Homeಮುಖಪುಟವೇದ್ಯಕೀಯ ಸೀಟುಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ಮೀಸಲಾತಿ: ತಮಿಳುನಾಡು ಸರ್ಕಾರದ ಕಾನೂನು ಎತ್ತಿ...

ವೇದ್ಯಕೀಯ ಸೀಟುಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ಮೀಸಲಾತಿ: ತಮಿಳುನಾಡು ಸರ್ಕಾರದ ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಸಾಮಾಜಿಕ ನ್ಯಾಯದ ಪಯಣದಲ್ಲಿ ನಮ್ಮ ಪ್ರತಿ ಹೆಜ್ಜೆಯೂ ಗಟ್ಟಿಯಾಗಿದೆ ಎಂಬುದನ್ನು ಹೈಕೋರ್ಟ್ ತೀರ್ಪು ತೋರಿಸುತ್ತದೆ - ತಮಿಳುನಾಡು ಸಿಎಂ ಸ್ಟಾಲಿನ್

- Advertisement -
- Advertisement -

ವೈದ್ಯಕೀಯ ಕಾಲೇಜು ಪ್ರವೇಶದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಸೀಟುಗಳನ್ನು ಮೀಸಲಿಡುವ ತಮಿಳುನಾಡು ಸರ್ಕಾರದ ಕಾನೂನನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಮೀಸಲಾತಿ ನೀಡುವ ಸರ್ಕಾರ ಕಾನೂನಿನ ಮಾನ್ಯತೆ ಪ್ರಶ್ನಿಸಿ ಹಲವಾರು ಜನ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮುನೀಶ್ವರನಾಥ್ ಭಂಡಾರಿ ಮತ್ತು ಡಿ.ಭರತ ಚಕ್ರವರ್ತಿಯವರಿದ್ದ ಪೀಠವು ಈ ಕಾನೂನು ಮಾನ್ಯವಾಗಿದ್ದು, ಮೀಸಲಾತಿ ನೀಡುವ ಅಧಿಕಾರ ಸರಕಾರಕ್ಕಿದೆ ಎಂದು ಹೇಳಿದೆ.

ಅರ್ಜಿದಾರರು ಈಗಾಗಲೇ ತಮಿಳುನಾಡಿನಲ್ಲಿ ಶೇ. 69 ರಷ್ಟು ಮೀಸಲಾತಿ ಇದ್ದು ಜನರಲ್ ಕ್ಯಾಟಗರಿ ವಿದ್ಯಾರ್ತಿಗಳಿಗೆ ಕೇವಲ ಶೇ.31 ಮಾತ್ರ ಇದೆ. ಈಗ ಶೇ. 7.5 ಮೀಸಲಾತಿ ನೀಡಿದರೆ ಮತ್ತಷ್ಟು ತೊಂದರೆಯಾಗುತ್ತದೆ ಎಂದು ವಾದಿಸಿದ್ದರು.

ಕಾನೂನನ್ನು ಸಮರ್ಥಿಸಿಕೊಂಡಿದ್ದ ತಮಿಳುನಾಡು ಸರ್ಕಾರ, “ಇದು ಬಡವ-ಶ್ರೀಮಂತ ಹಾಗೂ ನಗರ-ಗ್ರಾಮೀಣ ವಿದ್ಯಾರ್ಥಿಗಳ ನಡುವಿನ ಅಂತರವನ್ನು ತಗ್ಗಿಸಲು ಈ ಮೀಸಲಾತಿಯು ಅಗತ್ಯವಾಗಿದೆ” ಎಂದಿತ್ತು. ಪ್ರಬಲ ಜಾತಿಗಳಿಗೆ ಸಾಮಾಜಿಕ ಬಂಡವಾಳವಿದೆ ಹಾಗಾಗಿ ತಳವರ್ಗದ ಜನರನ್ನು ಮೇಲೆತ್ತುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಈ ರೀತಿಯ ಕಾನೂನುಗಳಿಗೆ ಸುಪ್ರೀಂ ಕೋರ್ಟ್‌ನ ಬೆಂಬಲವಿದೆ” ಎಂದು ವಾದಿಸಿತು.

ಸರ್ಕಾರದ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯಗಳನ್ನು ಅರ್ಜಿಗಳನ್ನು ವಜಾ ಮಾಡಿದೆ. ಅಲ್ಲದೆ ಐದು ವರ್ಷಗಳ ನಂತರ ಈ ಮೀಸಲಾತಿಯನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, “ಸಾಮಾಜಿಕ ನ್ಯಾಯದ ಪಯಣದಲ್ಲಿ ನಮ್ಮ ಪ್ರತಿ ಹೆಜ್ಜೆಯೂ ಗಟ್ಟಿಯಾಗಿದೆ ಎಂಬುದನ್ನು ಹೈಕೋರ್ಟ್ ತೀರ್ಪು ತೋರಿಸುತ್ತದೆ. ಕಳೆದ 10 ತಿಂಗಳ ಡಿಎಂಕೆ ಆಡಳಿತದ ಸರ್ಕಾರಕ್ಕೆ ಇದು ಮೂರನೇ ಗೆಲುವು. ಸರಿಯಾದ ಅಂಕಿಅಂಶಗಳು ಮತ್ತು ಚರ್ಚೆಗಳ ಆಧಾರದ ಮೇಲೆ ಈ ಕಾನೂನನ್ನು ತರಲಾಗಿದೆ” ಎಂದಿದ್ದಾರೆ.

ಕಾನೂನನ್ನು ಎಐಎಡಿಎಂಕೆ ಸರ್ಕಾರ ತಂದಿದ್ದರೂ, ವನ್ನಿಯಾರ್ ಮೀಸಲಾತಿ ಪ್ರಕರಣದಲ್ಲಿ ನಾವು ಪ್ರಬಲವಾಗಿ ವಾದಿಸಿದ್ದೇವೆ. ಆದರೆ, ತರಾತುರಿಯಲ್ಲಿ ಎಐಎಡಿಎಂಕೆ ಮಾಡಿದ ತಪ್ಪಿನಿಂದ ತೀರ್ಪು ಸಂಪೂರ್ಣವಾಗಿ ನಮ್ಮ ಪರವಾಗಿ ಬರಲಿಲ್ಲ. ಈಗ ಅದನ್ನು ಸಾಧಿಸಿದ್ದೇವೆ ಎಂದಿದ್ದಾರೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಎಐಎಡಿಎಂಕೆ ಸರ್ಕಾರ ಘೋಷಿಸಿತ್ತು. ಆದರೆ ಕೆಲವು ದೋಷಗಳು ಎದುರಾದ್ದರಿಂದ ಜಾರಿಯಾಗಿರಲಿಲ್ಲ. ಪ್ರಸ್ತುತ ಡಿಎಂಕೆ ಸರ್ಕಾರವು ಕಾನೂನು ಆಗಿ ಜಾರಿಗೆ ತಂದಿದೆ.

ಡಿಎಂಕೆ ಸರ್ಕಾರವು ಇದೇ ರೀತಿಯಾಗಿ ಇಂಜಿನಿಯರಿಂಗ್/ಕೃಷಿ/ಮೀನುಗಾರಿಕೆ/ಪಶುವೈದ್ಯಕೀಯ ಕೋರ್ಸ್‌ಗಳಲ್ಲಿ ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಪ್ರಮುಖ ಸ್ವ-ಹಣಕಾಸು ಕಾಲೇಜುಗಳಲ್ಲಿ 7.5 ಪ್ರತಿಶತ ಮೀಸಲಾತಿಯನ್ನು ಒದಗಿಸಲು ಕಾನೂನನ್ನು ಅಂಗೀಕರಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹೆಚ್ಚಿದ ಕೋಮು ಉದ್ವಿಗ್ನತೆ ಹಿನ್ನಲೆ: ಕಂಪೆನಿಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ಸೆಳೆಯಲು ಪ್ರಯತ್ನಿಸುತ್ತಿರುವ ಡಿಎಂಕೆ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...