Homeಅಂತರಾಷ್ಟ್ರೀಯಚುನಾವಣಾ ಫಲಿತಾಂಶ ವಿರೋಧಿಸಿ ಬೃಹತ್‌ ರ್‍ಯಾಲಿ ನಡೆಸಲಿರುವ ಟ್ರಂಪ್‌‌ ಬೆಂಬಲಿಗರು

ಚುನಾವಣಾ ಫಲಿತಾಂಶ ವಿರೋಧಿಸಿ ಬೃಹತ್‌ ರ್‍ಯಾಲಿ ನಡೆಸಲಿರುವ ಟ್ರಂಪ್‌‌ ಬೆಂಬಲಿಗರು

ರಾಷ್ಟ್ರದ ಒಳಿತಿಗಾಗಿ, ಚುನಾವಣೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಅವರ ಪರವಾಗಿರುವ ವೆಬ್‌ಸೈಟ್ ಬರೆದಿದೆ

- Advertisement -
- Advertisement -

2020 ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ವಿರೋಧಿಸಿ ಜನವರಿ 6 ರಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ತಮ್ಮ ಬೆಂಬಲಿಗರು ರ್‍ಯಾಲಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

“ವಾಷಿಂಗ್ಟನ್ ಡಿ.ಸಿ.ಯಲ್ಲಿ ಬೃಹತ್‌ ಪ್ರತಿಭಟನಾ ರ್‍ಯಾಲಿ ಜನವರಿ 6 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಕಳ್ಳತನ ನಿಲ್ಲಿಸಿ!” ಎಂದು ಟ್ರಂಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, “6 ರಂದು ಬೃಹತ್ ಪ್ರಮಾಣದ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲಾಗುವುದು. ನಾವು ಗೆದ್ದಿದ್ದೇವೆ,ಬೃಹತ್ತಾಗಿ!” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಟ್ರಂಪ್ ನಿರ್ಗಮನದ ದಿನ ಎಣಿಸಲೆಂದೇ ಒಂದು ವೆಬ್‌ಸೈಟ್!

ರ್‍ಯಾಲಿಯ ನೇತೃತ್ವವನ್ನು ವಹಿಸಿರುವ ’ವುಮೆನ್ ಫಾರ್‌ ಅಮೆರಿಕ ಫಸ್ಟ್’ ಅಭಿಯಾನದ ’ಸ್ಪುಟ್ನಿಕ್’, “2020 ರ ಚುನಾವಣೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕನ್ನರು ಈ ರ್‍ಯಾಲಿಯಲ್ಲಿ ಸೇರಬೇಕು” ಎಂದು ಕರೆ ನೀಡಿದೆ.

“ಡೆಮಾಕ್ರಟಿಕ್‌‌ಗಳು ರಿಪಬ್ಲಿಕನ್ ಮತಗಳನ್ನು ನಿರಾಕರಿಸಲು ಯೋಜಿಸುತ್ತಿದ್ದಾರೆ. ಅದನ್ನು ತಡೆಯುವುದು ಅಮೆರಿಕದ ಜನರಿಗೆ ಬಿಟ್ಟದ್ದು. ಅಧ್ಯಕ್ಷ ಟ್ರಂಪ್ ಜೊತೆಗೆ, ರಾಷ್ಟ್ರದ ಒಳಿತಿಗಾಗಿ ಈ ಚುನಾವಣೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಸ್ಪುಟ್ನಿಕ್ ಬರೆದಿದೆ.

ಇದನ್ನೂ ಓದಿ: ನಾವು ಟ್ರಂಪ್ ಹುಚ್ಚ ಎನ್ನುವುದಿಲ್ಲ; ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಒಬಾಮ ಯಾರು?- ಶಿವಸೇನೆ ಪ್ರಶ್ನೆ

“ದಯವಿಟ್ಟು ಜನವರಿ 6, 2021 ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ. ತಡವಾಗುವ ಮುನ್ನ ನಿಮ್ಮ ಬೆಂಬಲ ಅಗತ್ಯ” ಎಂದು ಅದು ಹೇಳಿದೆ.

ಡಿಸೆಂಬರ್ 14 ರಂದು ಅಮೆರಿಕಾದ ಎಲ್ಲಾ 50 ರಾಜ್ಯಗಳ ಮತದಾನ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಅಧಿಕೃತ ಫಲಿತಾಂಶಗಳ ಪ್ರಕಾರ, ಬಿಡೆನ್ 306 ಚುನಾವಣಾ ಮತಗಳನ್ನು ಪಡೆದಿದ್ದು, ಟ್ರಂಪ್ ಪರ 232 ಮತಗಳು ಚಲಾವಣೆಯಾಗಿದೆ. ಜನವರಿ 20 ರಂದು ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ.

ಇದನ್ನೂ ಓದಿ: ನೊಬೆಲ್​ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸ್ಸು: ನಾರ್ವೇಯ ಸಂಸತ್ ಸದಸ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...