Homeಅಂತರಾಷ್ಟ್ರೀಯಇಸ್ರೇಲ್‌ನಲ್ಲಿ ರಾಜಕೀಯ ಅನಿಶ್ಚಿತತೆ: ಪ್ರಧಾನಿ ನೆತನ್ಯಾಹು ಬದಲಾವಣೆಗೆ ಕ್ಷಣಗಣನೆ

ಇಸ್ರೇಲ್‌ನಲ್ಲಿ ರಾಜಕೀಯ ಅನಿಶ್ಚಿತತೆ: ಪ್ರಧಾನಿ ನೆತನ್ಯಾಹು ಬದಲಾವಣೆಗೆ ಕ್ಷಣಗಣನೆ

- Advertisement -
- Advertisement -

ಇಸ್ರೇಲ್‌ನಲ್ಲಿ ಮತ್ತೆ ರಾಜಕೀಯ ಅನಿಶ್ಚಿತತೆ ಪ್ರಾರಂಭವಾಗಿದ್ದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಪ್ರಧಾನಿ ನೆತನ್ಯಾಹು ಅವರ ವಿರೋಧಿ ನಾಯಕರು ಮೈತ್ರಿ ಮಾಡಿಕೊಂಡಿದ್ದು ಹೊಸ ಒಕ್ಕೂಟ ಸರ್ಕಾರವನ್ನು ರಚನೆ ಮಾಡಲು ಮುಂದಾಗಿದ್ದಾರೆ.

ಪ್ರಮುಖ ವಿರೋಧ ಪಕ್ಷವಾದ ಯೆಸ್‌ ಅಟೈಡ್ ಪಕ್ಷದ ನಾಯಕ ಯೇರ್‌ ಲ್ಯಾಪಿಡ್ ಮತ್ತು ಯೆಮಿನ ಪಕ್ಷದ ನಾಯಕ, ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್‌ ಅವರು ಬುಧವಾರ ಮಧ್ಯರಾತ್ರಿ ಸಭೆ ನಡೆಸಿದ್ದು, ಹೊಸ ಒಕ್ಕೂಟ ರಚಿಸುವ ವಿಚಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಎರಡು ವರ್ಷಗಳಲ್ಲಿ ದೇಶದಲ್ಲಿ ಮತ್ತೆ ಚುನಾವಣೆ ನಡೆಯುವುದು ತಪ್ಪಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಗೌಪ್ಯತಾ ನೀತಿಗೆ ಕುತಂತ್ರದಿಂದ ಒಪ್ಪಿಗೆ ಪಡೆಯುತ್ತಿದೆ: ಕೇಂದ್ರದಿಂದ ವಾಟ್ಸಪ್‌‌ ವಿರುದ್ದ ಹೊಸ ಅಫಿಡವಿಟ್‌

“ಮುಂದೆ ರಚೆನೆಯಾಗುವ ಒಕ್ಕೂಟ (ಮೈತ್ರಿ) ಸರ್ಕಾರವು ತನ್ನ ಪರ ಮತ ಹಾಕಿದ ಮತ್ತು ಹಾಕದಿರುವ ಇಸ್ರೇಲ್‌ನ ಎಲ್ಲಾ ನಾಗರಿಕರ ಪರವಾಗಿ ಕೆಲಸ ಮಾಡುತ್ತದೆ. ಇಸ್ರೇಲ್ ಸಮಾಜವನ್ನು ಒಂದುಗೂಡಿಸಲು ಎಲ್ಲ ರೀತಿಯಲ್ಲೂ ಕೆಲಸ ಮಾಡಲಿದೆ” ಎಂದು ಲ್ಯಾಪಿಡ್ ಹೇಳಿದ್ದಾರೆ.

ಒಪ್ಪಂದದ ಪ್ರಕಾರ, ಹೊಸ ಸರ್ಕಾರದಲ್ಲಿ ಲ್ಯಾಪಿಡ್ ಮತ್ತು ಬೆನೆಟ್ ಪ್ರಧಾನಿ ಹುದ್ದೆಯನ್ನು ಪಾಳಿ ಆಧಾರದಲ್ಲಿ ವಿಭಜಿಸಿಕೊಳ್ಳಲಿದ್ದಾರೆ. ಬೆನೆಟ್ ಮೊದಲ ಎರಡು ವರ್ಷ ಸೇವೆ ಸಲ್ಲಿಸಲಿದ್ದಾರೆ. ನಂತರ ಲ್ಯಾಪಿಡ್ ಅಂತಿಮ ಎರಡು ವರ್ಷ ಕಾರ್ಯನಿರ್ವಹಿಸಲಿದ್ದಾರೆ.

ಇಸ್ರೇಲ್‌‌ ಸಂಸತ್‌ನಲ್ಲಿ ಮುಂದಿನ ವಾರ ಈ ಸಂಬಂಧ ಮತದಾನ ನಡೆಯಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೇಶದ್ರೋಹ: ಪ್ರತಿಯೊಬ್ಬ ಪತ್ರಕರ್ತನು ರಕ್ಷಣೆಗೆ ಅರ್ಹನಾಗಿರುತ್ತಾನೆ ಎಂದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...