Homeಮುಖಪುಟಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? - ಡಾ.ನರಸಿಂಹ ಗುಂಜಹಳ್ಳಿ

ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಮೀಸಲಾತಿ ಮರುವರ್ಗೀಕರಣದ ಹೋರಾಟ ಯಾರ ವಿರುದ್ಧವು ಅಲ್ಲ. ಯಾರ ಹಕ್ಕನ್ನು ಕಸಿಯುವ ಉದ್ದೇಶವು ಇಲ್ಲ ಎಂದು ಒಳಮೀಸಲಾತಿ ಹೊರಾಟಗಾರರ ಅಭಿಮತವಾಗಿದೆ.

- Advertisement -
- Advertisement -

ಒಂದು ಜನಾಂಗ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಭೌದ್ಧಿಕವಾಗಿ ಶತಶತಮಾನಗಳಿಂದ ಶೋಷಣೆಗೆ ಒಳಗಾಗಿ, ಸಂವಿಧಾನಾತ್ಮಕ ಸೌಲಭ್ಯಗಳಿಂದ ವಂಚಿತರಾದ ಸಮುದಾಯಕ್ಕೆ ಈ ಸ್ಥಿತಿಗಳಿಂದ ಬಿಡುಗಡೆಗೊಳಿಸಲು ಕೆಲವು ಸಂವಿಧಾನಿಕ ವಿಶೇಷ ಸೌಲಭ್ಯಗಳೇ ಮೀಸಲಾತಿ. ಇದರ ಗುರಿ ಸಾಮಾಜಿಕ ನ್ಯಾಯ. ಇಂದು ಸಮಾನತೆಯ ದೇಶ ಕಟ್ಟವುದಕ್ಕೆ ಭೂಮಿ ಮತ್ತು ಮೀಸಲಾತಿ ಇವರೆಡು ಬಹುಮುಖ್ಯವಾದದ್ದು.

ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂವಿಧಾನದತ್ತವಾಗಿ ಬಂದಿರುವ ಮೀಸಲಾತಿಯ ಶೇ. 15 ರಲ್ಲಿ ಮಾದಿಗ ಸಮುದಾಯಕ್ಕೆ ಸಿಗಬೇಕಾದ ಪ್ರಮಾಣ ಶೇ.8.ರಷ್ಟು. ಆದರೆ ಇದುವರೆಗೆ ದಕ್ಕಿರುವುದು ಕೇವಲ ಶೇ.2ರಷ್ಟು ಮಾತ್ರ ಎಂಬುದು ಮಾದಿಗರ ಅರೋಪವಾಗಿದೆ. ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾದ ನಮಗೆ ನ್ಯಾಯಯುತ ಮೀಸಲಾತಿ ದೊರೆತಿಲ್ಲವೆಂಬ ಅತೃಪ್ತಿಯಿದೆ. ನಮ್ಮ ಹೆಸರಿನಲ್ಲಿ ಬಲಿಷ್ಟ ದಲಿತ ಜಾತಿಯವರು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸುತ್ತ ತಮಗೆ ಆದ ಈ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಇನ್ನೊಬ್ಬರ ಪಾಲು ನಮಗೆ ಬೇಡ. ನಮ್ಮ ಪಾಲಿನ ಹಕ್ಕನ್ನು ನಮಗೆ ಕೊಡಿಯೆಂದು ಒಳಮೀಸಲಾತಿಗಾಗಿ ಮಾದಿಗರು ರಾಜ್ಯದಲ್ಲಿ 1996 ರಿಂದ ಹೋರಾಟ ನಡೆಸಿದ್ದಾರೆ.

ಸರಕಾರ ರಚಿಸಿದ್ದ ಸದಾಶಿವ ಅಯೋಗವು 2012ರಲ್ಲಿ ವರದಿ ಸಲ್ಲಿಸದಾಗಿನಿಂದ ಅದರ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಮೀಸಲಾತಿ ಮರುವರ್ಗೀಕರಣದ ಹೋರಾಟ ಯಾರ ವಿರುದ್ಧವು ಅಲ್ಲ. ಯಾರ ಹಕ್ಕನ್ನು ಕಸಿಯುವ ಉದ್ದೇಶವು ಇಲ್ಲ ಎಂದು ಒಳಮೀಸಲಾತಿ ಹೊರಾಟಗಾರರ ಅಭಿಮತವಾಗಿದೆ. ಇದು ಒಡೆದು ಆಳುವ ನೀತಿಯಲ್ಲ. ಇದು ಹಂಚಿ ತಿನ್ನುವ ಮಾನವತವಾದ. ಒಳಮೀಸಲಾತಿಯನ್ನು ವಿರೋಧಿಸುವುದೆಂದರೆ ಮೀಸಲಾತಿಯನ್ನು ಮತ್ತು ಸಮಪಾಲು – ಸಮಬಾಳು ತತ್ವವನ್ನು ವಿರೋಧಿಸುವುದಕ್ಕೆ ಸಮನಾದದ್ದು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡುವ ಅಪಾಚಾರ ಸಹ ಹೌದು.

ಪರಿಶಿಷ್ಟ ಜಾತಿಯಲ್ಲಿರುವ ಮೀಸಲಾತಿಯನ್ನು ವಿಭಜಿಸಿದರೆ ದಲಿತರ ಒಗ್ಗಟ್ಟು ಹಾಳುಗುತ್ತಿದೆ ಎಂಬುದು ಸುಳ್ಳು. ಸಾಮಾಜಿಕ ನ್ಯಾಯಕ್ಕೆ ಭಂಗ ತರುವವರು ಇಂತಹ ಆರೋಪವನ್ನು ಮಾಡುತ್ತಾರೆ. ಸ್ವಾರ್ಥ ಮತ್ತು ಕೆಲವರು ತಮ್ಮ ಅನೂಕೂಲಕ್ಕೆ ತಕ್ಕ ಹಾಗೆ ಆಯೋಗದ ವರದಿಯ ಶಿಫಾರಸ್ಸುಗಳನ್ನು ಆರ್ಥೈಸಿಕೊಳ್ಳುತ್ತಿದ್ದಾರೆ. ಅದ್ದರಿಂದ ಸದಾಶಿವ ಅಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಬಿಡುಗಡೆ ಮಾಡಬೇಕು.

ಇದನ್ನೂ ಓದಿ: ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

ಡಾ.ಬಿ.ಆರ್.ಅಂಬೇಡ್ಕರ್ ಅವರ ಅಶಯವು ಭಾರತದಲ್ಲಿ ಜನಸಂಖ್ಯೆಯಾಧಾರಿತ ಮೀಸಲಾತಿ ಹಂಚಿಕೆಯಾಗಬೇಕೆನ್ನುವುದು ವಾದವಾಗಿತ್ತು. ದಲಿತರು ಒಳ ಮೀಸಲಾತಿಯನ್ನು ಪಡೆದರೂ ವಿಘಟನೆಗೊಳ್ಳದೆ, ಈ ದೇಶದಲ್ಲಿ ಜಾತಿವ್ಯವಸ್ಥೆ, ಆಸ್ಪೃಶ್ಯತೆ ಇರುವವರೆಗೂ ಅವುಗಳ ವಿರುದ್ಧ ಮತ್ತು ಖಾಸಗಿ ವಲಯದಲ್ಲೂ ಮೀಸಲಾತಿಗಾಗಿ ಹೋರಾಟ ಮಾಡಬೇಕು. ಅದನ್ನು ಬಳಿಸಿಕೊಂಡು ಜಾತಿ ವಿನಾಶಮಾಡದೇ ಹೋದರೆ ಉಳಿಗಾಲವಿಲ್ಲ. ಜಾತಿ ಜಾತಿಗಳ ನಡುವಿನ ಸಮಾನತೆಯು ಜಾತಿಯನ್ನು ನಾಶಮಾಡುತ್ತದೆ ಎನ್ನುವುದನ್ನು ದಲಿತರು ಅರ್ಥಮಾಡಿಕೋಳ್ಳಬೇಕು.

ಇವತ್ತಿನವರೆಗೆ ದಲಿತರ ಮಿಸಲಾತಿಯನ್ನು ಹೊಲೆಯರು, ಮಾದಿಗರು, ಲಂಬಾಣಿಗಳು ಮತ್ತು ಭೋವಿಗಳು – ಈ ನಾಲ್ಕು ಜಾತಿಗಳ ಮಾತ್ರ ಹೆಚ್ಚು ಪಡೆದಿವೆ. ಪರಿಶಿಷ್ಟರಲ್ಲಿನ ಸುಡುಗಾಡು ಸಿದ್ದರು ಸೇರಿದಂತೆ ಆನೇಕ ಸಣ್ಣ ಸಣ್ಣ ದಲಿತ ಜಾತಿಗಳು ಈವರೆಗೂ ಶೇ.1 ರಷ್ಟು ಸಹ ಮೀಸಲಾತಿ ಸೌಲಭ್ಯ ಪಡೆದಿಲ್ಲ. ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟರಲ್ಲಿ ಇರುವ 101 ಜಾತಿಗಳಿಗೆ ಈಗಿರುವ ಶೇ.15 ಮೀಸಲಾತಿಯನ್ನು ಸದಾಶಿವ ಆಯೋಗ ವಿಭಜಿಸಿಕೊಟ್ಟಿದೆ ಎನ್ನಲಾಗುತ್ತಿದೆ. ಇದರ ಪ್ರಕಾರ ಹಂಚಿಕೆ ಮಾಡಬೇಕು. ಇದು ಹಲವು ಸಣ್ಣ ಪರಿಶಿಷ್ಟ ಜಾತಿಗಳಿಗೆ ನೆರವಾಗಲಿದೆ. ಇದನ್ನು ಒಳಮೀಸಲಾತಿ ಎನ್ನಿ, ಮೀಸಲಾತಿ ಪುನರ್ ವಿಂಗಡನೆ ಎನ್ನಿ, ಮೀಸಲಾತಿ ಗುಂಪುಗಳು ಎನ್ನಿ, ಏನು ಬೇಕಾದರೂ ಹೇಳಿ, ಅದು ಸಂವಿಧಾನದ ಯಾವುದೇ ವಿಧಿಗಳ ಉಲ್ಲಂಘನೆಯಾಗುವುದಿಲ್ಲ.

ದಲಿತರಲ್ಲಿನ ಸ್ಪೃಶ್ಯ ಜಾತಿಗಳು ಅಸ್ಪೃಶ್ಯ ಸಮುದಾಯವನ್ನು ಸಹೋದರಂತೆ ಕಾಣಬೇಕು. ಮೀಸಲಾತಿ ಮತ್ತು ಒಳಮೀಸಲಾತಿ ಇದು ಒಂದು ಸಾಮಾಜಿಕ ನ್ಯಾಯ. ಸ್ಪೃಶ್ಯ ಜಾತಿಯವರು ಮತ್ತು ಸಾರ್ವಜನಿಕರು ಇದನ್ನು ಬೆಂಬಲಿಸಿ ಜಾರಿಗೆಗೋಳಿಸಲು ಸರಕಾರಕ್ಕೆ ಒತ್ತಾಯಿಸಬೇಕು.

ಮೀಸಲಾತಿ ಅಸಮರ್ಪಕ ವಿತರಣೆ, ಅಸಮಾನ ಹಂಚಿಕೆಯಿಂದ ದಲಿತ ಜಾತಿಗಳಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿ ಸಂಬಂಧಗಳು ಕಳೆಯುತ್ತಿವೆ. ಆದ್ದರಿಂದ ಒಳಮೀಸಲಾತಿ ಕುರಿತು ದಲಿತರು ಒಟ್ಟಿಗೆ ಕುಳಿತು ಚರ್ಚಿಸಿಬೇಕು. ಇದನ್ನು ಲಾಭ- ನಷ್ಟದ ದೃಷ್ಟಿಯಿಂದ ಪರಿಗಣಿಸದೇ, ತಾಂತ್ರಿಕ ಕಾರಣಗಳಿಂದ ನೋಡದೇ ನ್ಯಾಯ, ಮಾನವೀಯ ಕಲ್ಪನೆಗಳಿಂದ ವಿಚಾರ ಮಾಡಬೇಕು. ಅದರ ಸಾಮಾಜಿಕ ಅರ್ಥಿಕ ಸಮಸ್ಯೆಗಳನ್ನು ಚರ್ಚಿಸಿ ಅನುಷ್ಟಾನಕ್ಕೆ ಒತ್ತಾಯಿಸಬೇಕು. ದಲಿತರಿಂದಲೇ ದಲಿತರಿಗೆ ಶೋಷಣೆಯಾಗಬಾರದು ಎಂದರೆ ಕೂಡಲೆ ಒಳಮೀಸಲಾತಿ ಜಾರಿಗೆ ತರಬೇಕು. ಮೀಸಲಾತಿ ವರ್ಗೀಕರಣ ಮಾಡಿದರೆ ದಲಿತರ ನಡುವೆ, ಜಾತಿ – ಜಾತಿಗಳ ನಡುವೆ ಸಮಾನತೆ, ಸೌಹರ್ದತೆ, ಜಾತ್ಯತೀತತೆ ಮತ್ತು ಸ್ನೇಹ ಬೆಳೆಯುತ್ತದೆ. ಸ್ಪೃಶ್ಯ ಜಾತಿಗಳು ಪಟ್ಟಭದ್ರ ಹಿತಶಕ್ತಿಗಳ ಕುತಂತ್ರಕ್ಕೆ ಬಲಿಯಾಗದೇ ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸಬೇಕು.

  • ಡಾ.ನರಸಿಂಹ ಗುಂಜಹಳ್ಳಿ

ರಾಯಚೂರು ತಾಲೂಕಿನ ಗುಂಜಳ್ಳಿಯ ನರಸಿಂಹ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಮಾಜಿಕ ಚಳುವಳಿಯಲ್ಲಿ ಸಕ್ರಿಯರು. ಬಿಎಂಟಿಸಿ ಕಂಡಕ್ಟರ್ ಆಗಿದ್ದುಕೊಂಡು ಪಿಎಚ್‌ಡಿ ಸಂಶೋಧನೆ ನಡೆಸಿ, ಪದವಿ ಪಡೆದುಕೊಂಡರು. ಇದೀಗ ಕೊಪ್ಪಳದ ಕಾಲೇಜಿನಲ್ಲಿ ಅಧ್ಯಾಪಕರು


ಇದನ್ನೂ ಓದಿ: ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...