‘ಭೂಮಿ ಇದ್ದವರು ಮಾತ್ರ ಹೋರಾಡುವುದಲ್ಲ. ಭೂಮಿ ಇಲ್ಲದವರೂ ಕೂಡ ಈ ಹೋರಾಟದಲ್ಲಿ ಭಾಗವಹಿಸಬೇಕು. ಹಸಿವಾದಾಗ ರೊಟ್ಟಿಯನ್ನೇ ತಿನ್ನುತ್ತೇವೆ ವಿನಃ ಜಿಯೋ ಸಿಮ್ ನಲ್ಲ’ ಎಂದು ರೈತ ಹೋರಾಟದ ಮಹತ್ವವನ್ನು ತಮ್ಮದೇ ಮಾತುಗಳಲ್ಲಿ ವಿವರಿಸಿದ್ದಾರೆ ಯುವಕ ಸಿಮರ್ ಬಲ್ ಸಿಂಗ್.
ದೆಹಲಿಯ ಸಿಂಘು ಬಾರ್ಡರ್‌ನಲ್ಲಿ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸಿಮರ್ ವೃತ್ತಿಯಲ್ಲಿ ಸಂಗೀತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ
ರೈತ ಪರ ಜನರ ಘೋಷಣೆಗಳಿಗೆ ಅಕ್ಷರವಾಗಿದ್ದಾರೆ ಸಿಮರ್
ಸಿಂಘು ಗಡಿಯಲ್ಲಿ ಒಂದು ಪುಟ್ಟ ಟೇಬಲ್ ಇಟ್ಟುಕೊಂಡು ಹೋಗಿ ಬರುವ ಆಸಕ್ತರು ರೈತ ಹೋರಾಟದ ಕುರಿತು ಏನನ್ನಾದರೂ ಹೇಳಿದರೆ ಬರೆದುಕೊಡುವ ಅವರು ರೈತರ ಪರವಾಗಿ ಹೋರಾಟಗಾರರು ಹೇಳುವ ಘೋಷಣೆ, ಮಾತುಗಳನ್ನು ಪ್ಲಕಾರ್ಡ್‌ನಲ್ಲಿ ಬರೆದುಕೊಡುತ್ತಾರೆ. ಪಂಜಾಬಿ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಪ್ಲಕಾರ್ಡ್ಸ್ ಬರೆಯುವ ಇವರು ಈವರೆಗೂ ದಿನಕ್ಕೆ 300-400 ಪ್ಲಕಾರ್ಡ್‌ಗಳನ್ನು ಬರೆಯುತ್ತಿದ್ದರು. ಹೆಚ್ಚುತ್ತಿರುವ ಹೋರಾಟಗಾರರ ಸಂಖ್ಯೆಯಂತೆ ಪ್ಲಕಾರ್ಡ್ಸ್ ಬರೆಯುವ ಸಂಖ್ಯೆಯು ಹೆಚ್ಚಾಗಿದ್ದು ಸಧ್ಯ ದಿನಕ್ಕೆ 400-500 ಪ್ಲಕಾರ್ಡ್ಸ್ ಬರೆಯುತ್ತಿದ್ದಾರೆ.
‘ನನ್ನ ಚಿಕ್ಕಪ್ಪ ಕೃಷಿಯನ್ನೇ ನಂಬಿ ಬದುಕಿರುವವರು. ನಮ್ಮ ಹತ್ತಿರ ಜಮೀನಿಲ್ಲ. ಹಾಗಂತ ಈ ಹೋರಾಟದಲ್ಲಿ ಭಾಗವಹಿಸಿದೆ ಇರಲು ಸಾಧ್ಯವಿಲ್ಲ. ನಾವೆಲ್ಲರೂ ತಿನ್ನುವ ಅನ್ನದ ಋಣ ತೀರಿಸಲು ಈ ಹೋರಾಟದಲ್ಲಿ ಭಾಗವಹಿಸಬೇಕು’ ಎನ್ನುತ್ತಾರೆ ಸಿಮರ್ ಬಲ್ ಸಿಂಗ್.
ಇದನ್ನೂ ಓದಿ: ಎಂಎಸ್‌ಪಿ ಕೊಡಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಒಡೆಯುವ ಸಮಯವಿದು: ಯೋಗೇಂದ್ರ ಯಾದವ್
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ
ರಾಜ್ಯದಲ್ಲಿ ಟ್ರ್ಯಾಕ್ಟರ್ ಪರೇಡ್: ಬೆಳಗಾವಿ ರೈತರಿಗೆ ಆರ್‌ಟಿಒ, ಪೊಲೀಸರಿಂದ ವಾಹನ ಜಪ್ತಿ ಬೆದರಿಕೆ


