ಇರುಳಿಗ ಬುಡಕಟ್ಟು ಸಮುದಾಯದ ನೈಜ ಘಟನೆ ಆಧಾರಿಸಿ ತೆರೆಕಂಡ ‘ಜೈ ಭೀಮ್’ ಸಿನಿಮಾ ಬಿಡುಗಡೆಯಾದ ಬಳಿಕ ಬುಡಕಟ್ಟ ಸಮುದಾಯಗಳ ಕುರಿತು ಗಂಭೀರ ಚರ್ಚೆಗಳಾಗುತ್ತಿವೆ. ಅದರಲ್ಲೂ ಇರುಳಿಗರು ನಿತ್ಯವೂ ಅನುಭವಿಸುತ್ತಿರುವ ಕಷ್ಟಗಳು ಬೆಳಕಿಗೆ ಬರುತ್ತಿವೆ.
ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ಇರುಳಿಗ ಕುಟುಂಬಗಳಿದ್ದು, ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಈ ಸಮುದಾಯ ಸಂಕಷ್ಟ ಎದುರಿಸುತ್ತಿರುವುದು ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತಿದೆ.
ರಾಮನಗರ ತಾಲ್ಲೂಕಿನ ಕೂಟಗಲ್ ಬಳಿ ಇರುವ ಇರುಳಿಗ ಬುಡಕಟ್ಟು ಸಮುದಾಯ ದಶಕಗಳಿಂದಲೂ ಮೂಲಸೌಕರ್ಯವಿಲ್ಲದೆ ಒದ್ದಾಡುತ್ತಿದೆ. ಮಳೆ ಬಂದರಂತೂ ಇಲ್ಲಿರುವ 23 ಗುಡಿಸಲುಗಳಿಗೂ ನೀರು ನುಗ್ಗುತ್ತದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ವಿಪರೀತ ನೀರು ಗುಡಿಸಲುಗಳಿಗೆ ನುಗ್ಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ಗುಡಿಸಲಿನಲ್ಲಿ ತೂಗುಯ್ಯಾಲೆಯ ರೀತಿ ನಿರ್ಮಿಸಿಕೊಂಡು (50) ಮಲಗಿದ್ದರು. ಆದರೆ ಮಧ್ಯರಾತ್ರಿ ಮೇಲಿನಿಂದ ಕುಸಿದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿರಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…
ದಶಕಗಳಿಂದಲೂ ಇರುಳಿಗರು ಕನಿಷ್ಠ ಮೂಲಸೌಕರ್ಯಕ್ಕಾಗಿ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದು, ಇರುಳಿಗರ ಕುರಿತು ಗಂಭೀರ ಚರ್ಚೆಗಳಾಗುತ್ತಿರುವ ಹೊತ್ತಿನಲ್ಲಿ ರತ್ನಗಿರಯ್ಯ ಅವರ ದುರಂತ ಸಾವು ಸಂಭವಿಸಿದೆ. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ಈ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಕಾಡಿನಲ್ಲಿ ನೆಮ್ಮದಿಯಾಗಿ ಇದ್ದವರನ್ನು ಬೀದಿಗೆ ತಂದು ಬಿಡಲಾಯಿತು. ಈಗ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಈ ಕುಟುಂಬಗಳಿಗೆ ರೇಷನ್‌ಕಾರ್ಡ್, ವೋಟರ್ ಐಡಿ ಇದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆಗಳ ಮಹಾಪೂರವನ್ನೇ ರಾಜಕಾರಣಿಗಳು ನೀಡುತ್ತಾರೆ. ಚುನಾವಣೆ ಮುಗಿದ ಮೇಲೆ ಮತ್ತದೇ ಗೋಳು ಮುಂದುವರಿಯುತ್ತಿದೆ.
ಸ್ಥಳೀಯ ಪತ್ರಕರ್ತ ಎಸ್.ರುದ್ರೇಶ್ವರ ರಾಮನಗರ ಅವರು ಸಾಮಾಜಿಕ ಮಾಧ್ಯಮದಲ್ಲಿ ಇರುಳಿಗರ ಪರಿಸ್ಥಿತಿಯ ಕುರಿತು ನಿರಂತರವಾಗಿ ವರದಿ ಮಾಡುತ್ತಿದ್ದಾರೆ. ಜೊತೆಗೆ ‘ಉದಯವಾಣಿ’ ಪತ್ರಿಕೆಯಲ್ಲಿ ಸರಣಿ ವರದಿಗಳನ್ನು ಮಾಡಿದ್ದಾರೆ. ಅವರು ಫೇಸ್‌ಬುಕ್ ಮೂಲಕ ನೀಡಿರುವ ಲೈವ್‌ಗಳು ಇರುಳಿಗರ ಸಂಕಷ್ಟವನ್ನು ಡಾಳಾಗಿ ತೋರಿಸುತ್ತಿವೆ. ಸುತ್ತ ಪೊದೆ, ಚಿಕ್ಕಚಿಕ್ಕ ಗುಡಿಸಲುಗಳು, ಮಳೆಯ ರುದ್ರಾವತಾರಕ್ಕೆ ನಲುಗಿರುವ ಇರುಳಿಗರ ನೋವಿಗೆ ಈ ವಿಡಿಯೊಗಳು ಬೆಳಕು ಚೆಲ್ಲಿವೆ.
ಇರುಳಿಗರಿಗೆ ನಿವೇಶನ ನೀಡಲು ಅಧಿಕಾರಿಗಳು ದಿನದೂಡುತ್ತಲೇ ಇದ್ದಾರೆ. ಆದರೆ ಮಳೆಯ ಬಿರುಸಿಗೆ ಸಿಲುಕಿ ರತ್ನಗಿರಯ್ಯ ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕೂಟಗಲ್ ಸರ್ವೇ ನಂಬರ್ 94ರಲ್ಲಿ 2 ಎಕರೆ ಭೂಮಿಯನ್ನು ಸರ್ವೇ ಮಾಡಿದ್ದಾರೆ. ಶೀಘ್ರವಾಗಿ ಇರುಳಿಗರಿಗೆ ನಿವೇಶನ ಮಂಜೂರು ಮಾಡುವ ಭರವಸೆಯನ್ನೂ ನೀಡಿದ್ದಾರೆ.
ಇದನ್ನೂ ಓದಿರಿ: ‘ಜೈ ಭೀಮ್’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?



ಸಾರ್ವಜನಿಕ ಸೇವಕರೆಂಬ ಅಧಿಕಾರಿಗಳು ಮತ್ತು ಆಡಳಿತಾರೂಢ ರಾಜಕಾರಣಿಗಳು ಮಾನವೀಯತೆಯನ್ನು ಕಳೆದುಕೊಂಡಿದ್ದಾರೆ.