Homeರಾಷ್ಟ್ರೀಯಝೀ ನ್ಯೂಸ್‌‌ ನಿರೂಪಕ ರೋಹಿತ್ ರಂಜನ್‌ಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್!

ಝೀ ನ್ಯೂಸ್‌‌ ನಿರೂಪಕ ರೋಹಿತ್ ರಂಜನ್‌ಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್!

- Advertisement -
- Advertisement -

ಕಾಂಗ್ರೆಸ್‌‌ ನಾಯಕ ರಾಹುಲ್ ಗಾಂಧಿ ಅವರ ಸುಳ್ಳು ಸುದ್ದಿ ಪ್ರಸಾರ ಮಾಡಿ ನಿರೂಪಿಸಿದ್ದ ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್‌‌ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಬಂಧನದಿಂದ ರಕ್ಷಣೆ ನೀಡಿದೆ. ಅವರ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನು ಒಟ್ಟಿಗೆ ಸೇರಿಸಬೇಕು ಎಂದೂ ಅವರು ವಿನಂತಿಸಿದ್ದಾರೆ.

ರೋಹಿತ್‌ ರಂಜನ್ ಮನವಿಯ ಮೇರೆಗೆ ಸುಪ್ರೀಂಕೋರ್ಟ್‌ ಅಟಾರ್ನಿ ಜನರಲ್ ಕಚೇರಿಯ ಮೂಲಕ ಕೇಂದ್ರ ಸರ್ಕಾಕ್ಕೆ ನೋಟಿಸ್ ನೀಡಿದ್ದು, ಅವರಿಗೆ, ಅವರ ಕುಟುಂಬ ಸದಸ್ಯರು ಮತ್ತು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅವರ ಸಹೋದ್ಯೋಗಿಗಳಿಗೆ ಭದ್ರತೆ ನೀಡುವಂತೆ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೋಹಿತ್ ರಂಜನ್ ಅವರು, ರಾಹುಲ್‌ ಗಾಂಧಿ ಅವರ ಕೇರಳದ ಕಚೇರಿಯ ಮೇಲೆ ದಾಳಿ ಮಾಡಿದವರನ್ನು ಮಕ್ಕಳು ಎಂದು ಬಣ್ಣಿಸಿ, ಅವರನ್ನು ಕ್ಷಮಿಸುವುದಾಗಿ ಹೇಳಿದ್ದರು. ಆದರೆ ಝೀ ನ್ಯೂಸ್ ಅದನ್ನು ತಿರುಚಿ, ‘‘ರಾಹುಲ್ ಗಾಂಧಿ ಅವರು ಉದಯಪುರದ ಟೈಲರ್‌ ಕನ್ನಯ್ಯ ಲಾಲ್ ಅವರ ಹತ್ಯೆ ಮಾಡಿದವರನ್ನು ಮಕ್ಕಳು ಎಂದಿದ್ದು, ಕ್ಷಮಿಸುವುದಾಗಿ ಹೇಳಿದ್ದಾರೆ” ಎಂದು ವರದಿ ಮಾಡಿತ್ತು.

ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಝೀ ನ್ಯೂಸ್ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರ ನಂತರ ಎಚ್ಚೆತ್ತ ಝೀ ನ್ಯೂಸ್‌ ಸುಳ್ಳು ಸುದ್ದಿಗಾಗಿ ಕ್ಷಮೆಯಾಚಿಸಿತ್ತು.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಸುಪ್ರೀಂಕೋರ್ಟ್‌ ಮೊರೆ ಹೋದ ಝೀ ನ್ಯೂಸ್ ನಿರೂಪಕ

ಆದರೆ ಮಂಗಳವಾರ, ಛತ್ತೀಸ್‌ಗಢದ ಪೊಲೀಸ್ ತಂಡವು ರೋಹಿತ್‌ ರಂಜನ್ ಅವರನ್ನು ಬಂಧಿಸಲು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ತಲುಪಿತ್ತು. ಹೀಗಾಗಿ ತನಗೆ ರಕ್ಷಣೆ ನೀಡುವಂತೆ ರೋಹಿತ್ ರಂಜನ್ ಯುಪಿ ಪೊಲೀಸರಿಗೆ ಸಂದೇಶ ಕಳುಹಿಸಿದ್ದರು. ಇದರ ನಂತರ ಅವರ ಮನೆಯ ಹೊರಗೆ ಎರಡು ರಾಜ್ಯಗಳ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ಏರ್ಪಟ್ಟಿದ್ದವು. ಕೊನೆಗೆ ಯುಪಿ ಪೊಲೀಸರು ಅವರನ್ನು ಬಂಧಿಸಿ, ಅದೇ ರಾತ್ರಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಶಹಬಾಷ್ up ಶಹಬಾಷ್ ನೀವೆಲ್ಲ ನ್ಯಾಯ ಒದಗಿಸೋಕೆ ಅಂತ ನೇಮಕಗೊಂಡಿದ್ದಿರೋ ಇಲ್ಲ ಜೀವನ ಪೂರ್ತಿ ಅನ್ಯಾಯದ ಕೊಂಪೆಯಲ್ಲೇ ಒದ್ದಾಡಿ ಜನಸಾಮಾನ್ಯರ ಜೀವನ ನರಕ ಮಾಡಬೇಕು ಅಂತನಾ..?

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...