Homeಕರ್ನಾಟಕಫೇಸ್‌ಬುಕ್‌ನಿಂದ ‘ಪ್ರತಿಧ್ವನಿ.ಕಾಂ’ ವೆಬ್‌ಸೈಟ್‌‌ಗೆ ತಡೆ; ಕಾಣದ ಕೈಗಳ ಷಢ್ಯಂತ್ರ ಎಂದು ಆಕ್ರೋಶ

ಫೇಸ್‌ಬುಕ್‌ನಿಂದ ‘ಪ್ರತಿಧ್ವನಿ.ಕಾಂ’ ವೆಬ್‌ಸೈಟ್‌‌ಗೆ ತಡೆ; ಕಾಣದ ಕೈಗಳ ಷಢ್ಯಂತ್ರ ಎಂದು ಆಕ್ರೋಶ

- Advertisement -
- Advertisement -

ಸ್ವಯಂ ಸೇವಾ ಸಂಸ್ಥೆಯಾದ ‘ಟ್ರುಥ್ ಪ್ರೊ ಫೌಂಡೇಶನ್‌ ಇಂಡಿಯಾ’ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಧ್ವನಿ.ಕಾಂ ಸುದ್ದಿ ಪೋರ್ಟಲ್‌ ಅನ್ನು ಫೇಸ್‌ಬುಕ್ ಶುಕ್ರವಾರದಂದು ಏಕಾಏಕಿ ತಡೆ ಹಿಡಿದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರುವ ಪ್ರತಿಧ್ವನಿ.ಕಾಂ, “ಪ್ರತಿಧ್ವನಿ ವಿರುದ್ಧ ಷಢ್ಯಂತ್ರ ರೂಪಿಸಿದ್ದು, ಕಳೆದ ಕೆಲವು ತಿಂಗಳಿಂದ ಪ್ರತಿಧ್ವನಿಯ ಧ್ವನಿ ಅಡಗಿಸಲು ಕಾಣದ ಕೈಗಳು ನಡೆಸುತ್ತಿರುವ ಪ್ರಯತ್ನ ಇದಾಗಿದೆ” ಎಂದು ಹೇಳಿದೆ.

ಫೇಸ್‌ಬುಕ್ ಪ್ರತಿಧ್ವನಿ ವೆಬ್‌ಸೈಟ್‌‌ನ ಎಲ್ಲಾ ಸುದ್ದಿಗಳನ್ನು ವೆಬ್‌ಸೈಟ್‌ನ ಪೇಜ್‌ನಿಂದ ಈಗಾಗಲೆ ಡಿಲೀಟ್‌ ಮಾಡಿದೆ. ಅಷ್ಟೆ ಅಲ್ಲದೆ, ವೆಬ್‌ಸೈಟ್‌ನ ಸುದ್ದಿಗಳನ್ನು ಹಂಚಿಕೊಂಡಿದ್ದ ಇತರ ವ್ಯಕ್ತಿಗಳ ಪೋಸ್ಟ್‌ಗಳನ್ನೂ ಅದು ತೆಗೆದು ಹಾಕಿದೆ. ಜೊತೆಗೆ ಪ್ರತಿಧ್ವನಿ ವೆಬ್‌ಸೈಟ್‌ನ ಯಾವುದೇ ಹೊಸ ಸುದ್ದಿಗಳನ್ನೂ ಹಂಚಲು ಕೂಡಾ ಫೇಸ್‌ಬುಕ್ ಅನುಮತಿ ನೀಡುತ್ತಿಲ್ಲ ಎಂದು ಪ್ರತಿಧ್ವನಿ ಅಸಮಾಧಾನ ವ್ಯಕ್ತಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಕಳೆದ ಎರಡು ತಿಂಗಳಿಂದ ನಮ್ಮ ಅಧಿಕೃತ ಮೇಲ್ ಐಡಿ ಹ್ಯಾಕ್ ಮಾಡಿ ನಮ್ಮ ಡೇಟಾವನ್ನು ಕದಿಯಲಾಯ್ತು. ಇದರಿಂದಾಗಿ ಸಂಸ್ಥೆಯಲ್ಲಿ ಬಳಸಲಾಗುವ ಎಲ್ಲಾ ಕಂಪ್ಯೂಟರ್ ಜೊತೆಗೆ ಸಿಬ್ಬಂದಿಯ ಮೊಬೈಲ್‌ಗಳು ಸಹ ಸಂಪೂರ್ಣ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದ್ದವು. ಕೆಲವು ಮೊಬೈಲ್ ಆನ್ ಆದರೂ ಅದರಲ್ಲಿದ್ದ ಡೇಟಾ ಕಾಣೆಯಾಗಿದ್ದವು” ಎಂದು ಪ್ರತಿಧ್ವನಿ ತಂಡ ಹೇಳಿದೆ.

“ಸೈಬರ್ ಪೊಲೀಸರಿಗೆ ದೂರು ನೀಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ತಾಂತ್ರಿಕ ವರ್ಗದವರ ಸಹಾಯದಿಂದ ಎಲ್ಲವನ್ನು ಮತ್ತೊಮ್ಮೆ ರೀಸೆಟ್ ಮಾಡಿ ಕೆಲಸ ಆರಂಭಿಸಿದರೆ, ಯೂಟ್ಯೂಬ್ ಬ್ಲಾಕ್ ಮಾಡಲಾಯಿತು. ಕಳೆದ ಸೋಮವಾರವಷ್ಟೇ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ ಈಗ ಫೇಸ್ ಬುಕ್ ಸಮಸ್ಯೆ ಕಾಡಲಾರಂಭಿಸಿದೆ. ಈಗ ನಮ್ಮ ವೆಬ್‌ಸೈಟ್ ಲಿಂಕ್ ಅನ್ನು ಫೇಸ್‌‌‌ಬುಕ್‌ನಿಂದ ಬ್ಲಾಕ್‌‌ ಮಾಡಲಾಗಿದೆ” ಎಂದು ತಂಡವೂ ಹೇಳಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಪ್ರತಿಧ್ವನಿ ಸಂಸ್ಥಾಪಕರಾದ ಶಿವಕುಮಾರ್‌ ಸಿದ್ದಪ್ಪ,“ವೆಬ್‌ಸೈಟ್‌ನ ಯಾವುದೇ ಕಂಟೆಂಟ್‌ ಅನ್ನು ಫೇಸ್‌ಬುಕ್‌ಗೆ ಹಂಚಲು ಬಿಡುತ್ತಿಲ್ಲ. ಕೆಲವೊಂದು ವಿಡಿಯೊಗಳನ್ನು ಕೂಡಾ ತೆಗೆದು ಹಾಕಿದ್ದಾರೆ. ನಮ್ಮನ್ನು ದೂರ ಇಡಲು ಬೇಕಾಗಿ ಉದ್ದೇಶಪೂರ್ವಕವಾಗಿ ಫೇಸ್‌ಬುಕ್ ಇದನ್ನು ಮಾಡುತ್ತಿದೆ. ಈ ಹಿಂದೆ ನಿಯಮ ಉಲ್ಲಂಘನೆ ಆದರೆ ನೋಟಿಸ್ ನೀಡುತ್ತಿದ್ದರು. ಆದರೆ ಈಗ ಏಕಾಏಕಿ ಎಲ್ಲವನ್ನೂ ತೆಗೆದಿದ್ದಾರೆ. ನಮ್ಮ ಹೆಚ್ಚಿನ ಓದುಗರು ಫೇಸ್‌ಬುಕ್‌ ಮೂಲಕವೇ ಬರುತ್ತಾರೆ. ಅಲ್ಲಿ ನಮ್ಮನ್ನು ತಡೆಹಿಡಿದು ಅವರಿಗೆ ತಲುಪದಂತೆ ಮಾಡಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ: ನೂಪುರ್ ಶರ್ಮಾ, ಪತ್ರಕರ್ತೆ ಸಬಾ ನಖ್ವಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ

“ಈ ತೊಂದರೆಯ ಬಗ್ಗೆ ನಮ್ಮ ತಾಂತ್ರಿತ ತಂಡ ಫೇಸ್‌ಬುಕ್‌ಗೆ ದೂರು ನೀಡಿದ್ದಾರೆ. ಅವರು ರಿವೀವ್ ಮಾಡಲು 48 ಗಂಟೆ ಕೇಳಿದ್ದಾರೆ. ಇಲ್ಲಿಯೆ ನೋಡಿ, ಅವರಿಗೆ ರಿವೀವ್ ಮಾಡಲು 48 ಗಂಟೆಗಳು ಬೇಕು. ಆದರೆ ತೆಗೆದು ಹಾಕಲು ಯಾವುದೇ ಸಮಯ ನೀಡಿಲ್ಲ. ಅದೂ ಕೂಡಾ ಯಾವುದೇ ನೋಟಿಸ್ ನೀಡದೆ ಎಲ್ಲವನ್ನೂ ತೆಗೆದು ಹಾಕಿದ್ದಾರೆ. ಅವರು ರಿವೀವ್‌ ಮಾಡಲು 48 ಗಂಟೆಗಳು ತೆಗೆದುಕೊಂಡ ಹಾಗೆ ನಮಗೆ ಕೂಡಾ ಒಂದು ಅವಕಾಶ ನೀಡಬೇಕಿತ್ತಲ್ಲವೆ. ಎಲ್ಲಾ ನಿಯಮಗಳನ್ನು ಮೀರಿ ಬರೆಯುವ ಎಷ್ಟೊ ವೆಬ್‌ಸೈಟ್‌ಗಳು ಫೇಸ್‌ಬುಕ್‌ನಲ್ಲಿ ಹಲವಾರು ಇವೆ. ಸರ್ಕಾರದ ಪರವಾಗಿ ಬರೆಯುವ ಅವುಗಳನ್ನು ಫೇಸ್‌ಬುಕ್‌ ಏನು ಮಾಡುವುದೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ನಾನುಗೌರಿ.ಕಾಂ ಫೇಸ್‌ಬುಕ್ ಪ್ರತಿನಿಧಿಗಳಿಗೆ ಸಂಪರ್ಕಿಸಿತ್ತಾದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ತಕ್ಷಣವೇ ಅದನ್ನು ಅಪ್‌ಡೇಟ್‌ ಮಾಡುತ್ತೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...