Homeಮುಖಪುಟರಾಜಕೀಯ ಹಿಂಸಾಚಾರವನ್ನು ಪ್ರಚಾರ ಮಾಡುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ: ಅಮಿತ್‌ ಶಾ

ರಾಜಕೀಯ ಹಿಂಸಾಚಾರವನ್ನು ಪ್ರಚಾರ ಮಾಡುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ: ಅಮಿತ್‌ ಶಾ

- Advertisement -
- Advertisement -

ಪ್ರಜಾಪ್ರಭುತ್ವವು ತನ್ನ ಬೇರುಗಳನ್ನು ಇಡೀ ದೇಶಾದ್ಯಂತ ಬಲಪಡಿಸಿಕೊಳ್ಳುತ್ತಿದ್ದರೆ, ರಾಜಕೀಯ ಹಿಂಸಾಚಾರವನ್ನು ಪ್ರಚಾರ ಮಾಡುವ ಏಕೈಕ ರಾಜ್ಯವಾಗಿ ಪಶ್ಚಿಮ ಬಂಗಾಳ ಉಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

‘ಪಶ್ಚಿಮ ಬಂಗಾಳ ಜನ ಸಂವಾದ’ ವರ್ಚುವಲ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 2014 ರಿಂದ ರಾಜ್ಯದಲ್ಲಿ ನಡೆದ ರಾಜಕೀಯ ಯುದ್ಧದ ನಡುವೆ ಪ್ರಾಣ ಕಳೆದುಕೊಂಡ ಅನೇಕ ಪಕ್ಷದ ಕಾರ್ಯಕರ್ತರನ್ನು ನೆನೆಸಿಕೊಳ್ಳುತ್ತೇನೆ. “ಸೋನಾರ್ ಬಾಂಗ್ಲಾ (ಸುವರ್ಣ ಬಂಗಾಳ) ಅಭಿವೃದ್ಧಿಗೆ ಅವರು ಕೊಡುಗೆ ನೀಡಿದ್ದರಿಂದ ಅವರ ಕುಟುಂಬಗಳಿಗೆ ನನ್ನ ಗೌರವವನ್ನು ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಳಿ ನಡೆಸಿದ ಅವರು, ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಕ್ಕೆ ತಾವು ಅವಕಾಶ ನೀಡುತ್ತಿಲ್ಲ, ಇದು ದೇಶಾದ್ಯಂತ ಅನೇಕ ಜನರಿಗೆ ಪ್ರಯೋಜನವನ್ನು ನೀಡಿದೆ. ಬಂಗಾಳದ ಜನರು ಕೇಳುತ್ತಿದ್ದಾರೆ. ಇದನ್ನು ಕಾರ್ಯಗತಗೊಳಿಸಲು ನೀವು ಯಾಕೆ ಬಿಡುತ್ತಿಲ್ಲ?” ಎಂದು ಶಾ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಬೆಲೆ ತೆರಬೇಕಾಗುತ್ತದೆ. ಬಂಗಾಳದ ಜನ ಅವರನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.

ಮಮತಾ ಅವರೇ ಬಂಗಾಳದ ಮಾಟುವಾ ಮತ್ತು ನಮಾಶುದ್ರ ಸಮುದಾಯದ ಜನರು ಪೌರತ್ವ ಪಡೆಯುವುದು ನಿಮಗೆ ಇಷ್ಟವಿಲ್ಲವೇ? ಮತ್ತೆ ಈ ಕಾಯ್ದೆಯ ವಿರುದ್ಧ ನೀವು ಏಕೆ ಕೋಪಗೊಂಡಿರಿ? ಎಂದು ಪ್ರಶ್ನಿಸಿದ್ದಾರೆ.

“ಭಾರತದಲ್ಲಿ ಓಲೈಕೆ ರಾಜಕಾರಣವನ್ನು ನಿಲ್ಲಿಸುವ ಸಲುವಾಗಿ ಸಿಎಎ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಬಂಗಾಳದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಿರಾಶ್ರಿತರಿಗೆ ದಶಕಗಳಿಂದ ಮಾಡಲಾಗಿರುವ ಅನ್ಯಾಯವನ್ನು ತಪ್ಪುಗಳನ್ನು ಕೊನೆಗೊಳಿಸಬೇಕು. ಆ ನಿಟ್ಟಿನಲ್ಲಿ ಸಿಎಎ ಕಾಯ್ದೆ ಒಂದು ಉತ್ತಮ ಹೆಜ್ಜೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸುವ ವಿಚಾರದಲ್ಲೂ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ರಾಜಕೀಯ ದಾಳಿ ನಡೆಸಿರುವ ಅಮಿತ್ ಶಾ, “ವಲಸೆ ಕಾರ್ಮಿಕರನ್ನು ಸಾಗಿಸಲು ಬಂಗಾಳ ಸರ್ಕಾರ ಅತಿ ಕಡಿಮೆ ರೈಲುಗಳನ್ನು ಕೇಳಿತ್ತು. ಕೇವಲ 236 ರೈಲುಗಳಲ್ಲಿ 3 ಲಕ್ಷ ವಲಸಿಗರನ್ನು ಅವರ ಸ್ವಂತ ನೆಲೆಗಳಿಗೆ ತಲುಪಿಸಲಾಗಿದೆ” ಎಂದಿದ್ದಾರೆ.

“ನರೇಂದ್ರ ಮೋದಿಯವರಿಗೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯ ಕಾರಣದಿಂದಲೇ ಮಮತಾ ಬ್ಯಾನರ್ಜಿ ಆಯುಷ್ಮಾನ್ ಭಾರತ್ ಮತ್ತು ಇತರ ಕೇಂದ್ರ ಸರಕಾರದ ಯೋಜನೆಗಳನ್ನು ಬಂಗಾಳದಲ್ಲಿ ಸ್ಥಗಿತಗೊಳಿಸುತ್ತಿದ್ದಾರೆ” ಎಂದು ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಂಗಾಳದ ಜನರಿಗೆ ಕೇಂದ್ರ ಸರ್ಕಾರದ ಆರೋಗ್ಯದ ಪ್ರಯೋಜನಗಳನ್ನು ತಲುಪಿಸಲು ಮಮತಾ ಬ್ಯಾನರ್ಜಿ ಏಕೆ ಅವಕಾಶ ನೀಡುತ್ತಿಲ್ಲ? ನಿಮ್ಮ ರಾಜಕೀಯಕ್ಕೆ ಜನರ ಯೋಗಕ್ಷೇಮವನ್ನು ಏಕೆ ಪಣವಿಡುತ್ತಿದ್ದೀರಿ? ಕೇಜ್ರಿವಾಲ್ ಸೇರಿದಂತೆ ಎಲ್ಲಾ ರಾಜ್ಯ ನಾಯಕರು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ನಿಮ್ಮ ಸಮಸ್ಯೆ ಏನು? ಎಂದು ಪ್ರಶ್ನೆ ಮಾಡಿರುವ ಅಮಿತ್ ಶಾ. ಬಂಗಾಳದಲ್ಲಿ ಬಿಜೆಪಿ ಗೆದ್ದು ಸ್ವತಂತ್ಯ್ರ ಸರ್ಕಾರ ರಚನೆ ಮಾಡಿದ ನಂತರ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...