ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಭವಾಗಲು ಇನ್ನೆನು ಹತ್ತು ದಿನಗಳು ಇರುತ್ತಿದ್ದಂತೆ, ಆಡಳಿತರೂಢ ತೃಣಮೂಲ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಾರ್ಷಿಕವಾಗಿ 5 ಲಕ್ಷ ಉದ್ಯೋಗಾವಕಾಶಗಳನ್ನು ನೀಡುವ ಭರವಸೆಯನ್ನು ಬುಧವಾರ ನೀಡಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ತಮ್ಮ ಸರ್ಕಾರವು ರಾಜ್ಯದಲ್ಲಿ ಬಡತನವನ್ನು ಶೇಕಡಾ 40 ರಷ್ಟು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಬಿಜೆಪಿ ನಾಯಕಿ
ಪ್ರಣಾಳಿಕೆಯು ಬಂಗಾಳದಲ್ಲಿ ಸಾಮಾನ್ಯ ವರ್ಗ ಮತ್ತು ಹಿಂದುಳಿದ ಸಮುದಾಯದ ಜನರಿಗೆ ಕ್ರಮವಾಗಿ ಕನಿಷ್ಠ 6,000 ರೂ ಮತ್ತು 12,000 ರೂ. ನೀಡುವುದಾಗಿ ಭರವಸೆ ನೀಡಿದೆ.
ತಮ್ಮ ಪ್ರಣಾಳಿಕೆಯನ್ನು ಮಹಿಳಾ ಪರ ಪ್ರಣಾಳಿಕೆ ಎಂದು ಪ್ರತಿಪಾದಿಸಿರುವ ಪಕ್ಷವು, 18 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರಿಗೆ ತಿಂಗಳಿಗೆ 1000 ರೂ. ಮತ್ತು 1.6 ಕೋಟಿ ಮನೆಗಳಲ್ಲಿ ಮಹಿಳೆಯರಿಗೆ ಮೂಲ ಮಾಸಿಕ ಆದಾಯವನ್ನು ತನ್ನ ಸರ್ಕಾರ ಖಚಿತಪಡಿಸುತ್ತದೆ ಎಂದು ಹೇಳಿದೆ.
ಪ್ರಣಾಳಿಕೆ, ‘ಕೃಷಕ್ ಬಂಧು’ ಯೋಜನೆಯಡಿ ರೈತರಿಗೆ ವಾರ್ಷಿಕ ಆರ್ಥಿಕ ಸಹಾಯವನ್ನು 6000 ರೂ.ಗಳಿಂದ 10000 ರೂ.ಗೆ ಹೆಚ್ಚಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಬಿಜೆಪಿಗೆ ಮತ ನೀಡಿದರೆ ‘ಜೈ ಸಿಯಾ ರಾಂ’ ಎನ್ನಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ


