ಸಣ್ಣ ಹಾಗೂ ಮಧ್ಯಮ ಕೈಗಾರಿಕೆಯ (ಎಂಎಸ್ಎಂಇಗಳಿಗೆ) ಕುರಿತು ಇಬ್ಬರು ಕೇಂದ್ರ ಸಚಿವರ ವಿರೋಧಾಭಾಸದ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಪೋಸ್ಟ್ ಮಾಡಿದ ಎರಡು ಟ್ವೀಟ್‌ಗಳಲ್ಲಿ ಮೊದಲನೆಯದಾಗಿ, ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಸುದ್ದಿ ಚಾನೆಲ್ ಸಿಎನ್‌ಬಿಸಿ-ಟಿವಿ 18 ಗೆ ನೀಡಿದ ಸಂದರ್ಶನದಲ್ಲಿ ಎಂಎಸ್‌ಎಂಇಗಳಿಗೆ 5 ಲಕ್ಷ ಕೋಟಿ ರೂಗಳನ್ನು ಸರ್ಕಾರ ನೀಡುತ್ತಿರುವುದಾಗಿ ಹೇಳಿದ್ದಾರೆ. ನಂತರ, 45 ಲಕ್ಷ ಎಂಎಸ್ಎಂಇಗಳಿಗೆ ಮೇಲಾಧಾರ ರಹಿತ ಸಾಲದಲ್ಲಿ 3 ಲಕ್ಷ ಕೋಟಿ ರೂ ನೀಡುತ್ತಿರುವದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇವರಿಬ್ಬರಲ್ಲಿ ಯಾರನ್ನು ನಂಬೋಣ ಎಂಬುದು ಚಿದಂಬರಂರವರ ಪ್ರಶ್ನೆಯಾಗಿದೆ.
“ಸರ್ಕಾರಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಎಂಎಸ್ಎಂಇಗಳಿಗೆ ಪಾವತಿಸದ ಬಾಕಿ 5 ಲಕ್ಷ ಕೋಟಿ ರೂ. ಬಾಕಿ ಇದೆ ಎಂದು ಸಚಿವ ಗಡ್ಕರಿ ಹೇಳುತ್ತಾರೆ. 45 ಲಕ್ಷ ಎಂಎಸ್ಎಂಇಗಳಿಗೆ ಮೇಲಾಧಾರ ಉಚಿತ ಸಾಲವನ್ನು 3 ಲಕ್ಷ ಕೋಟಿ ರೂ. ನೀಡುವುದಾಗಿ ಸಚಿವ ಸೀತಾರಾಮನ್ ಹೇಳುತ್ತಾರೆ. ಆದ್ದರಿಂದ, ಸಾಲ ನೀಡುವವರು ಯಾರು ಮತ್ತು ಸಾಲಗಾರ ಯಾರು?!” ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
Minister Gadkari says that governments and PSUs owe Rs 5 lakh crore as unpaid dues to MSMEs
Minister Sitharaman says she will offer collateral free loan of Rs 3 lakh crore to MSMEs (numbering 45 lakhs)
So, who is the lender and who is the borrower?!
— P. Chidambaram (@PChidambaram_IN) May 15, 2020
“ಇಬ್ಬರು ಮಂತ್ರಿಗಳು ಮೊದಲು ತಮ್ಮ ಲೆಕ್ಕಗಳನ್ನು ಇತ್ಯರ್ಥಪಡಿಸಿಕೊಳ್ಳಲಿ ನಂತರ ಸರ್ಕಾರದ ‘ಸಹಾಯ’ ಇಲ್ಲದೆ ಎಂಎಸ್‌ಎಂಇಗಳು ತಮ್ಮನ್ನು ಉಳಿಸಿಕೊಳ್ಳುತ್ತಾರೆ” ಎಂದು ಮಾಜಿ ಹಣಕಾಸು ಸಚಿವರು ವ್ಯಂಗ್ಯವಾಡಿದ್ದಾರೆ.
Will the two ministers ‘settle their accounts’ first and let MSMEs save themselves without government’s ‘help’?
— P. Chidambaram (@PChidambaram_IN) May 15, 2020
ಕಳೆದ ವಾರ ಸಚಿವ ಗಡ್ಕರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಇತರ ಕೈಗಾರಿಕೆಗಳಿಂದ ಎಂಎಸ್‌ಎಂಇಗಳಿಗೆ ನೀಡಬೇಕಿದ್ದ ಬಾಕಿ “ತುಂಬಾ ಹೆಚ್ಚಾಗಿದೆ” ಎಂದಿದ್ದರಲ್ಲದೆ, ಇಂತಹ ಬಾಕಿ ಮೊತ್ತದ ಪರಿಣಾಮವಾಗಿ ಎಂಎಸ್‌ಎಂಇಗಳು ತನ್ನನ್ನು ಉಳಿಸುಕೊಳ್ಳುವುದಕ್ಕೆ ಹೆಣಗಾಡುತ್ತಿವೆ ಎಂದು ಹೇಳಿದ್ದರು.
ಚಿದಂಬರಂ ಅವರ ಟ್ವೀಟ್‌ಗಳು ಎರಡು ಸಚಿವರ ಹೇಳಿಕೆಗಳಲ್ಲಿನ ವಿರೋಧಾಭಾಸವನ್ನು ಸೂಚಿಸುತ್ತಿದೆ.
ಕಳೆದ ಎರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್‌ನ ವಿತರಣೆಯನ್ನು ವಿವರಿಸುತ್ತಾ ನಿರ್ಮಲಾ ಸೀತಾರಾಮನ್ ಹಲವಾರು ಪ್ರಕಟಣೆಗಳನ್ನು ಮಾಡಿದ್ದಾರೆ.
ಓದಿ: ಮೋದಿಯವರ 20 ಲಕ್ಷ ಕೋಟಿ ರೂ ಪ್ಯಾಕೇಜ್‌ನಲ್ಲಿ 65% ಈ ಮೊದಲೇ ಘೋಷಿಸಿದ್ದು ಸೇರಿದೆ!
ವಿಡಿಯೋ ನೋಡಿ: ಬಿಜೆಪಿಯೇನೋ ದ್ರೋಹ ಮಾಡಿತು; ಆದರೆ ಕಾಂಗ್ರೆಸ್ಸೇಕೆ ಕೈ ಬಿಟ್ಟಿತು? ಸದ್ದು…. ಈ ಸುದ್ದಿಗಳೇನಾದವು? – 09 ನೇ ಸಂಚಿಕೆ


