ಇಸ್ರೇಲ್ ಅನ್ನು ರಕ್ಷಿಸಲು ಪ್ರಯತ್ನಿಸುವ ದೇಶಗಳ ಪ್ರಾದೇಶಿಕ ನೆಲೆಗಳನ್ನು ಇರಾನ್ ಗುರಿಯಾಗಿಸುತ್ತದೆ ಎಂದು ಇರಾನಿನ ಅಧಿಕಾರಿಯೊಬ್ಬರು ಹೇಳಿರುವುದಾಗಿ ಅಮೆರಿಕದ ಮಾಧ್ಯಮ ಸಿಎನ್‌ಎನ್ ಅನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಈ ಮೂಲಕ, ಇಸ್ರೇಲ್ ಅನ್ನು ರಕ್ಷಿಸಲು ಮುಂದಾಗುವ ರಾಷ್ಟ್ರಗಳಿಗೆ ಇರಾನ್ ಶುಕ್ರವಾರ ತೀಕ್ಷ್ಣ ಎಚ್ಚರಿಕೆ ನೀಡಿದೆ. ಇಸ್ರೇಲ್ ರಕ್ಷಿಸುವ
ಇಸ್ರೇಲ್‌ಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಇರಾನ್ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾಯ್ದಿರಿಸಿದೆ ಎಂದು ಇರಾನ್‌ನ ಅಧಿಕಾರಿ ಹೇಳಿದ್ದು, “ಇರಾನ್‌ನ ಕಾರ್ಯಾಚರಣೆಗಳ ವಿರುದ್ಧ ಇಸ್ರೇಲ್‌ನ ಆಡಳಿತವನ್ನು ರಕ್ಷಿಸಲು ಪ್ರಯತ್ನಿಸುವ ಯಾವುದೇ ದೇಶವು ಪ್ರತಿಯಾಗಿ, ಅದರ ಪ್ರಾದೇಶಿಕ ನೆಲೆಗಳು ಮತ್ತು ಸ್ಥಾನಗಳು ಹೊಸ ಗುರಿಗಳಾಗುತ್ತವೆ” ಎಂದು ಅಧಿಕಾರಿ ಹೇಳಿದ್ದಾರೆ.
ಇಸ್ರೇಲ್ ತನ್ನ “ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ಮಿಲಿಟರಿ ಕಾರ್ಯಾಚರಣೆ” ಎಂದು ಕರೆದ “ಆಪರೇಷನ್ ರೈಸಿಂಗ್ ಲಯನ್” ಇರಾನ್‌ನ ಪರಮಾಣು ಮತ್ತು ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪ್ರಾರಂಭಿಸಿದ ನಂತರ ಇರಾನ್ ಈ ಘೋಷಣೆ ಮಾಡಿದೆ. ಇಸ್ರೇಲ್‌ನ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆ ರಾಜಧಾನಿ ಟೆಲ್ ಅವೀವ್ ಸೇರಿದಂತೆ ಮಧ್ಯ ಇಸ್ರೇಲಿ ನಗರಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿತು.
ಇರಾನ್ ದಾಳಿಯ ನಂತರ ದೇಶಾದ್ಯಂತ ವಾಯುದಾಳಿಯ ಸೈರನ್‌ಗಳು ಮೊಳಗುತ್ತಿದ್ದಂತೆ ಸ್ಫೋಟಗಳು ನಡೆದಿವೆ. ಇಸ್ರೇಲಿ ಸೇನೆಯು ಅನೇಕ ಕ್ಷಿಪಣಿಗಳನ್ನು ತಡೆಹಿಡಿದಿರುವುದಾಗಿ ಹೇಳಿಕೊಂಡರೂ, ಕೆಲವು ಪರಿಣಾಮ ಬೀರಿವೆ ಎಂದು ಅದು ಒಪ್ಪಿಕೊಂಡಿದೆ.
ಅದೇ ನಿಲುವನ್ನು ಪ್ರತಿಧ್ವನಿಸಿರುವ ಇರಾನ್‌ನ ಮಿಲಿಟರಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, “ಎರಡು ವರ್ಷಗಳ ಪ್ಯಾಲೆಸ್ತೀನಿ ಹತ್ಯಾಕಾಂಡಗಳು ಮತ್ತು ನಿನ್ನೆ ರಾತ್ರಿ ಇರಾನ್ ಮೇಲಿನ ದಾಳಿಯ ಸಮಯದಲ್ಲಿ ನೀವು ಮೌನವಾಗಿದ್ದರೆ, ಈಗ ಸಂಯಮಕ್ಕೆ ಕರೆ ನೀಡಬೇಡಿ. ಸುಮ್ಮನಿರಿ.” ಎಂದು ಹೇಳಿದೆ.
If you were silent during two years of Palestinian massacres and last night’s attack on Iran, don’t call for restraint now. Stay quiet.
— Iran Military (@IRIran_Military) June 14, 2025
ಆಪರೇಷನ್ ರೈಸಿಂಗ್ ಲಯನ್ ಮೂಲಕ ಇಸ್ರೇಲ್ ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು, ಪರಮಾಣು ಕೇಂದ್ರಗಳು ಮತ್ತು ಮಿಲಿಟರಿ ಕಮಾಂಡ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿತ್ತು. ಇರಾನಿನ ವರದಿಗಳ ಪ್ರಕಾರ, ಹಲವಾರು ಉನ್ನತ ಶ್ರೇಣಿಯ ಪರಮಾಣು ವಿಜ್ಞಾನಿಗಳು ಮತ್ತು ಉನ್ನತ ಮಿಲಿಟರಿ ಕಮಾಂಡರ್‌ಗಳು ಕೊಲ್ಲಲ್ಪಟ್ಟರು.
ದಾಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶನಿವಾರದಂದು ಉಗ್ರ ಭಾಷಣದೊಂದಿಗೆ ಪ್ರತಿಕ್ರಿಯಿಸಿದ್ದು, “ಅವರು ಮಾಡಿರುವ ಈ ಭಾರಿ ತಪ್ಪಿನ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ನಾವು ಅವರಿಗೆ ಅವಕಾಶ ನೀಡುವುದಿಲ್ಲ” ಎಂದು ಅವರು ಸಾರ್ವಜನಿಕರಿಗೆ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ.
VIDEO | Iran’s Supreme Leader Ayatollah Ali Khamenei promised retaliation for the Israeli strikes in a recorded address to the country, coinciding with Iranian missiles being launched towards Israel. Khamenei stated that the military was ready to respond.
“Do not assume that… pic.twitter.com/LM8N0NFL5O
— Press Trust of India (@PTI_News) June 14, 2025
“ಅವರು ದಾಳಿ ಮಾಡಿದರು ಮತ್ತು ಅದು ಮುಗಿದಿದೆ ಎಂದು ಭಾವಿಸಬೇಡಿ. ಇಲ್ಲ, ಅವರು ಕ್ರಮಗಳನ್ನು ಪ್ರಾರಂಭಿಸಿದರು ಮತ್ತು ಸಂಘರ್ಷವನ್ನು ಪ್ರಾರಂಭಿಸಿದರು” ಎಂದು ಅವರು ಹೇಳಿದ್ದು, ಇರಾನ್‌ನ ಮಿಲಿಟರಿ ಪ್ರತಿಕ್ರಿಯಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದರು. ಇಸ್ರೇಲ್ ರಕ್ಷಿಸುವ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇಸ್ರೇಲ್ ಮೇಲೆ ಇರಾನ್ ದಾಳಿ | ಶ್ಲಾಘಿಸಿದ ಪ್ಯಾಲೆಸ್ತೀನ್ ಹೋರಾಟಗಾರರ ಪಡೆ ಹಮಾಸ್
ಇಸ್ರೇಲ್ ಮೇಲೆ ಇರಾನ್ ದಾಳಿ | ಶ್ಲಾಘಿಸಿದ ಪ್ಯಾಲೆಸ್ತೀನ್ ಹೋರಾಟಗಾರರ ಪಡೆ ಹಮಾಸ್

