥೆಯಾದ ಎಜುಕೇಶನ್ ಸೆಂಟರ್ ಆಫ್ ಆಸ್ಟ್ರೇಲಿಯಾ (ECA) ಕಾರ್ಯಕ್ರಮ ಹಮ್ಮಿಕೊಂಡಿದೆ. ಇಸಿಎ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಫ್ಯಾಸಿಸ್ಟ್‌, ಹಿಂದುತ್ವವಾದಿ, ಸ್ತ್ರೀವಿರೋಧಿ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಆಸ್ಟ್ರೇಲಿಯಾಕ್ಕೆ ಆಗಮಿಸಬಾರದೆಂದು ಪ್ರತಿಭಟನೆಗಳು ಆರಂಭವಾಗಿದ್ದವು. ಆತ ಎಐವಿಡಿ ಸಮ್ಮೇಳನದಲ್ಲಿ ಭಾಗವಹಿಸುವ ಮಾಹಿತಿಯು ಬಹಿರಂಗವಾದಾಗ, ಅವರ ವೀಸಾವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆನ್‌ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನ ಶುರುವಾಯಿತು. ಇದುವರೆಗೆ 4,000ಕ್ಕೂ ಹೆಚ್ಚು ಜನರು ಇದರಲ್ಲಿ ಸಹಿ ಮಾಡಿದ್ದು, “ಫ್ಯಾಸಿಸ್ಟ್ ಸಂಸದರನ್ನು ಆಸ್ಟ್ರೇಲಿಯಾಕ್ಕೆ ಸರ್ಕಾರಿ ಸಂಸ್ಥೆಗಳ ವೆಚ್ಚದಲ್ಲಿ, ಸರ್ಕಾರಿ ಸಂಸ್ಥೆಗಳ ಹೆಸರಲ್ಲಿ ಕರೆಸುವುದು ಸ್ವೀಕಾರಾರ್ಹವಲ್ಲ” ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ತೇಜಸ್ವಿ ಸೂರ್ಯ ಅವರಿಗೆ ವೇದಿಕೆ ನೀಡದಂತೆ ಎಐವೈಡಿ ಮತ್ತು ಅದರ ಅಂಗ ಸಂಸ್ಥೆಗಳಿಗೆ ಆಸ್ಟ್ರೇಲಿಯಾದ ಹಲವು ಸಂಘಟನೆಗಳು ಸಹ ಜಂಟಿ ಪತ್ರ ಬರೆದಿವೆ. ಆಸ್ಟ್ರೇಲಿಯನ್ ಸಂಸ್ಥೆಗಳಾದ ದಿ ಹ್ಯುಮಾನಿಸಂ ಪ್ರಾಜೆಕ್ಟ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಆಸ್ಟ್ರೇಲಿಯನ್ ಫೆಡರೇಶನ್ ಆಫ್ ಇಸ್ಲಾಮಿಕ್ ಕೌನ್ಸಿಲ್ಸ್, ವಿ ಆರ್ ದಿ ಮೈನ್‌ಸ್ಟ್ರೀಮ್, ಸೌತ್ ಏಷ್ಯನ್ ಹ್ಯೂಮನಿಸ್ಟ್ ಅಸೋಸಿಯೇಷನ್, ನ್ಯೂಜಿಲೆಂಡ್, ಯುಎಸ್ ಮತ್ತು ಯುಕೆಯ ಮಾನವ ಹಕ್ಕುಗಳ ಸಂಘಟನೆಗಳು ಈ ಜಂಟಿ ಪತ್ರದಲ್ಲಿ ಸಹಿ ಮಾಡಿವೆ.

ದಿ ಹ್ಯುಮಾನಿಸಂ ಪ್ರಾಜೆಕ್ಟ್‌ನ ಡಾ. ಹರೂನ್ ಖಾಸಿಮ್ ಪ್ರತಿಕ್ರಿಯಿಸಿ, “ಎಐವೈಡಿ ವೆಬ್‌ಸೈಟ್‌ ಹೇಳುವಂತೆ ತೇಜಸ್ವಿ ಸೂರ್ಯ ತನ್ನನ್ನು ಆರ್‌‌ಎಸ್‌ಎಸ್‌ ಸ್ವಯಂಸೇವಕ ಎಂದು ಪರಿಚಯಿಸಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಶತ್ರುವನ್ನಾಗಿ ಮಾಡುತ್ತಾರೆ. ಅವರ ತತ್ತ್ವಚಿಂತನೆಗೆ ವೇದಿಕೆ ಕಲ್ಪಿಸುವುದು ಬುದ್ಧಿವಂತಿಕೆಯಲ್ಲ” ಎಂದಿದ್ದಾರೆ.

ಭಾರತೀಯ-ಆಸ್ಟ್ರೇಲಿಯನ್ ಲೇಖಕ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಉಪನ್ಯಾಸಕ ರೊನ್ನಾ ಗೊನ್ಸಾಲ್ವೆಸ್ ಪ್ರತಿಕ್ರಿಯಿಸಿ, “ವಿಶ್ವವಿದ್ಯಾನಿಲಯಗಳು ಮಹಿಳೆಯರನ್ನು ದ್ವೇಷಿಸುವ ಇಂತಹ ಹಿಂದುತ್ವ ಫ್ಯಾಸಿಸ್ಟ್‌ಗಳನ್ನು ಬೆಂಬಲಿಸಬಾರದು” ಎಂದು ಒತ್ತಾಯಿಸಿದ್ದಾರೆ.

“ಉನ್ನತ ಶಿಕ್ಷಣದೊಳಗೆ ಮಹಿಳಾ ವಿರೋಧಿ, ಮಿಲಿಟರಿ ಸಿದ್ಧಾಂತಕ್ಕೆ ವೇದಿಕೆಯನ್ನು ಒದಗಿಸುವುದು ಸರಿಯಲ್ಲ” ಎಂದು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದ ಡಾ.ಸುಖಮಣಿ ಖುರಾನಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ಚಕ್ರತೀರ್ಥ ಹೇಳಿದ್ದು ಸುಳ್ಳು: 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿಲ್ಲ ನಾರಾಯಣಗುರು, ಪೆರಿಯಾರ್‌ ಪಾಠ!

ತೇಜಸ್ವಿಸೂರ್ಯ ಉಗ್ರ ಹಿಂದುತ್ವವಾದಿ ಮತ್ತು ಇಸ್ಲಾಂ ವಿರೋಧಿ ಎಂಬುದಕ್ಕೆ ಆತನ ಹಲವು ಹೇಳಿಕೆಗಳನ್ನು ಪ್ರತಿಭಟನಾಕಾರರು ಉಲ್ಲೇಖಿಸಿದ್ದಾರೆ. ಉದಾಹರಣೆಗೆ ಅರಬ್ ಮಹಿಳೆಯರನ್ನು ಉಲ್ಲೇಖಿಸಿ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್‌ ಒಂದನ್ನು ಆಧಾರವಾಗಿ ನೀಡಿದ್ದಾರೆ. “95% ಅರಬ್ ಮಹಿಳೆಯರು ಕಳೆದ ಕೆಲವು ನೂರು ವರ್ಷಗಳಲ್ಲಿ ಎಂದಿಗೂ ಸುಖವನ್ನು ಕಾಣಲಿಲ್ಲ. ಪ್ರತಿಯೊಬ್ಬ ತಾಯಿಯು ಮಕ್ಕಳನ್ನು ಲೈಂಗಿಕ ಕ್ರಿಯೆಯಲ್ಲಿ ಹುಟ್ಟಿಸಿದ್ದಾರೆಯೇ ಹೊರತು ಪ್ರೀತಿಯಿಂದಲ್ಲ” ಎಂದು ಸೂರ್ಯ ಹೇಳಿದ್ದರು. ಈ ಟ್ವೀಟ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. “ಯುಎಇ ಮತ್ತು ಭಾರತದ ನಡುವೆ ಸೌಹಾರ್ದಯುತ ಸಂಬಂಧವಿದ್ದು, ನಮ್ಮ ಮಹಿಳೆಯ ಬಗ್ಗೆ ಅತ್ಯಂತ ಕೀಳಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕ್ರಮ ಜರುಗಿಸಬೇಕು” ಎಂಬ ಆಗ್ರಹ ಬಂದಿತ್ತು. ಯುಎಇಯಲ್ಲಿನ ಭಾರತದ ರಾಯಭಾರಿಯಾಗಿದ್ದ ಪವನ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಬೇಕಾದ ಸ್ಥಿತಿ ಒದಗಿತು.

“ತೇಜಸ್ವಿ ಸೂರ್ಯರ ಧಾರ್ಮಿಕ ಮತಾಂಧತೆ ಎಲ್ಲರಿಗೂ ತಿಳಿದಿದೆ. ಆತನ ಧರ್ಮಾಂಧತೆ, ಮಹಿಳೆಯರ ಮೇಲಿನ ದ್ವೇಷ, ಅನಾಗರಿಕತೆಯ ವರ್ತನೆಗಳಿಗೆ ದಾಖಲೆಗಳಿವೆ. ಆದರೂ ಎಐವೈಡಿ ತನ್ನ ಕಾರ್ಯಕ್ರಮಕ್ಕೆ ಆತನನ್ನ ಆಹ್ವಾನಿಸಿದೆ. ಈ ಸಮ್ಮೇಳನವು ಆಸ್ಟ್ರೇಲಿಯಾದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು ತನ್ನ ಪಾಲುದಾರರನ್ನಾಗಿ ಹೆಸರಿಸಿದೆ. ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಸಂಸ್ಥೆಗಳಿಗೆ ಸೂರ್ಯರ ವಿವಾದಿತ ಇತಿಹಾಸದ ಅರಿವಿದೆಯೇ? ಆಸ್ಟ್ರೇಲಿಯಾದ ಬಹುಸಂಸ್ಕೃತಿ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳಿಗೆ ಎಐವೈಡಿ ಬದ್ಧವಾಗಿದೆಯೆ?” ಎಂದು ಡಾ.ಖಾಸಿಂ ಪ್ರಶ್ನಿಸಿದ್ದಾರೆ.

ಎಐವೈಡಿ ಈ ಬಗ್ಗೆ ಪ್ರತಿಕ್ರಿಯಿಸದಿದ್ದರೂ ವಿವಾದ ಭುಗಿಲೆದ್ದ ನಂತರ ಹಲವಾರು ಪಾಲುದಾರ ಸಂಸ್ಥೆಗಳು ತಮ್ಮ ಹೆಸರುಗಳನ್ನು ವಾಪಸ್ ಪಡೆದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಇದೊಂದು ಒಳ್ಳೆಯ ಬೆಳವಣಿಗೆ. ಮನುವಾದಿಗಳಿಗೆ ವಿದೇಶಗಳಲ್ಲಿ ಈ ರೀತಿಯಲ್ಲಿ ಮಂಗಳಾರತಿ ಕಾರ್ಯಕ್ರಮ ಮುಂದುವರೆಯಲಿ.

  2. ಇಂತಾ ಸಾಮಾಜಿಕ ವಿಷಜಂತುಗಳ ಕಾರ್ಯಕ್ರಮ ರದ್ದುಗೊಳಿಸಿ ಒಳ್ಳೆ ಕೆಲಸಮಾಡಿದೆ ಆಸ್ಟ್ರೇಲಿಯ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...