ಶಿವಮೊಗ್ಗ ಕ್ಷೇತ್ರದಲ್ಲಿ 50 ಸಾವಿರದಿಂದ 55 ಸಾವಿರ ಮುಸ್ಲಿಂ ಮತದಾರರಿದ್ದಾರೆ ಎಂದು ಹೇಳುತ್ತಾರೆ. ನಮಗೆ ಒಂದೇ ಒಂದು ಮುಸ್ಲಿಂ ಮತವೂ ಬೇಕಾಗಿಲ್ಲ ಎಂದು ನೇರವಾಗಿ ಹೇಳುತ್ತಿದ್ದೇನೆ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಸಂಜೆ ನಡೆದ ವೀರಶೈವ-ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, “ಜಾತಿ ವಿಚಾರಗಳನ್ನು ಎತ್ತಿ, ಅದರಲ್ಲಿಯೂ ಉಪ ಜಾತಿಗಳನ್ನು ತೆಗೆದು ಚುನಾವಣೆ ಮಾಡುವವರಿಗೆ ಸ್ಪಷ್ಟವಾಗಿ ನಾವು ಈ ಸಮಾಜದಲ್ಲಿ ಒಟ್ಟಾಗಿದ್ದೇನೆ. ದಯವಿಟ್ಟು ನಮ್ಮನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಬೇಕು ಎಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಮುಸ್ಲಿಮರ ಮತ ಬೇಕಿಲ್ಲ, ರಾಷ್ಟ್ರವಾದಿ ಮುಸ್ಲಿಮರು ಕೇಸರಿ ಪಕ್ಷಕ್ಕೆ ಮತ ಹಾಕುತ್ತಾರೆ. ಜನರು ಕೇವಲ ಅಭಿವೃದ್ಧಿ ವಿಚಾರದಲ್ಲಿ ಚಕಾರ ಎತ್ತದೇ ಮತಾಂತರದ ಬಗ್ಗೆ ಕೂಡ ಚಿಂತಿಸಬೇಕು ಎಂದು ಅವರು ಹೇಳಿದ್ದಾರೆ.
ಮುಸ್ಲಿಮರಿಗೆ ಆರೋಗ್ಯ ಅಥವಾ ಶೈಕ್ಷಣಿಕ ಸಮಸ್ಯೆಗಳಿದ್ದಾಗ ನಾವು ಅವರಿಗೆ ಹೆಚ್ಚಿನ ಸಹಾಯ ಮಾಡಿದ್ದರಿಂದ ನಮಗೆ ಮುಸ್ಲಿಂ ಮತಗಳ ಅಗತ್ಯವಿಲ್ಲ ಮತ್ತು ಬಿಜೆಪಿ ಮೇಲೆ ನಿಜವಾದ ಪ್ರೀತಿ ಇರುವ ಮುಸ್ಲಿಮರು ನಮಗೆ ಮತ ಹಾಕುತ್ತಾರೆ. ಪ್ರತಿಪಕ್ಷಗಳು ಮುಸ್ಲಿಂ ಮತ ಪಡೆಯಲು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಿವೆ. ಹಿಂದೂಗಳನ್ನು ಕೀಳು ಮತ್ತು ಮುಸ್ಲಿಮರನ್ನು ಮೇಲುಗೈ ಮಾಡಲು ನಾವು ಬಿಡುವುದಿಲ್ಲ. ಕೆಲವು ರಾಷ್ಟ್ರೀಯವಾದಿ ಮುಸ್ಲಿಮರು ಖಂಡಿತವಾಗಿಯೂ ಬಿಜೆಪಿಗೆ ಮತ ಹಾಕುತ್ತಾರೆ. ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುವ ದೇಶವಿರೋಧಿಗಳು ಹೀಗೆಯೇ ಮುಂದುವರಿಯಲಿ. ಜಾತಿಯ ಹೆಸರಿನಲ್ಲಿ ಹಿಂದೂಗಳನ್ನು ವಿಭಜಿಸುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ ಎಂದರು.
*We don't even need a single #Muslim #vote* #BJP leader KS Eeshwarappa. *When it comes to caste. We should stay united. Please don't try to break us. They say there are around 50-55 thousand Muslim votes here. We don't even want a single vote 4m them.* #Karnataka pic.twitter.com/3E4PaXJkF9
— Imran Khan (@KeypadGuerilla) April 25, 2023
ಇದನ್ನೂ ಓದಿ: ಕೆ.ಎಸ್ ಈಶ್ವರಪ್ಪನವರ ವಿವಾದಾತ್ಮಕ ಹೇಳಿಕೆಗಳು ಹೊಸದೇನಲ್ಲ: ಇಲ್ಲಿವೆ ಸಾಲು ಸಾಲು ಪ್ರಕರಣಗಳು



Nimage Muslim otu hagu dalita hindulidavara otu beda EVM iruvaga baya yake