Homeಕರ್ನಾಟಕಎಸ್ಸೆಸ್ಸೆಲ್ಸಿ ಪರೀಕ್ಷೆ: ಹೆಚ್ಚಿನ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಇನ್ನೂ ತಯಾರಾಗಿಲ್ಲ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹೆಚ್ಚಿನ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಇನ್ನೂ ತಯಾರಾಗಿಲ್ಲ

- Advertisement -
- Advertisement -

ಲಾಕ್‌ಡೌನ್‌‌ನಿಂದಾಗಿ ಮುಂದೂಲ್ಪಟ್ಟಿದ್ದ 10 ನೇ ತರಗತಿಯ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳು ಮುಂದಾಗುತ್ತಿದೆ. ಆದರೆ ಈ ವರ್ಷ ಕಲಿತ ಶೇಕಡಾ 60 ರಷ್ಟು ವಿಷಯಗಳನ್ನು ವಿದ್ಯಾರ್ಥಿಗಳು ಮರೆತಿದ್ದಾರೆ ಎಂದು ಶಿಕ್ಷಕರು ಅಭಿಪ್ರಾಯಪಡುತ್ತಾರೆ. ಅದರಲ್ಲೂ ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳು ಈ ಲಾಕ್‌ಡೌನ್ ಸಮಯದಲ್ಲಿ ಶಿಕ್ಷಣ ಸಂಸ್ಥಗಳು ಅಥವಾ ಸರ್ಕಾರ ನಡೆಸಿದ ಆನ್‌ಲೈನ್‌ ಕ್ಲಾಸುಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 10 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿದ್ದ ದಕ್ಷಿಣದ ಕೆಲ ರಾಜ್ಯಗಳು ಅವುಗಳನ್ನು ಶೀಘ್ರವಾಗಿ ನಡೆಸಲು ಉತ್ಸುಕವಾಗಿವೆ. ಕೇರಳ ಈಗಾಗಲೇ ಮೇ 26 ಮತ್ತು 29 ರ ನಡುವೆ ಉಳಿದ ಮೂರು ಪರೀಕ್ಷೆಗಳನ್ನು ನಡೆಸಿದೆ. ಜೂನ್ 8 ಕ್ಕೆ ನಿಗದಿಯಾಗಿದ್ದ ’ಟಿಎಸ್ ಎಸ್‌ಎಸ್‌ಸಿ’ ಪರೀಕ್ಷೆಗಳನ್ನು ತೆಲಂಗಾಣ ರದ್ದುಗೊಳಿಸಿದ್ದರೆ, ತಮಿಳುನಾಡು ಸಹ ಪರೀಕ್ಷೆ ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಲು ಮುಂದಾಗಿದೆ. ಆದರೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಕ್ರಮವಾಗಿ ಜೂನ್ 25 ಮತ್ತು ಜುಲೈ 10 ಅಂತಿಮ ಪರೀಕ್ಷೆಗಳನ್ನು ನಡೆಸಲಿದೆ.


ಇದನ್ನೂ ಓದಿ: ತಮಿಳುನಾಡಿನಲ್ಲೂ SSLC ಪರೀಕ್ಷೆ ರದ್ದು: ವಿದ್ಯಾರ್ಥಿಗಳಿಗೆ ಮುಂಬಡ್ತಿ


ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಖಾಸಗಿ ಶಾಲೆಗಳು ಹಾಗೂ ಕೆಲವು ಸರ್ಕಾರಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿ ಪ್ರಾರಂಭಿಸಿದ್ದಾರೆ. ರಾಜ್ಯ ಸರ್ಕಾರಗಳು ಸ್ಥಳೀಯ ಕೇಬಲ್ ನೆಟ್‌ವರ್ಕ್‌ಗಳ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಆದರೆ ಈ ಎಲ್ಲದರ ಹೊರತಾಗಿಯೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಜೂನ್ 15 ರಂದು ತಮಿಳುನಾಡಿನಲ್ಲಿ ರಾಜ್ಯದ 9.45 ಲಕ್ಷ ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಗೆ ಹಾಜರಾಗಲು ಸಿದ್ದರಾಗಿದ್ದರು. ಇದೇ ಸಮಯದಲ್ಲಿ ತಮಿಳುನಾಡಿನ ಪರಿಶಿಷ್ಟ ಪಂಗಡ ಸಮುದಾಯದ 14 ವರ್ಷದ ಬಾಲಕಿ ಹೇಮ ಪ್ರಿಯಾ ಗಣಿತ ಪರಿಕ್ಷೆಯಲ್ಲಿ ಉತ್ತೀರ್ಣ ಗಳಿಸಲು ನೆರವಾಗುವ ಗ್ರಾಫ್ ಅನ್ನು ಹೇಗೆ ಬರೆಯುವುದು ಎಂದು ತಿಳಿದಿಲ್ಲ ಎನ್ನುತ್ತಾರೆ.

ಹೇಮಾ ಪ್ರಿಯಾ ತಮ್ಮ ಪರೀಕ್ಷೆಯನ್ನು ಹೇಗೆ ನಿಭಾಯಿಸುತ್ತಾರೆಂದು ವಿವರಿಸಲು ಪ್ರಾರಂಭಿಸಿದಾಗ, ಅವರ ಧ್ವನಿ ನಡುಗುತ್ತದೆ. ತಿರುವಳ್ಳೂರು ಜಿಲ್ಲೆಯ ಪೊನ್ನೆರಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಇವರು ತನ್ನ ಸ್ನೇಹಿತರು ಹೋಗುವಂತೆ ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಹೋಗಲು ಮನಸ್ಸಿದ್ದರೂ, ಪ್ರವೇಶ ಶುಲ್ಕವಾಗಿ 1000 ರೂ. ಹಾಗೂ ಮಾಸಿಕ ಶುಲ್ಕವಾಗಿ 500 ರೂ. ಗಳನ್ನು ಪಾವತಿಸಬೇಕಾದ್ದರಿಂದ ಅವರು ಅಲ್ಲಿಗೆ ಹೋಗಲು ಸಾಧ್ಯವಾಗದೇ, ಖಾಸಗಿ ಕೋಚಿಂಗ್ ಹೋಗುವ ತನ್ನ ಸ್ನೇಹಿತರಿಂದ ತಿಳಿಯಲು ಒಂದು ಗಂಟೆ ಮುಂಚಿತವಾಗಿ ಶಾಲೆಗೆ ಹೋಗುತ್ತಿದ್ದರು ಆದರೆ ಈಗ ಲಾಕ್‌ಡೌನ್ ಆದ್ದರಿಂದ ಅದೂ ಅಸಾಧ್ಯವಾಗಿದೆ.

ಇವರ ತರಗತಿಗೆ ಅರ್ಧ ವರ್ಷದವರೆಗೂ ಗಣಿತ ಶಿಕ್ಷಕರೇ ಇರಲಿಲ್ಲ, ನಂತರ ಶಿಕ್ಷಕರು ಬಂದರೂ ಎಲ್ಲಾ ವಿಷಯಗಳಲ್ಲಿ ಸುಮಾರು 60 ಅಂಕಗಳನ್ನು ಪಡೆಯುತ್ತಿದ್ದ ಹೇಮಾ ಮಧ್ಯಾವಧಿ ಗಣಿತ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ. ಬೋರ್ಡ್ ಪರೀಕ್ಷೆಗೆ ತಯಾರಾಗುವ ಹೊತ್ತಿಗೆ ಲಾಕ್‌ಡೌನ್‌ ವಿಧಿಸಲಾಯಿತು ಆದರೆ ಇಂಟರ್ನೆಟ್ ಇಲ್ಲದ ಅವರ ತಂದೆಯ ಮೊಬೈಲ್ ಫೋನಿನಿಂದ ಆನ್‌ಲೈನ್ ಕ್ಲಾಸುಗಳನ್ನುಸೇರಲು ಅವರಿಗೆ ಸಾಧ್ಯವಾಗಿಲ್ಲ. ಹಾಗೆ ನೋಡಿದರೆ ಆ ಬಟನ್‌ ಫೋನಿನಲ್ಲಿ ರೀಚಾರ್ಜ್‌ಮಾಡಲೂ ಅವರ ತಂದೆಯಲ್ಲಿ ದುಡ್ಡು ಇರಲಿಲ್ಲ. ಈಗ ಪರೀಕ್ಷೆಗಳು ನಡೆಯಲಿವೆ ಎನ್ನುತ್ತಿದ್ದಂತೆ ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿ ಅವರಿದ್ದಾರೆ.

ತಮಿಳು ನಾಡಿನಿಂದ 450 ಕಿ.ಮೀ. ದೂರದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಯೆಮಿಗನೂರ್ ಪಟ್ಟಣದ ರಸ್ತೆಬದಿಯ ಗುಡಿಸಲಿನಲ್ಲಿ 15 ವರ್ಷದ ಕಿರಣ್ ವಾಸಿಸುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಅವರು ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಕುಟುಂಬವೂ ಬುಟ್ಟಿ ಹೆಣೆದು ಜೀವನ ಸಾಗಿಸುತ್ತದೆ.

ಹೇಮಾ ಪ್ರಿಯಾ ಅವರಂತೆ ಕಿರಣ್ ಕೂಡ ಸ್ಮಾರ್ಟ್‌ಫೋನ್ ಹೊಂದಿಲ್ಲ. ಇದರಿಂದಾಗಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನಡೆಸಿದ ವಾಟ್ಸಾಪ್ ಪರೀಕ್ಷೆಗಳಿಂದ ವಂಚಿತವಾಗಿದ್ದಾರೆ. ಆದರೆ ಅವರು ಸ್ನೇಹಿತರ ಮನೆಯ ಟೀವಿಯಲ್ಲಿ ಸರ್ಕಾರ ನಡೆಸುವ ಕೆಲವು ತರಗತಿಗಳನ್ನು ವೀಕ್ಷಿಸುತ್ತಾರೆ, ಆದರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅದು ಸಾಕಾಗುವುದಿಲ್ಲ ಎಂಬ ಭಯ ಅವರಿಗಿದೆ.

ಲಾಕ್ ಡೌನ್ ಆಗುವವರೆಗೂ, 15 ವರ್ಷದ ಕಿರಣ್ ಸಂಜೆಯ ವೇಳೆ ಖಾಸಗಿ ವಾಟರ್ ಟ್ಯಾಂಕರ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರಿಂದ ದಿನಕ್ಕೆ ₹ 100 ಪಡೆಯುತ್ತಿದ್ದರು. ಆಗ ಅವರಿಗೆ ಓದಲು ಸಮಯ ಸಾಲುತ್ತಿರಲಿಲ್ಲ. ಆದರೆ ಈಗ ಅವರಿಗೆ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಸಮಯವಿದ್ದರೂ ಓದಿಸಲು ಸರಿಯಾದ ಮಾರ್ಗದರ್ಶನ ಇಲ್ಲ.

ಅದೃಷ್ಟವಶಾತ್, ಕಿರಣ್ ಇಂಗ್ಲಿಷ್‌ನಲ್ಲಿ ’ಮನ ಟಿವಿ’ಯಲ್ಲಿ ನಡೆಯುವ ಕ್ಲಾಸುಗಳನ್ನು ನೋಡುತ್ತಾರೆ ಆದರೆ ತೆಲುಗು ಭಾಷಿಕ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಇದು ಸಾಧ್ಯವಾಗುವುದಿಲ್ಲ.

ಯೆಮ್ಮಿಗನೂರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿನ ಕರ್ನಾಟಕದ ಗಡಿಯಲ್ಲಿರುವ ಜಂಪಾಪುರಂ ಗ್ರಾಮದ 1 ನೇ ತರಗತಿಯಿಂದ ತೆಲುಗು ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದ ಎಸ್ಸಿ ಸಮುದಾಯದ 14 ವರ್ಷದ ’ಐಶ್ವರ್ಯ’, ಆನ್‌ಲೈನ್‌ ತರಗತಿಗಳನ್ನು ವಿಶೇಷವಾಗಿ ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ. ಆದರೆ ಇವರಿಗೆ ತನ್ನ ಸೋದರಸಂಬಂಧಿಯ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಕ್ಲಾಸುಗಳಲ್ಲಿ ಭಾಗವಹಿಸಿದ್ದಾರೆ.

ಪ್ರತಿ ವಿಷಯದಲ್ಲಿ ಸುಮಾರು 50 ಅಂಕಗಳನ್ನು ಗಳಿಸುವ ಐಶ್ವರ್ಯಾ, ಈ ಆನ್‌ಲೈನ್ ಮತ್ತು ಟಿವಿಯ ತರಗತಿಗಳು ಶಾಲೆಯಲ್ಲಿ ತನ್ನ ಶಿಕ್ಷಕರು ಬೋಧಿಸುವಷ್ಟು ಆಗುವುದಿಲ್ಲ ಎನ್ನುತ್ತಾರೆ.

ವಾಟ್ಸಾಪ್ ಪರೀಕ್ಷೆಗಳು ಶಾಲೆಯ ಪರೀಕ್ಷಗಳಿಗಿಂತ ಭಿನ್ನವಾಗಿರುತ್ತದೆ ಎಂದು ಕರ್ನೂಲ್‌ನ ಸರ್ಕಾರಿ ಶಿಕ್ಷಕ ದೇವೇಂದ್ರ ಬಾಬು ಹೇಳುತ್ತಾರೆ. ಕಡಿಮೆ ವಿಧ್ಯಾರ್ಥಿಗಳಿದ್ದರೆ ಶಿಕ್ಷಕರಿಗೆ ಎಲ್ಲಾ ವಿದ್ಯಾರ್ಥಿಗಳನ್ನು ವಾಟ್ಸಾಪ್ ಗುಂಪಿನಲ್ಲಿ ನಿರ್ವಹಿಸಲು ಮತ್ತು ಸಂಘಟಿಸಲು ಸುಲಭವಾಗಿರುತ್ತದೆ. ಆದರೆ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳ ಶಿಕ್ಷಕರಿಗೆ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸುವಲ್ಲಿ ತೊಂದರೆಯಾಗುತ್ತದೆ. ಅಲ್ಲದೆ ಇಂಟರ್ನೆಟ್ ಇಲ್ಲದೆ ಇರುವ ಸಮುದಾಯಗಳ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ದೇವೇಂದ್ರ ಬಾಬು ಹೇಳುತ್ತಾರೆ.

ಬೆಂಗಳೂರಿನ ಕೋರಮಂಗಲದ ಕೊಳೆಗೇರಿಗಳಲ್ಲಿರುವ ವಿದ್ಯಾರ್ಥಿಗಳ ವಿಷಯವೂ ಇದೇ ಆಗಿದೆ. ಆನ್‌ಲೈನ್ ತರಗತಿಗಳು ಏಕರೂಪವಾಗಿಲ್ಲ. ಕೆಲವು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ಆನ್‌ಲೈನ್ ಪಾಠಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅನೇಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಇವುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಈ ಪ್ರದೇಶದ ಕೊಳೆಗೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆಧಾರಿತ ಸಂಘಟನೆಯಾದ ’ಮಾರ್ಗಾ’ದ ಗಣಿತ ಶಿಕ್ಷಕಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಮೋನಿಷಾ ಹೇಳುತ್ತಾರೆ.

ಈ ವರ್ಷ ವಿದ್ಯಾರ್ಥಿಗಳು ಕಲಿತದ್ದರಲ್ಲಿ ಶೇಕಡಾ 60 ರಷ್ಟು ಮರೆತಿದ್ದಾರೆ ಎಂದು ಅವರು ಹೇಳುತ್ತಾರೆ. ಈ ವಿದ್ಯಾರ್ಥಿಗಳಿಗೆ ಸಂಜೆಯ ಸಮಯದಲ್ಲಿ ತರಬೇತಿ ನೀಡಲು ಸರ್ಕಾರವು ಮುಂದಾಗುತ್ತಿದ್ದರೂ, ತರಗತಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸುತ್ತಿದ್ದರೂ, ಈ ಪ್ರದೇಶದ ಏಳು ಕೊಳೆಗೇರಿಗಳಲ್ಲಿ ಎರಡನ್ನು ಮಾತ್ರ ಒಳಗೊಳ್ಳುತ್ತದೆ. ಆದ್ದರಿಂದ, ಇತರ ಕೊಳೆಗೇರಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಯಾವುದೇ ತರಬೇತಿ ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ.

ಈ ಪರಿಸ್ಥಿತಿಯಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷಗೆ ಕುಳಿತರೆ ಪದವಿ ಪೂರ್ವ ಕಾಲೇಜಿಗೆ ಅವರು ಪ್ರವೇಶವನ್ನು ಪಡೆದುಕೊಳ್ಳಲು ಸಾಧ್ಯವಿದೆಯೇ?

ಇಷ್ಟೇ ಅಲ್ಲದೆ ಈ ಸಮಯದಲ್ಲಿ ಇರುವ ಮತ್ತೊಂದು ಸಮಸ್ಯೆಯೆಂದರೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವುದು. ದೂರದ ಹಳ್ಳಿಗಳು ಹಾಗೂ ಗುಡ್ಡಗಾಡು ಪ್ರದೇಶದ ಎಲ್ಲಾ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಉದಾಹರಣೆಗೆ ಐಶ್ವರ್ಯಾ ಅವರ ಪರೀಕ್ಷಾ ಕೇಂದ್ರವು ತನ್ನ ಹಳ್ಳಿಯಿಂದ ಸುಮಾರು 8 ಕಿ.ಮೀ ದೂರದಲ್ಲಿದಲ್ಲಿದೆ. ಕೇಂದ್ರಕ್ಕೆ ಬಸ್ಸಿನಲ್ಲಿ ಹೋದರೂ ಕನಿಷ್ಠ 2 ಕಿ.ಮೀ ನಡೆದು ಕೊಂಡೆ ಹೋಗಬೇಕು.

ತಮಿಳುನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿನ ಅನೇಕ ವಿದ್ಯಾರ್ಥಿಗಳು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವೊಂದು ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ 35 ಕಿ.ಮಿ. ದೂರದಲ್ಲಿದೆ. ಆದರೆ, ರಾಜ್ಯ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯಗಳನ್ನು ಏರ್ಪಡಿಸಿದೆ. ಆದರೆ ಲಕ್ಷಾಂತರ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.

ಇದಲ್ಲದೆ, ಜೂನ್ 11 ರೊಳಗೆ ತಮಿಳುನಾಡಿನ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗವಾದ ಆದಿ ದ್ರಾವಿಡಾರ್‌ ವಿದ್ಯಾರ್ಥಿಗಳನ್ನು ಮತ್ತೆ ಹಾಸ್ಟೆಲ್‌ಗಳಿಗೆ ಕರೆತರಲು ರಾಜ್ಯ ನಿರ್ಧರಿಸಿದೆ. ಈ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದ ಅನೇಕ ವಿದ್ಯಾರ್ಥಿಗಳು ಲಾಕ್‌ಡೌನ್‌ ಘೋಷಿಸಿದಾಗ ತಮ್ಮೆ ಮನೆಗೆ ತೆರಳುವ ಹೊತ್ತಿಗೆ ಪಠ್ಯಪುಸ್ತಕಗಳು ಸೇರಿದಂತೆ ತಮ್ಮ ವಸ್ತುಗಳನ್ನು ಸಹ ತೆಗೆದುಕೊಂಡು ಹೋಗಿರಲಿಲ್ಲ.

ಇದರಿಂದಾಗಿ ತಜ್ಞೆ ಡಾ. ವಿ.ವಸಂತಿ ಪರೀಕ್ಷೆಗಳ ರದ್ದತಿ ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು 11 ನೇ ತರಗತಿಗೆ ಬಡ್ತಿ ನೀಡುವಂತೆ ಕೋರಿದ್ದಾರೆ.

ಆದಾಗ್ಯೂ, ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಎಸ್‌ಎಸ್‌ಎಲ್‌ಸಿ) ಮುಖ್ಯವಾಗಿದೆ ಎಂದು ವಸಂತಿ ಹೇಳುತ್ತಾರೆ. ಪರೀಕ್ಷೆಗಳನ್ನು ನಡೆಸಲು ತೆಗೆದುಕೊಳ್ಳುತ್ತಿರುವ ಪ್ರಯತ್ನಗಳಿಗಿಂತ ಮಕ್ಕಳ ಭವಿಷ್ಯವು ಬಹಳ ಮುಖ್ಯ ಎಂದು ಸರ್ಕಾರ ಭಾವಿಸುತ್ತದೆ ಎಂದು ಅವರು ಹೇಳುತ್ತಾರೆ.

ರಾಜ್ಯವು ಅಚಲವಾಗಿದ್ದರೆ, ಎಲ್ಲಾ ತರಗತಿಗಳಿಗೆ ಶಾಲೆಗಳು ಮತ್ತೆ ತೆರೆದ ಒಂದು ತಿಂಗಳ ನಂತರ ಪರೀಕ್ಷೆಗಳನ್ನು ನಡೆಸಬೇಕು ಎಂಬುವುದು ವಸಂತಿ ಅವರ ಅಭಿಪ್ರಾಯ.

ಈ ಒಂದು ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಳೆಯ ಪಾಠಗಳನ್ನು ಪುನಃ ಮನನ ಹಾಗೂ ತಂತ್ರಜ್ಞಾನಗಳಿಂದ ವಂಚಿತರಾಗಿರುವ ಹೇಮ ಪ್ರಿಯ, ಕಿರಣ್ ಹಾಗೂ ಭಾಷಾ ಅಡೆತಡೆಗಳನ್ನು ಎದುರಿಸುತ್ತಿರುವ ಐಶ್ವರ್ಯಾರಂತಹವರೂ ತಮ್ಮ ಕಲಿಕೆಯನ್ನು ಮುಂದುವರೆಸಲು ಅನುವು ಮಾಡಿಕೊಡುತ್ತದೆ.

ಮೂಲ: ವಿಗ್ನೇಶ್‌ ಕೆ.ಜೆ ದಿ ಫೆಡರಲ್‌


ಓದಿ:  ಕೂಸು ಹುಟ್ಟೋ ಮುಂಚೆ ಕುಲಾವಿ : ಈ ಕಾಲೇಜುಗಳಲ್ಲಿ SSLC ಪರೀಕ್ಷೆ ಮುನ್ನವೇ PUCಗೆ ದಾಖಲಾತಿ!


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...