HomeUncategorizedಅಧಿಕ ರಕ್ತದೊತ್ತಡ: ಅಪೊಲೋ ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್

ಅಧಿಕ ರಕ್ತದೊತ್ತಡ: ಅಪೊಲೋ ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್

ನಟ ರಜನಿಕಾಂತ್, ತಮಿಳುನಾಡು ಚುನಾವಣೆಗೆ ತಮ್ಮ ಪಕ್ಷದ ಆರಂಭದ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಡಿಸೆಂಬರ್‌ 31 ರಂದು ತಿಳಿಸಲಾಗುವುದು ಎಂದು ಹೇಳಿದ್ದರು.

- Advertisement -
- Advertisement -

ಅನಾರೋಗ್ಯದ ಕಾರಣದಿಂದ ನಟ, ಸೂಪರ್‌ಸ್ಟಾರ್‌ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಕ್ತದೊತ್ತಡದ ತೀವ್ರ ಏರಿಳಿತದಿಂದ ಅವರನ್ನು ಶುಕ್ರವಾರ (ಡಿ.25) ಹೈದರಾಬಾದ್​​ನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಅಪೊಲೋ ಆಸ್ಪತ್ರೆ ಹೆಲ್ತ್​​ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 10 ದಿನಗಳಿಂದ ಹೈದರಾಬಾದ್​​ನಲ್ಲಿ ಶೂಟಿಂಗ್​​​ನಲ್ಲಿದ್ದ ರಜನಿಕಾಂತ್ ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದೆ.

ನಟ ರಜನಿಕಾಂತ್ ಅವರು ಹೈದರಾಬಾದ್‌ನಲ್ಲಿ ಕಳೆದ 10 ದಿನಗಳಿಂದ ಅಣ್ಣಾತ್ತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಅಣ್ಣಾತ್ತೆ ಸಿನಿಮಾ ತಂಡದ ಎಂಟು ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ರಜನಿಕಾಂತ್‌ಗೆ ಡಿ.22 ರಂದು ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅವರ ವರದಿ ನೆಗೆಟಿವ್ ಬಂದಿತ್ತು.

ಇದನ್ನು ಓದಿ: ಸಿದ್ದಾಂತ ಹೊಂದಿಕೆಯಾದರೆ ರಜನಿಕಾಂತ್‌ ಜೊತೆ ಮೈತ್ರಿಗೆ ಸಿದ್ದ: ಕಮಲ್ ಹಾಸನ್

ನಂತರ ತಾವೇ ಸ್ವತಃ ಹೋಂ ಕ್ವಾರಂಟೈನ್‌ನಲ್ಲಿದ್ದ ರಜನಿಕಾಂತ್‌ ಅವರನ್ನು ಅಧಿಕ ರಕ್ತದೊತ್ತಡ ಮತ್ತು ಬಳಲಿಕೆ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದೊತ್ತಡದ ಸಮಸ್ಯೆ ಮತ್ತು ದೈಹಿಕ ಬಳಲಿಕೆಯ ಹೊರತಾಗಿ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದು ಅಪೊಲೋ ಆಸ್ಪತ್ರೆ ಹೆಲ್ತ್​​ ಬುಲೆಟಿನ್​​ನಲ್ಲಿ ಮಾಹಿತಿ ನೀಡಲಾಗಿದೆ.

ಡಿ.2 ರಂದು ‘ರಜಿನಿ ಮಕ್ಕಳ್ ಮಂದ್ರಮ್ ವೇದಿಕೆ’ಯ ಪದಾಧಿಕಾರಿಗಳನ್ನು ಭೇಟಿಯಾಗಿದ್ದ ರಜನಿಕಾಂತ್, ತಮ್ಮ ಪಕ್ಷದ ಆರಂಭದ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಡಿಸೆಂಬರ್‌ 31 ರಂದು ತಿಳಿಸಲಾಗುವುದು ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ದೃಢಪಡಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯ ಕಣದಲ್ಲಿ ಈ ಬಾರಿ ಸ್ಪರ್ಧಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ನಟ ರಜನಿಕಾಂತ್ ಅವರ ಬಹುನಿರೀಕ್ಷಿತ ಹೊಸ ಪಕ್ಷ ಜನವರಿಯಲ್ಲಿ ಆರಂಭ

ಆದರೆ, ಅದಕ್ಕೂ ಹಿಂದೆ ತಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೊರೊನಾ ಸೋಂಕಿನ ಭಯದಲ್ಲಿ ರಾಜಕೀಯಕ್ಕೆ ತಮ್ಮ ಪ್ರವೇಶ ವಿಳಂಬವಾಗಬಹುದು ಎಂದು ಸುಳಿವು ನೀಡಿದ್ದರು. ನಟ ರಜನಿಕಾಂತ್‌ ಅವರಿಗೆ ಮೂತ್ರಪಿಂಡದ ಸಮಸ್ಯೆ ಇರುವುದರಿಂದ ಕೊರೊನಾ ಸೋಂಕಿಗೆ ಬೇಗ ಗುರಿಯಾಗಬಹುದು ಎಂಬ ಕಾರಣಕ್ಕೆ ಪ್ರಯಾಣ ಮಾಡದಂತೆ ವೈದ್ಯರು ಸೂಚಿಸಿದ್ದರು.

ತಮಿಳುನಾಡು ಚುನಾವಣಾ ಅಖಾಡಕ್ಕೆ ಇಳಿದು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ನಟ ಕಮಲ್ ಹಾಸನ್, ಚುನಾವಣೆಯಲ್ಲಿ ರಜನಿಕಾಂತ್ ಬೆಂಬಲ ಕೇಳುವುದಾಗಿ ಹಲವು ಬಾರಿ ಹೇಳಿದ್ದಾರೆ. ಸಿದ್ಧಾಂತಗಳು ಹೊಂದಿಕೆಯಾದರೇ, ಜನರಿಗೆ ನಮ್ಮ ಮೈತ್ರಿಯಿಂದ ಒಳ್ಳೆಯದಾಗುವುದಾದರೇ ನಾವು ಅಹಂ ಬಿಟ್ಟು ಒಂದಾಗುತ್ತೇವೆ ಎಂದಿದ್ದರು.

ಈಗ ರಜನಿಕಾಂತ್ ಆರೋಗ್ಯ ಸ್ಥಿತಿಯನ್ನು ನೋಡಿದರೆ ಅವರು ಮತ್ತೆ ತಮ್ಮ ಹಳೆಯ ಮಾತಾದ ರಾಜಕೀಯಕ್ಕೆ ಪ್ರವೇಶ ವಿಳಂಬವಾಗಬಹುದು ಎಂಬುದನ್ನು ಪುನರುಚ್ಚರಿಸಬಹುದು. ಈಗಾಗಲೇ ತಮಿಳುನಾಡಿನಲ್ಲಿ ಹೊಸ ಹೊಸ ಪಕ್ಷಗಳು ಹುಟ್ಟಿಕೊಂಡಿದ್ದು, ಪಕ್ಷ ಪಕ್ಷಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಬಿಜೆಪಿ ಈ ಎಲ್ಲ ವಿಚಾರಗಳ ಲಾಭ ಪಡೆಯಲು ತನ್ನದೆ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದೆ.


ಇದನ್ನೂ ಓದಿ: ಮುಖ್ಯಮಂತ್ರಿಯಾಗಲು ಎಂದಿಗೂ ಬಯಸಲಿಲ್ಲ: ಹೊಸ ಪಕ್ಷ ಘೋಷಿಸಿದ ರಜನಿಕಾಂತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...