Homeಮುಖಪುಟ‘ದೀದಿ, ಬಂಗಾಳ ಮುಗೀತು, ವಾರಣಾಸಿಗೆ ಬನ್ನಿ’: ಮಮತಾ ವಿರುದ್ಧ ಪ್ರಧಾನಿಯ ಕೊಂಕು

‘ದೀದಿ, ಬಂಗಾಳ ಮುಗೀತು, ವಾರಣಾಸಿಗೆ ಬನ್ನಿ’: ಮಮತಾ ವಿರುದ್ಧ ಪ್ರಧಾನಿಯ ಕೊಂಕು

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪದೇ ಪದೇ ಎತ್ತುತ್ತಿರುವ ‘ಹೊರಗಿನವರು’ ಎಂಬ ಪ್ರಶ್ನೆಗೆ ಉತ್ತರ ಎಂಬಂತೆ, ‘ದೀದಿ ಈಗ ಬಂಗಾಳದಲ್ಲಿ ನಿಮ್ಮ ಅಧ್ಯಾಯ ಮುಗಿಯಿತು. ವಾರಣಾಸಿಗೆ ಸ್ವಾಗತ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ವ್ಯಂಗ್ಯ ಮಾಡಿದ್ದಾರೆ.

‘ಹೊರಗಿನವರಿಂದ (ಮೋದಿ-ಶಾ) ಬಂಗಾಳದ ಸಂಸ್ಕೃತಿ ನಾಶವಾಗಲಿದೆ’ ಎಂದು ಟಿಎಂಸಿ ಎಚ್ಚರಿಸುತ್ತ ಬಂದಿತ್ತು. ‘ನಂದಿಗ್ರಾಮದಲ್ಲಿ ಗೆಲುವಿನ ಅಭದ್ರತೆಯಿರುವ ಕಾರಣ ದೀದಿ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವರೆ?’ ಎಂಬ ಮೋದಿಯವರ ಮಾತಿಗೆ ಉತ್ತರಿಸಿದ ಟಿಎಂಸಿ, ‘ದಿದಿ ಮುಂದಿನ ಸಲ ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ’ ಎಂದು ಪ್ರತ್ಯುತ್ತರ ನೀಡಿತ್ತು. (ವಾರಣಾಸಿ ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ಸಂಸತ್ ಕ್ಷೇತ್ರ)

ಶನಿವಾರ ಉತ್ತರ 24 ಪರಗಣಗಳಲ್ಲಿ ನಡೆದ ರ‍್ಯಾಲಿಯಲ್ಲಿಯೂ ಸಹ, ಮಮತಾ ಬ್ಯಾನರ್ಜಿ, ಅವರ ಪಕ್ಷ ಬಿಜೆಪಿಗೆ ‘ಹೊರಗಿನವರು’ ಎಂದು ಹಣೆಪಟ್ಟಿ ಕಟ್ಟಿರುವ ವಿಷಯದ ಸುತ್ತಲೇ ಮಾತನಾಡಿ, “ಬಿಜೆಪಿ ಬಂಗಾಳವನ್ನು ವಿಭಜಿಸಲು ಬಯಸಿದೆ… ಈ ಜನರು ಬಂಗಾಳ, ಅದರ ಭಾಷೆ, ಸಂಸ್ಕೃತಿಯನ್ನು ಕೊನೆಗೊಳಿಸಲು ಬಯಸುತ್ತಾರೆ” ಎಂದರು. ಗಾಲಿಕುರ್ಚಿಯಲ್ಲಿ ಪ್ಲಾಸ್ಟರ್ ಹಾಕಿದ ಪಾದವನ್ನು ಇಟ್ಟುಕೊಂಡು ಮಾತನ್ನಾಡಿದ ಅವರು, ‘ಎಲ್ಲಾ ಅಲ್ಪಸಂಖ್ಯಾತ ಸಹೋದರ ಸಹೋದರಿಯರೇ ಮತ ವಿಭಜನೆ ಆಗದಂತೆ ನೋಡಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ’ ಎಂದರು.

ಮಮತಾರ ರ‍್ಯಾಲಿ ಸ್ಥಳದಿಂದ 60 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ, “ದೀದಿ ಈಗ ಹೊರಗೆ ಒಂದು ಸ್ಥಳವನ್ನು ಹುಡುಕುತ್ತಿದ್ದಾರೆ. ವಾರಣಾಸಿಗೆ ಸುಸ್ವಾಗತ. ಹಲ್ಡಿಯಾದಿಂದ ವಾರಣಾಸಿಗೆ ಹೋಗುವ ಹಡಗು ಇದೆ. ಇನ್ನೊಂದು ವಿಷಯ, ಜನರು ನನ್ನ ಬನಾರಸ್ (ವಾರಣಾಸಿ) ಜನರು ತುಂಬಾ ದೊಡ್ಡ ಹೃದಯದವರು, ಅವರು ನಿಮ್ಮನ್ನು ಪ್ರವಾಸಿ ಅಥವಾ ಹೊರಗಿನವರು ಎಂದು ಕರೆಯುವುದಿಲ್ಲ. ಅವರು ಬಂಗಾಳದ ಜನರಂತೆ ದೊಡ್ಡ ಹೃದಯದವರು” ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.

“ವಾರಣಾಸಿಯಲ್ಲಿ ಜೈ ಶ್ರೀ ರಾಮ್ ಎಂದು ಹೇಳುವ ತಿಲಕ ಹೊಂದಿರುವ ಬಹಳಷ್ಟು ಜನರನ್ನು ಕಾಣುತ್ತೀರಿ. ದೀದಿ, ಆಗ ನಿಮಗೆ ಏನಾಗುತ್ತದೆ? ನೀವು ಯಾರ ಮೇಲೆ ಕೋಪಗೊಳ್ಳುತ್ತೀರಿ? ಬನಾರಸ್ ಜನರ ಮೇಲೆ ಕೋಪಗೊಳ್ಳಬೇಡಿ. ಅವರು ನಿಮ್ಮೊಂದಿಗೆ ವಾಸಿಸುತ್ತಾರೆ. ಅವರು ನಿಮ್ಮನ್ನು ದೆಹಲಿಗೆ ಹೋಗಲು ಬಿಡುವುದಿಲ್ಲ. ಅವರು ನಿಮ್ಮನ್ನು ಅಲ್ಲಿಯೇ ಇಟ್ಟುಕೊಳ್ಳುತಾರೆ’ ಎಂದು ಪ್ರಧಾನಿ ಹೇಳಿದರು.

2014 ಮತ್ತು 2019 ರಲ್ಲಿ ವಾರಣಾಸಿಯಿಂದ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಿಎಂ ಮೋದಿ ಜಯ ಗಳಿಸಿದ್ದಾರೆ.

ಮೇ 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಬಂಗಾಳದ ಪಟ್ಟಣವೊಂದಕ್ಕೆ ಮಮತಾ ಬ್ಯಾನರ್ಜಿ ಹೋದಾಗ ರಸ್ತೆ ಬದಿ ನಿಂತ ನೂರಾರು ಜನರು “ಜೈ ಶ್ರೀ ರಾಮ್” ಎಂಬ ಘೋಷಣೆಗಳನ್ನು ಕೂಗಿದ್ದರು. ಕಾರನ್ನು ನಿಲ್ಲಿಸಲು ಹೇಳಿದ ಮಮತಾ, ಘೋಷಣೆ ಕೂಗುವವರು ತಮ್ಮ ಜೊತೆ ಮಾತುಕತೆಗೆ ಬರಲಿ ಎಂದು ಆಹ್ವಾನ ನೀಡಿದ್ದರು. ಆಗ ‘ಜೈ ಶ್ರೀರಾಮ್’ ಘೋಷಣೆಕಾರರು ಅಲ್ಲಿಂದ ಕಾಲ್ಕಿತ್ತಿದ್ದರು. ಆಗ ಮಮತಾ ತನ್ನ ನೆಚ್ಚಿನ ಪದ “ಹರಿದಾಸ್” ಅನ್ನು ಪಠಿಸುತ್ತ ಹೋಗಿದ್ದರು. ಹರಿದಾಸ್ ಪಾಲ್ ಎಂಬುದು ಕಾಲ್ಪನಿಕ ಪಾತ್ರದ ಹೆಸರಾದರೂ ಭವ್ಯತೆಯ ಭ್ರಮೆಯಿಂದ ಬಳಲುತ್ತಿರುವವರನ್ನು ಅಪಹಾಸ್ಯ ಮಾಡಲು ಇದನ್ನು ಬಂಗಾಳಿಗಳು ಬಳಸುತ್ತಾರೆ.

ಫೆಬ್ರವರಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಮತಾ ದೀದಿಯವರ ಈ ಹರಿದಾಸ್ ಘೋಷಣೆಯ ಬಗ್ಗೆ ಟೀಕೆ ಮಾಡುತ್ತ, ವಿಧಾನಸಭೆ ಚುನಾವಣೆ ಮುಗಿಯುವ ಹೊತ್ತಿಗೆ ಸ್ವತಃ ಮಮತಾ ಜೈಶ್ರೀರಾಂ ಅನ್ನು ಜಪಿಸುತ್ತ ಕೂಡಲಿದ್ದಾರೆ ಎಂದು ಹೇಳಿದ್ದರು.


ಇದನ್ನೂ ಓದಿ: ಬೆಳಗಾವಿ ಲಿಂಗಾಯತರ ಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಹೋರಾಟ: ಅಹಿಂದ ಒಟ್ಟುಗೂಡುವುದೇ? ಗೆದ್ರೆ ಯಮಕನಮರಡಿಯಲ್ಲಿ ಪ್ರಿಯಾಂಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...