Homeಅಂಕಣಗಳುನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

ನೂರರ ನೋಟ: ಕಾಡುಗಳ್ಳರ ಅಟ್ಟಹಾಸ; ನಿಲ್ಲದ ಗಣಿಗಾರಿಕೆ; ಹೆಚ್ಚಿದ ವನ್ಯಜೀವ-ಮನುಷ್ಯ ಸಂಘರ್ಷ

- Advertisement -
- Advertisement -

ಕಾಡಿನಲ್ಲಿ ವಾಸ ಮಾಡುವ ಹುಲಿ, ಚಿರತೆ, ಆನೆ ಪದೇ ಪದೇ ಅರಣ್ಯದ ಹತ್ತಿರ ಇರುವ ಗ್ರಾಮಗಳಿಗೆ ಬರುತ್ತಿವೆ. ಆನೆ ಬೆಳೆ ನಾಶ ಮಾಡುತ್ತದೆ, ಜನರ ಮೇಲೆ ದಾಳಿ ಮಾಡಿ ಕೊಲ್ಲುತ್ತದೆ. ಹುಲಿ ಚಿರತೆಗಳು ನಾಯಿ, ಹಸು, ಕರು, ಕೋಳಿಗಳನ್ನು ತಿಂದು ಹಾಕುವುದಲ್ಲದೆ ಮನುಷ್ಯರ ಮೇಲೂ ಬಿದ್ದು ಹಾನಿ ಮಾಡುತ್ತಿವೆ. ಪ್ರತಿದಿನ ಈ ವನ್ಯಜೀವಿ ಮತ್ತು ಮನುಷ್ಯರ ಸಂಘರ್ಷದ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಸರ್ಕಾರವೇ ಆಗಲಿ, ಅರಣ್ಯ ಇಲಾಖೆಯಾಗಲಿ ಆತಂಕಗೊಳ್ಳುತ್ತಿಲ್ಲ. ಅದರ ಬಗೆಗೆ ಚರ್ಚೆಯೂ ಆಗುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಒಂದು ದಿನ ಅರಣ್ಯದ ಪ್ರಾಣಿಗಳೆಲ್ಲ ಗ್ರಾಮಗಳನ್ನು ಆವರಿಸಿಕೊಂಡು ಭಯ ಭೀತನಾದ ಮನುಷ್ಯ ತನ್ನ ರಕ್ಷಣೆಗಾಗಿ ಅರಣ್ಯ ಸೇರುವುದು ಅನಿವಾರ್ಯವಾಗುತ್ತದೆ.

ಹಿಂದೆ ಎಂದೋ ಒಂದೊಂದು ಸಾರಿ ಹಳ್ಳಿಗಳಿಗೆ ಬರುತ್ತಿದ್ದ ಕಾಡುಪ್ರಾಣಿಗಳು ಈಗ ಪದೇಪದೇ ಹೊರಟಹತ್ತಿವೆ. ಇದಕ್ಕೆ ಕಾರಣವೇನಿರಬಹುದು ಎಂದು ಜರೂರಾಗಿ ಯೋಚಿಸಬೇಕಾದ ಸಮಯ ಇದು.

ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಕಾಡುಪ್ರಾಣಿಗಳಿಗೆ ಇದರಿಂದ ನೆಲಸಲು ಸ್ಥಳದ ಅಭಾವ ಕಾಣಿಸಿಕೊಳ್ಳುತ್ತಿರಬಹುದು. ಆಹಾರ ಮತ್ತು ನೀರಿನ ಅಭಾವ ಇದಕ್ಕೆ ಕಾರಣವಿರಬಹುದು. ಅರಣ್ಯ ನಾಶಕ್ಕೆ ಮುಖ್ಯ ಕಾರಣ ಹಲವು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಸರ್ಕಾರ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದು. ಪಶ್ಚಿಮಘಟ್ಟ ಮೊದಲುಗೊಂಡು ಎಲ್ಲೆಲ್ಲಿ ಬೆಟ್ಟದ ಸಾಲುಗಳಿವೆಯೋ ಅಲ್ಲೆಲ್ಲ ಸರ್ಕಾರದ ಒಪ್ಪಿಗೆ ಪಡೆದು ಅಥವಾ ಅಕ್ರಮವಾಗಿ ಕಲ್ಲುಗಣಿ ಕಾರ್ಯ ಅವ್ಯಾಹತವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು, ಕಾಡಿನಲ್ಲಿ ಬೆಳೆದಿರುವ ಉತ್ಕೃಷ್ಟವಾದ ಮರಗಳನ್ನು ಕಳ್ಳತನದಿಂದ ಮತ್ತು ಅರಣ್ಯಾಧಿಕಾರಿಗಳ ನೆರವಿನಿಂದ ಕಡಿದು ದುಡ್ಡು ಮಾಡಿಕೊಳ್ಳುವ ಮರಗಳ್ಳರಿಂದ ಮತ್ತು ಅರಣ್ಯ ಮಧ್ಯದಲ್ಲಿ ಶ್ರೀಮಂತರ ಮೋಜಿಗಾಗಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವ ಧನಪಿಶಾಚಿಗಳಿಂದಾಗಿ ಅರಣ್ಯ ಭೂಮಿ ಕಿರಿದಾಗುತ್ತಿದೆ. ಒಟ್ಟು ಭೂಮಿಯ 1/3ಭಾಗ ಅರಣ್ಯ ಪ್ರದೇಶ ಇರಬೇಕೆಂದು ಇಂಗ್ಲಿಷರ ಕಾಲದಲ್ಲಿ ನಿಯಮ ಇತ್ತು. ಜನಸಂಖ್ಯೆ ಸ್ಫೋಟವಾದಂತೆ ಹಳ್ಳಿಯವರು ತಮ್ಮ ಹಳ್ಳಿಗಳ ವಿಸ್ತರಣೆಗಾಗಿ ಕಾಡನ್ನು ಕಬಳಿಸುತ್ತಾ ಬಂದರು. ನಗರಗಳ, ಪಟ್ಟಣಗಳ ಜನಸಂಖ್ಯೆ ಹೆಚ್ಚಿದಂತೆ ಮುನಿಸಿಪಾಲಿಟಿಗಳು, ಜಿಲ್ಲಾ ಬೋರ್ಡುಗಳು ಸರ್ಕಾರದ ಸಹಕಾರದೊಂದಿಗೆ ಅರಣ್ಯ ಭೂಮಿಯನ್ನೇ ಕಬಳಿಸುವ ಹವ್ಯಾಸಕ್ಕೆ ಬಿದ್ದವು. ಅರಣ್ಯ ಪ್ರದೇಶದಲ್ಲಿ ಕಾರ್ಖಾನೆಗಳನ್ನೂ ಸ್ಥಾಪಿಸಲಾಯಿತು.

ಬೆಂಗಳೂರಿನಂತಹ ಪಟ್ಟಣಗಳು ಬೆಳೆದಂತೆ ಪಟ್ಟಣದ ಸರಹದ್ದಿನಲ್ಲಿದ್ದ ಅರಣ್ಯಗಳ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತು. ಹೀಗಾಗಿ 33% ಇದ್ದ ಅರಣ್ಯ ಪ್ರದೇಶ ಈಗ ಶೇ,18ಕ್ಕೆ ಇಳಿದಿದೆ. ಕೆಲವು ವರ್ಷಗಳ ಹಿಂದೆ ಅರಣ್ಯಪ್ರದೇಶ ಶೇ,23ರಷ್ಟಿತ್ತು. ಆಗಲೇ ಎಚ್ಚೆತ್ತುಕೊಂಡು ಸರ್ಕಾರ ಅರಣ್ಯಪ್ರದೇಶವನ್ನು ವಿಸ್ತರಿಸುವಂತಹ ಕೆಲಸ ಆರಂಭಿಸಬೇಕಾಗಿತ್ತು. ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಅರಣ್ಯ ಈ ದುರವಸ್ಥೆ ಮುಟ್ಟಿದೆ. ಲೋಕಸಭೆಯ, ಶಾಸನಸಭೆಯ ಹಲವು ಸದಸ್ಯರು ಕಲ್ಲಿನ ವ್ಯಾಪಾರ, ಮ್ಯಾಂಗನೀಸ್, ಕಬ್ಬಿಣ ಮುಂತಾದ ಲೋಹಗಳ ವ್ಯಾಪಾರದಲ್ಲಿ ತೊಡಗಿಕೊಂಡು ಅರಣ್ಯ ಪ್ರದೇಶಗಳಲ್ಲಿ, ನದಿತಟಗಳ ಪ್ರದೇಶಗಳ ಆಸುಪಾಸಿನಲ್ಲೂ ಅಕ್ರಮ ಗಣಿಗಾರಿಕೆ ಮಾಡಲುತೊಡಗಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಯ್ತು ದೇಶದ ಪರಿಸ್ಥಿತಿ. ’ಹರ ಕೊಲ್ಲಲು ಪರಕಾಯ್ವನೇ’ ಎಂಬ ದುಸ್ಥಿತಿಗೆ ನಾವು ತಲುಪಿದ್ದೇವೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸಂತೋಷ್ ಲಾಡ್, ಆನಂದ್ ಸಿಂಗ್ ಮುಂತಾದವರು ಗಣಿಗಾರಿಕೆಯಲ್ಲಿ ತೊಡಗಿ ಅದಿರನ್ನು ದೋಚಿದ ಪ್ರಕರಣಗಳನ್ನು ಬಯಲಿಗೆಳೆದ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು, ಬಳ್ಳಾರಿಯನ್ನೇ ಈ ಖದೀಮರು ತಮ್ಮ ವಶವರ್ತಿ ಮಾಡಿಕೊಂಡಿದ್ದರಿಂದ ಅದನ್ನು ಈ ಖದೀಮರ ರಿಪಬ್ಲಿಕ್ ಎಂದು ಕರೆದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಒಮ್ಮೆ ಜನಾದನ ರೆಡ್ಡಿಯವರ ಮೇಲೆ ಮುನಿಸಿಕೊಂಡು ಬಳ್ಳಾರಿಯ ಜಿಲ್ಲಾಧಿಕಾರಿಗಳು, ಗಣಿ ಅಧಿಕಾರಿಗಳು, ಎಸ್‌ಪಿ ಎಲ್ಲರನ್ನೂ ಏಕಕಾಲಕ್ಕೆ ವರ್ಗಾವಣೆ ಮಾಡಿದರು. ಈ ವಿಷಯ ತಿಳಿದ ಜನಾರ್ದನ ರೆಡ್ಡಿಯವರು ಯಡಿಯೂರಪ್ಪನವರಿಗೆ ಫೋನ್ ಮಾಡಿ ’ಈ ಕೂಡಲೇ ನೀವು ವರ್ಗ ಮಾಡಿರುವ ಅಧಿಕಾರಿಗಳನ್ನು ಬಳ್ಳಾರಿಗೆ ವಾಪಸ್ ಕಳುಹಿಸದಿದ್ದರೆ ನೀವು ಕುರ್ಚಿ ಬಿಟ್ಟು ಇಳಿಯಬೇಕಾದೀತು’ ಎಂದು ಬೆದರಿಕೆ ಹಾಕಿದರು. ಯಡಿಯೂರಪ್ಪನವರು ಮರು ಮಾತಾಡದೆ ಆ ಅಧಿಕಾರಿಗಳ ವರ್ಗಾವಣೆ ಆರ್ಡರನ್ನು ಹಿಂಪಡೆದರು. ಜನಾದನ ರೆಡ್ಡಿಯವರು ಈ ಬಳ್ಳಾರಿ ರಿಪಬ್ಲಿಕ್ಕಿನ ಅನಭಿಷಕ್ತ ಚಕ್ರವರ್ತಿ ಆಗಿದ್ದರು.

ಈ ಲೇಖನದ ಸಾರಾಂಶ ಇಷ್ಟೇ: ಅರಣ್ಯ ಭೂಮಿ ಕಿರಿದಾಗುತ್ತಿದೆ. ಹೀಗೆ ಮುಂದುವರೆದರೆ ಅರಣ್ಯದಲ್ಲಿರುವ ಪ್ರಾಣಿಗಳು ಆಹಾರ ಹುಡುಕಿಕೊಂಡು ಗ್ರಾಮಗಳಿಗೆ, ನಗರಗಳಿಗೆ ದಾಳಿ ಇಡುತ್ತವೆ. ಮಾನವ ರಕ್ತದ ರುಚಿ ನೋಡಿದ ಮೇಲೆ ಅವು ಆಡು, ಹಸುಗಳನ್ನು ತಿನ್ನುವುದು ಬಿಟ್ಟು ಮನುಷ್ಯನ ಮಾಂಸಕ್ಕೇ ಪಳಗಿಕೊಳ್ಳುತ್ತವೆ. ಆಗ ಯಾವ ಹಳ್ಳಿಯೂ, ಪಟ್ಟಣವೂ ಸುರಕ್ಷಿತವಾಗಿರುವುದಿಲ್ಲ. ಮನುಷ್ಯ ಊರು ಬಿಟ್ಟು ಕಾಡಿಗೆ ವಲಸೆ ಹೋಗುವುದೊಂದೇ ತನಗಿರುವ ಏಕೈಕ ಮಾರ್ಗ ಎಂದು ತೀರ್ಮಾನಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.

ಈ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಅರಣ್ಯವನ್ನು ಉಳಿಸುವ ಕಾರ್ಯ ಕೈಗೊಂಡೀತೆ?


ಇದನ್ನೂ ಓದಿ:  ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...