ಕಳೆದ ವರ್ಷ ಸಂಭವಿಸಿದ ಭೀಕರ ಭೂಕುಸಿತದ ನಂತರ ವಯನಾಡಿನ ಜನರು ತಮ್ಮ ಜೀವನವನ್ನು ಪುನರ್ನಿರ್ಮಿಸಲು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ, ಸರ್ಕಾರದ ಪರಿಹಾರ ಪ್ಯಾಕೇಜ್ ಅನ್ನು ಅನುದಾನವಾಗಿ ಪರಿವರ್ತಿಸುವಂತೆ ಒತ್ತಾಯಿಸಿದ್ದು, ಈ ಬಗ್ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ವಯನಾಡ್ ದುರಂತ
ವಯನಾಡಿನ ಜನರು ತಮಗೆ ಸಂಭವಿಸಿರುವ ಭೀಕರ ದುರದೃಷ್ಟದಿಂದ ಹೊರಬರಲು ಸಾಧ್ಯವಿರುವ ಎಲ್ಲ ಸಹಾಯ ಮತ್ತು ಬೆಂಬಲಕ್ಕೆ ಅರ್ಹರು ಎಂದು ಅವರು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಯನಾಡ್ ದುರಂತ
“ವಯನಾಡಿನ ಲೋಕಸಭಾ ಸಂಸದೆಯಾಗಿ, ನನ್ನ ಕ್ಷೇತ್ರದ ಚೂರಲ್ಮಲಾ ಮತ್ತು ಮುಂಡಕ್ಕೈ ಜನರ ದುಃಸ್ಥಿತಿಯ ಬಗ್ಗೆ ನಿಮಗೆ ತಿಳಿಸುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ಭೀಕರ ದುರಂತವು ಅವರ ಜೀವನ ಮತ್ತು ಜೀವನೋಪಾಯವನ್ನು ನಾಶಪಡಿಸಿದ ಆರು ತಿಂಗಳಾಗಿದೆ. ಅದರ ನಂತರ ಅವರು ತಮ್ಮ ಜೀವನವನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಾ ಊಹಿಸಲಾಗದ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದು ನಿಜಕ್ಕೂ ಹೃದಯವಿದ್ರಾವಕವಾಗಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಜುಲೈ 30, 2024 ರಂದು ವಯನಾಡ್ ಜಿಲ್ಲೆಯ ಈ ಎರಡು ಜನವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಭೀಕರ ಭೂಕುಸಿತ ಸಂಭವಿಸಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಈ ದುರಂತದ ನಂತರ, 298 ಜನರು ಸಾವನ್ನಪ್ಪಿದ್ದು, 231 ಶವಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ 223 ಮೃತದೇಹಗಳನ್ನು ಗುರುತಿಸಲಾಗಿದ್ದು, 32 ಜನರು ಕಾಣೆಯಾಗಿದ್ದಾರೆ ಮತ್ತು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದುರಂತದಲ್ಲಿ ಒಟ್ಟು 17 ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು 1,685 ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ. “ನಾಶಕ್ಕೆ ಒಳಗಾಗಿರುವುದರಲ್ಲಿ ಮನೆಗಳು, ಶಾಲೆಗಳು, ಗ್ರಾಮ ಕಚೇರಿಗಳು, ಔಷಧಾಲಯಗಳು, ಅಂಗನವಾಡಿಗಳು, ಅಂಗಡಿಗಳು, ಧಾರ್ಮಿಕ ಕೇಂದ್ರಗಳು ಮತ್ತು ಸರ್ಕಾರಿ ಕಟ್ಟಡಗಳು ಸೇರಿವೆ” ಎಂದು ಅವರು ಹೇಳಿದ್ದಾರೆ.
ವೆಲ್ಲರ್ಮಲ ಸರ್ಕಾರಿ ವೃತ್ತಿಪರ ಪ್ರೌಢಶಾಲೆ ಮತ್ತು ಮುಂದಕ್ಕೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭೂಕುಸಿತದಿಂದ ಸಂಪೂರ್ಣವಾಗಿ ನಾಶವಾಗಿವೆ ಎಂದು ಅವರು ಹೇಳಿದ್ದಾರೆ. “ಈ ಹಿಂದೆ 658 ವಿದ್ಯಾರ್ಥಿಗಳು ದಾಖಲಾಗಿದ್ದ ಈ ಎರಡು ಸಂಸ್ಥೆಗಳು ಈಗಲೂ ಶಾಶ್ವತ ಪುನರ್ವಸತಿಗಾಗಿ ಕಾಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಹಲವು ಸಂದರ್ಭಗಳ ಹಿನ್ನಲೆ, ವಯನಾಡ್ ಜಿಲ್ಲೆಗೆ ತೀವ್ರ ಬೆಂಬಲದ ಅಗತ್ಯವಿದೆ. ಅಲ್ಲಿನ ಜನರು ಧೈರ್ಯಶಾಲಿಗಳಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಣಾಯಕ ಆರ್ಥಿಕ ಮತ್ತು ಮೂಲಸೌಕರ್ಯ ಬೆಂಬಲವಿಲ್ಲದೆ ಅವರು ಈ ದುರಂತವನ್ನು ನಿವಾರಿಸುವುದು ಅಸಾಧ್ಯ. ದುರದೃಷ್ಟವಶಾತ್, ಪುನರ್ವಸತಿ ಪ್ರಕ್ರಿಯೆಯು ಆಮೆಗತಿಯಲ್ಲಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಭೀಕರ ದುರಂತದ ನಂತರ ಪ್ರಧಾನಿ ಮೋದಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹಾಗಾಗಿ ಕೇಂದ್ರ ಸರ್ಕಾರದಿಂದ ಗಣನೀಯ ಆರ್ಥಿಕ ನೆರವಿನ ನಿರೀಕ್ಷೆಯಿದೆ. ದುರದೃಷ್ಟವಶಾತ್, ಆ ನಿರೀಕ್ಷೆಗಳು ಈಡೇರಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಇದಲ್ಲದೆ, ಕೇಂದ್ರ ಸರ್ಕಾರವು ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿರಾಕರಿಸಿದ್ದು ಸಂತ್ರಸ್ತರಿಗೆ ಆಘಾತವನ್ನುಂಟು ಮಾಡಿತ್ತು. ಹಲವು ತಿಂಗಳುಗಳ ನಂತರ, ಕೇರಳದ ಸಂಸದರ ನಿರಂತರ ಒತ್ತಡದ ನಂತರ, ವಿಪತ್ತನ್ನು ‘ತೀವ್ರ ಪ್ರಕೃತಿ ವಿಕೋಪ’ ಎಂದು ಘೋಷಿಸುವುದು ಸರಿಯಾದ ದಿಕ್ಕಿನಲ್ಲಿರುವ ಹೆಜ್ಜೆಯಂತೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಈ ಅಸಮರ್ಪಕ ಮತ್ತು ಷರತ್ತುಬದ್ಧ ಪರಿಹಾರ ಪ್ಯಾಕೇಜ್ ಘೋಷಣೆಯು ಅತ್ಯಂತ ನಿರಾಶಾದಾಯಕವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಮೈಸೂರು ಚಲೋ’ ಮೆರವಣಿಗೆಗೆ ಹೈಕೋರ್ಟ್ ನಕಾರ : ಒಂದೂವರೆ ತಾಸು ಸಮಾವೇಶ ನಡೆಸಲು ಅನುಮತಿ
‘ಮೈಸೂರು ಚಲೋ’ ಮೆರವಣಿಗೆಗೆ ಹೈಕೋರ್ಟ್ ನಕಾರ : ಒಂದೂವರೆ ತಾಸು ಸಮಾವೇಶ ನಡೆಸಲು ಅನುಮತಿ

