ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಬಿಜೆಪಿ ನಾಯಕಿ

ಒಡಿಶಾದ ಐಆರ್‌‌‌‌ಸಿ ಗ್ರಾಮದಲ್ಲಿ ಮಂಗಳವಾರ ಸಂಜೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ನಾಯಕಿ ಉಪಾಸ್ನಾ ಮೊಹಾಪಾತ್ರಾ ಜೊತೆಗೆ 30 ಕ್ಕೂ ಹೆಚ್ಚು ಗೂಂಡಾಗಳ ವಿರುದ್ಧ ಬುಧವಾರ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ನಾಯಕಿ ಉಪಾಸ್ನಾ ಜೊತೆಗೆ 30 ಕ್ಕೂ ಹೆಚ್ಚು ಜನರು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪ್ರಣಬ್ ರೇ ಅವರ ಮನೆ ಪ್ರವೇಶಿಸಿ, ಹಲ್ಲೆ ನಡೆಸಿ ನಗದು ಮತ್ತು ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

“ಉಪಾಸ್ನಾ ಮತ್ತು ಸುಮಾರು 30 ರಿಂದ 40 ಜನರು, ನಾಯಪಲ್ಲಿ ಪೊಲೀಸ್ ವ್ಯಾಪ್ತಿಯ ಪ್ರಣಬ್‌ ವಾಸಿಸುತ್ತಿದ್ದ ಮನೆಗೆ ನುಗ್ಗಿ, ಅವರ ಮೇಲೆ ಹಲ್ಲೆ ಮಾಡಿ, ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಜೊತೆಗೆ ಮನೆಯನ್ನು ಖಾಲಿ ಮಾಡುವಂತೆ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ” ಎಂದು ಭುವನೇಶ್ವರ ಡಿಸಿಪಿ ಉಮಾಶಂಕರ್ ದ್ಯಾಶ್ ಹೇಳಿದ್ದಾರೆ.

ಇದನ್ನೂ ಓದಿ: ನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ 17 ಜನರನ್ನು ಬಂಧಿಸಿದ್ದಾರೆ. ಉಪಾಸ್ನಾ ಅವರನ್ನು ಆರೋಪಿಗಳಲ್ಲಿ ಒಬ್ಬರೆಂದು ಹೆಸರಿಸಲಾಗಿದ್ದರೂ, ಅವರನ್ನು ಇನ್ನೂ ಬಂಧಿಸಲಾಗಿಲ್ಲ.

“ಪ್ರಣಬ್ ರೇ ಅವರು ಬಿಜಯ್ ನಾಯಕ್ ಎಂಬವರ ಮನೆಯಲ್ಲಿ ಬಾಡಿಗೆಗೆ ತಂಗಿದ್ದರು. ಬಿಜಯ್ ಅವರು ತಮ್ಮ ಮನೆಯನ್ನು ಪ್ರಣಬ್‌ ಅವರಿಗೆ ಮಾರಾಟ ಮಾಡುವುದಾಗಿ ತಿಳಿಸಿದ್ದರು. ಇದಕ್ಕಾಗಿ ಪ್ರಣಬ್‌ ಮನೆಯ ಒಳಾಂಗಣ ವಿನ್ಯಾಸಕ್ಕೆ ಸುಮಾರು 48 ಲಕ್ಷ ರೂ ಖರ್ಚು ಮಾಡಿದ್ದರು. ಆದರೆ ಇದರ ನಂತರ ಬಿಜಯ್ ಅವರು, ಉಪಾಸ್ನಾ ಅವರ ಪತಿ ಸುಭ್ರಾನ್ಸು ಶೇಖರ್ ಬಿಸ್ವಾಲ್ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

“ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮನೆ ದರೋಡೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಡಿಸಿಪಿ ಉಮಾಶಂಕರ್ ದ್ಯಾಶ್‌ ಹೇಳಿದ್ದಾರೆ.


 

ಇದನ್ನೂ ಓದಿ: ಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬದ್ರುದ್ದೀನ್ ಅಜ್ಮಲ್! – ಅವರ ಪ್ರತಿಕ್ರಿಯೆ ಏನು?

LEAVE A REPLY

Please enter your comment!
Please enter your name here