Homeಕರ್ನಾಟಕಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ

ಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ

- Advertisement -
- Advertisement -

“ಮಹಾತ್ಮ ಗಾಂಧೀಜಿಯವರು ಭಾರತದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಇಂದು, ಗುಜರಾತ್‌ನ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರೊಂದಿಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಾಗಿತ್ತು. ಗಾಂಧೀಜಿಯವರ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನಗೆ ಅವಕಾಶ ಸಿಕ್ಕಿತು” ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾಡಿರುವ ಪೋಸ್ಟ್‌ ಚರ್ಚೆಗೆ ಗ್ರಾಸವಾಗಿದೆ.

ಚರಕದ ಮುಂದೆ ಕೂತು ನೂಲು ಸುತ್ತುತ್ತಿರುವಂತೆ ತೇಜಸ್ವಿ ಸೂರ್ಯ ಅವರು ಫೋಟೋ ತೆಗೆಸಿಕೊಂಡಿದ್ದು, ಗಾಂಧೀಜಿಯವರನ್ನು ಬಣ್ಣಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನು “ಮಿತಿಮೀರಿದ ಬೂಟಾಟಿಕೆ (ಹಿಪೊಕ್ರಸಿ)” ಎಂದು ಜನರು ಟೀಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಒಂದು ಕಡೆ ಬಿಜೆಪಿ ನಾಯಕರು ಹಿಂದುತ್ವವನ್ನು ಹೇಳುತ್ತಾ, ಗಾಂಧಿ ಹಂತಕ ಗೋಡ್ಸೆ ಪರ ನಿಲುವು ವ್ಯಕ್ತಪಡಿಸುತ್ತಾರೆ. ಮತ್ತೊಂದೆಡೆ ಗಾಂಧೀಜಿಯನ್ನು ಶ್ಲಾಘಿಸುತ್ತಾರೆ. ಎರಡೂ ರೀತಿಯ ನಿಲುವುಗಳನ್ನು ಬಿಜೆಪಿ ತಾಳುವುದು ಏತಕ್ಕೆ ಎಂಬ ಚರ್ಚೆಗಳು ಮೊದಲಿನಿಂದಲೂ ನಡೆಯುತ್ತಿವೆ.

ಇದನ್ನೂ ಓದಿರಿ: ಕೇಸರಿ ವಸ್ತ್ರ ಪವಿತ್ರವಾದದ್ದು; ಅದನ್ನು ಧರಿಸಿ ಮಾಡಬಾರದ್ದನ್ನು ಮಾಡಬೇಡಿ: ಎಚ್‌ಡಿಕೆ

ಗಾಂಧೀಜಿಯರನ್ನು ಬಿಜೆಪಿಯ ಬೆಂಬಲಿಗರು ಬಹಳ ಕೆಟ್ಟದ್ದಾಗಿ ನಿಂದಿಸುವುದು, ಗೋಡ್ಸೆಯನ್ನು ಹೊಗಳುವುದು ಎಗ್ಗಿಲ್ಲದೆ ನಡೆಯುತ್ತಿದೆ. ಇದರ ವಿರುದ್ಧ ಬಿಜೆಪಿಯ ಹಲವು ನಾಯಕರು ಮಾತನಾಡುವುದಿಲ್ಲ ಎಂಬುದು ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗೆ ಬಂದಿರುವ ಕಮೆಂಟ್‌ಗಳಲ್ಲಿ ವ್ಯಕ್ತವಾಗುತ್ತದೆ.

ಗಾಂಧೀಜಿಯವರು ಅಹಿಂಸಾ ಮಾರ್ಗದ ಬಹುದೊಡ್ಡ ಸಂಕೇತ. ಸರ್ವಧರ್ಮ ಸಹಿಷ್ಠುತೆಯ ಪ್ರತೀಕ. ಒಂದು ಕೋಮಿನ ವಿರುದ್ಧ ನಿರಂತರ ದ್ವೇಷ ಹರಡುತ್ತಿರುವ ಮತೀಯ ಶಕ್ತಿಗಳು ಹೆಚ್ಚಾಗುತ್ತಿದ್ದು ಸರ್ಕಾರ ಮೌನವಾಗಿದೆ. ಬಿಜೆಪಿ ನಾಯಕರು ಮೌನ ಸಮ್ಮತಿ ನೀಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ತೇಜಸ್ವಿ ಸೂರ್ಯ ಅವರು ಈ ಹಿಂದೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಸಾಕಷ್ಟು ನೀಡಿದ್ದು ಚರ್ಚೆಯಾಗಿದೆ. ಆದರೆ ಹಿಂದೂ ಮುಸ್ಲಿಂ ಏಕತೆಯನ್ನು ಸಾರಿದ ಗಾಂಧೀಜಿಯವರನ್ನು ತೇಜಸ್ವಿ ಸೂರ್ಯ ಬಣ್ಣಿಸಿರುವುದು ಟೀಕೆಗೆ ಒಳಗಾಗಿದೆ.

ತೇಜಸ್ವಿ ಸೂರ್ಯರ ಪೋಸ್ಟ್‌ಗೆ ಬಂದ ಕೆಲವು ಕಮೆಂಟ್‌ಗಳು

“ಕೇಜ್ರಿವಾಲ್ ಅವರ ವೃದ್ಧ ತಂದೆ-ತಾಯಿ, ಹೆಂಡತಿ ಮತ್ತು ಮಕ್ಕಳು ವಾಸಿಸುವ ಮನೆಯ ಮೇಲೆ ದಾಳಿ ಮಾಡಿದ ಹಿಂಸಾಚಾರದ ಗುಂಪಿನ ನಾಯಕ ನೀವು. ನಾಚಿಕೆ ಆಗುತ್ತಿದೆ ತೇಜಸ್ವಿ ಎಂದು ರಾಜೀವ್ ಕುಮಾರ್‌ ಎಂಬವರು ಕಮೆಂಟ್ ಮಾಡಿದ್ದಾರೆ.

‘ಖಾತಾಬುಕ್‌’ ಸಂಸ್ಥಾಪಕ ರವೀಶ್‌ನರೇಶ್‌ ಇತ್ತೀಚೆಗೆ ಟ್ವೀಟ್ ಮಾಡಿ, ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಕೊರತೆ ಬಗ್ಗೆ ಹಂಚಿಕೊಂಡಿದ್ದರು. ಅದನ್ನು ಉಲ್ಲೇಖಿಸಿ ಕಮೆಂಟ್ ಮಾಡಿರುವ ವಿವೇಕಾನಂದ ರೆಡ್ಡಿ, “ನಕಲಿ ಭಾಷಣ ಮತ್ತು ಪ್ರಚಾರಕ್ಕಾಗಿ ಭಾರತದಾದ್ಯಂತ ಅಲೆದಾಡಬೇಡಿ. ನಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ. ಬೆಂಗಳೂರು ದಕ್ಷಿಣದಲ್ಲಿ ಪ್ರಮುಖ ಐಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್‌ಗಳು ಬರುತ್ತವೆ. ಮೊದಲು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿ. ಸಮಸ್ಯೆಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿ. ಮೂಲಸೌಕರ್ಯಗಳನ್ನು ಸುಧಾರಿಸಲು, ಸ್ಟಾರ್ಟ್‌ಅಪ್‌ಗಳು ಮತ್ತು ಕಂಪನಿಗಳನ್ನು ಬೆಂಗಳೂರಿಗೆ ತರಲು ಸೌಕರ್ಯ ಒದಗಿಸಿ…” ಎಂದು ಕೋರಿದ್ದಾರೆ.

“ಅತ್ಯಂತ ಕೆಟ್ಟ ರಾಜಕಾರಣಿ. ಭಾರತದ ಇತಿಹಾಸದಲ್ಲೇ ಕೆಟ್ಟ ರಾಜಕಾರಣಿ. ಮಹಾತ್ಮರ ಸ್ಥಾನದಲ್ಲಿ ಕುಳಿತುಕೊಳ್ಳಬೇಡಿ. ನೀವು ಅದಕ್ಕೆ ಅರ್ಹರಲ್ಲ” ಎಂದು ಕಿರಣ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

“ಗೋಡ್ಸೆ ಕೋಪಗೊಳ್ಳುತ್ತಾನೆ ಗಾಂಧಿಯನ್ನು ಹೆಚ್ಚು ಹೊಗಳಬೇಡಿ” ಎಂದು ತನ್‌ಹಕ್‌ ಎಂಬವರು ತಿಳಿಸಿದ್ದಾರೆ.

“ಗೋಡ್ಸೆ ಮುರ್ದಾಬಾದ್ ಎಂದು ಒಮ್ಮೆಯಾದರೂ ಹೇಳಿ” ರಾಜು ಟಾಕೂರ್‌ ಒತ್ತಾಯಿಸಿದ್ದಾರೆ.

“ಗಾಂಧಿ ತತ್ವ ಸಿದ್ಧಾಂತವನ್ನು ವಿರೋಧ ಮಾಡಿ ಅವರ ಸಾವನ್ನು ಸಂಭ್ರಮಿಸುವ ಯಾವ ವ್ಯಕ್ತಿಯಾದರೂ ಅಲ್ಲಿಗೆ ಹೋಗಬಾರದು” ಎಂದು ಡಿ.ಎಸ್.ಗೌರೀಶ್‌ ತಿಳಿಸಿದ್ದಾರೆ.

“ತಮ್ಮ ಹೇಳಿಕೆಗಳ ಬಗ್ಗೆ ಪ್ರಾಯಶ್ಚಿತ ಮಾಡಿಕೊಳ್ಳಲು ತೇಜಸ್ವಿ ಸೂರ್ಯ ಅವರು ಸಬರಮತಿ ಆಶ್ರಮಕ್ಕೆ ಹೋಗಿದ್ದಾರೆ ಅನ್ನಿಸುತ್ತದೆ. ಲೋಕಸಭೆ ಸದಸ್ಯರಾಗಿ ಮನಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ” ಎಂದು ಡಿ.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದರೆ.

“ಭಾರತದ ಪ್ರಪ್ರಥಮ ಭಯೋತ್ಪಾದಕ ಗೋಡ್ಸೆಯನ್ನು ಏನೆನ್ನುವಿರಿ” ಎಂದು ಮಾರುತಿ ಸೂರಕುಂಟೆ ಪ್ರಶ್ನಿಸಿದ್ದಾರೆ.

“ಹೈ ಲೆವೆಲ್‌ ಆಫ್ ಹಿಪೊಕ್ರಸಿ” ಎಂದು ಅನಿಲ್‌ಕುಮಾರ್‌ ಚಿಕ್ಕದಾಳವಟ್ಟ ಟೀಕಿಸಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬೆಂಬಲಿಸುವ ಹಲವಾರು ಪ್ರೊಪೈಲ್‌ಗಳು ತೇಜಸ್ವಿ ಸೂರ್ಯರನ್ನು ಹಾಗೂ ಗಾಂಧೀಜಿಯನ್ನು ನಿಂದಿಸಿ ಕಮೆಂಟ್ ಮಾಡಿವೆ. ಪೋಸ್ಟ್‌ಅನ್ನು ವಿರೋಧಿಸುವ ನೆಪದಲ್ಲಿ ರಾಷ್ಟ್ರಪಿತ ಗಾಂಧೀಜಿಯವರನ್ನು ಹೀಯಾಳಿಸಿರುವುದನ್ನು, ಅಸಂವಿಧಾನಿಕ ಪದಗಳನ್ನು ಬಳಸಿರುವುದನ್ನು ಇಲ್ಲಿನ ಕಮೆಂಟ್‌ಗಳಲ್ಲಿ ಕಾಣಬಹುದು.

ಬಿಜೆಪಿ ಫಾಲೋಯರ್ಸ್‌‌ಗಳ ಕಮೆಂಟ್‌ಗಳನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಚಿದಾನಂದ ಎಂ.ಪಡುವರಹಳ್ಳಿ, “ನೀವು ನೋಡುದ್ರೆ ಗಾಂಧೀಜಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದೀರಿ. ಜೊತೆಗೆ ಗುಜರಾತ್‌ನಲ್ಲಿ ಗಾಂಧೀಜಿಯ ಜೀವನದ ಪಾಠವನ್ನು ಕಲಿಯೋಕೆ ಹೋಗಿದ್ದೀರಿ. ಗಾಂಧೀಜಿ ಆಶ್ರಮಕ್ಕೆ ಹೋಗಿರುವ ಉದ್ದೇಶ, ಗಾಂಧೀಜಿ ಅವರ ಮೇಲಿನ ಪ್ರೀತಿಯೋ ಅಥವಾ ದ್ವೇಷವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಏಕೆಂದರೆ ನಿಮ್ಮ ಈ ಪೋಸ್ಟ್‌ನಲ್ಲಿ ಹಾಕಿರುವ ಕಾಮೆಂಟ್ ಗಳನ್ನು ಒಮ್ಮೆ ನೋಡಿ. ಗಾಂಧೀಜಿ ಅವರ ಬಗ್ಗೆ ಎಷ್ಟು ಅಸಹ್ಯ ಪದಬಳಕೆ ಮಾಡಿದ್ದಾರೆ! ಹಾಗಾಗಿ ನನಗೆ ಅನುಮಾನ ಇದೆ ಬಗೆಹರಿಸಿ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಗಾಂಧೀಜಿ ಅವರ ಬಗ್ಗೆ ಹಗುರವಾಗಿ ಕಮೆಂಟ್ ಮಾಡ್ತಿರೋರಲ್ಲಿ ನೂರಕ್ಕೆ ತೊಂಬತ್ತು ಭಾಗ ನಿಮ್ಮವರೆ ಅನ್ನೋದು ಅಷ್ಟೆ ಸತ್ಯ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: ಮಸೀದಿಯಿಂದ ಬಲವಂತವಾಗಿ ಧ್ವನಿವರ್ಧಕ ತೆಗೆಯುವುದಿಲ್ಲ: ಸಿಎಂ ಬೊಮ್ಮಾಯಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ತೇಜಸ್ವಿಯವರೆ. ನಿಮ್ಮ ಯೋಚನಾಲಹರಿಗಳೇ ಬೇರೆ. ಮಹಾತ್ಮಾ ಗಾಂಧೀಜಿಯವರ ತೃಣಕ್ಕೂ ನೀವು ಸಮಾನರಲ್ಲಾ. ಅದು ಹೇಗೆ ನಿಮ್ಮನ್ನ ಅಲ್ಲಿ ಕೂಡಲು ಬಿಟ್ಟರು..?

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...