ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಬಂಗಾಗದ ಕಾಳಿಯಗಂಜ್ ಕ್ಷೆತ್ರದಲ್ಲಿ ಟಿಎಂಸಿಯ ತಪನ್ ದೇವ್ ಸಿಂಗಾರವರು ಜಯಗಳಿಸಿದ್ದಾರೆ. ಈ ಕ್ಷೇತ್ರವನ್ನು ಮೊದಲು ಕಾಂಗ್ರೆಸ್ ಪ್ರತಿನಿಧಿಸುತ್ತಿತ್ತು.
ಉಳಿದ ಇನ್ನೆರಡು ಕ್ಷೇತ್ರಗಳಲ್ಲಿಯೂ ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವೇ ಮುನ್ನಡೆ ಕಾಯ್ದುಕೊಂಡಿದೆ. ಕರೀಂಪುರ್ ನಲ್ಲಿ ಟಿಎಂಸಿ 25 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದರೆ ಖರಗ್‌ಪುರ್ ಸದರ್‌ನಲ್ಲಿ 17ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಟಿಎಂಸಿ ಕಾಯ್ದುಕೊಂಡಿದ್ದು ಅಲ್ಲಿಯೂ ಸಹ ಗೆಲುವಿನ ಸನಿಹದಲ್ಲಿದೆ.
ಬಂಗಾಳದ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿಯೂ ಟಿಎಂಸಿ, ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದೊಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವು. ಈಗ ಆ ಮೂರು ಕ್ಷೇತ್ರಗಳು ಟಿಎಂಸಿ ಪಾಲಾಗಲಿವೆ.
ಇನ್ನೊಂದೆಡೆ ಉತ್ತರಖಂಡ ರಾಜ್ಯದ ಪಿತ್ರೋಘರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಸಹ ನಡೆದಯುತ್ತಿದ್ದು ಬಿಜೆಪಿಯು 2500 ಮತಗಳಿಂದ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.



ವಿದಾನ ಸಬೆ/ಲೋ.ಸಬೆ