ವಾಟ್ಸಾಪ್ ತನ್ನ ಹೊಸ ಗೌಪ್ಯತಾ ನೀತಿಗಾಗಿ ಕುತಂತ್ರದೊಂದಿಗೆ ಒಪ್ಪಿಗೆ ಪಡೆಯುವ ಮೂಲಕ ಬಳಕೆದಾರ ವಿರೋಧಿ ನಡೆಯಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ಹೊಸ ಅಫಿಡವಿಟ್ ಅನ್ನು ದೆಹಲಿ ಹೈಕೋಟ್‌ಗೆ ಸಲ್ಲಿಸಿದೆ.
ವಾಟ್ಸಾಪ್ ತನ್ನ ಸಂದೇಹ ಪಡದ ಬಳಕೆದಾರ ಮುಂದೆ ‘ತನ್ನ ಡಿಜಿಟಲ್ ಪರಾಕ್ರಮವನ್ನು’ ಬಿಚ್ಚಿಟ್ಟಿದ್ದು, ಅದರ ನೋಟಿಫಿಕೇಷನ್‌ಗಳನ್ನು ನಿಯಮಿತವಾಗಿ ಕಳುಹಿಸುವ ಮೂಲಕ ಹೊಸ 2021 ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದೆ ಎಂದು ಹೈಕೋರ್ಟ್ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಲಸಿಕೆ ವಿತರಣೆಗೆ ಸರ್ಕಾರ ತನ್ನ ಸಲಹೆಗಾರನ ಮಾತು ಕೇಳಲಿ: ಡಿ.ಕೆ ಶಿವಕುಮಾರ್
ವಾಟ್ಸಪ್‌ನ ಗೇಮ್ ಪ್ಲಾನ್ ಸ್ಪಷ್ಟವಾಗಿದ್ದು, ವೈಯಕ್ತಿಕ ಯೋಜನೆ ಸಂರಕ್ಷಣೆ (ಪಿಡಿಪಿ) ಮಸೂದೆಯು ಕಾನೂನು ಆಗುವ ಮೊದಲು ಹೊಸ ಗೌಪ್ಯತಾ ನೀತಿಗೆ ಬದ್ಧವಾಗಿರುವ ತನ್ನ ಬಳಕೆದಾರರ ಸಂಪೂರ್ಣ ಮೂಲವನ್ನು ವರ್ಗಾಯಿಸಲು ಅದು ಉದ್ದೇಶಿಸಿದೆ ಎಂದು ಕೇಂದ್ರವು ಆರೋಪಿಸಿದೆ.
ಪ್ರಸ್ತುತ ವಾಟ್ಸಪ್ ತನ್ನ ಬಳಕೆದಾರರಿಗೆ ಕಳುಹಿಸುತ್ತಿರುವ ನೋಟಿಫಿಕೇಷನ್ ಅಸ್ತಿತ್ವದಲ್ಲಿರುವುದಾಗಿರಲಿ ಅಥವಾ ಹೊಸದಾಗಿರಲಿ ಅದು 24/03/2021 ರ ದಿನಾಂಕದಂದು ‘ಭಾರತದ ಸ್ಪರ್ಧಾ ಆಯೋಗ’ದ ಆದೇಶದ ಪ್ರಾಥಮಿಕ ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರವು ಕೋರ್ಟ್‌ಗೆ ತಿಳಿಸಿದೆ.
ಹೊಸ ಗೌಪ್ಯತಾ ನೀತಿಗೆ ಸಂಬಂಧಿಸಿದ ನೋಟಿಫಿಕೇಷನ್‌ಳನ್ನು ಅಸ್ತಿತ್ವದಲ್ಲಿರುವ ಬಳಕೆದಾರಿಗೆ ಕಳುಹಿಸಬಾರದು ಮತ್ತು ದೈನಂದಿನ ಆಧಾರದ ಮೇಲೆ ಎಷ್ಟು ನೋಟಿಫಿಕೇಷನ್‌ಗಳನ್ನು ಕಳುಹಿಸಲಾಗುತ್ತಿದೆ ಎಂದು ದಾಖಲಿಸಲು ಮಧ್ಯಂತರ ನಿರ್ದೇಶನವನ್ನು ನೀಡಬೇಕೆಂದು ಕೇಂದ್ರವು ದೆಹಲಿ ಹೈಕೋರ್ಟ್‌ಗೆ ಒತ್ತಾಯಿಸಿದೆ.
ಇದನ್ನೂ ಓದಿ: ‘ಕೆಎಸ್‌ಆರ್‌ಟಿಸಿ’ ಬ್ರಾಂಡ್ ನೇಮ್ ಕಳೆದುಕೊಂಡ ಕರ್ನಾಟಕ! ಸಾರಿಗೆ ಸಚಿವ ಹೇಳಿದ್ದೇನು?
ವಾಟ್ಸಾಪ್ ಹೊಸ ಗೌಪ್ಯತಾ ನೀತಿಯ ವಿರುದ್ಧ ಹಲವಾರು ಅರ್ಜಿಗಳನ್ನು ಸಲ್ಲಿಕೆಯಾದ ನಂತರ ಕೇಂದ್ರವು ಈ ಅಫಿಡವಿಟ್ ಸಲ್ಲಿಸಿದೆ. ಡಾ. ಸೀಮಾ ಸಿಂಗ್, ಮೇಘನ್ ಮತ್ತು ವಿಕ್ರಮ್ ಸಿಂಗ್ ಅವರು ವಾಟ್ಸಾಪ್ ತನ್ನ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಅಥವಾ ಜನವರಿ 4 ರ ಗೌಪ್ಯತಾ ನೀತಿಯಿಂದ ಹೊರಗುಳಿಯುವ ಆಯ್ಕೆಯನ್ನು ನೀಡುವಂತೆ ಆದೇಶಿಸುವಂತೆ ಭಾರತದ ಒಕ್ಕೂಟಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ ವಾಟ್ಸಪ್ ತನ್ನ ಹೊಸ ನೀತಿಯನ್ನು ಸ್ವೀಕರಿಸಲು ಯಾರನ್ನೂ ಒತ್ತಾಯಿಸುತ್ತಿಲ್ಲ ಮತ್ತು ಅದರ ಗೌಪ್ಯತಾ ನೀತಿ ಕಡ್ಡಾಯವಲ್ಲ ಎಂದು ವಾಟ್ಸಾಪ್ ತನ್ನ ಉತ್ತರದಲ್ಲಿ ತಿಳಿಸಿದೆ.
ವಾಟ್ಸಪ್ ಸಲ್ಲಿಸಿದ ಹೊಸ ಅಫಿಡವಿಟ್‌ನಲ್ಲಿ, “2021 ರ ಹೊಸ ಗೌಪ್ಯತಾ ನೀತಿಯು ಖಾಸಗಿ ವ್ಯಕ್ತಿಗಳ(private parties) ನಡುವಿನ ಒಪ್ಪಂದವಾಗಿದ್ದು, ಬಳಕೆದಾರರು ಸ್ವೀಕರಿಸಲು ಅಥವಾ ತಿರಸ್ಕರಿಸಲು ಮುಕ್ತರಾಗಿದ್ದಾರೆ ಎಂದು ತಿಳಿಸಿದೆ. ಹೊಸ ಗೌಪ್ಯತಾ ನೀತಿಯನ್ನು ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ವಾಟ್ಸಾಪ್ ದೆಹಲಿ ಹೈಕೋರ್ಟ್‌ಗೆ ಒತ್ತಾಯಿಸಿದೆ. ವಿಚಾರಣೆಯನ್ನು ಜುಲೈ 22 ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಆದಿತ್ಯನಾಥ್ ಸರ್ಕಾರದ ಕೊರೊನಾ ನಿರ್ವಹಣೆಯನ್ನು ಶ್ಲಾಘಿಸಿದ ಬಿಜೆಪಿ!


