“ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರವೂ ಮತದಾನವನ್ನು ಮುಂದೂಡಲು, ರದ್ದುಗೊಳಿಸಲು ಅಥವಾ ದಿನಾಂಕ ಮರು ನಿಗದಿಗೊಳಿಸಲು ಆಯೋಗಕ್ಕೆ ಅಧಿಕಾರವಿದೆ” ಎಂದು ಆಂಧ್ರ ಪ್ರದೇಶದ ರಾಜ್ಯ ಚುನಾವಣಾ ಆಯುಕ್ತ (SEC) ನಿಮ್ಮಾಗಡ್ಡ ರಮೇಶ್ ಕುಮಾರ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಈ ಹಿಂದೆ ಹೈಕೋರ್ಟ್ ZPTC ಮತ್ತು MPTC ಚುನಾವಣೆಗೆ ಸಲ್ಲಿಸಿದ ಒಂದೇ ರೀತಿಯ ನಾಮಪತ್ರಗಳ ಬಗ್ಗೆ ವಿಚಾರಣೆ ನಡೆಸದಂತೆ ಆಯೋಗಕ್ಕೆ ಆದೇಶಿಸಿತ್ತು. ಅಲ್ಲಿ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳಿಗೆ ಫಾರ್ಮ್-10 ಅನ್ನು ನೀಡಿದ್ದರು. ಚುನಾವಣಾ ನ್ಯಾಯಮಂಡಳಿಯು ನೋಡಿಕೊಳ್ಳಬೇಕಾದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದ ರಿಟ್‌ಗಳನ್ನು ವಿಚಾರಣೆ ನಡೆಸಿದ ನಂತರ ಹೈಕೋರ್ಟ್ ಈ ಆದೇಶಗಳನ್ನು ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ವಿವರವಾದ ಪ್ರತಿಕ್ರಿಯೆ ಸಲ್ಲಿಸಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಮಗೆ ಬಂದ ದೂರುಗಳ ಆಧಾರದ ಮೇಲೆ ಅಧಿಕಾರಿಗಳಿಂದ ವರದಿ ಪಡೆದ ನಂತರ ಇಂತಹ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಯೋಗ ಹೊಂದಿದೆ. ಆಯೋಗವು ತನ್ನ ಅಧಿಕಾರವನ್ನು ನ್ಯಾಯಯುತ ಮತ್ತು ಮುಕ್ತವಾಗಿ ಬಳಸಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೌರಿ ಕಾರ್ನರ್; ಅಪ್ಪ: ‘ನಾನು ಚಿಕ್ಕವಳಾಗಿದ್ದಾಗ ಅಪ್ಪನನ್ನು ‘owl’ ಎಂದು ಕರೆಯುತ್ತಿದ್ದೆ’
ಇಂತಹ ವಿಷಯಗಳ ಬಗ್ಗೆ ಗಮನಹರಿಸಲು ರಮೇಶ್ ಕುಮಾರ್ ಆಯೋಗದ ಪರವಾಗಿ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಚುನಾವಣೆಯನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಅಧಿಕಾರ SEC ಗೆ ಇದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ: 3 ರೈಲು ಬಾಡಿಗೆಗೆ ಪಡೆದು ಪ್ರಧಾನಿಯ ರ್‍ಯಾಲಿಗೆ ಜನ ಸೇರಿಸಿದ ಬಿಜೆಪಿ!


