12 ಗಂಟೆಗಳ ಕೆಲಸ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

Protests against 12 hour work and amendments to labor laws

ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು 8 ಗಂಟೆಗಳಿಂದ 12 ಗಂಟೆಗಳಿಗೆ ಏರಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ಹಲವು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಇಂದು ಬೆಂಗಳೂರಿನ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ನೂರಾರು ವರ್ಷಗಳಿಂದ ಕಾರ್ಮಿಕರ ಹೋರಾಟದ ಫಲವಾಗಿ ಬಂದ ಕಾರ್ಮಿಕ ಕಾಯ್ದೆಗಳನ್ನು ಬಲಹೀನಗೊಳಿಸಲಾಗುತ್ತಿದೆ. ಆ ಮೂಲಕ ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕೊರೊನಾ ವೈರಸ್‌ ಹರಡುತ್ತಿರುವ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸೋಷಿಯಲ್‌ ಡೆಮಾಕ್ರಟಿಕ್‌ ಟ್ರೇಡ್‌‌ ಯೂನಿಯನ್‌ನ ರಾಜ್ಯ ಉಪಾಧ್ಯಕ್ಷರು ಮಾತನಾಡಿ, “ಇದು ಕಾರ್ಮಿಕರ ಇತಿಹಾಸದಲ್ಲಿ ಕರಾಳ ದಿನಗಳಾಗಿವೆ. ಇಂದು ನಮ್ಮ ಪಾಲಿಗೆ ಬ್ಲಾಕ್‌ ಫ್ರೈಡೆ ಆಗಿದೆ. ಸುಗ್ರಿವಾಜ್ಞೆಯ ಮೂಲಕ ಈಗಾಗಲೇ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಾಗಿವೆ. ನಮ್ಮ ರಾಜ್ಯದಲ್ಲಿ ಇದು ಜಾರಿಯಾಗಬಾರದು. ಒಂದು ವೇಳೆ ಜಾರಿಯಾದಲ್ಲಿ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ, ಮಹಿಳೆಯರ ಮಾತೃತ್ವ ರಜೆ ರದ್ದುಗೊಳ್ಳುತ್ತದೆ, ಕೆಲಸದ ಅವಧಿ ಹೆಚ್ಚಳವಾಗುತ್ತದೆ ಆದರೆ ಸಂಬಳ ಕಡಿಮೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

Labor unions protesting against kanrataka government decision for labour law relaxation

Posted by Gauri Lankesh News on Thursday, May 14, 2020

ಕರ್ನಾಟಕ ಜನಶಕ್ತಿಯ ಸಂಚಾಲಕರಾದ ಮಲ್ಲಿಗೆ ಸಿರಿಮನೆಯವರು ಮಾತನಾಡಿ “ಕೊರೊನಾ ಸಂಕಷ್ಟದ ಕಾಲದಲ್ಲಿ ಕಾರ್ಮಿಕರು ಪತ್ರಿಭಟನೆ ಮಾಡಲಿಕ್ಕೆ ಅವಕಾಶವಿಲ್ಲದಿದ್ದಾಗ ಕಾರ್ಮಿಕರ ಶೋಷಣೆ ಮಾಡುವ ತಿದ್ದುಪಡಿಗಳನ್ನು ತರಲಾಗುತ್ತಿದೆ. ಮಾಲೀಕರು, ಬಂಡವಾಳಶಾಹಿಗಳಿಗೆ ಲಾಕ್‌ಡೌನ್‌ನಿಂದ ತೊಂದರೆಯಾಗಿಲ್ಲ. ಆದರೆ ವಲಸೆ ಕಾರ್ಮಿಕರು ಮಾತ್ರ ಸಾರಿಗೆ, ಊಟ, ವಸತಿ,ಕೂಲಿ ಇಲ್ಲದೇ ಪರದಾಡುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಬಡವರ ಬದುಕು ಮುಖ್ಯವಲ್ಲ ಬದಲಿಗೆ ಬಂಡವಾಳಶಾಹಿಗಳ ಹಿತಾಸಕ್ತಿಯೇ ಮುಖ್ಯ” ಎಂದು ಕಿಡಿಕಾರಿದರು.

ವೈಟ್‌ ಕಾಲರ್‌ ಉದ್ಯೋಗಿಗಳಿಗೆ ಮಾತ್ರವೇ ನೂರು ವರ್ಷಗಳ ಹಿಂದೆ ಕಾರ್ಮಿಕರು ನಡೆಸಿದ ಹೋರಾಟದ ಲಾಭ ಸಿಗುತ್ತಿದೆ. ಆದರೆ ಕಾರ್ಮಿಕರಿಗೆ ಇನ್ನು ಶೋಷಣೆ ನಡೆಯುತ್ತಿದೆ. ಇರುವ ಕಾರ್ಮಿಕ ಕಾಯ್ದೆಗಳನ್ನೇ ಸರಿಯಾಗಿ ಪಾಲಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇರುವ ಕಾಯ್ದೆಗಳಿಗೆ ತಿದ್ದುಪಡಿ ತಂದರೆ ಇಡೀ ದೇಶದ ಬಡಜನರ ಬದುಕು ಬೀದಿಗೆ ಬರಲಿದೆ. ಇದರ ವಿರುದ್ಧ ಐಕ್ಯತೆಯ ಹೋರಾಟ ಮುಖ್ಯವಾಗಿದೆ. ಇಂದು ನಾವು ನಡೆಸುತ್ತಿರುವುದು ಸಾಂಕೇತಕ ಹೋರಾಟವಾಗಿದ್ದು, ಲಾಕ್‌ಡೌನ್‌ ನಂತರ ಬೃಹತ್‌ ಹೋರಾಟಕ್ಕೆ ಸಜ್ಜಾಗೋಣ ಎಂದು ಕರೆ ನೀಡಿದರು.

ಹಿರಿಯ ಕಾರ್ಮಿಕ ಮುಖಂಡರಾದ ಎಸ್‌. ಬಾಲನ್‌, ಬಿಬಿಎಂಪಿ ಪೌರಕಾರ್ಮಿಕ ಸಂಘಟನೆ, ಪೌರಕಾರ್ಮಿಕ  ಬಿಡಬ್ಲುಎಸ್‌ಎಸ್ಬಿ‌ ಕಾಂಟ್ರಾಕ್ಟ್‌ ವರ್ಕರ್ಸ್‌ ಯೂನಿಯನ್‌, ಸೋಷಿಯಲ್‌ ಡೆಮಾಕ್ರಟಿಕ್‌ ಟ್ರೇಡ್‌‌ ಯೂನಿಯನ್‌, ಮೈಕೋ ಅಂಡ್‌ ಬಾಷ್‌ ಯೂನಿಯನ್‌, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ವರ್ಕರ್ಸ್‌ ಯೂನಿಯನ್‌, ನ್ಯೂ ಸೋಷಿಯಲಿಷ್ಟ್‌ ಆಲ್ಟರ್‌ನೇಟಿವ್‌, ಕರ್ನಾಟಕ ಶ್ರಮಿಕ ಶಕ್ತಿ, ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮನೆಕೆಲಸದ ಕಾರ್ಮಿಕರ ಯೂನಿಯನ್‌ನ ಪದಾಧಿಕಾರಿಗಳು, ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ: ತಿದ್ದುಪಡಿ ಕಾಯ್ದೆಗೆ ಮುಚ್ಚಲಿವೆ ಎಪಿಎಂಸಿಗಳು; ಲಕ್ಷಾಂತರ ಕಾರ್ಮಿಕರು ಬೀದಿಪಾಲು ಸಾಧ್ಯತೆ! 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here