Homeನೂರರ ನೋಟಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? - ಎಚ್‌.ಎಸ್ ದೊರೆಸ್ವಾಮಿ

ಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? – ಎಚ್‌.ಎಸ್ ದೊರೆಸ್ವಾಮಿ

- Advertisement -
- Advertisement -

ನಮ್ಮ ಸಂಸ್ಕೃತಿಗೆ ಪೂರಕವಾಗಿ ಪರಿಸರಕ್ಕೆ ಎರವಾಗದಂತೆ ನಮ್ಮ ಪೂರ್ವಿಕರು ಬದುಕಿದರು. ನೆಲ, ಜಲ, ವಾಯು ಎಲ್ಲ ಮಾನವರ ಉಪಯೋಗಕ್ಕೆ ಇದೆ ಎಂಬುದು ನಮ್ಮ ತಲೆಮಾರಿಗೆ ಗೊತ್ತೇ ಇಲ್ಲ. ಹಾಲಿಗೂ, ನೀರಿಗೂ ಒಂದೇ ಬೆಲೆ ಆಗುತ್ತಿದ್ದರೂ ಇದೇಕೆ ಹೀಗಾಯಿತು ಎಂದು ಯಾರು ಚಿಂತಿಸುತ್ತಿಲ್ಲ. ಶಬ್ದವಿಲ್ಲದ ನಿಶ್ಯಬ್ದ ಯುದ್ಧವನ್ನು ನಮ್ಮ ಬಂಡವಾಳಶಾಹಿಗಳು, ಕಾರ್ಪೊರೇಟರ್‌ಗಳು, ಬಹುರಾಷ್ಟ್ರೀಯ ಕಂಪನಿಗಳು ಜನಸಾಮಾನ್ಯರ ಮೇಲೆ ಪ್ರಾರಂಭಿಸಿದ್ದಾರೆ. ಇಂದು ನಾವು ಕೇಳುವ ಸಂಗೀತ, ನೋಡುವ ಸಿನಿಮಾ, ನಮ್ಮ ಉಡುಪು, ಚಿಂತನೆಯ ಮಾದರಿಗಳನ್ನು ಗಮನಿಸಿದರೆ ನಮ್ಮ ಅಭಿವೃದ್ಧಿ ಯಾವ ಜಾಡನ್ನು ಹಿಡಿಯುತ್ತಿದೆ ಎಂಬುದು ನಮಗೆ ಮನವರಿಕೆಯಾಗಬಹುದು.

ಡಿವಿಜಿಯವರು ಹೇಳುತ್ತಾರೆ ಈಗ ಧನಸಂಪತ್ತು ಹೆಚ್ಚಿದೆ. ಧಾನ್ಯಸಂಪತ್ತು ಕುಸಿದಿದೆ. ಸೋಪು, ಪೌಡರ್ ಹೆಚ್ಚಿದೆ. ಮನಸ್ಸಿನ ನಿರ್ಮಲತೆ ಕುಗ್ಗಿದೆ. ಭೋಗ ಹೆಚ್ಚಿದೆ ನೆಮ್ಮದಿ ಕುಗ್ಗಿದೆ ಎಂದು.

ಅನ್ನ ತಿನ್ನುವ ಬಾಯಿಗೆ ನೂಡಲ್ಸ್, ಪಿಜ್ಜಾಗಳನ್ನು ತುರುಕಲಾಗುತ್ತಿದೆ. ಎಳೆನೀರು, ಮಜ್ಜಿಗೆ ಕುಡಿಯುತ್ತಿದ್ದ ಬಾಯಿಗೆ ಕೋಕಕೋಲಾ ಸುರಿಯಲಾಗುತ್ತಿದೆ. ಚಕ್ಕುಲಿ, ಕೋಡ್‌ಬಳೆಯ ಬದಲು ಲೇಸ್, ಕುರ್ಕುರೆ, ಚಿಪ್ಸ್  ಪ್ಯಾಕೇಟ್, ಕೆಂಟಕಿ ಚಿಕನ್ ನೀಡಲಾಗುತ್ತಿದೆ. ಅರಿಶಿನ, ಶ್ರೀಗಂಧ ಬಳಿದುಕೊಳ್ಳುತ್ತಿದ್ದ ಮುಖಕ್ಕೆ ಹತ್ತಾರು ಕ್ರೀಮ್‌ಗಳನ್ನು ಬಳಿದುಕೊಳ್ಳಲಾಗುತ್ತಿದೆ. ಕರಿಯರನ್ನು 15 ದಿನಗಳಲ್ಲಿ ಬಿಳಿಯರನ್ನಾಗಿ ಮಾಡಲು, ಬೊಜ್ಜು ಬೆಳೆದವರನ್ನು 10 ದಿನಗಳಲ್ಲಿ ಸಪೂರರನ್ನಾಗಿ ಮಾಡಲು, ಬೋಳು ತಲೆಯವರಿಗೆ ಕೂದಲು ಚಿಗುರುವಂತೆ ಮಾಡುವ ಜಾಹಿರಾತುಗಳು ಹೊರಬೀಳುತ್ತಿವೆ. ಇಡೀ ರಾತ್ರಿ ಭೋಗಸುಖ ಅನುಭವಿಸುವಂತೆ ಮಾಡಲು ಮಾತ್ರೆಗಳನ್ನು ತಯಾರಿಸಲಾಗಿದೆ ಎಂಬ ಜಾಹಿರಾತು ಹೊರಬೀಳುತ್ತಿದೆ. ಮಧ್ಯಮ ವರ್ಗದ ಜನ ಇದಕ್ಕೆಲ್ಲ ಬಲಿಪಶುಗಳಾಗುತ್ತಿದ್ದಾರೆ.

ನಮ್ಮ ಮಾಧ್ಯಮಗಳು ಈ ಜಾಹಿರಾತುದಾರರ ಏಜೆಂಟರುಗಳಂತೆ ಕೆಲಸ ಮಾಡುತ್ತಿವೆ. ಉಳ್ಳವರ ಹಿಡಿ ಜನರ ನೆಮ್ಮದಿಯ ಬದುಕಿಗಾಗಿ ಲಕ್ಷಾಂತರ ಜನ ಬಡವರ ಬದುಕನ್ನು ಕಿತ್ತುಕೊಳ್ಳುವ ಸಾಧನೆ ಈ ಅಭಿವೃದ್ಧಿಯಂತ್ರವಾಗಿದೆ.

ಕೋಟ್ಯಂತರ ಜನಕ್ಕೆ ಬದುಕು ದುರ್ಭರವಾಗಿದೆ ಆದರೆ 120 ಕೋಟಿ ಜನರ ಕೈಗೆ ಮೊಬೈಲ್ ನೀಡಲಾಗಿದೆ. ಭಾರತದ ಅಭಿವೃದ್ಧಿಯನ್ನು ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಅಳೆಯೋಣವೇ? ಬಡತನ ಯಾರಿಂದ ಸೃಷ್ಟಿಯಾಗಿದೆ? ಜನ ಬಡವರಾಗಲು ಬಯಸಿ ಬಡತನ ಅನುಭವಿಸುತ್ತಿದ್ದಾರೆಯೆ? ಬಡತನ ಸರ್ಕಾರದಿಂದ ಸೃಷ್ಟಿಯಾಗುತ್ತದೆ. ಶ್ರೀಮಂತರನ್ನ ಓಲೈಸುವ ಸರ್ಕಾರದ ಧೋರಣೆಯಿಂದ ಬಡತನ ಸೃಷ್ಟಿಯಾಗುತ್ತದೆ. ಮಲತಾಯಿ ಧೋರಣೆಯಿಂದ ಬಡವರನ್ನು ಸರ್ಕಾರ ನೋಡುವುದರಿಂದ ಬಡತನ ಸೃಷ್ಟಿಯಾಗುತ್ತದೆ ಎಂಬ ಕಟುಸತ್ಯವನ್ನು ಮೋದಿ ಮಹಾಶಯ ಒಪ್ಪುವುದೇ ಇಲ್ಲ. ನಮ್ಮ ರಾಜ್ಯಾಂಗ ಸಮಾಜವಾದವನ್ನು ಪ್ರತಿಪಾದಿಸುತ್ತದೆ. ಆದರೆ ನಮ್ಮ ಸರ್ಕಾರಗಳು ಸಮಾಜವಾದದಿಂದ ದೂರ ಸರಿಯುತ್ತಿವೆ. ಬಂಡವಾಳಶಾಹಿ ಪದ್ಧತಿಗೆ ಜಾರುತ್ತಿವೆ.

ಕೆಲವರು ಹೇಳುತ್ತಾರೆ ಸರ್ಕಾರ ನಡೆಸುವವರು ರಿಲಾಯನ್ಸ್ ಕಂಪೆನಿಯವರು ಮತ್ತು ಅದಾನಿ ಎಂದು. ಅದೂ ನಿಜ ಇರಬಹುದು. ಈ ಕಳೆದ 25ವರ್ಷಗಳಲ್ಲಿ ಖಾಸಗಿ ಸೆಕ್ಟರಿನ ಪ್ರಭಾವ ತುಂಬ ಬೆಳೆದಿದೆ. ಸರ್ಕಾರ ಅವರು ಹೇಳಿದಂತೆ ಶಿರಸಾವಹಿಸಿ ಕೆಲಸ ಮಾಡುತ್ತದೆ.

ಸರ್ಕಾರ ಧರ್ಮಛತ್ರವಲ್ಲ. ಕಲ್ಲಿದ್ದಲು ಗಣಿ ಹರಾಜು ಹಾಕುವುದು, ಹಲವು ರೈಲ್ವೆ ಮಾರ್ಗಗಳನ್ನು ದೀರ್ಘಕಾಲದ ಗುತ್ತಿಗೆ ಆಧಾರದ ಮೇಲೆ ಖಾಸಗಿಗೆ ಬಿಟ್ಟುಕೊಡುವುದು, ಆ ಮೂಲಕ ತನ್ನ ಜವಾಬ್ದಾರಿಯಿಂದ ಕಳಚಿಕೊಳ್ಳುವುದು ಆಡಳಿತ ನಡೆಸುವವರ ಹೊಣೆಗೇಡಿತನವನ್ನು ಸೂಚಿಸುತ್ತದೆ. ಸಾರ್ವಜನಿಕ ಜೀವನದಲ್ಲಿ
hypocrisy ಬೆಳೆಸುವ ಹುನ್ನಾರ ಕಾಲಕ್ರಮದಲ್ಲಿ ತಿರುಗುಬಾಣವಾಗಿಬಿಡುವ ಸಾಧ್ಯತೆಗಳಿವೆ.


ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...