ಅಕ್ಟೋಬರ್ 2 ರೊಳಗೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸದಿದ್ದರೆ ಸರಯೂ ನದಿಯಲ್ಲಿ ‘ಜಲಸಮಾಧಿ’ ಆಗುವುದಾಗಿ ಬೆದರಿಕೆ ಒಡ್ಡಿದ್ದ, ಪರಮಹಂಸ ಆಚಾರ್ಯ ಅವರನ್ನು ಉತ್ತರ ಪ್ರದೇಶ ಸರ್ಕಾರ ಅವರನ್ನು ಗೃಹ ಬಂಧನದಲ್ಲಿ ಇಟ್ಟಿದೆ. ಆಡಳಿತವು ತನ್ನನ್ನು ಬಿಡುಗಡೆ ಮಾಡಿದರೆ ತಾನು ಜಲಸಮಾಧಿ ಆಗುವುದಾಗಿ ಮಾಧ್ಯಮಗಳಿಗೆ ಅವರು ಹೇಳಿದ್ದಾರೆ.
ಪರಮಹಂಸ ಅವರನ್ನು ಹಿಂದೂ ಮಹಾಸಭಾ ಕೂಡಾ ಬೆಂಬಲಿಸಿದ್ದು, ಅಕ್ಟೋಬರ್ 2 ರಂದು ಒಂದು ಲಕ್ಷ ಕಾರ್ಯಕರ್ತರು ಅಯೋಧ್ಯೆಯ ಸರಯೂ ನದಿಯಲ್ಲಿ ಜಲಸಮಾಧಿ ಆಗುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಸ್ಥಳದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ‘ಅಕ್ಟೋಬರ್ 2 ರೊಳಗೆ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸದಿದ್ದರೆ ಜಲಸಮಾಧಿ ಆಗುತ್ತೇನೆ’: ಪರಮಹಂಸ ಆಚಾರ್ಯ
ಬೆಳಿಗ್ಗೆಯಿಂದಲೇ ಆಶ್ರಮದಲ್ಲಿ ಹೋಮ-ಹವನಗಳನ್ನು ಮಾಡಿದ್ದ ಪರಮಹಂಸ ಅವರು, ಹನ್ನೆರೆಡು ಗಂಟೆಗೆ ಜಲಸಮಾಧಿ ಆಗುವುದಾಗಿ ಹೇಳಿದ್ದರು. ಅದರೊಳಗೆ ಒಕ್ಕೂಟ ಸರ್ಕಾರದ ಪ್ರತಿನಿಧಿ ತನ್ನ ಬೇಡಿಕೆಯ ಬಗ್ಗೆ ಆಸ್ವಾಸನೆ ನೀಡುತ್ತಾರೆ ಎಂದು ನನಗೆ ಭರವಸೆ ಇದೆ ಎಂದು ತಿಳಿಸಿದ್ದರು.
ಆದರೆ ಪೊಲೀಸರು ಅವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಸಿದ ಅವರು, “ನಾನು ಜಲಸಮಾಧಿ ಆಗುತ್ತೇನೆ ಎಂದು ಸರ್ಕಾರ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದೆ. ಬಿಡುಗಡೆ ಮಾಡಿದರೆ ತಾನು ಜಲ ಸಮಾಧಿ ಆಗುತ್ತೇನೆ. ಆದರೂ ನಾನು ಸರಯೂ ನದಿಯಿಂದ ನೀರನ್ನು ತಂದಿದ್ದೇನೆ. ಹನ್ನೆರೆಡು ಗಂಟೆಗೆ ಇದರಲ್ಲಿ ಮೂಗು ಮುಳುಗಿಸಿ ಜಲಸಮಾಧಿ ಆಗುತ್ತೇನೆ. ಭಗವಂತನ ಇಚ್ಛೆ ಇದ್ದರೆ ಇದರಲ್ಲಿ ಸಫಲನಾಗುತ್ತೇನೆ” ಎಂದು ಸಣ್ಣ ನೀರಿನ ಕ್ಯಾನ್ ಅನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ!.
ಆದರೆ ಸರ್ಕಾರ ಅವರ ಗೃಹ ಬಂಧನವನ್ನು ಮುಂದುವರೆಸಿದೆ. ಬಗ್ಗೆ ಮತ್ತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪರಮಹಂಸ ಅವರು, “ಸರ್ಕಾರ ನನ್ನನ್ನು 1 ವರ್ಷ ಗೃಹಬಂಧನದಲ್ಲಿರಿಸಿದರೂ, ನಾನು ಹೊರಬಂದ ತಕ್ಷಣ ಜಲಸಮಾಧಿ ಆಗುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!
ಈ ನಡುವೆ ಪರಮಹಂಸ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
Baba ji going to on his way #JalSamadhi #2ndOctober pic.twitter.com/TOryBOujHV
— ShuaibMalik96 ?? (@mdshuaib96) October 2, 2021
The artificial devotees has made India to go in ditch. Stupidity#JalSamadhi#पाखंडी_जल_समाधि_दिवस pic.twitter.com/0ttu7iHser
— RAMBHA DEVI (@RAMBHA56) October 2, 2021
Whole India is eagerly waiting to take Jal Samadhi.#JalSamadhi
pic.twitter.com/5tCzbLomA6— Priti Chaudhary (@HryTweet_) October 2, 2021
#JalSamadhi
Waiting for the jal samadhi update!
?????????? pic.twitter.com/0yX2I29Fuk— Deepak Sumitra Phogat ? (@Phogat30) October 2, 2021
#JalSamadhi cancel pic.twitter.com/RG4lIQyOQo
— ????????? ?ø?? ?%FB (@Choudhary_Boys4) October 2, 2021
Me waiting at Saryu Ghat for live #JalSamadhi pic.twitter.com/Tn4Ldji6Wc
— DrTousif Akbari (@AkbariTousif) October 2, 2021
ಪರಮಹಂಸ ಅವರು, ಭಾರತದಲ್ಲಿ ವಾಸಿಸುತ್ತಿರುವ ಎಲ್ಲಾ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ರಾಷ್ಟ್ರೀಯತೆಯನ್ನು ಅಧೀಕೃತವಾಗಿ ಕೊನೆಗೊಳಿಸಬೇಕು ಎಂದು ಕೂಡಾ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ: ‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’


