‘ಯಾರನ್ನೂ ಹೆದರಿಸಬೇಡಿ ಮತ್ತು ಯಾವುದಕ್ಕೂ ಹೆದರಬೇಡಿ ಎಂದು ಪ್ರತಿಯೊಂದು ಧರ್ಮವೂ ನಮಗೆ ಕಲಿಸುತ್ತದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ‘ಪ್ರತಿ ಧರ್ಮವೂ ಸಹ ಸತ್ಯದ ಜೊತೆಗೆ ನಿಲ್ಲುವ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವ ಪಾಠವನ್ನು ನೀಡುತ್ತದೆ’ ಎಂದು ಅವರು ಲೋಕಸಭೆಯಲ್ಲಿ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧದ ತಮ್ಮ ಬೆಂಕಿಯುಗುಳುವ ಭಾಷಣದ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಪ್ರತಿ ಧರ್ಮವು ಕಲಿಸುತ್ತದೆ.. ಯಾರನ್ನೂ ಹೆದರಿಸಬೇಡಿ ಮತ್ತು ಯಾವುದಕ್ಕೂ ಹೆದರಬೇಡಿ. ಸತ್ಯದ ಜೊತೆಗೆ ನಿಲ್ಲಿರಿ, ಹಿಂದೆ ಸರಿಯಬೇಡಿ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ. ಯಾವಾಗ ಬಿಜೆಪಿ ದೇಶದಲ್ಲಿ ಭಯವನ್ನು ಹರಡುತ್ತದೆ, ಇಂಡಿಯಾ ಒಕ್ಕೂಟವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಈ ಚಿಂತನೆಯನ್ನು ಅಳವಡಿಸಿಕೊಂಡಿದೆ” ಎಂದಿದ್ದಾರೆ.
ಸೋಮವಾರದ ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಮಾಡಿದ ಚೊಚ್ಚಲ ಭಾಷಣವು ಬಿಜೆಪಿ ನಾಯಕರು “ಸುಳ್ಳು ಮಾತನಾಡುತ್ತಿದ್ದಾರೆ, ಸದನವನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ” ಎಂದು ಆರೋಪಿಸುವುದರೊಂದಿಗೆ ರಾಜಕೀಯ ಬಿಸಿಯನ್ನು ಸೃಷ್ಟಿಸಿತು.
ಲೋಕಸಭೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಭಜನಾಕಾರಿ’ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ಸದಸ್ಯರು ಪದೇಪದೆ ಆಕ್ಷೇಪ ವ್ಯಕ್ತಪಡಿಸುವ ವಾತಾವರಣ ರಾಜ್ಯಸಭೆಯಲ್ಲೂ ವ್ಯಕ್ತವಾಯಿತು.
हर धर्म सिखाता है – डरो मत, डराओ मत।
सत्य के साथ खड़ा होना चाहिए, उससे पीछे नहीं हटना चाहिए, और अहिंसा के रास्ते पर चलना चाहिए।
जब भाजपा ने देश में भय फैलाया, संविधान और लोकतंत्र की रक्षा के लिए INDIA ने इसी सोच को अपनाया। pic.twitter.com/SyPBkJHUMy
— Rahul Gandhi (@RahulGandhi) July 1, 2024
ಉಭಯ ಸದನಗಳು ಅಧ್ಯಕ್ಷರ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲೆ ಚರ್ಚೆಯನ್ನು ಕೈಗೆತ್ತಿಕೊಂಡವು, ಪ್ರಧಾನಿ ಮೋದಿ ತಮ್ಮ ಭಾಷಣದ ಸಮಯದಲ್ಲಿ ರಾಹುಲ್ ಗಾಂಧಿಯವರ ‘ಮೋದಿ ವಿರುದ್ಧ’ದ ಹೇಳಿಕೆಯನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಲು ಯತ್ನಿಸಿದರು.
ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಬಹಳ ಗಂಭೀರವಾದ ವಿಷಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಲು ಬಿಜೆಪಿ ನಂತರ ಪತ್ರಿಕಾಗೋಷ್ಠಿ ನಡೆಸಿದರೆ, ಕೇಂದ್ರದ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಂಜೆ ಪತ್ರಿಕಾಗೋಷ್ಠಿಯನ್ನು ನಡೆಸಿತು.
ಲೋಕಸಭೆ ಪ್ರಚಾರ, ನೀಟ್-ಯುಜಿ ವಿವಾದ, ಅಗ್ನಿವೀರ್ ಸ್ಕೀಮ್ ಕುರಿತಂತೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಬಹುಮುಖ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಅಗ್ನಿವೀರ್ ಯೋಜನೆ ಬಗ್ಗೆ ಬಿಜೆಪಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡರು ಮತ್ತು ಅಗ್ನಿವೀರ್ ಅವರನ್ನು ‘ಜವಾನ್’ ಎಂದು ಕರೆಯುವುದಿಲ್ಲ ಮತ್ತು ನಾಲ್ಕು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವ ಅಗ್ನಿವೀರರನ್ನು ಕರೆಯುವುದಿಲ್ಲ ಎಂದು ಹೇಳಿದರು.
“ಒಬ್ಬ ಅಗ್ನಿವೀರ್ ನೆಲಬಾಂಬ್ ಸ್ಫೋಟದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಆದರೆ ಅವನನ್ನು ‘ಹುತಾತ್ಮ’ ಎಂದು ಕರೆಯಲಾಗುವುದಿಲ್ಲ… ‘ಅಗ್ನಿವೀರ್’ ಒಂದು ಯೂಸ್ ಅಂಡ್ ಥ್ರೋ ಕಾರ್ಮಿಕ ಯೋಜನೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಯೋಜನೆ ಬಗ್ಗೆ ವಾಗ್ದಾಳಿ ನಡೆಸಿದರು.
ನಿರ್ಭಯತೆ, ಭರವಸೆ ಮತ್ತು ಸುರಕ್ಷತೆಯನ್ನು ಸೂಚಿಸುವ ಹಿಂದೂ ಚಿಹ್ನೆ ‘ಅಭಯಮುದ್ರ’ವನ್ನು ಅವರು ಕಾಂಗ್ರೆಸ್ ಪಕ್ಷದ ಚಿಹ್ನೆ ಎಂದು ಕರೆದರು.
“ಅಭಯಮುದ್ರವು ಕಾಂಗ್ರೆಸ್‌ನ ಸಂಕೇತವಾಗಿದೆ… ಅಭಯಮುದ್ರವು ನಿರ್ಭಯತೆಯ ಸಂಕೇತವಾಗಿದೆ, ಇದು ಭಯವನ್ನು ಹೋಗಲಾಡಿಸುತ್ತದೆ ಮತ್ತು ಹಿಂದೂ ಧರ್ಮ, ಇಸ್ಲಾಂ, ಸಿಖ್ ಧರ್ಮ, ಬೌದ್ಧ ಧರ್ಮ ಮತ್ತು ಇತರ ಭಾರತೀಯ ಧರ್ಮಗಳಲ್ಲಿ ದೈವಿಕ ರಕ್ಷಣೆ ಮತ್ತು ಆನಂದವನ್ನು ನೀಡುವ ಭರವಸೆ ಮತ್ತು ಸುರಕ್ಷತೆಯ ಸೂಚಕವಾಗಿದೆ. ನಮ್ಮ ಎಲ್ಲ ಮಹಾಪುರುಷರು ಅಹಿಂಸೆ ಮತ್ತು ಭಯವನ್ನು ಮುಗಿಸುವ ಬಗ್ಗೆ ಮಾತನಾಡಿದ್ದಾರೆ… ಆದರೆ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ… ನೀವು ಹಿಂದೂ ಅಲ್ಲವೇಅಲ್ಲ” ಎಂದು ಕಾಂಗ್ರೆಸ್ ನಾಯಕ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಸಂಸತ್ ಅಧಿವೇಶನ : ರಾಹುಲ್ ಗಾಂಧಿಯ ಹೇಳಿಕೆಯನ್ನು ತಿರುಚಿ ಹಂಚಿಕೊಂಡ ಬಿಜೆಪಿಗರು


