Homeಅಂಕಣಗಳುಹೊಸ ಶಿಕ್ಷಣ ನೀತಿ ಏನು? ಎತ್ತ?

ಹೊಸ ಶಿಕ್ಷಣ ನೀತಿ ಏನು? ಎತ್ತ?

- Advertisement -
- Advertisement -

ಬಿ.ಶ್ರೀಪಾದ್: ಇಂದು ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಈ ರೀತಿಯ ಶಿಕ್ಷಣ ನೀತಿಯ ಅರಿವಿರುವುದಿಲ್ಲ. ಮುಖ್ಯವಾಹಿನಿ ಮಾಧ್ಯಮಗಳು ಇದರ ಕುರಿತು ಮಾಹಿತಿ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಕರಡಿಗೆ ಬಂದ ಮೊಟ್ಟ ಮೊದಲ ಪ್ರತಿಕ್ರಿಯೆಯೆಂದರೆ ಇದು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ. ಸಂವಿಧಾನದ 8ನೇ ಶೆಡ್ಯೂಲ್‍ನಲ್ಲಿ 22 ಭಾರತೀಯ ಭಾಷೆಗಳಿಗೆ ಮಾನ್ಯತೆ ನೀಡಿದೆ. ಹಾಗಾಗಿ ಎಲ್ಲಾ 22 ಭಾಷೆಗಳಲ್ಲಿಯೂ ಪ್ರಕಟಿಸಿ ಹಂಚಬೇಕು. ಆಗ ಮಾತ್ರ ಕೆಲವರಾದರೂ ಓದಿ ಅದರಲ್ಲಿನ ಒಳಿತು-ಕೆಡುಕುಗಳ ಕುರಿತು ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಇದುವರೆಗಿನ ಶಿಕ್ಷಣ ನೀತಿಗಳ ಬಗ್ಗೆ ತಿಳಿಸಿಕೊಡುತ್ತೀರಾ?

ಪ್ರೊ.ನಿರಂಜನಾರಾಧ್ಯ: ಯಾವುದೇ ರಾಷ್ಟ್ರಗಳು ದಾಸ್ಯದಿಂದ ಹೊರಬಂದ ಕೂಡಲೇ ತಮ್ಮದೇ ಆದ ಸಂವಿಧಾನವನ್ನು ರೂಪಿಸಿಕೊಳ್ಳುತ್ತಾರೆ. ಭಾರತವೂ ತನ್ನ ಸಂವಿಧಾನವನ್ನು ರೂಪಿಸಿಕೊಂಡಿದೆ. ಅದರ ಪ್ರಮುಖ ಘೋಷಣೆ “ಸಂವಿಧಾನ ಜಾರಿಗೆ ಬಂದ 10 ವರ್ಷಗಳಲ್ಲಿ ನಮ್ಮ ದೇಶದ ಪ್ರತಿಯೊಬ್ಬ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಕೊಡುತ್ತೇವೆ” ಎಂಬುದಾಗಿತ್ತು. ಭಾರತದ ಸಂವಿಧಾನದಲ್ಲಿ ಶಿಕ್ಷಣವನ್ನು ಬಿಟ್ಟು, ಬೇರೆ ಯಾವುದೇ ಅಂಶಕ್ಕೂ ಕಾಲಮಿತಿಯ ಕಾರ್ಯಕ್ರಮ ಇರಲಿಲ್ಲ ಅಂದರೆ ಅದು ಶಿಕ್ಷಣಕ್ಕೆ ಎಷ್ಟೊಂದು ಪ್ರಾಮುಖ್ಯತೆ ನೀಡಿತ್ತು ಎಂಬುದು ತಿಳಿಯುತ್ತದೆ. ಆ ನಂತರ 1964ರ ಜುಲೈ 14 ರಂದು ಭಾರತಕ್ಕೆ ಯಾವ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕು, ಅದರ ಸಂರಚನೆ ಹೇಗಿರಬೇಕೆಂದು ವರದಿ ಸಲ್ಲಿಸಲು ಅಂದಿನ ಯುಜಿಸಿ ಅಧ್ಯಕ್ಷರಾಗಿದ್ದ ಡಿ.ಎಸ್ ಕೊಥಾರಿಯವರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿತ್ತು. ಆ ಸಮಿತಿಯು ತನ್ನ ವರದಿಯನ್ನು ರಾಷ್ಟ್ರೀಯ ಅಭಿವೃದ್ದಿ ಎಂದು ಕರೆದು ತನ್ನ ಶಿಫಾರಸ್ಸುಗಳನ್ನು ನೀಡಿತ್ತು. ಆ ಸಮಿತಿಯಲ್ಲಿ ಭಾರತದ ಎಲ್ಲಾ ರಾಜ್ಯದ ಪ್ರತಿನಿಧಿಗಳ ಜೊತೆಗೆ ವಿದೇಶದ ಶಿಕ್ಷಣ ತಜ್ಞರನ್ನು ಸಹ ಒಳಗೊಂಡಿತ್ತು. ಇದು ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಬೇಕೆಂದು ವರದಿ ನೀಡಿದ್ದನ್ನು ಆಧರಿಸಿ 1968ರಲ್ಲಿ ಶಿಕ್ಷಣ ನೀತಿಯನ್ನು ಭಾರತ ರೂಪಿಸಿಕೊಂಡಿತು.
ತದನಂತರ 1986ರಲ್ಲಿ ಶಿಕ್ಷಣ ನೀತಿಯನ್ನು ಬದಲಿಸಲು ತೀರ್ಮಾನಿಸಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಕರೆಯಲಾಯಿತು. ನಂತರ 1992ರಲ್ಲಿ ಅದನ್ನು ಪರಿಷ್ಕರಿಸಲಾಯಿತು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿತ್ತು. ಒಟ್ಟು ಶಿಕ್ಷಣ ನೀತಿಗಳನ್ನು ರೂಪಿಸುವ ಪಯಣ ಅತ್ಯಂತ ಪ್ರಜಾತಾಂತ್ರಿಕ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಿರ್ಧರಿಸುತ್ತಾ ಬಂದಿದ್ದೆವು.

ಬಿ.ಶ್ರೀಪಾದ್: 1968ರ ಕೊಥಾರಿ ಶಿಕ್ಷಣ ನೀತಿ ಕೇವಲ 7 ಪುಟಗಳಿತ್ತು. 1986ರ ನೀತಿ 32 ಪುಟಗಳಿತ್ತು. 1992ರ ಪರಿಷ್ಕøತ ನೀತಿ ಸಹ 37 ಪುಟಗಳಷ್ಟೇ ಇತ್ತು. ಆದರೆ ಈಗ ಕೇಂದ್ರ ಸರ್ಕಾರ ಹೊರತಂದಿರುವ ಈ ಕರಡು ಬರೋಬ್ಬರಿ 484 ಪುಟ ಇದೆ. ಅಂದರೆ ಈಗ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಶಿಕ್ಷಣ ನೀತಿಯನ್ನು ಒಂದು ‘ನೀತಿ ಎಂದು ಕರೆಯಲು ಸಾಧ್ಯವಿಲ್ಲ. ಒಂದು ವರದಿ ಎನ್ನಬಹುದೇನೊ. ಜೊತೆಗೆ 1. ‘ಇದು ಜಾಗತಿಕÀ ಮಟ್ಟದಲ್ಲಿ ಶೈಕ್ಷಣಿಕವಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ಪರಿಗಣಿಸಿಲ್ಲ. 2. ಹಿಂದಿನ ಶಿಕ್ಷಣ ನೀತಿಗಳು ಏನು ಹೇಳಿವೆ, ಅವುಗಳ ಸಾಧಕ-ಬಾಧಕಗಳೇನು ಎಂಬುದರ ಮೌಲ್ಯಮಾಪನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವಿಸ್ತರಿಸುತ್ತೀರಾ?

ಪ್ರೊ.ನಿರಂಜನಾರಾಧ್ಯ: ಮೊದಲನೆಯದಾಗಿ ನಮ್ಮ ದೇಶದಲ್ಲಿ ಸಂವಿಧಾನವೇ ಅಂತಿಮ. ಆ ಸಂವಿಧಾನದ ಆಶಯದ ಪ್ರಕಾರ ನಮ್ಮ ಶಿಕ್ಷಣ ನೀತಿ ಇದೆಯೇ ಎಂದು ನೋಡಬೇಕು. ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಆಶಯಗಳು ಈಡೇರಬೇಕಾದರೆ ಅವುಗಳನ್ನು ಪ್ರಾರಂಭದಿಂದಲೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾಗಿ ಸಂವಿಧಾನಕ್ಕೂ ಶಿಕ್ಷಣಕ್ಕೂ ಅವಿನಾಭಾವ ಸಂಬಂಧವಿದೆ. ಈ ಹೊಸ ಶಿಕ್ಷಣ ನೀತಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆಯೇ ಎಂಬ ಪ್ರಶ್ನೆ ಕೇಳಬೇಕು. ಎರಡನೇದಾಗಿ ಯಾವುದೇ ಹೊಸ ನೀತಿ ರೂಪಿಸುವಾಗ ಹಿಂದಿನ ಶಿಕ್ಷಣ ನೀತಿಯಲ್ಲಿ ಏನಿತ್ತು? ಅದರಲ್ಲಿ ಎಷ್ಟನ್ನು ಸಾಧಿಸಲಾಗಿದೆ? ಎಷ್ಟನ್ನು ಸಾಧಿಸಲಾಗಿಲ್ಲ, ಅದಕ್ಕೆ ಕಾರಣವೇನು? ಎಂಬ ವಿಶ್ಲೇಷಣೆಯನ್ನು ಮಾಡಬೇಕು. ಆ ಮೂಲಕ ಮುಂದೆ ನಾವು ಹೇಗೆ ಹೋಗಬೇಕು ಎಂಬುದನ್ನು ನಿರ್ಧರಿಸಬೇಕು. ಮೂರನೇಯದಾಗಿ ಶಿಕ್ಷಣದ ನೀತಿ ರೂಪಿಸುವಾಗ ಶಿಕ್ಷಣದ ಮೂಲ ವಾರಸುದಾರರಾದ ಶಿಕ್ಷಕರು, ಪೋಷಕರು, ಮಕ್ಕಳು, ಎಸ್‍ಡಿಎಂಸಿ ಸದಸ್ಯರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಶಿಕ್ಷಣ ತಜ್ಞರನ್ನು ಒಳಗೊಂಡ ಚರ್ಚೆ ನಡೆಯಬೇಕು. ಆದರೆ ದುರಂತ ಎಂದರೆ ಈ ನೀತಿಯಲ್ಲಿ ಈ ಮೂರು ಅಂಶಗಳನ್ನು ಪರಿಗಣಿಸಿಲ್ಲ.

ಇನ್ನು ಕಸ್ತೂರಿ ರಂಗನ್‍ರವರು ಈ ಕರಡು ರಚನಾ ಸಮಿತಿಯ ಅಧ್ಯಕ್ಷರು. ಅವರು ವಿಜ್ಞಾನ ಕ್ಷೇತ್ರದಲ್ಲಿ ಪರಿಣಿತರೇ ಹೊರತು ಸಂಪೂರ್ಣ ಶಿಕ್ಷಣ ಕ್ಷೇತ್ರದಲ್ಲಲ್ಲ. ಶಿಕ್ಷಣದ ಆಳ ಅರಿವು ಇದ್ದವರು ಇದ್ದಿದ್ದರೆ ಮಾತ್ರ ನ್ಯಾಯ ಒದಗಿಸುತ್ತಿದ್ದರು. ಜೊತೆಗೆ ಡಿಸೆಂಬರ್ 2017ರಲ್ಲಿ ರಚನೆಗೆ ಮುಂದಾದ ಕೇವಲ ಅಕಾಡೆಮಿಯನ್ಸ್‍ರನ್ನು ಒಳಗೊಂಡ ಸಮಿತಿ 2018ರ ಡಿಸೆಂಬರ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಿದರು. ಆದರೆ ಸರ್ಕಾರ ಮೇ 31, 2019ರಂದು ಮಾತ್ರ ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. ಏಕೆ ಚುನಾವಣೆಗೆ ಮುಂಚೆಯೇ ಚರ್ಚೆಗೆ ಬಿಡಲಿಲ್ಲ? ಬಿಟ್ಟಿದ್ದರೆ ಚುನಾವಣೆಯ ಸಂದರ್ಭದಲ್ಲಿ ಜನಸಾಮಾನ್ಯರು ಸಹ ಇದರ ಕುರಿತು ಅಭಿಪ್ರಾಯ ವ್ಯಕ್ತಪಡಿಸಬಹುದಿತ್ತಲ್ಲವೇ? ಅಂದರೆ ಈ ಪ್ರಕ್ರಿಯೆಯೇ ದೋಷಪೂರಿತವಾಗಿದೆ.

ಭಾರತದಲ್ಲಿ ಸುಮಾರು 8 ರೀತಿಯಲ್ಲಿ ಶಿಕ್ಷಣದಲ್ಲಿ ಅಸಮಾನತೆ ಇದೆ. ಐ.ಸಿ.ಎಸ್ಸಿ, ಸಿ.ಬಿ.ಎಸ್ಸಿ, ಕೇಂದ್ರೀಯ ಶಾಲೆ, ನವೋದಯ ಶಾಲೆ, ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ತಾರತಮ್ಯಗಳಿರುವ ಈ ದೇಶದಲ್ಲಿ ಇದರ ಕುರಿತು ಈ ನೀತಿ ಏಕೆ ಚರ್ಚಿಸುವುದಿಲ್ಲ. ಹಾಗಾಗಿ ಇದನ್ನು ನೀತಿಯೆನ್ನಲಾಗುವುದಿಲ್ಲ. ಒಂದು ವರದಿ ಎನ್ನಬಹುದೇನೊ..

ಇನ್ನು ಈ ನೀತಿಯೂ ಮೂರು ದೋಷಗಳಿಂದ ಕೂಡಿದೆ. 1. ಕಾರ್ಪೊರೇಟಿಕರಣ: ಅಂದರೆ ಸರ್ಕಾರಿ ವೆಚ್ಚವನ್ನು ತಗ್ಗಿಸಿ ಖಾಸಗಿಯವರನ್ನು ಆಶ್ರಯಿಸುವುದು. 2. ಕೇಂದ್ರೀಕೃತವಾಗಿದೆ: ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ರಾಜ್ಯಗಳ ಜೊತೆ ಸಮಾಲೋಚನೆ ಮಾಡದೇ ಕೇಂದ್ರ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವಂತಿಲ್ಲ. ಸಂವಿಧಾನದ ಬಹುತ್ವ, ಬಹುಭಾಷೆಯನ್ನು ಕಡೆಗಣಿಸಿ ರಾಷ್ಟ್ರೀಯ ಶಿಕ್ಷಣ ಆಯೋಗದ ಮೂಲಕ ರಾಜ್ಯಗಳ ಅಧಿಕಾರ ಮೊಟಕುಗೊಳಿಸುವುದು, ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡಲು ಈ ನೀತಿ ಮುಂದಾಗುತ್ತಿದೆ. ತ್ರಿಭಾಷಾ ಸೂತ್ರದ ನೆಪದಲ್ಲಿ ಹಿಂದಿ ಭಾಷೆಯನ್ನು ದಕ್ಷಿಣದ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವುದು ನಡೆಯುತ್ತಿದೆ. ನನಗೆ ಬಲವಾಗಿ ಕಾಡುತ್ತಿರುವ ಪ್ರಶ್ನೆಯೆಂದರೆ ನಮ್ಮಂತರ ಇಷ್ಟು ದೊಡ್ಡ ರಾಷ್ಟ್ರಕ್ಕೆ ಒಂದು ಶಿಕ್ಷಣ ನೀತಿ ಸಾಕೇ? ಕೇಂದ್ರ ಕೇವಲ ಚೌಕಟ್ಟು ಮಾತ್ರ ಕೊಟ್ಟು ಶಿಕ್ಷಣ ನೀತಿಯನ್ನು ರಾಜ್ಯಗಳು ರೂಪಿಸುವಂತೆ ಸ್ವಾತಂತ್ರ್ಯವನ್ನು ನೀಡಬೇಕು.
3. ಖಾಸಗೀಕರಣ: ನಮ್ಮ ರಾಜ್ಯದ ಶಿಕ್ಷಣದ ಮಾರಾಟಗಾರರು ಸೇರಿದಂತೆ ಹೊರ ರಾಜ್ಯದವರು ಸಹ ಕರ್ನಾಟಕದಲ್ಲಿ ಹಣ ಮಾಡಲಿಕ್ಕೋಸ್ಕರ ಖಾಸಗಿ ಶಾಲೆಗಳನ್ನು ತೆರೆದಿದ್ದಾರೆ. ಅವರಿಗೆ ಕಡಿವಾಣ ಹಾಕಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬದಲು ಈ ನೀತಿ ಅವರನ್ನೇ ಕೊಬ್ಬಿಸುವಂತಿದೆ. ನಮ್ಮಿಂದ ತೆರಿಗೆ ಸಂಗ್ರಹಿಸಿ ನಡೆಯುವ ಸರ್ಕಾರ ನಮ್ಮ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯದಂತವುಗಳನ್ನು ಉಚಿತವಾಗಿ ಕಡ್ಡಾಯವಾಗಿ ನೀಡದಿದ್ದ ಮೇಲೆ ನಮಗೆ ಈ ಸರ್ಕಾರಗಳು ಏಕೆ ಬೇಕು ಎಂದು ಜನ ಕೇಳಬೇಕಿದೆ.
ಶ್ರೀಪಾದ್: ರಾಜ್ಯ ಸರ್ಕಾರಗಳು ತಮ್ಮ ಅಸ್ತಿತ್ವ ಹೋಗುತ್ತಿದ್ದರೂ ಕೂಡ ಪ್ರಶ್ನೆ ಮಾಡುವ ಗೋಜಿಗೆ ಹೋಗಿಲ್ಲ. ನಮ್ಮ ಜೊತೆ ಸಮಾಲೋಚನೆ ತರದೇ ಏಕೆ ಶಿಕ್ಷಣ ನೀತಿ ತರುತ್ತಿದ್ದೀರಿ ಎಂದು ಕೇಳುವ ಧೈರ್ಯವೂ ಇವಕ್ಕಿಲ್ಲ. ಇನ್ನು ಇವರು ಹಿಂದಿನ ಭಾರತೀಯ ಮೌಲ್ಯಗಳು, ಭಾರತೀಕರಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಪ್ರೊ.ನಿರಂಜನಾರಾಧ್ಯ : ನನ್ನ ಪ್ರಕಾರ ಹಿಂದಿನ ಭಾರತೀಯ ಮೌಲ್ಯಗಳೆಂದರೆ ಮೇಲ್ಜಾತಿಗಳಿಗೆ ಮಾತ್ರ ಶಿಕ್ಷಣ ನೀಡುತ್ತಿದ್ದುದ್ದು. ಕೆಲವು ವರ್ಗಗಳಿಗೆ ಶಿಕ್ಷಣ ನೀಡದೇ ವಂಚಿಸಲಾಗಿತ್ತು. ತೀವ್ರ ಅಸಮಾನತೆ ಇತ್ತು. ಇಂದು ಇಂದಿಗೂ ಬೇಕೆ? ನಾವು ಸಂವಿಧಾನದಿಂದ ಮೌಲ್ಯಗಳನ್ನು ಪಡೆಯಬೇಕೆ ಹೊರತು ಗುರುಕುಲ ಪದ್ದತಿಯಿಂದಲ್ಲ.
ನಮ್ಮ ಸಂವಿಧಾನವು ಹೇಳಿರುವ ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಸತ್ತಾತ್ಮಕ ಜಾತ್ಯಾತೀತ ಸಮಾಜವಾದಿ ಗಣತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಶಿಕ್ಷಣ ನಮಗೆ ಬೇಕಿದೆ.
ನಿಮ್ಮ ಶಿಕ್ಷಣ ನೀತಿ ದೇಶದ ಮೂಲೆಯಲ್ಲಿರುವ ಆದಿವಾಸಿ ಮಗುವಿಗೂ, ಇನ್ನಾವುದೇ ಹಳ್ಳಿಯಲ್ಲಿರುವ ಒಬ್ಬ ಬಡತನದಲ್ಲಿರುವ ಮುಸ್ಲಿಂ ಮಗುವಿಗೂ ಸಮಾನ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು.

ಶ್ರೀಪಾದ್: ನಾವು ಈ ನೀತಿ ಕುರಿತು ಪ್ರತಿಕ್ರಿಯೆಗಳನ್ನು ಕಳಿಸಬೇಕು. ಜನಕ್ಕೆ ಅರ್ಥವಾಗುವ ರೀತಿಯಲ್ಲಿ ಕೆಲವೇ ಪುಟಗಳಲ್ಲಿ ನಾವೇ ಮಾದರಿ ಶಿಕ್ಷಣ ನೀತಿಯೊಂದನ್ನು ರಚಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು, ಸರ್ಕಾರಕ್ಕೂ ತಲುಪಿಸಿ ಒತ್ತಡ ಹಾಕಬೇಕು.

ಪ್ರೊ.ನಿರಂಜನಾರಾಧ್ಯ: ಈ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವು ಪ್ರಾಥಮಿಕ ಶಿಕ್ಷಣದ ಭಾಗವಾಗಬೇಕು, ಶಿಕ್ಷಕರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರಬೇಕು ಮತ್ತು ಶಿಕ್ಷಣಕ್ಕೆ ಹೆಚ್ಚಿನ ಹೂಡಿಕೆ ತರಬೇಕು ಅನ್ನುವ ಸಕಾರಾತ್ಮಕ ಅಂಶಗಳಿವೆ. ಆದರೆ ಅಷ್ಟು ಸಾಲವು. ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಅಂಶಗಳೇ ಹೆಚ್ಚಿವೆ. ಹಾಗಾಗಿ ನಾವು ಪರ್ಯಾಯ ಶಿಕ್ಷಣ ನೀತಿಯನ್ನು ತರಬೇಕು. ಒಂದು ವರದಿಯನ್ನು ತಯಾರು ಮಾಡಿದ್ದೇವೆ. ಅದೇ ಅಂತಿಮವಲ್ಲ, ಹಾಗೆ ನೋಡಿದರೆ ಯಾವುದು ಅಂತಿಮವಲ್ಲ. ಜನ ಅದರ ಬಗ್ಗೆ ಚರ್ಚೆ ಮಾಡಿ ಏನು ಹೇಳುತ್ತಾರೋ ಅದನ್ನು ನಾವು ಒಪ್ಪಿಕೊಳ್ಳಬೇಕು. ಜನ ಮೆಚ್ಚಿದರೆ ಸರ್ಕಾರದ ಮೇಲೂ ಒತ್ತಡ ಹಾಕಬಹುದು. ರಾಷ್ಟ್ರ ಮಟ್ಟದ ನೀತಿ ರೂಪುಗೊಳ್ಳುವಾಗ ರಾಷ್ಟ್ರದ ಎಲ್ಲಾ ಜನರನ್ನು ಒಳಗೊಳ್ಳಬೇಕು. ಹಾಗಾಗಿ ಸರ್ಕಾರ 22 ಭಾಷೆಗಳಲ್ಲಿ ಪ್ರಕಟಿಸಿದ ನಂತರ ಮೂರು ತಿಂಗಳ ಸಮಯ ನೀಡಬೇಕೆಂದು ಒತ್ತಾಯಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...