Homeಚಳವಳಿಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಭಾರತದ ಮುಸ್ಲಿಂ ಸಮುದಾಯವು ತನ್ನ ಸಾಂವಿಧಾನಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಬಲ್ಲಂತಹ ನಾಯಕತ್ವಕ್ಕಾಗಿ ಬೇಡಿಕೆ ಮುಂದಿಡುವ ಕಾಲ ಸನ್ನಿಹಿತವಾಗಿದೆ.

- Advertisement -
- Advertisement -

ಕೃಪೆ: ದಿ ಪ್ರಿಂಟ್‌ -ಅಸೀಮ್ ಆಲಿ

ಅನುವಾದ: ನಿಖಿಲ್ ಕೋಲ್ಪೆ

ಅಯೋಧ್ಯೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರತೀಯ ಮುಸ್ಲಿಮರು ಪ್ರತಿಭಟಿಸಿಲ್ಲ. ಅದರ ಅರ್ಥ ಹಲವಾರು ವಿಶ್ಲೇಷಕರು ಹೇಳುವಂತೆ ಪ್ರಬುದ್ಧತೆಯಾಗಲೀ, ಸ್ವೀಕಾರವಾಗಲೀ ಅಲ್ಲ. ಮುಸ್ಲಿಮರ ಮೌನಕ್ಕೆ ಭಯ, ಅಸಹಾಯಕತೆ ಮತ್ತು ಹತಾಶೆಗಳೇ ಹೆಚ್ಚು ಸೂಕ್ತವಾದ ವಿವರಣೆಗಳು.

ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉತ್ಥಾನವು ಚುನಾವಣೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯವನ್ನು ಅಪ್ರಸ್ತುತವಾಗಿಸಿದೆ ಎಂಬುದಿಂದು ಸಾಮಾನ್ಯವಾಗಿ ಒಪ್ಪಿತ ವಿಷಯ. ಆದರೆ, ಭ್ರಮನಿರಸನದ ಭಾವನೆಯು ಅದಕ್ಕಿಂತಲೂ ಆಳವಾಗಿದೆ. ನಮಗೆ ಪ್ರತಿಭಟಿಸಲು ಯಾವುದೇ ಶಕ್ತಿಯಾಗಲೀ, ಯಾವುದೇ ಸಂಸ್ಥೆಯಾಗಲೀ, ಯಾವುದೇ ಅವಕಾಶವಾಗಲೀ ಉಳಿದಿಲ್ಲ ಎಂದು ನಾನು ನನ್ನ ಸಹಧರ್ಮೀಯರಿಗೆ ವಿನಮ್ರವಾಗಿ ಹೇಳುತ್ತೇನೆ” ಎಂದು ಸಾಮಾಜಿಕ ಕಾರ್ಯಕರ್ತರಾದ ಸಯ್ಯೆದಾ ಹಮೀದ್ ತೀರ್ಪಿನ ಮರುದಿನ ಬರೆದರು.

ಆದರೆ, ಈ ಅಸಹಾಯಕ ಸ್ಥಿತಿಯಲ್ಲಿ ಒಂದು ಮುಖ್ಯವಾದ ಪಾಠವಿದೆ. ಮುಸ್ಲಿಂ ಉಲೆಮಾಗಳು (ಉಲೆಮಾ ಎಂದರೆ, ಮತಪಂಡಿತರು ಮತ್ತು ಧಾರ್ಮಿಕ ನಾಯಕರು ಅಥವಾ ಒಟ್ಟಾಗಿ ಒಂದು ವರ್ಗ-ಅನು.) ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದರಲ್ಲಿ ತಮ್ಮನ್ನು ತಾವು  ನಿಷ್ಪ್ರಯೋಜಕರೆಂದು ಮತ್ತೆಮತ್ತೆ ಸಾಬೀತು ಮಾಡಿದ್ದಾರೆ, ಮಾತ್ರವಲ್ಲದೇ, ಈ ಹಕ್ಕುಗಳ ಸವಕಳಿಯಲ್ಲಿ ಸಹಭಾಗಿಯಾಗಿದ್ದಾರೆ. ಈ ಇಷ್ಟು ದಶಕಗಳಲ್ಲಿ ಧಾರ್ಮಿಕ ವರ್ಗವು ಸಾಮಾನ್ಯ ಮುಸ್ಲಿಮರಿಗಾಗಿ ಏನನ್ನು ಸಾಧಿಸಿದೆ ಎಂದು ಮುಸ್ಲಿಮ್ ಸಮುದಾಯ ತಡವಾಗಿಯಾದರೂ ಪ್ರಶ್ನಿಸಬೇಕು- ಆ ಪ್ರಶ್ನೆ ಕೆಲವು ಹಿಂದೂ ಸಿದ್ಧಾಂತಿಗಳು ಮುಸ್ಲಿಮರ ರಾಜಕೀಯವನ್ನು ಟೀಕಿಸಲು ಕೇಳುವ ಪ್ರಶ್ನೆಯನ್ನೇ ಹೋಲುವ ಅಪಾಯವಿದ್ದರೂ ಪರವಾಗಿಲ್ಲ,

ಮುಸ್ಲಿಂ ಗುರುತಾಗಿ ಶೆರಿಯ

ಸ್ವಾತಂತ್ರ್ಯೋತ್ತರದಲ್ಲಿ ಉಲೆಮಾಗಳು, ಜುಮ್ಮಾ ಮಸೀದಿಯ ಇಮಾಮ್ ಬುಖಾರಿ ಅವರಂತೆ ತಮ್ಮನ್ನು ತಾವು ಮುಸ್ಲಿಂ ಧ್ವನಿ ಎಂಬಂತೆ ಬಿಂಬಿಸಿಕೊಂಡರು. ಇದಕ್ಕೆ, ಮುಸ್ಲಿಂ ಮತಗಳ ವಿಶ್ವಾಸಾರ್ಹ ನಿರ್ಣಾಯಕರ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪಕ್ಷ ನೆರವಾಯಿತು. ಉಲೆಮಾಗಳು ರಾಜಕೀಯ ಪಕ್ಷಗಳಿಂದ ಉದಾರವಾದ ಆಶ್ರಯ ಪಡೆದರೂ, ಅವರು ಸಮುದಾಯಕ್ಕಾಗಿ ಖಾತರಿಪಡಿಸಿದ ಒಂದೇ ಒಂದು ಗ್ರಾಹ್ಯ ಪ್ರಯೋಜನವನ್ನು ಯೋಚಿಸುವುದೂ ಕಷ್ಟ.

ಮುಸ್ಲಿಂ ಸಮುದಾಯದ ಅಗತ್ಯಗಳು ಯಾವತ್ತಿಗೂ ಉದ್ಯೋಗ, ಶಿಕ್ಷಣ, ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಳಷ್ಟೇ ಆಗಿದ್ದವು. ಆದರೆ, ಉಲೆಮಾಗಳು ಯಾವತ್ತೂ ‘ಧಾರ್ಮಿಕ ಪ್ರತ್ಯೇಕತೆ’ಯ ರಾಜಕೀಯವನ್ನು ಅನುಸರಿಸಿದರು ಮತ್ತು  ತೋರಿಕೆ ವಿಷಯಗಳು ಹಾಗೂ ಪೊಳ್ಳು ಸಾಂಕೇತಿಕತೆಯಲ್ಲಿಯೇ ತೊಡಗಿಕೊಂಡರು. ಶಾಬಾನೊ ಪ್ರಕರಣದಲ್ಲಿ ಸರಳವಾದ ಜೀವನಾಂಶದ ಪ್ರಶ್ನೆಯನ್ನು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕಿನ ಅಸ್ತಿತ್ವಕ್ಕೇ ಬೆದರಿಕೆ ಎಂಬಂತೆ ಬಿಂಬಿಸಿದರು. ರಾಮ ಜನ್ಮಭೂಮಿ ಅಭಿಯಾನ ಮತ್ತು ಅಸ್ಸಾಂ ಒಪ್ಪಂದಗಳ ನೆರಳಿನಲ್ಲಿ ಮುಸ್ಲಿಮರ ಭಯವನ್ನು ಉಪಯೋಗಿಸಿಕೊಂಡು ಅದನ್ನವರು ಮಾಡಿದರು.

ಅಷ್ಟೇ ಅಲ್ಲದೇ, ಶಾಬಾನೊ ಪ್ರಕರಣವು ಶೆರಿಯಾ ಅಥವಾ ವೈಯಕ್ತಿಕ ಕಾನೂನು ಮಾತ್ರವಲ್ಲ; ಮುಸ್ಲಿಂ ಅಸ್ಮಿತೆ (ಗುರುತು)ಯ ಉಳಿವಿಗೇ ಒಂದು ಪರೀಕ್ಷೆ ಎಂಬ ಮಟ್ಟಕ್ಕೆ ಏರಿಸಿದರು. ಜಮೀಯತ್ ಉಲೆಮಾ-ಇ- ಹಿಂದ್ ಶೆರಿಯಾದ ಅನುಸರಣೆಯು ಮುಸ್ಲಿಂ ಅಸ್ಮಿತೆಯ ಉಳಿವಿಗೆ ನಿರ್ಣಾಯಕ ಎಂಬಂತೆ ಬಿಂಬಿಸಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಅಧ್ಯಕ್ಷ ಮೌಲಾನಾ ಅಬ್ದುಲ್ ಹಸನ್ ನದ್ವಿಯವರು, ಶೆರಿಯಾದ ರಕ್ಷಣೆಯು “ಭಾರತದಲ್ಲಿ ಮುಸ್ಲಿಮರ ಅತ್ಯಂತ ಮುಖ್ಯವಾದ ಸಮಸ್ಯೆ” ಎಂದು ಬಣ್ಣಿಸಿದರು. ಈ ಆಟಾಟೋಪಗಳು ಈ ವೈಯಕ್ತಿಕ, ಧಾರ್ಮಿಕ ಕಾನೂನುಗಳು ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿದ ಖಾತರಿ ಎಂದು ಬಿಂಬಿಸುವುದಕ್ಕೆ ಬದಲಾಗಿ, ಅವು ಸಂವಿಧಾನಕ್ಕೂ ಮಿಗಿಲಾದದ್ದೇನೋ ಎಂಬಂತೆ ಬಿಂಬಿಸಿದವು.

ಧಾರ್ಮಿಕ ವ್ಯವಸ್ಥೆಯು ಮೋದಿ ಸರಕಾರ ತಂದಿರುವ ತ್ರಿವಳಿ ತಲಾಖನ್ನು ಅಪರಾಧೀಕರಣಗೊಳಿಸುವ ಕಾನೂನಿಗೆ ಸಂಬಂಧಿಸಿದಂತೆ ಅದೇ ತಪ್ಪನ್ನು ಪುನರಾವರ್ತಿಸಿತು.

ಮುಸ್ಲಿಂ ಹಕ್ಕು, ಬೇಡಿಕೆಗಳ ಧ್ವನಿ

ಇಂದು ಮುಸ್ಲಿಂ ಸಮುದಾಯವು ಭಾರತದಲ್ಲಿ ಉದ್ಯೋಗ ಮತ್ತು ಶಿಕ್ಷಣದ ವಿಷಯದಲ್ಲಿ ಅತ್ಯಂತ ಹಿಂದುಳಿದಿದೆ. ಅವರು ದಲಿತರಿಗಿಂತಲೂ ಹಿಂದಿದ್ದಾರೆ. ಸಮಯ ಕಳೆದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಭದ್ರತಾ ಸಂಸ್ಥೆಗಳು ಮುಸ್ಲಿಮರ ಕಾನೂನು ಹಕ್ಕುಗಳನ್ನು ಸಾಮಾನ್ಯವೆಂಬಂತೆ ದಮನಿಸುತ್ತಿವೆ. ಇದು ಕೇವಲ ಜಾತ್ಯತೀತ ಭಾರತಕ್ಕೆ ಒಂದು ಕಳಂಕ ಮಾತ್ರವಲ್ಲ, ಭಾರತ ಸರಕಾರಕ್ಕೆ ಈ ಸಂಬಂಧದಲ್ಲಿ ಸಾಕಷ್ಟು ಒತ್ತಡ ಹೇರುವಲ್ಲಿ ಸಮುದಾಯದ ಸ್ವಯಂಘೋಷಿತ ವಕ್ತಾರರೂ, ನಾಯಕರೂ ಆದ ಉಲೆಮಾಗಳ ಸಾರಾಸಗಟು ವೈಫಲ್ಯವನ್ನೂ ಪ್ರತಿಬಿಂಬಿಸುತ್ತದೆ.

ಒಂದು ಹೆಚ್ಚು ಪ್ರಬುದ್ಧ ನಾಯಕತ್ವವು ತನ್ನ ಸಮುದಾಯಕ್ಕೆ ಈ ಲೌಕಿಕ ಅವಕಾಶಗಳು ಮತ್ತು ಕಾನೂನು ಹಕ್ಕುಗಳನ್ನು ಪಡೆಯಲು ನಾಯಕತ್ವ ವಹಿಸಿ ಚಳವಳಿಗಳನ್ನು ನಡೆಸುತ್ತಿತ್ತು. ನಾಗರಿಕ ಹಕ್ಕುಗಳ ಚಳವಳಿಯ ಸಂದರ್ಭದಲ್ಲಿ ಯುಎಸ್ಎಯ ಕರಿಯರ ಚರ್ಚುಗಳು ವಹಿಸಿದ ಕೇಂದ್ರ ಪಾತ್ರ ಇದಕ್ಕೊಂದು ಉದಾಹರಣೆ. ಈ ಚರ್ಚುಗಳು ಇಂದಿಗೂ ಆಫ್ರಿಕನ್ ಅಮೇರಿಕನ್ ಸಮುದಾಯಕ್ಕೆ ಆಧಾರ ಸ್ಥಂಭಗಳಾಗಿವೆ. ಅವು ಚರ್ಚಿಗೆ ಹೋಗುವವರಿಗೆ ಬಡತನ, ಮಾದಕವಸ್ತು ಬಳಕೆ, ಸಾಂಸ್ಥಿಕ ಜನಾಂಗೀಯವಾದ ಇತ್ಯಾದಿಯಾಗಿ ಜ್ವಲಂತ, ಪ್ರಗತಿಪರ ಸಾಮಾಜಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುತ್ತಿವೆ.

ಅದರೆ, ಭಾರತೀಯ ಮುಸ್ಲಿಂ ಸಮುದಾಯದ ಧಾರ್ಮಿಕ-ರಾಜಕೀಯ ಮಧ್ಯವರ್ತಿಗಳು ರಾಜಕೀಯ ವರ್ಗವನ್ನು ಸಂರಕ್ಷಿಸುವ ಹೊರೆಯನ್ನು ಹೊತ್ತಿದ್ದಾರೆ; ಇಲ್ಲವೇ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ದೊಂಬರಾಟದಲ್ಲಿ ನಿರತರಾಗಿದ್ದಾರೆ.

ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳಿಗೆ ನೇರವಾಗಿ ಆತಂಕ ಒಡ್ಡುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆಆರ್‌ಸಿ)ಯನ್ನು ನವೀಕರಿಸಲು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಜಮೀಯತ್ ಉಲೆಮಾ-ಇ-ಹಿಂದ್‌ನ ಈಗಿನ ಮುಖ್ಯಸ್ಥ ಮಹಮೂದ್ ಮದನಿಯವರ ಬೆಂಬಲವು ಅವರನ್ನು ಬಯಲು ಮಾಡುವಂತಹ ಮಾತ್ರವಲ್ಲ; ನಾಚಿಕೆಗೇಡಿನ ಕ್ರಮವೂ ಆಗಿದೆ. ಆದರೆ, 2012ರ ಚುನಾವಣೆಗೆ ಮೊದಲಿನಿಂದಲೇ ನರೇಂದ್ರ ಮೋದಿಯನ್ನು ಸಕ್ರಿಯವಾಗಿ ಸಮರ್ಥಿಸಿ, ಆತ 2002ರ ಘಟನೆಗಳಿಗೆ ಕ್ಷಮೆ ಯಾಚಿಸಬೇಕಾದುದು ಏನೂ ಇಲ್ಲ ಎಂದು ಹೇಳಿದ ವ್ಯಕ್ತಿಯೊಬ್ಬರಿಂದ ಇದು ನಡೆಯುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಅಥವಾ ಪ್ರತೀ ಚುನಾವಣೆಯಲ್ಲಿ  ಯಾವ ಪಕ್ಷ ಹೆಚ್ಚು ಪ್ರಬಲವಾಗಿದೆ, ಆದುದರಿಂದ ಯಾರು ಹೆಚ್ಚಿನ ಕೃಪಾಶ್ರಯ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ, ಪ್ರತೀ ಚುನಾವಣೆಯಲ್ಲಿಯೂ ಒಂದೊಂದು ಪಕ್ಷಕ್ಕೆ ಬೆಂಬಲ ಘೋಷಿಸುತ್ತಾ, ಸದಾ ಅತ್ತಿಂದಿತ್ತ ಓಲಾಡುವ ಜುಮ್ಮಾ ಮಸೀದಿಯ ಶಾಹಿ ಇಮಾಮರೂ ಅಷ್ಟೇ.

ರಾಜಕೀಯ ವಿಷಯಗಳಲ್ಲಿ ಮುಸ್ಲಿಂ ಧಾರ್ಮಿಕ ನಾಯಕತ್ವದ ನಿರುಪಯುಕ್ತತೆಯ ಬಗ್ಗೆ ನಿಮಗೆ ಇನ್ನೂ ಮನವರಿಕೆಯಾಗದಿದ್ದರೆ, ರಾಜಕೀಯ ಅಂಗಳದಿಂದಲೇ ಅವರ ಕಣ್ಮರೆಯನ್ನು ಊಹಿಸಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...