Homeಅಂತರಾಷ್ಟ್ರೀಯಚುನಾವಣಾ ಭಾಷಣ ಮಾಡುತ್ತಿದ್ದಾಗ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಗುಂಡಿಕ್ಕಿ ಹತ್ಯೆ

ಚುನಾವಣಾ ಭಾಷಣ ಮಾಡುತ್ತಿದ್ದಾಗ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಗುಂಡಿಕ್ಕಿ ಹತ್ಯೆ

- Advertisement -
- Advertisement -

ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೆಳಗ್ಗೆ ದಕ್ಷಿಣದ ನಗರವಾದ ನಾರಾದಲ್ಲಿ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಎರಡು ಬಾರಿ ಗುಂಡು ಹಾರಿಸಲಾಗಿದೆ. ಅವರು ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದರು ಎಂದು ವರದಿಯಾಗಿದೆ. ತಕ್ಷಣ ಕುಸಿದು ಬಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ದಾಳಿ ಘಟನೆಯನ್ನು ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿರುವ ಜಪಾನ್‌ನ ಹಾಲಿ ಪ್ರಧಾನಿ ಫ್ಯೂಮಿಯೊ ಕಿಶಿಡಾ, “ಇದು ಅನಾಗರಿಕ ಮತ್ತು ದುರುದ್ದೇಶಪೂರಿತವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮಾಜಿ ಪ್ರಧಾನಿ ಅಬೆ ಅವರಿಗೆ ನಾರಾದಲ್ಲಿ ಬೆಳಿಗ್ಗೆ 11:30 ರ ಸುಮಾರಿಗೆ ಗುಂಡಿಕ್ಕಲಾಗಿದೆ. ಶೂಟರ್ ಎಂದು ನಂಬಲಾದ 40 ರ ಹರೆಯದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ” ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೋಕಾಜು ಮಾಟ್ಸುನೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾನುವಾರ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಶಿಂಜೋ ಅಬೆ ಭಾಷಣ ಮಾಡುತ್ತಿದ್ದಾಗ ಗುಂಡಿನ ಸದ್ದು ಕೇಳಿಸಿತು ಎಂದು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ

“ಅವರು ಭಾಷಣ ಮಾಡುತ್ತಿದ್ದಾಗ, ವ್ಯಕ್ತಿಯೊಬ್ಬ ಹಿಂದಿನಿಂದ ಬಂದ. ಮೊದಲ ಗುಂಡಿನ ಸದ್ದು ಆಟಿಕೆ ಬಂದೂಕಿನಂತೆ ಕೇಳಿತ್ತು. ಅದರಿಂದ ಅವರು ನೆಲಕ್ಕೆ ಬೀಳಲಿಲ್ಲ, ಎರಡನೇ ಗುಂಡಿನ ಸದ್ದು ದೊಡ್ಡದಾಗಿತ್ತು. ಕಿಡಿ ಮತ್ತು ಹೊಗೆ ಕೂಡಾ ಕಂಡಿತ್ತು. ಎರಡನೇ ಹೊಡೆತದ ನಂತರ, ಜನರು ಅವರನ್ನು ಸುತ್ತುವರೆದರು” ಎಂದು ಪ್ರತ್ಯಕ್ಷದರ್ಶಿ ಯುವತಿಯೊಬ್ಬರು ಹೇಳಿದ್ದಾರೆ.

ಎರಡೂ ಗುಂಡುಗಳು ಅವರಿಗೆ ತಾಗಿವೆಯೇ ಅಥವಾ ಗುಂಡು ಅವರ ಕುತ್ತಿಗೆಗೆ ತಗುಲಿ ಬೇರೆಡೆಗೆ ಹೋಗಿದೆಯೆ ಎಂಬುದು ಸ್ಪಷ್ಟವಾಗಿಲ್ಲ.

ದಾಳಿಯ ನಂತರದ ನಿಮಿಷಗಳಲ್ಲಿ ಶಿಂಜೊಗೆ ಪ್ರಜ್ಞೆಯಿತ್ತು ಮತ್ತು ಸ್ಪಂದಿಸುತ್ತಿದ್ದರು ಎಂದು ಹೇಳಲಾಗಿದೆ. ಆ ನಂತರ ಅವರ ಪರಿಸ್ಥತಿ ಹದಗೆಟ್ಟಿತು ಎಂದು ವರದಿಗಳು ಹೇಳಿವೆ. ಬಹುಶಃ ಶಾಟ್‌ಗನ್‌ನಿಂದ ಅವರ ಹಿಂದಿನಿಂದ ಗುಂಡು ಹಾರಿಸಿರುವುದು ಕಂಡುಬಂದಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಘಟನೆಯ ಹಿನ್ನೆಲೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿ ಎಂದು ವರದಿಗಳು ಹೇಳಿವೆ.

ಜಪಾನ್‌ನ ದೀರ್ಘಾವಧಿ ಪ್ರಧಾನಿಯಾಗಿರುವ ಶಿಂಜೊ ಅಬೆ, 2006 ರಲ್ಲಿ ಒಂದು ವರ್ಷ ಮತ್ತು 2012 ರಿಂದ 2020 ರವರೆಗೆ ಅಧಿಕಾರದಲ್ಲಿದ್ದರು. ನಂತರ ಅವರು ಆರೋಗ್ಯ ಸಮಸ್ಯೆಯಿಂದ ತಮ್ಮ ಸ್ಥಾನದಿಂದ ನಿರ್ಗಮಿಸಿದರು.

ಇದನ್ನೂ ಓದಿ: ಕೊಲಂಬಿಯಾದಲ್ಲಿ ಮೊದಲ ಎಡಪಂಥೀಯ ಸರ್ಕಾರ; ಸಾಧ್ಯವಾದದ್ದು ಹೇಗೆ?

ಜಪಾನ್‌ ‌ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದೆ. ಬಂದೂಕು ಪರವಾನಗಿಯನ್ನು ಪಡೆಯುವುದು ಜಪಾನಿನ ನಾಗರಿಕರಿಗೂ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದೆ. ಬಂದೂಕು ಬೇಕೆಂದರೆ ಅವರು ಮೊದಲು ಶೂಟಿಂಗ್ ಅಸೋಸಿಯೇಷನ್‌ನಿಂದ ಶಿಫಾರಸನ್ನು ಪಡೆಯಬೇಕು ಮತ್ತು ಪೊಲೀಸರಿಂದ ಕಟ್ಟುನಿಟ್ಟಾದ ತಪಾಸಣೆಗೆ ಒಳಗಾಗಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...