ಶುಕ್ರವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಹಿಳಾ ಪ್ರತಿಭಟನಾಕಾರರೊಬ್ಬರಿಗೆ ಪಶ್ಚಿಮ ಬಂಗಾಳದ ಬಿಜೆಪಿ ಹಿರಿಯ ನಾಯಕ ದಿಲೀಪ್ ಘೋಷ್ ಬೆದರಿಕೆ ಹಾಕುತ್ತಿರುವ ವಿಡಿಯೊ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಾಜಿ ಸಂಸದರಾಗಿರುವ ದಿಲೀಪ್ ಅವರು ರಾಜ್ಯದ ಖರಗ್‌ಪುರದ ವಾರ್ಡ್ 6 ರಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಉದ್ಘಾಟಿಸಲು ಹೋದಾಗ ಈ ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳ
ಸಂಸತ್ ಸದಸ್ಯರಾಗಿದ್ದಾಗ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿ ಸ್ಥಳೀಯ ಮಹಿಳೆಯರು ಘೋಷ್ ಅವರನ್ನು ಘೆರಾವ್ ಹಾಕಿದಾಗ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿತು. ಪ್ರಸ್ತುತ ರಸ್ತೆಯನ್ನು ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಪ್ರದೀಪ್ ಸರ್ಕಾರ್ ನಿರ್ಮಿಸಿದ್ದಾರೆ ಎಂದು ಮಹಿಳೆ ಹೇಳಿದ್ದರು. ಪಶ್ಚಿಮ ಬಂಗಾಳ
“ನೀವು ಇಷ್ಟು ದಿನ ಎಲ್ಲಿದ್ದೀರಿ? ನೀವು ಸಂಸದರಾಗಿದ್ದಾಗ ನಾವು ನಿಮ್ಮನ್ನು ಒಂದು ದಿನವೂ ನೋಡಿರಲಿಲ್ಲ. ಈಗ, ನಮ್ಮ ಕೌನ್ಸಿಲರ್ ರಸ್ತೆ ನಿರ್ಮಿಸಿದ ನಂತರ, ನೀವು ಇಲ್ಲಿಗೆ ಬಂದಿದ್ದೀರಾ?” ಎಂದು ಮಹಿಳೆಯೊಬ್ಬರು ಹೇಳಿರುವುದಾಗಿ ಎನ್‌ಡಿಟಿವಿ ಉಲ್ಲೇಖಿಸಿದೆ.
After Arjun Singh and Suvendu Adhikari
Now BJP leader Dilip Ghosh has gotten belt treatment from the women of West Bengal.Women of WB will ensure that the political careers of these BJP leaders come to an end in 2026 after the humiliating defeat
— Ethnic Bengali (@SecularBengali) March 21, 2025
ಈ ವೇಳೆ ದಿಲೀಪ್ ಘೋಷ್ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿ ಪ್ರತಿಭಟನಾಕಾರರನ್ನು ತೃಣಮೂಲ ಬೆಂಬಲಿಗರು ಎಂದು ಕರೆದಿದ್ದಾರೆ. “ನಾನು ಅದನ್ನು ನಿಮ್ಮ ತಂದೆಯ ಹಣದಿಂದ ನಿರ್ಮಿಸಿಲ್ಲ, ನನ್ನ ಹಣದಿಂದ ನಿರ್ಮಿಸಿದ್ದೇನೆ. ಹೋಗಿ ಪ್ರದೀಪ್ ಸರ್ಕಾರ್ ಅವರನ್ನು ಅದರ ಬಗ್ಗೆ ಕೇಳಿ” ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ಮಹಿಳೆ ಆಕ್ರೋಶಗೊಂಡು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. “ನನ್ನ ತಂದೆಯನ್ನು ಏಕೆ ಎಳೆದುತರುತ್ತೀರಿ? ಸಂಸದರಾಗಿದ್ದ ನೀವು ಹೀಗೆ ಮಾತನಾಡಬಹುದೇ?” ಎಂದು ಕೇಳಿದ್ದಾರೆ. ಈ ವೇಳೆ ದಿಲೀಪ್ ಘೋಷ್, “ನಾನು ನಿಮ್ಮ ಹದಿನಾಲ್ಕು ತಲೆಮಾರುಗಳನ್ನು ಕೂಡಾ ಎಳೆದುತರುತ್ತೇನೆ” ಎಂದು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ.
“ಕಿರುಚಬೇಡಿ. ನಾನು ನಿಮ್ಮ ಕತ್ತು ಹಿಸುಕುತ್ತೇನೆ. ನಾನು ಸಂಸದನಾಗಿದ್ದಾಗ ನನ್ನ MPLAD ನಿಧಿಯಿಂದ ಇದಕ್ಕಾಗಿ ಹಣವನ್ನು ನೀಡಿದ್ದೆ,” ಎಂದು ಪ್ರತಿಭಟನಾಕಾರರನ್ನು ಬೆದರಿಸಿ ಅವರನ್ನು “ತೃಣಮೂಲದ ನಾಯಿಗಳು” ಎಂದು ದಲೀಪ್ ಕರೆದಿದ್ದಾರೆ.
Chad Dilip Ghosh 🗿 pic.twitter.com/kcrZykxGqi
— গর্ত চ্যাটার্জি (@Gorto_C) March 21, 2025
ಬಿಜೆಪಿ ನಾಯಕ ಮತ್ತು ಮಹಿಳೆಯ ನಡುವಿನ ವಾಗ್ವಾದವು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ಹತ್ತಿರದ ಖರಗ್‌ಪುರ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದ್ದು, ಆ ಹೊತ್ತಿಗೆ ಮಹಿಳೆಯರು ಅವರ ವಾಹನವನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ದಿಲೀಪ್ ಘೋಷ್ ಪೊಲೀಸ್ ರಕ್ಷಣೆಯಲ್ಲಿ ಪ್ರದೇಶವನ್ನು ಬಿಡಬೇಕಾಯಿತು.
ಈ ಬಗ್ಗೆ ಆನ್‌ಲೈನ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ದಿಲೀಪ್ ಘೋಷ್, ರಸ್ತೆಯನ್ನು 2.6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
1.2 Although the municipality was responsible for this work, but they failed to fulfill their duty. Subsequently, we took the initiative to construct the road using the MP fund.
Today, during the inauguration, the local TMC people created a ruckus. pic.twitter.com/KSSXvcioSw
— Dilip Ghosh (Modi Ka Parivar) (@DilipGhoshBJP) March 21, 2025
ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷವಿದ್ದು, ಈ ಘಟನೆಯು ಬಿಜೆಪಿಯ ನಡವಳಿಕೆಯನ್ನು ಟೀಕಿಸಲು ತೃಣಮೂಲ ಕಾಂಗ್ರೆಸ್ ಬಳಸಿಕೊಂಡಿದೆ. ಹಿರಿಯ ಬಿಜೆಪಿ ನಾಯಕನ ವರ್ತನೆಯನ್ನು ಖಂಡಿಸಿರುವ ತೃಣಮೂಲ ಕೌನ್ಸಿಲರ್ ಮತ್ತು ಖರಗ್‌ಪುರದ ಮಾಜಿ ಶಾಸಕ ಸರ್ಕಾರ್ ಅವರು, “ಅವರು ಅಲ್ಲಿಗೆ ಹೋಗಿ ಗಲಾಟೆ ಮಾಡಿಕೊಂಡರು. ಅವರ ತಂದೆಯನ್ನು ಎಳೆದುತರುವ ಮೂಲಕ ಮಹಿಳೆಯನ್ನು ಅವಮಾನ ಮಾಡಿದರು. ನಾನು ಅಲ್ಲಿ ಇರಲಿಲ್ಲ, ಆದರೆ ಅವರು ನನ್ನ ತಂದೆಯನ್ನು ಸಹ ಅವಮಾನಿಸಿದ್ದಾರೆ. ಅವರು ಮಹಿಳೆಯರನ್ನು 500 ರೂಪಾಯಿ ಕೆಲಸಗಾರರು ಎಂದು ಕರೆದರು.” ಎಂದು ಹೇಳಿದ್ದಾರೆ.
“ಈ ಘಟನೆಗೆ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಅವರು ಖರಗ್‌ಪುರದಲ್ಲಿ ಎಲ್ಲಿಗೆ ಹೋದರೂ ಪ್ರತಿಭಟನೆಗಳು ನಡೆಯುತ್ತವೆ. ಇಂತಹ ಭಾಷೆ ಮಾಜಿ ಸಂಸದರಿಗೆ ತಕ್ಕದ್ದಲ್ಲ” ಎಂದು ಸರ್ಕಾರ್ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಿಂಸಾಚಾರ ಪೀಡಿತ ಮಣಿಪುರ ತಲುಪಿದ ಐವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯೋಗ
ಹಿಂಸಾಚಾರ ಪೀಡಿತ ಮಣಿಪುರ ತಲುಪಿದ ಐವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯೋಗ

