Homeಮುಖಪುಟಅಂಧ ಭಕ್ತರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಯಾರು ಕಾರಣ? ಮೋದಿ ವಿರುದ್ಧ ಸಿಡಿದ ಸುಬ್ರಮಣಿಯನ್ ಸ್ವಾಮಿ

ಅಂಧ ಭಕ್ತರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಯಾರು ಕಾರಣ? ಮೋದಿ ವಿರುದ್ಧ ಸಿಡಿದ ಸುಬ್ರಮಣಿಯನ್ ಸ್ವಾಮಿ

- Advertisement -
- Advertisement -

ಬಿಜೆಪಿಯೊಳಗಿನ ಬಿಜೆಪಿ ಟೀಕಾಕಾರದಲ್ಲಿ ಹೆಸರುವಾಸಿಯಾದ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದ್ದಾಗ ಅಂಧಭಕ್ತರು ಮತ್ತು ಗಂಧಭಕ್ತರು ಆ ಕ್ರೆಡಿಟ್‌ ಅನ್ನು ಯಾರಿಗೆ ಕೊಟ್ಟಿದ್ದರು? ಈಗ ಮತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ ಅಂದರೆ ಅದಕ್ಕೆ ಅವರೇ ಕಾರಣರಲ್ಲವೇ ಎಂದು ಪರೋಕ್ಷವಾಗಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಕೊರೊನಾ ವೈರಸ್ ಸಾಂಕ್ರಾಮಿಕದ ಕಾಲದಲ್ಲಿ 2020ರ ಏಪ್ರಿಲ್ ಮಧ್ಯಭಾಗದಿಂದ ದಿನಕ್ಕೆ ಒಂದು ಲಕ್ಷ ಪ್ರಕರಣಗಳು ವರದಿಯಾಗುತ್ತಿದ್ದವು ಮತ್ತು ನವೆಂಬರ್ ವೇಳೆಗೆ 10 ಸಾವಿರಕ್ಕೆ ಇಳಿದಿದ್ದವು. ಆಗ ಅಂಧಭಕ್ತರು ಮತ್ತು ಗಂಧಭಕ್ತರಿಂದ ಅದರ ಕ್ರೆಡಿಟ್ ಪಡೆದವರು ಯಾರು? ಈಗ ಕೊರೊನಾ ಪ್ರಕರಣಗಳು ದಿನಕ್ಕೆ ಒಂದು ಲಕ್ಷ ವರದಿಯಾಗುತ್ತಿವೆ ಅಂದರೆ ಅದರ ಕ್ರೆಡಿಟ್ ಯಾರಿಗೆ ಕೊಡಬೇಕು?” ಎಂದು ವ್ಯಂಗ್ಯವಾಡಿದ್ದಾರೆ.

ಮುಂದುವರಿದು ಗುರುದತ್ ಶೆಟ್ಟಿ ಕಾರ್ಕಳ ಎಂಬುವವರು ಮಾಡಿರುವ ಟ್ವೀಟ್ ಅನ್ನು ಸುಬ್ರಮಣಿಯನ್ ಸ್ವಾಮಿ ರೀಟ್ವೀಟ್ ಮಾಡಿದ್ದಾರೆ. ಅದರಲ್ಲಿ

“ಅಂಧಭಕ್ತ ಅಭಿವೃದ್ದಿ ಮಂಡಳಿ ಸದಸ್ಯರ ಪ್ರಕಾರ,
60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವಿದ್ದರಿಂದ ಕೊರೊನಾ ಈಗ ಹೆಚ್ಚುತ್ತಿದೆ.
ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುವುದು ಮಾತ್ರ ಮೋದಿಯವರಿಂದ.
ಮತ್ತು ಇದನ್ನು ಪ್ರಶ್ನಿಸುವ ಜನರು ರಾಷ್ಟ್ರ ವಿರೋಧಿಗಳು,
ಚೀನಾದ ಬಗ್ಗೆ ಮೌನವಾಗಿರುವುದು ಒಂದು ಮಾಸ್ಟರ್ ಸ್ಟ್ರೋಕ್,
ಪಾಕ್‌ಗೆ ಪತ್ರ ಬರೆಯುವುದರ ಕುರಿತು ಕಾದುನೋಡಬೇಕು” ಎಂದು ವ್ಯಂಗ್ಯವಾಡಲಾಗಿದೆ.

ಕಳೆದ ತಿಂಗಳು ಸಹ ಸುಬ್ರಮಣಿಯನ್ ಸ್ವಾಮಿ ತಮಿಳುನಾಡು ಬಿಜೆಪಿಯ ಪರಿಸ್ಥಿತಿ ಕುರಿತು ವ್ಯಂಗ್ಯವಾಡಿದ್ದರು. “ಬಿಜೆಪಿ-ಎಐಎಡಿಎಂಕೆ ಜೊತೆಗಿನ ಮೈತ್ರಿಯಲ್ಲಿ ಬಿಜೆಪಿಗೆ 20 ಸ್ಥಾನಗಳು ದೊರೆತಿದ್ದು ಅದರಲ್ಲಿ 18 ಸ್ಥಾನಗಳನ್ನು ಬೇರೆ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರಗೊಂಡವರಿಗೆ ಟಿಕೆಟ್ ನೀಡಲಾಗಿದೆ. ಇದು ಬಿಜೆಪಿ ತಲುಪಿರುವ ಪರಿಸ್ಥಿತಿ” ಎಂದು ಗೇಲಿ ಮಾಡಿದ್ದರು.


ಇದನ್ನೂ ಓದಿ: 18 ಪಕ್ಷಾಂತರಿಗಳಿಗೆ ಟಿಕೆಟ್, ತಮಿಳುನಾಡು BJP ಪರಿಸ್ಥಿತಿ ಇಲ್ಲಿಗೆ ಬಂತು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...