Homeಮುಖಪುಟಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

ಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ದಿನಬೆಳಗಾಯ್ತೆಂದರೆ ಅವರಿವರ ಮನೆ ಅಟ್ಟಿ ಬಾಗಿಲಿಗೆ ಹೋಗಿ, ಮಾತನಾಡಿಸುತ್ತಿದ್ದ ಜುಮ್ಮಿ, ಈಗ ಮನೆಯೊಳಗೇ ಇರಲು ಒಂದೇ ವಾರಕ್ಕೆ ಸಾಕಾಗಿ ಹೋಗಿತ್ತು. ಆಗ ಬಂದ ವಾಟಿಸ್ಸೆ ನೋಡಿದ ಅವಳು, “ಇನ್ನು ಏಟು ದಿನ ಹಿಂಗೆ ಇರಬೇಕ್ಲ ಮನೆ ವಳಗೆ” ಎಂದಳು.

“ಅದನ್ನು ಮೋದಿ ತೀರಮಾನಸ್ತಾನೆ ಕಣಕ್ಕ”

“ಆ ಕೆರೋನ ಕಾಯ್ಲ ಇರೂ ಜಾಗದಲ್ಲಿ ಅಂಗಿರ್ಲಿ ನಾವಾಕ್ಲ ವಳಗಿರಬೇಕು”

“ಯಾಕಿರಬೇಕು ಅಂದ್ರೇ, ಕರೋನ ವೈರಸ್ ಗಾಳಿಲೆ ಬತ್ತದಂತೆ ಕಣಕ್ಕ”

“ಗಾಳಿಲಿ ಬೆಂಗಳೂರಿಂದ ಇಲ್ಲಿಗಂಟ ಬಂದತ್ಲ”

“ಬೆಂಗಳೂರಲ್ಲ ಕಣಕ್ಕ, ನಮಿಗೆ ತುಮಕೂರು ನಿರ‍್ರು, ಇತ್ಲಗೆ ಮೈಸೂರು ನಿರ‍್ರು. ಅಲ್ಯಾವನಾರ ಕೊರೋನಾ ರ‍್ಯಾಸ್ಕಲ್ ಪವರ್ ಪುಲ್ಲಾಗಿ ಸೀನಿಬುಟ್ಟು ಅದೇ ಟೈಮಿಗೆ ಒಂದು ಬಿರುಗಾಳಿ ಬಂದು ಇಲ್ಯಾಸಿ ಹೋದ್ರೆ ನಾವ್ಯಲ್ಲ ಕೊರೋನಾಗಳಾಯ್ತಿವಿ ಅಂತ ಮೋದಿ ಮನೆವಳಗಿರಿ ಅಂದವುನೆ”

“ಅವುನೇನೊ ಇರತನೆ ನಾವಿರದ್ಯಂಗ್ಲಾ, ಸೊಪ್ಪು ಸ್ಯದೆ ನೋಡಬಾರ್ದೆ, ದನಿಕರಗಳ ಮನೆವಳಗೆ ಏಟುದಿನ ಅಂತ ಕಟಿಗಳಿದ. ಹುಲ್ಲು ಕೊಪ್ಪಲಿಗೋಗಿ ಹುಲ್ಲು ತರಬಾರ್ದೆ, ಸೌದೆ ತರಬಾರ್ದೆ ಬೀದಿ ನಲ್ಲಿಲಿ ನೀರತರಬಾರ್ದೆ”

“ನಿನ್ನ ಕಷ್ಟ ಯಾವು ಅವುನಿಗೆ ಗೊತ್ತಿಲ್ಲ ಕಣಕ್ಕ. ಒಟ್ಟಿನಲ್ಲಿ ಮನೆವಳಗಿರಿ ಈಚೆಗೆ ಬರಬ್ಯಾಡಿ ಅಂದವುನೆ”

“ಇದಿನ್ಯಂಥಾ ಕಾಯಿಲನ್ಲ ಇಲ್ಲಿಗಂಟ ನೋಡಿರಲಿಲ್ಲ”

“ನೋಡಕ್ಕೆ ಕಾಣಬೇಕಲ್ಲಕ್ಕ ಅದೂ ದೇವ್ರಂಗೆ ಕಣ್ಣಿಗೆ ಕಾಣದಿಲವೊ. ಅಂಗೆ ಕೊರೋನಾನು ಕಾಣದಿಲ್ಲ”

“ದೇವುರ ಮಾಡಿದ್ರೆ ಉಸರಾಗದಿಲವೇನ್ಲ”

“ಯಕ್ಕಾ. ಈ ಹಾಳು ಕೊರೊನಾ ಅಂದ್ರೆ ಏನು ತಿಳಕಂಡಿದ್ದೀ? ಅದರ ಒಂದೇಟಿಗೆ ನಿಮ್ಮ ತಿರುಪ್ತಿ ತಿಮ್ಮಣ್ಣ, ಧರುಮಸ್ಥಳದ ಮಂಜಣ್ಣ, ಮ್ಯಾಲುಕೋಟೆ ಚಲುವಣ್ಣನೆ ಬಾಗಲಾಯ್ಕಂಡು ಪರಾರಿಯಾಗ್ಯವರೆ.

ಇನ್ನ ಈ ಲೋಕಲ್ ದೇವುರಂತು ಕೊರೋನ ತಗಲಿ ಸತ್ತೇ ಹೋಗಿರಬವುದು. ಯಾಕೆ ಅಂದ್ರೇ ಅವೂ ಕಣ್ಣಿಗೆ ಕಾಣೋದಿಲ್ಲ ಆ ಕೊರೊನಾಗೂ ಕಾಣದಿಲ್ಲ. ಯಲ್ಲ ಶೂನ್ಯ ಸಮಾಚಾರ”

“ಅದಿನ್ಯಂಗೆ, ಬತ್ತೊ’’

“ನಮ್ಮ ಜನ ಹೇಳೊ ಪ್ರಕಾರ, ಅಮೇರಿಕಾದ ಟ್ರಂಪಿನ ಜೊತೆಲೆ ಬತ್ತಂತೆ ಕಣಕ್ಕ’’

“ಅಮೆರಿಕಾದ ಟ್ರಂಕು ಅಂದ್ರೆ ಅವುನ್ಯಾರ್ಲ’’

‘‘ಅವುನು ಮೋದಿ ಪ್ರೆಂಡು ಕಣಕ್ಕ. ಅವುನೊಂಥರ ಇವುನಂಗೆಯಾ. ಇಬ್ರೂ ಪ್ರಂಡು. ನಾನು ಉಗ್ರಿ ಇದ್ದಿವಿ ನೋಡು ಆ ಥರದ ಪ್ರೆಂಡು. ನೀನೊಂಥರ ಸೋನಿಯಾ ಗಾಂಧಿ ಇದ್ದಂಗೆ”

“ಅಣಕ ವಡಿಬ್ಯಾಡ ಮುಂದಕ್ಕೇಳ್ಳ”

“ಆ ಟ್ರಂಪು ಒಂದು ಸತಿಯ ಮೋದಿಯ ಅಮೆರಿಕಕ್ಕೆ ಕರಿಸಿಗಂಡು, ಬಾಸಣ ಮಾಡಿಸಿದನಂತೆ. ಇವುನು ಬರುವಾಗ ನೀನು ಬಾ ನಮ್ಮ ದೇಸ ಯಂಗದೆ ನೋಡು ಅಂದಿದ್ನಂತೆ. ಆಗವುನು ಬತ್ತಿನಿ ನಡಿ ಅಂದ ಅಂಗೆ ಬಂದೇ ಬುಟ್ಟ’

“ಇನ್ನ ಇಲ್ಲೇ ಇದ್ದನೆ”

“ಅವುನ್ಯಾಕಿದ್ದನಕ್ಕ ಆಗ್ಲೆ ಹೋದ, ಅವುನ ಬತ್ತನೆ ಅಂತ ಈ ಕಡೆವು, ಟ್ರಂಪಿಗೆ ಕಾಣದಂಗೆ ಸ್ಲಂನ್ಯಲ್ಲ ತಗಿಸಿ ಅಲ್ಲಿಗೆ ಬಣ್ಣದ ಪರದೆ ಬುಟ್ಟಿದ್ರಂತೆ”

“ಅದ್ಯಾಕೆ”

“ಸಾಮಾನ್ಯವಾಗಿ ಬಡುವುರು ಬಡತನ ಮುಚ್ಚಿಡತರೆ ನೋಡು, ಅಂಗೆ ಈ ಮೋದಿ ನೋಟುಬ್ಯಾನು ಜಿ.ಎಸ್.ಟಿ ತಂದು, ಜನ ಕ್ಯಲಸ ಕಳಕಂಡು ಬಡುವುರಾಗಿ ಟ್ರಂಪು ಬರೋ ಜಾಗದಲ್ಲಿ ಟೆಂಟಾಕಿದ್ದವಂತೆ”

“ಪಾಪ ಇನ್ನೆಲ್ಲಿಗೋದವುಲ’’

“ನೀನು ಪಾಪ ಅಂತಿಕಣಕ್ಕ ಮೋದಿ ಶಾ ನು ಪಾಪ ಅನ್ನಬೇಕಲ್ಲ. ಅದ್ಕೆ ಅವುರು, ಟ್ರಂಪು ಬರೊ ಜಾಗದ ಟೆಂಟ ಬುಲ್ಡೋಜರ್ ಹಾಕಿ ಮಟ್ಟ ಮಾಡಿ, ಅಲ್ಲಿಗೆ ಪರದೆ ಬುಟ್ಟು, ಡೆಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್, ತಾಜ್ ಮಹಲ್ ಚಿತ್ರ ಹಾಕಿದ್ರಂತೆ”

“ಕಡಿಗೂ ಈ ನನ್ನ ಮಕ್ಕಳು ಸಾಬುರು ಕಟ್ಟಿದ್ದ ಸ್ಮಾರಕ ತೋರಿದ್ರೆ ವರತೂ ಇವುರ ಕಟ್ಟಿದ್ದೇನೂ ಇರಲಿಲ್ಲ ನೋಡು” ಎಂದ ಉಗ್ರಿ

‘‘ಇವುರದಿನ್ನ ಲೇಟಲ್ಲವೇನೋ ಇನ್ನ ಸಾವುರಾರು ಗೋರಿ ಕಟ್ಟಬೇಕಾಗ್ಯದೆ. ಅದ್ಕೆ ಕಾಂಗ್ರೆಸ್ಸಿಗೆ ಯಪ್ಪತೊರಸ ಕೊಟ್ಟಿರೊ ನೀವು ನಮಿಗೆ ಯಪ್ಪತ್ತು ತಿಂಗಳನಾರ ಕೊಡಿ ಅಂತ ಮೋದಿ ಕೇಳಿದ್ದ ಗೊತ್ತೆ”

“ಯಪ್ಪತ್ತು ತಿಂಗಳಾಯ್ತಲ್ಲೊ ಆಗ್ಲೆಯ”

“ಅದ್ಕೆ ದೇಸದ ಕತೆನೆ ಮುಗಿತಾ ಅದಲ್ಲೊ”

“ಅದೇನೊ ನಿಜ ಕಣೊ, ಮುಂದಿನ ದಿನ ನ್ಯನಿಸಿಗಂಡ್ರೆ ನ್ಯನಿಸಿಗಳಕ್ಕೆ ಭಯಾಯ್ತದೆ”

“ಅದೇನು ಟ್ರಂಕಿನ ಸುದ್ದಿ ಹೇಳ್ಳ”

‘‘ಸಾರಿ ಕಣಕ್ಕ, ಆ ಟ್ರಂಪು ಬಂದಾಗ್ಲೆ ಕೊರೋನಾ ಬಂದಿರದು ಯಾಕೆ ಅಂದ್ರೆ, ಅಮೆರಿಕ ದೇಸಕ್ಕಾಗ್ಲೆ ಕೊರೊನಾ ಬಂದಿತ್ತಂತೆ. ಅವುನ ಜೊತೆ ಬಂದೋರು, ಅದ ತಂದು ಇಲ್ಲಿ ಬುಟ್ಟು ಹೋದರಂತೆ ಅಮ್ಯಾಲೆ ಹರಡಿಕತ್ತು”

“ಅದಂಗಲ್ಲ ಕಣೊ”

“ಅಂಗೆ ಕಣೊ ಉಗ್ರಿ ಟ್ರಂಪು ಬಂದು ಹೋಗಗಂಟ ಅವುನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕಳುವಾಗ, ಕಣ್ಣಿಗೆ ಕಾಣದ ಕರೊನ ಯಾರಿಗೂ ಕಾಣಲಿಲ್ಲ. ಅವುನು ಹೋದ ಮ್ಯಾಲೆ ಅಟಗಾಸಿಗತ್ತು”

“ಈಗ್ಯಂಗೆ ವಾಸಿ ಮಾಡಿಕಳದು”

“ಮನಿವಳಿಗಿರಬೇಕಂತೆ”

“ಏಟು ದಿನ”

“ತಿರಿಗ ಪ್ರಧಾನಿ ಹೇಳತನೆ, ಅದ ಕಡ್ಡಿರಂಗ ಹೇಳತನೆ. ಅಲ್ಲಿ ಗಂಟ ಕಡ್ಡಿರಂಗ ಹೇಳಿದಂಗ ಕೇಳಬೇಕು”

“ಅವುನ್ಯಾರರ್ಲ”

“ಏ ಅದೊಂದು ಪೋಲಿಬಡ್ಡೆತ್ತದ್ದು ಕಣಕ್ಕ. ತಲಿ ಕೆಟ್ಟೋಗ್ಯದೆ. ಪಬ್ಲಿಕ್ ಟಿ.ವಿ ವಳಗಡೆ ಕುತುಗಂಡು, ಯಾಕ್ರಿ ಈಚಿಗೆ ಬತ್ತಿರಿ. ಮನೆವಳಗಿರಿ ಇಲ್ಲ ನೇಣಾಯ್ಕಂಡು ಸಾಯಿರಿ ಅಂದವುನೆ”

“ಅಂಗಂದ ಆ ಸೂಳೆಮಗನ್ನ ಯಳಕಂಡು ಬಾರ್ಲ ಇಲ್ಲಿ, ಯಕ್ಕಡದಲ್ಲಿ ಹೊಡಿತಿನಿ”

“ಹೋಗ್ಲಿ ಬುಡಕ್ಕ ಪೂರ್ ಬ್ರಾಹ್ಮಿನ್ ಪೆಲೊ”

*****

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...