ರಾಜಕೀಯ ಕಾರಣಕ್ಕಾಗಿ ವಯನಾಡು ಭೂಕುಸಿತದ ಸಂತ್ರಸ್ತರಿಗೆ ಕೇಂದ್ರ ಸರ್ಕಾರವು ನೆರವು ನಿರಾಕರಿಸುತ್ತಿದೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಶನಿವಾರ ಆರೋಪಿಸಿದ್ದು, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಸರ್ಕಾರವು ಯಾವುದೇ ತಾರತಮ್ಯ ಮಾಡಬಾರದು ಎಂದು ಪ್ರತಿಪಾದಿಸಿದ್ದಾರೆ. ವಯನಾಡ್ ದುರಂತಕ್ಕೆ
ಕೇಂದ್ರದ ತಾರತ್ಯಮ ನೀತಿಯನ್ನು ವಿರೋಧಿಸಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಕೇರಳದ ಸಂಸದರು ಶನಿವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಂತರ, ಭೂಕುಸಿತ ಪೀಡಿತ ವಯನಾಡ್‌ಗೆ ಕೇಂದ್ರದಿಂದ ಪರಿಹಾರ ಪ್ಯಾಕೇಜ್‌ಗೆ ಒತ್ತಾಯಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ವಯನಾಡ್ ದುರಂತಕ್ಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಜಸ್ಟೀಸ್ ಫಾರ್ ವಯನಾಡ್, ವಯನಾಡ್‌ಗೆ ಪರಿಹಾರ ಪ್ಯಾಕೇಜ್ ಒದಗಿಸಿ” ಎಂದು ಬರೆದಿರುವ ಬ್ಯಾನರ್ ಕೂಡ ಹಿಡಿದು ಮಕರ ದ್ವಾರದ ಮೆಟ್ಟಿಲುಗಳ ಮುಂದೆ ತಮ್ಮ ಪ್ರತಿಭಟನೆಯನ್ನು ನಡೆಸಿದ ಅವರು, “ವಯನಾಡಿಗೆ ನ್ಯಾಯ ನೀಡಿ” ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಸರ್ಕಾರವು ವಯನಾಡಿಗೆ ವಿಶೇಷ ಪ್ಯಾಕೇಜ್ ನೀಡಲು ನಿರಾಕರಿಸುತ್ತಿರುವುದು ನಮಗೆ ತುಂಬಾ ಬೇಸರ ತಂದಿದೆ. ಇದನ್ನು ತೀವ್ರ ಸ್ವರೂಪದ ವಿಪತ್ತು ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡುವಂತೆ ನಾವು ಗೃಹ ಸಚಿವರ ಬಳಿಗೆ ಹೋಗಿದ್ದೇವೆ. ನಾವು ಪ್ರಧಾನಿ ಮತ್ತು ಸಾಧ್ಯವಿರುವ ಎಲ್ಲರಿಗೂ ಪತ್ರ ಬರೆದಿದ್ದೇವೆ” ಎಂದು ಹೇಳಿದರು.
“ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಇದೇ ರೀತಿಯ ದೊಡ್ಡ ಪ್ರಮಾಣದ ವಿನಾಶ ಸಂಭವಿಸಿದೆ. ಅಲ್ಲಿಯೂ ಅವರು ಕೇಂದ್ರದ ನೆರವು ನೀಡಬೇಕೆಂದು ಅವರು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದಾರೆ. ವಯನಾಡಿನಲ್ಲಿ, ಇಡೀ ದೇಶವು ಜನರ ವಿನಾಶ, ಸಾವು ಮತ್ತು ನೋವನ್ನು ನೋಡಿದೆ. ಆದರೆ ರಾಜಕೀಯ ಕಾರಣಕ್ಕೆ, ಕೇಂದ್ರ ಸರ್ಕಾರವು ಇನ್ನೂ ಸಂತ್ರಸ್ತರಿಗೆ ನೀಡಬೇಕಾದುದನ್ನು ನೀಡಲು ನಿರಾಕರಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
“ಅವರು ಭಾರತದ ಪ್ರಜೆಗಳು, ನೈಸರ್ಗಿಕ ವಿಕೋಪಗಳ ಸಮಯದಲ್ಲಿ, ನೋವಿನ ಸಮಯದಲ್ಲಿ, ಯಾವುದೇ ರೀತಿಯ ಸಂಕಟದ ಸಮಯದಲ್ಲಿ ಯಾವುದೇ ತಾರತಮ್ಯ ಇರಬಾರದು. ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳು ಪ್ರತಿಯೊಬ್ಬ ಭಾರತೀಯ ನಾಗರಿಕನ ಪಾಲಕರಾಗಬೇಕು” ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಜುಲೈ 30 ರಂದು ಕೇರಳವನ್ನು ಅಪ್ಪಳಿಸಿದ ಈ ದುರಂತವು ಮೂರು ಗ್ರಾಮಗಳ ದೊಡ್ಡ ಭಾಗಗಳನ್ನು ನಾಶಪಡಿಸಿತ್ತು. ಪುಂಚಿರಿಮಟ್ಟಂ, ಚೂರಲ್ಮಲಾ ಮತ್ತು ಮುಂಡಕ್ಕೈ ಜೊತೆಗೆ ವಯನಾಡ್‌ನ ಅಟ್ಟಮಾಲಾ ಪ್ರದೇಶ ಕೂಡಾ ಹಾನಿಗೀಡಾಗಿವೆ. ಸರ್ಕಾರದ ಪ್ರಕಾರ, ದುರಂತದಲ್ಲಿ 231 ಜೀವಗಳು ಬಲಿಯಾಗಿವೆ.
ಇದನ್ನೂ ಓದಿ: ದೇಶದ ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ : ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ದೇಶದ ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ : ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ


