Homeಮುಖಪುಟಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬದ್ರುದ್ದೀನ್ ಅಜ್ಮಲ್! - ಅವರ ಪ್ರತಿಕ್ರಿಯೆ ಏನು?

ಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬದ್ರುದ್ದೀನ್ ಅಜ್ಮಲ್! – ಅವರ ಪ್ರತಿಕ್ರಿಯೆ ಏನು?

- Advertisement -
- Advertisement -

ಇನ್ನೇನು ಹತ್ತು ದಿನಗಳಲ್ಲಿ ಪಂಚರಾಜ್ಯ ಚುನಾವಣೆಯ ಮೊಲದ ಹಂತದ ಮತದಾನ ಪ್ರಾರಂಭವಾಗಲಿದೆ. ಚುನಾವಣೆ ನಡೆಯಲಿರುವ ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮೈತ್ರಿ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಎಐಯುಡಿಎಫ್‌ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎಂಬ ಸುದ್ದಿಗೆ ಸ್ವತಃ ಅಜ್ಮಲ್ ಅವರೆ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅಜ್ಮಲ್, “ನಾನು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಇಲ್ಲ. ನಮ್ಮ ಪಕ್ಷ ಯಾವಾಗಲೂ ರಾಜ್ಯದ ಏಕತೆ ಮತ್ತು ಅಭಿವೃದ್ಧಿಯ ಪರವಾಗಿ ನಿಲ್ಲುತ್ತದೆ ಮತ್ತು ರಾಜ್ಯದ ಜನರ ಸೇವೆಯನ್ನು ಪಕ್ಷವು ಮುಂದುವರಿಸಲಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿದೆಯೇ? – ಮಮತಾ ಬ್ಯಾನರ್ಜಿ ವಾಗ್ದಾಳಿ

ಮುಖ್ಯಮಂತ್ರಿ ಹುದ್ದೆಗೆ ಅಜ್ಮಲ್ ಸಿದ್ಧರಿಲ್ಲ ಎಂಬ ಅವರ ಪಕ್ಷದ ಸ್ಪಷ್ಟೀಕರಣಗಳ ಹೊರತಾಗಿಯೂ, ಸುದ್ದಿ ವಾಹಿನಿಯೊಂದು ಅವರನ್ನು ಸಿಎಂ ಅಭ್ಯರ್ಥಿಯಾಗಿ ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

“ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಸುದ್ದಿ ಚಾನೆಲ್ ಒಂದು ಆನ್‌ಲೈನ್ ಅಭಿಪ್ರಾಯ ಸಂಗ್ರಹವನ್ನು ನಡೆಸುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಚಾನೆಲ್ ನನ್ನ ಹೆಸರನ್ನು ಸಹ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಮುಖ್ಯಮಂತ್ರಿ ಹುದ್ದೆಗೆ ತಾನು ಸ್ಪರ್ಧಿಸುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅಜ್ಮಲ್‌ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದು, ಅವರು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಳನುಸುಳುವಿಕೆ ಹೆಚ್ಚಾಗುತ್ತದೆ” ಎಂದು ಬಿಜೆಪಿ ಅವರ ವಿರುದ್ಧ ಆರೋಪ ಮಾಡುತ್ತಿದೆ.

ಇದನ್ನೂ ಓದಿ: ಲಾಭವನ್ನು ಖಾಸಗೀಕರಿಸಿ, ನಷ್ಟವನ್ನು ರಾಷ್ಟ್ರೀಕರಣ ಮಾಡಲಾಗುತ್ತಿದೆ: ರಾಹುಲ್ ಗಾಂಧಿ

“ನಮ್ಮ ಪಕ್ಷವು ಸರ್ಕಾರದಲ್ಲಿ ಪಾಲುದಾರರಾಗಲಿದೆ. ಮುಂಬರುವ ಚುನಾವಣಾ ಫಲಿತಾಂಶವನ್ನು ಅನುಸರಿಸಿ ನಿಮ್ಮ ಬೆಂಬಲದಿಂದ ನಾನು ಸಂಸತ್ತಿನಿಂದ ಧುಬ್ರಿ, ಅಸ್ಸಾಂ ಮತ್ತು ಈಶಾನ್ಯ ಭಾರತದ ಜನರಿಗೆ ಸೇವೆ ಸಲ್ಲಿಸುತ್ತೇನೆ” ಎಂದು ಅಜ್ಮಲ್ ಕೇಳಿಕೊಂಡಿದ್ದಾರೆ.

“ನಾನು ಎಐಯುಡಿಎಫ್ ಬೆಂಬಲಿರಿಗೆ ನನ್ನ ಪ್ರೀತಿ ಮತ್ತು ಕೃತಜ್ಞತೆಯನ್ನು ಅರ್ಪಿಸುತ್ತೇನೆ, ಆದಾಗ್ಯೂ, ಎಐಯುಡಿಎಫ್ ಅಸ್ಸಾಂನಲ್ಲಿ ಏಕತೆ ಮತ್ತು ಅಭಿವೃದ್ಧಿಯ ಪರವಾಗಿ ನಿಂತಿದೆ ಮತ್ತು ಅದಕ್ಕಾಗಿ ನಾವು ಮಹಾ ಮೈತ್ರಿಗೆ ಬದ್ಧರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅನರ್ಹಗೊಳಿಸಲು ಟಿಎಂಸಿ ಒತ್ತಾಯ: ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ವಪನ್ ದಾಸ್​ಗುಪ್ತಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂವಿಧಾನ-ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಆರಂಭ: ಮಲ್ಲಿಕಾರ್ಜುನ ಖರ್ಗೆ

0
2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭಗೊಂಡಿದ್ದು, ಮತದಾರರು ಎಚ್ಚರಿಕೆಯಿಂದ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. "ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ...