Homeಕರ್ನಾಟಕಚಿತ್ರದುರ್ಗ: ಮಾನವ ರಹಿತ ವಿಮಾನ ಪತನ

ಚಿತ್ರದುರ್ಗ: ಮಾನವ ರಹಿತ ವಿಮಾನ ಪತನ

- Advertisement -
- Advertisement -

ಡಿಆರ್ ಡಿಒ(ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ) ಹಾರಾಟ ನಡೆಸಿದ ಮಾನವ ರಹಿತ ಸಣ್ಣ ವಿಮಾನ ಪತನವಾಗಿರುವ ಘಟನೆ ಚಿತ್ರದುರ್ಗದ  ಚಳ್ಳಕೆರೆಯಲ್ಲಿ ನಡೆದಿದೆ.

ಡಿಆರ್ ಡಿಒ ಇಂದು ಬೆಳಗ್ಗೆ ತಪಸ್ 07A-14 ಎಂಬ ಹೆಸರಿನ ಪ್ರಾಯೋಗಿಕ ವಿಮಾನವನ್ನು ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ  ಪರೀಕ್ಷಾರ್ಥ ಹಾರಾಟ ನಡೆಸಿದೆ.

ಈ ವಿಮಾನವು ನಿಯಂತ್ರಣ ಕಳೆದುಕೊಂಡು ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಸಿದ್ದಪ್ಪ ಎಂಬವರ ಜಮೀನಿನಲ್ಲಿ ಪತನಗೊಂಡಿದೆ .

ಜಮೀನಿನಲ್ಲಿ ಪತನಗೊಂಡ ಹಿನ್ನೆಲೆ ಯಾವುದೇ ಅನಾಹುತ ಸಂಭವಿಸಿಲ್ಲ.ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಪ್ರಾಯೋಗಿಕ ವಿಮಾನದ ವೀಕ್ಷಣೆ ನಡೆಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಾಗೂ ವಾಯುಪಡೆಯ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: ಉತ್ತರಪ್ರದೇಶ: ಮುಸ್ಲಿಂ ದಂಪತಿಯನ್ನು ಹೊಡೆದು ಕೊಲೆ ಮಾಡಿದ ಗುಂಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...