Homeಮುಖಪುಟ#MeToo ಪ್ರಕರಣ : 5 ವರ್ಷವಾಯಿತು, ನ್ಯಾಯ ಸಿಗುವುದು ಯಾವಾಗ? ನಟಿ ತನುಶ್ರೀ ದತ್ತಾ

#MeToo ಪ್ರಕರಣ : 5 ವರ್ಷವಾಯಿತು, ನ್ಯಾಯ ಸಿಗುವುದು ಯಾವಾಗ? ನಟಿ ತನುಶ್ರೀ ದತ್ತಾ

- Advertisement -
- Advertisement -

ಅಧಿಕಾರದಲ್ಲಿರುವವರು ಎಲ್ಲಿಯವರೆಗೆ ಅಪರಾಧಿಗಳನ್ನು ರಕ್ಷಿಸುತ್ತಾರೋ, ಅಲ್ಲಿಯವರೆಗೆ ಯಾವುದೇ ಚಳವಳಿ ಅಥವಾ ವರದಿಯಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ನಟಿ ತನುಶ್ರೀ ದತ್ತಾ ಹೇಳಿದ್ದಾರೆ.

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಆಘಾತಕಾರಿ ಕಿರುಕುಳ ಮತ್ತು ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿದ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ತನುಶ್ರೀ ದತ್ತಾ 2018ರಲ್ಲಿ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಳಿಕ ಅದು ‘ಮೀಟೂ’ ಅಭಿಯಾನಕ್ಕೆ ನಾಂದಿಯಾಗಿತ್ತು. ಆದರೆ, ನಾನಾ ಪಾಟೇಕರ್ ತನುಶ್ರೀ ಅವರ ಆರೋಪಗಳನ್ನು ನಿರಾಕರಿಸಿದ್ದರು.

‘ಈಗಲೂ ನ್ಯಾಯಕ್ಕಾಗಿ ಕಾಯುತ್ತಿರುವೆ’ ಎಂದಿರುವ ತನುಶ್ರೀ ದತ್ತಾ, ಸಿನಿಮಾ ರಂಗದಲ್ಲಿ ತಾವೆದುರಿಸಿದ ದೌರ್ಜನ್ಯಗಳ ಬಗ್ಗೆ ನ್ಯಾ. ಹೇಮಾ ಸಮಿತಿಗೆ ಮಾಹಿತಿ ನೀಡಿರುವ ಮಹಿಳಾ ಕಲಾವಿದರನ್ನು ಬೆಂಬಲಿಸಿದ್ದಾರೆ.

ಹೇಮಾ ಸಮಿತಿಯ ವರದಿಯ ಕುರಿತು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ತನುಶ್ರೀ ದತ್ತಾ”ಇದು ‘ಮೀಟೂ’ ಪ್ರಕರಣಗಳಂತೆಯೇ ಕಾಣುತ್ತಿದೆ. ಸಮಾಜದೆದುರು ಸಂಭಾವಿತರಂತೆ ಕಾಣಿಸಿಕೊಳ್ಳುವ ಅವರು (ಆರೋಪಿಗಳು), ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ. ಇಂತಹ ವರದಿಗಳಿಂದ ಏನೂ ಆಗುವುದಿಲ್ಲ. ಏಕೆಂದರೆ, ಮಹಿಳೆಯರ ಮೇಲಿನ ದಾಳಿ ಮತ್ತು ದೌರ್ಜನ್ಯಗಳು ಈಗಲೂ ಮುಂದುವರೆದಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನೀವು ಮಿಸ್‌ ಇಂಡಿಯಾ ಅಥವಾ ನಟಿ, ಇಲ್ಲವೇ ವಿದ್ಯಾವಂತೆ-ಏನೇ ಆಗಿದ್ದರೂ, ಈ ದೇಶದಲ್ಲಿ ಅದು ಮುಖ್ಯವಾಗುವುದಿಲ್ಲ. ಅಧಿಕಾರದಲ್ಲಿರುವವರು ಎಲ್ಲಿಯವರೆಗೆ ಕ್ರಿಮಿನಲ್‌ಗಳನ್ನು ರಕ್ಷಿಸುಸುತ್ತಾರೋ, ಅಲ್ಲಿಯವರೆಗೆ ಯಾವ ಚಳವಳಿ ಅಥವಾ ಯಾರೊಬ್ಬರ ವಿಚಾರಗಳು ಏನೂ ಮಾಡಲಾಗದು. ಈಗ ಈ ಸಮಿತಿ ವರದಿ. ಆಗ ವಿಶಾಖ ಸಮಿತಿ (ಮಹಿಳೆಯರ ಕುಂದು ಕೊರತೆ ಸಮಿತಿ). ಅಷ್ಟೇ ಅಲ್ಲ, ಸಾಕಷ್ಟು ಸಮಿತಿಗಳನ್ನು ರಚಿಸಲಾಗಿದೆ. ಬಹಳಷ್ಟು ವರದಿಗಳು ಬಂದಿವೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿರುವಾಗ ಹಾಗೂ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ವ್ಯವಸ್ಥೆಯನ್ನು ಕೊಂಡೊಕೊಳ್ಳುತ್ತಿರುವಾಗ ಅಂತಹ ವ್ಯವಸ್ಥೆಯನ್ನು ಪಾಲಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

1997ರಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ವಿಶಾಖ ಮಾರ್ಗಸೂಚಿಗಳು, ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳದ ದೂರುಗಳ ಪರಿಹಾರಕ್ಕಾಗಿ ಕಾರ್ಯವಿಧಾನವನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿದೆ.

2009ರ “ಹಾರ್ನ್ ‘ಓಕೆ’ ಪ್ಲೀಸ್” ಚಿತ್ರದ ಸೆಟ್‌ನಲ್ಲಿ ತನ್ನ ನೃತ್ಯದ ಹೆಜ್ಜೆಗಳನ್ನು ತೋರಿಸುವ ನೆಪದಲ್ಲಿ ನಾನಾ ಪಾಟೇಕರ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು 2018 ರಲ್ಲಿ ದತ್ತಾ ಆರೋಪಿಸಿದ್ದರು.

ಅವರು ಪಾಟೇಕರ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ, ನಿರ್ದೇಶಕ ರಾಕೇಶ್ ಸಾರಂಗ್ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದರು.

ದತ್ತಾ ಅವರ ಪ್ರಕಾರ, ಅವರು 14 ಸಾಕ್ಷಿಗಳ ಹೆಸರುಗಳನ್ನು ಕೊಟ್ಟಿದ್ದರು. ಆದರೆ, ಪೊಲೀಸರು ಅವರಲ್ಲಿ ಯಾರೊಬ್ಬರಿಂದಲೂ ಹೇಳಿಕೆಗಳನ್ನು ಪಡೆದುಕೊಂಡಿಲ್ಲ. ಬದಲಾಗಿ ಬಿ ರಿಪೋರ್ಟ್ ಹಾಕಲು ಪ್ರಯತ್ನಿಸಿದ್ದರು. ಅಂದರೆ, ಆರೋಪಿಯ ವಿರುದ್ಧ ಆರೋಪ ಅಥವಾ ವಿಚಾರಣೆಗೆ ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿಲ್ಲ ಎಂದರ್ಥ. ಇದರ ವಿರುದ್ಧ ಹೋರಾಡುವುದಾಗಿ ದತ್ತಾ ಹೇಳಿದ್ದಾರೆ.

‘ತಮಗೆ ಸಾರ್ವಜನಿಕರಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ತಮ್ಮನ್ನು ಸಂಪರ್ಕಿಸಿಲ್ಲ ಎಂಬುದಾಗಿ ನಾನು ಉಲ್ಲೇಖಿಸಿರುವ ಸಾಕ್ಷಿದಾರರು ನನಗೆ ಹೇಳಿದ್ದಾರೆ. ಒಬ್ಬ ಸಾಕ್ಷಿದಾರ ಊರನ್ನೇ ತೊರೆದಿದ್ದಾರೆ. ಮತ್ತೊಬ್ಬ ಮಧ್ಯಪ್ರಾಚ್ಯಕ್ಕೆ ಓಡಿಹೋಗಿದ್ದಾರೆ. ಸಾಕ್ಷಿಯಾಗಿದ್ದ ಮತ್ತೊಬ್ಬ ಮಹಿಳೆ ಭಯದಿಂದ ಮುಂದೆ ಬರುತ್ತಿಲ್ಲ. ಪ್ರತಿಭಟನಾ ಅರ್ಜಿ ದಾಖಲಿಸಿದ ನಂತರ, ಅದೂ ಐದು ವರ್ಷಗಳ ಬಳಿಕ ನ್ಯಾಯಾಲಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ನನಗೆ ನ್ಯಾಯ ಸಿಗುವುದು ಯಾವಾಗ?’ ಎಂದು ದತ್ತಾ ಪ್ರಶ್ನಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಎಲ್ಲಿಗೆ ಹೋದರೂ, ಅಪರಿಚಿತ ವ್ಯಕ್ತಿಗಳ ಗುಂಪು ನನ್ನನ್ನು ಹಿಂಬಾಲಿಸುತ್ತಿದೆ ಎಂದು ದತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

‘2022ರಲ್ಲಿ ಉಜ್ಜಯಿನಿಯಲ್ಲಿ ಅಪಘಾತಕ್ಕೊಳಗಾದೆ. ನಾನು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಬ್ರೇಕ್‌ ಅನ್ನು ಯಾರೋ ತುಂಡರಿಸಿದ್ದರು. ಕಾಕತಾಳೀಯವೆಂದು ನಿರ್ಲಕ್ಷಿಸಲು, ಆ ರೀತಿ ಆದದ್ದು ಒಮ್ಮೆಯಷ್ಟೇ ಅಲ್ಲ’ ಎಂದು ಹೇಳಿದ್ದಾರೆ.

ನಾನು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನಾನೂ ಒಬ್ಬರ ಮಗಳು. ನನಗೆ ಈ ದೇಶದಲ್ಲಿ ಬದುಕುವ ಮತ್ತು ಸುರಕ್ಷಿತವಾಗಿರುವ ಹಕ್ಕಿಲ್ಲವೇ? ಎಂದು ತನುಶ್ರೀ ದತ್ತಾ ಕೇಳಿದ್ದಾರೆ.

ಇದನ್ನೂ ಓದಿ : ಕಲರ್‌ಫುಲ್ ಜಗತ್ತಿನ ಕರಾಳತೆ ತೆರೆದಿಟ್ಟ ‘ಜಸ್ಟೀಸ್ ಹೇಮಾ ಸಮಿತಿ’ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಗಿಲು ಬಡಾವಣೆ ಮನೆಗಳ ತೆರವು : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರಿನ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಗಳ ಸುಮಾರು ‌300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ...

ರ‍್ಯಾಗಿಂಗ್ ದೈಹಿಕ ಹಿಂಸೆ; ಎರಡು ತಿಂಗಳ ಬಳಿಕ 19 ವರ್ಷದ ವಿದ್ಯಾರ್ಥಿನಿ ಸಾವು

ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಘಟನೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. 19 ವರ್ಷದ ಬಾಲಕಿಯ ಸಾವಿನ ಗಂಭೀರ ಪ್ರಕರಣಗಳಲ್ಲಿ ಕಾಲೇಜಿನ ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿನಿಯರ ಹೆಸರಿದೆ....

ಮುಸ್ಲಿಂ ಲೀಗ್‌ ಚಂದ್ರಿಕಾದ ಸಂಪಾದಕೀಯ ಪ್ರಕಟಿಸಿದ ಜನ್ಮಭೂಮಿ ಪತ್ರಿಕೆ : ಮುಜುಗರಕ್ಕೊಳಗಾದ ಬಿಜೆಪಿಯ ಮುಖವಾಣಿ

ವರ್ಷದ ಆರಂಭದಲ್ಲಿ ಅಚ್ಚರಿ ಎಂಬಂತೆ, ಕೇರಳ ಬಿಜೆಪಿಯ ಮುಖವಾಣಿಯಾದ ಮಲಯಾಳಂ ದಿನಪತ್ರಿಕೆ 'ಜನ್ಮಭೂಮಿ', ಪ್ರತಿಸ್ಪರ್ಧಿ ಪತ್ರಿಕೆಯಾದ ಇಂಡಿಯನ್‌ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಪಕ್ಷದ ಮುಖವಾಣಿ 'ಚಂದ್ರಿಕಾ'ದ ಸಂಪಾದಕೀಯ ಪ್ರಕಟಿಸಿ ಮುಜುಗರಕ್ಕೀಡಾಗಿದೆ. 'ಜನ್ಮಭೂಮಿ' ಪತ್ರಿಕೆಯ...

ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಖರೀದಿ; ಶಾರುಖ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದ ರಾಮಭದ್ರಾಚಾರ್ಯ

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದೂ ಆಧ್ಯಾತ್ಮಿಕ ನಾಯಕ...

“ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ”: ನ್ಯೂಯಾರ್ಕ್‌ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿಯಿಂದ ಉಮರ್ ಖಾಲಿದ್‌ಗೆ ಪತ್ರ

ಜೈಲಿನಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್‌ ನಗರದ ನೂತನ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಕೈಬರಹದ ಪತ್ರವೊಂದನ್ನು ಬರೆದಿದ್ದಾರೆ ಎಂದು, ಖಾಲಿದ್ ಸ್ನೇಹಿತೆ ಬನೋಜ್ಯೋತ್ಸ್ನಾ...

ಮಧ್ಯಪ್ರದೇಶ| ಹಸು ಮೇಯಿಸುವ ವಿಚಾರಕ್ಕೆ ಜಗಳ; ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿದ ಗುಂಪು

ದಲಿತ ಕುಟುಂಬವೊಂದರ ಹೊಲದಲ್ಲಿ ಪ್ರಬಲ ಜಾತಿ ಜನರ ಹಸುಗಳು ಮೇಯಿಸುವುದನ್ನು ವಿರೋಧಿಸದ್ದಕ್ಕೆ ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಕೋರರು ಮನಬಂದಂತೆ ಗುಂಡು ಹಾರಿಸಿ ನಂತರ ದಲಿತ...

ಬಳ್ಳಾರಿ | ರೆಡ್ಡಿ ಬಣಗಳ ನಡುವೆ ಘರ್ಷಣೆ : ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ (ಜ.1) ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ...

ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ : ಸಚಿವ ಹೆಚ್‌.ಸಿ ಮಹದೇವಪ್ಪ

ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿದರು. ಮರ್ಯಾದೆಗೇಡು ಹತ್ಯೆ ನಡೆದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮಕ್ಕೆ...

ತಮಿಳುನಾಡು: ಪ್ರತಿಭಟನಾ ನಿರತ ಶಿಕ್ಷಕರು, ನೈರ್ಮಲ್ಯ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಪ್ರೇಮಲತಾ ವಿಜಯಕಾಂತ್

ತಮಿಳುನಾಡು ಸರ್ಕಾರವು ಪ್ರತಿಭಟನಾ ನಿರತ ಮಾಧ್ಯಮಿಕ ದರ್ಜೆಯ ಶಿಕ್ಷಕರು ಮತ್ತು ನೈರ್ಮಲ್ಯ ಕಾರ್ಮಿಕರ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಬೇಕು ಎಂದು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಗುರುವಾರ ಹೇಳಿದ್ದಾರೆ.  ತಮ್ಮ...

ಸ್ವಿಟ್ಜರ್‌ಲ್ಯಾಂಡ್‌ನ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 40 ಮಂದಿ ಸಾವನ್ನಪ್ಪಿರುವ ಶಂಕೆ, ಹಲವರಿಗೆ ಗಾಯ

ನೈಋತ್ಯ ಸ್ವಿಟ್ಜರ್‌ಲ್ಯಾಂಡ್‌ನ ಕ್ರಾನ್ಸ್-ಮೊಂಟಾನಾದ ಸ್ಕೀ ರೆಸಾರ್ಟ್‌ನಲ್ಲಿರುವ "ಲೆ ಕಾನ್ಸ್ಟೆಲೇಷನ್" ಎಂಬ ಬಾರ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ಗುರುವಾರ ತಿಳಿಸಿರುವುದಾಗಿ...